Andolana originals

ಪೋಸ್ಟರ್‌ಗಳ ಹಾವಳಿ; ತಂಗುದಾಣಗಳು ವಿರೂಪ

ಬಸ್ ನಿಲ್ದಾಣಕ್ಕೆ ಪೋಸ್ಟರ್ ಅಂಟಿಸಿ ಸೌಂದರ್ಯ ಹಾಳು

ಪೋಸ್ಟರ್ ಅಂಟಿಸಿದವರ ವಿರುದ್ಧ ಕಾನೂನು ಕ್ರಮ, ದಂಡ, ಶೀಘ್ರ ಬಸ್ ನಿಲ್ದಾಣಗಳ ಸ್ವಚ್ಛತೆ

ಮೈಸೂರು: ಪಾರಂಪರಿಕ ನಗರಿ ಮೈಸೂರಿನ ಸ್ವಚ್ಛತೆ ಕಾಪಾಡುವಲ್ಲಿ ಮೈಸೂರು ಮಹಾನಗರ ಪಾಲಿಕೆ ಸಕಲ ಪ್ರಯತ್ನಗಳನ್ನು ಮಾಡುತ್ತಿದೆ. ಆದರೆ ಪಾರಂಪರಿಕತೆಯನ್ನು ಬಿಂಬಿಸುವ ಪ್ರಯಾಣಿಕರ ತಂಗುದಾಣಗಳಲ್ಲಿ ಜಾಹೀರಾತು ಗಳು ಹಾಗೂ ಕಾರ್ಯಕ್ರಮಗಳ ಪೋಸ್ಟರ್‌ಗಳನ್ನು ಅಂಟಿಸಿ ವಿರೂಪಗೊಳಿಸಲಾಗಿದೆ.

ನಗರದ ವಿವಿಧ ಭಾಗಗಳಲ್ಲಿರುವ ತಂಗುದಾಣಗಳ ಹೊರಗೆ ಹಾಗೂ ಒಳಭಾಗದಲ್ಲಿ ರಾಜಕಾರಣಿಗಳು, ಮುಖಂಡರ ಹುಟ್ಟುಹಬ್ಬ, ರಾಜಕೀಯ ಪಕ್ಷಗಳ ರ‍್ಯಾಲಿ, ಜತ್ರಾ ಮಹೋತ್ಸವಗಳು, ಉದ್ಯೋಗ, ಪಿ.ಜಿ.ಗಳ ಮಾಹಿತಿ, ಮನೆ ಯಿಂದಲೇ ಕೆಲಸ ಮಾಡಿ, ತಿಗಣೆಯಿಂದ ಮುಕ್ತಿ ಮುಂತಾದ ಹಲವಾರು ಪೋಸ್ಟರ್‌ಗಳು ಹಾಗೂ ಮಾಹಿತಿ ಗಳಿರುವ ಭಿತ್ತಿಪತ್ರಗಳು, ಕರಪತ್ರಗಳನ್ನು ಅನುಮತಿ ಇಲ್ಲದೆ ಅಂಟಿಸಲಾಗುತ್ತಿದೆ.

ಹೀಗೆ ತಂಗುದಾಣಗಳಲ್ಲಿ ಅಂಟಿಸಿರುವ ಈ ಕರಪತ್ರಗಳು ಹಾಗೂ ಬಿತ್ತಿಪತ್ರಗಳಿಂದ ತಂಗುದಾಣಗಳ ಸೌಂದರ್ಯ, ಸ್ವಚ್ಛತೆ ಹಾಳಾಗುತ್ತಿದೆ. ಇಲ್ಲಿ ಪೋಸ್ಟರ್ ಅಂಟಿಸುವವರ ವಿಳಾಸ ಹಾಗೂ ದೂರವಾಣಿ ಸಂಖ್ಯೆ ಇದ್ದೇ ಇರುತ್ತದೆ ಆದರೂ ಅವರ ಬಗ್ಗೆ ಪಾಲಿಕೆ ಕ್ರಮ ಏಕೆ ಜರುಗಿಸುತ್ತಿಲ್ಲ ಎನ್ನುವುದೇ ಯಕ್ಷ ಪ್ರಶ್ನೆ.

ಇಂಥ ಬಸ್ ನಿಲ್ದಾಣಗಳನ್ನು ನೋಡುತ್ತಿದ್ದರೆ ಅಸಹ್ಯ ಆಗುತ್ತದೆ. ಕೆಲವರು ಬೀಡ ಹಾಕಿಕೊಂಡು ಬಸ್ ನಿಲ್ದಾಣದ ಗೋಡೆಗೆ ಉಗುಳಿರುವುದು ಅಸಹ್ಯ ಹುಟ್ಟಿಸುತ್ತಿದೆ. ಮೈಸೂರು ನಗರಕ್ಕೆ ಬರುವ ಪ್ರವಾಸಿಗರು ಇದನ್ನು ನೋಡಿ ಅಸಹ್ಯ ಪಟ್ಟುಕೊಳ್ಳುತ್ತಾರೆ. ಮೈಸೂರು ಜನತೆಯ ಬಗ್ಗೆ ಅವರಿಗೆ ಒಂದು ರೀತಿಯ ಕೀಳು ಭಾವನೆ ಮೂಡುತ್ತಿದೆ. ಬಸ್ ನಿಲ್ದಾಣ ಗಳಲ್ಲಿರುವ ಕೆಲ ಜಾಹೀರಾತುಗಳು ಕೆಲವೇ ಕೆಲವರಿಗೆ ಉಪಯುಕ್ತವಾಗಿರ ಬಹುದು. ಆದರೆ ಈ ಪೋಸ್ಟರ್‌ಗಳನ್ನು ಅಂಟಿಸುವ ಮೊದಲು ಅನುಮತಿ ಪಡೆದುಕೊಂಡಲ್ಲಿ ಅದಕ್ಕಾಗಿ ಒಂದು ನಿರ್ದಿಷ್ಟ ಸ್ಥಳ ಸೂಚಿಸಬಹುದು, ಇದು ಒಂದು ಒಳ್ಳೆಯ ಶಿಸ್ತಿನ ಕ್ರಮ ಎಂದರೆ ತಪ್ಪಾಗಲಾರದು.

ನಗರದ ಸೌಂದರ್ಯ ಹದಗೆಡಿಸುತ್ತಿರುವ ಇಂಥ ಬಸ್ ತಂಗುದಾಣಗಳನ್ನು ಪಾಲಿಕೆ ಸ್ವಚ್ಛಗೊಳಿಸಿ ಪೋಸ್ಟರ್ ಅಂಟಿಸು ವವರಿಗೆ ಕಾನೂನು ರೀತಿ ದಂಡ ವಿಽಸಲಿ ಎನ್ನುವುದು ಸಾರ್ವಜನಿಕರ ಮನವಿಯಾಗಿದೆ.

ಸುಂದರವಾದ ಬಸ್ ತಂಗುದಾಣಗಳು ನಗರ ಸೌಂದರ್ಯಕ್ಕೆ ಮೆರುಗು ನೀಡುವುದರಲ್ಲಿ ಅನುಮಾನವಿಲ್ಲ. ಆದರೆ ವಿರೂಪಗೊಳ್ಳುತ್ತಿರುವ ಬಸ್ ತಂಗುದಾಣಗಳು ಸ್ವಚ್ಛ ನಗರಿ ಎಂಬ ಬಿರುದು ಗಳಿಸಲು ಅಡ್ಡಿಯಾಗಿವೆ ಎನ್ನುವುದು ಸತ್ಯ.

” ನಮ್ಮ ಹೆಲ್ತ್‌ ಇನ್ಸ್‌ಪೆಕ್ಟರ್‌ಗಳಿಗೆ ಈಗಾಗಲೇ ಬಸ್ ನಿಲ್ದಾಣದಲ್ಲಿ ಅಂಟಿಸಿರುವ ಪೋಸ್ಟರ್ಗಳನ್ನು ತೆರವು ಮಾಡಲು ಸೂಚಿಸಲಾಗಿದೆ. ಕುಂಭಮೇಳದಲ್ಲಿ ಅಧಿಕಾರಿಗಳು ಭಾಗವಹಿಸುತ್ತಿರುವುದರಿಂದ ಅಲ್ಲಿಂದ ಬಂದ ಕೂಡಲೇ ತೆರವು ಮಾಡಿಸುತ್ತೇವೆ. ಪೋಸ್ಟರ್ ಅಂಟಿಸಿರುವವರಿಗೆ ನೋಟಿಸ್ ಕಳುಹಿಸಿ ದಂಡವನ್ನೂ ವಿಧಿಸಲಾಗುತ್ತದೆ.”

? ಡಾ.ವೆಂಕಟೇಶ್, ಆರೋಗ್ಯಾಧಿಕಾರಿ, ಮೈಸೂರು ಮಹಾನಗರ ಪಾಲಿಕೆ

ಆಂದೋಲನ ಡೆಸ್ಕ್

Recent Posts

ತಾಪಮಾನ ಇಳಿಕೆ : ಬೆಂಗಳೂರಲ್ಲಿ ಚಳಿ ಹೆಚ್ಚಳ

ಬೆಂಗಳೂರು : ಬೆಂಗಳೂರಿನಲ್ಲಿ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಟ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ…

4 hours ago

ಸಿಎ ಸೈಟ್‌ ಕಟ್ಟಡ ನಿರ್ಮಾಣ ಕಾಲಮಿತಿ ; 3 ವರ್ಷದಿಂದ 5 ವರ್ಷ ಹೆಚ್ಚಳದ ಭರವಸೆ

ಬೆಳಗಾವಿ : ಸರ್ಕಾರದಿಂದ ಪಡೆದ ಸಿಎ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು ಈಗಿರುವ ಮೂರು ವರ್ಷಗಳ ಮಿತಿಯನ್ನು ಐದು ವರ್ಷಗಳಿಗೆ…

4 hours ago

ಮೈಸೂರು : ಆನ್‌ಲೈನ್‌ನಲ್ಲಿ ವೈದ್ಯರೊಬ್ಬರಿಗೆ 82 ಲಕ್ಷ ರೂ. ವಂಚನೆ

ಮೈಸೂರು : ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಹಾಗೂ ಮುಂಬೈನ ಬಾಂಧ್ರಾ ಪೊಲೀಸ್ ಅಧಿಕಾರಿ ಸೋಗಿನಲ್ಲಿ ನಗರದ ವೈದ್ಯರೊಬ್ಬರಿಗೆ…

4 hours ago

SC/ST ದೌರ್ಜನ್ಯ ತಡೆ : ನಾಗರಿಕ ಹಕ್ಕು ಜಾರಿ ನೂತನ ಠಾಣೆ ಮೈಸೂರಲ್ಲಿ ಕಾರ್ಯರಂಭ

ಮೈಸೂರು : ಜಾತಿ ನಿಂದನೆ, ಅಸ್ಪೃಶ್ಯತೆ ಆಚರಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರು ದಾಖಲು ಹಾಗೂ ತನಿಖೆ ನಡೆಸುವ ಉದ್ದೇಶದಿಂದ ಆರಂಭಗೊಂಡಿರುವ…

4 hours ago

ಕೆಪಿಎ-ಮಹಿಳಾ-ಮಕ್ಕಳ ಅಭಿವೃದ್ಧಿ ಸಂಸ್ಥೆ ನಡುವೆ ಒಡಂಬಡಿಕೆ

ಮೈಸೂರು : ಕರ್ನಾಟಕ ಪೊಲೀಸ್ ಅಕಾಡೆಮಿ ಮತ್ತು ಸಾವಿತ್ರಿಬಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯ ನಡುವೆ ಒಡಂಬಡಿಕೆಗೆ…

4 hours ago

ಮೈಸೂರಲ್ಲಿ ಎಸ್.ಎಲ್.ಬೈರಪ್ಪ ಸ್ಮಾರಕ ನಿರ್ಮಾಣ : ಸಿಎಂ ಘೋಷಣೆ

ಬೆಳಗಾವಿ (ಸುವರ್ಣಸೌಧ) : ಇತ್ತೀಚೆಗೆ ನಿಧನರಾದ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…

5 hours ago