Andolana originals

ದೀಪಾಲಂಕಾರ ಕಣ್ತುಂಬಿಕೊಳ್ಳಲು ಜನ ಕಾತರ

30 ಕಿ.ಮೀ. ಉದ್ದದ ದೀಪಾಲಂಕಾರ, ಜಗಜಗಿಸಲಿರುವ ಪ್ರಮುಖ ವೃತ್ತಗಳು

ಕೆ.ಬಿ.ರಮೇಶನಾಯಕ

ಮೈಸೂರು: ದಸರಾ ಎಂದಾಕ್ಷಣ ಜಗಜಗಿಸುವ ವಿದ್ಯುತ್‌ ದೀಪಗಳ ಸರಮಾಲೆ, ಅಲಂಕೃತಗೊಂಡ ಉದ್ಯಾನಗಳು, ಸಿಂಗರಿಸಿದ ಪಾರಂಪರಿಕ ಕಟ್ಟಡಗಳು, ವೃತ್ತಗಳು ಹಾಗೂ ರಸ್ತೆಗಳು ಲಕ್ಷಾಂತರ ಜನರ ಮನಸ್ಸನ್ನು ಆಕರ್ಷಿಸುವಂತೆ ಮೋಡಿ ಮಾಡಲಿದ್ದು, ಈಗಾಗಲೇ ಉರಿಯುತ್ತಿರುವ ಬಣ್ಣ ಬಣ್ಣದ ದೀಪಾಲಂಕಾರ ಹೊರಗಿನಿಂದ ಬರುವ ಪ್ರವಾಸಿಗರನ್ನು ಆಕರ್ಷಣೆ ಮಾಡಲು ಮೈಸೂರು ಸಜ್ಜಾಗಿದೆ.

ಈ ಬಾರಿ ಪ್ರಮುಖ 100 ವೃತ್ತಗಳಲ್ಲೂ ವಿದ್ಯುತ್ ದೀಪಾಲಂಕಾರ ಮಾಡುತ್ತಿರು ವುದರಿಂದ ಯಾವುದೇ ದಿಕ್ಕಿನಲ್ಲೂ ನೋಡಿ ದರೂ ಬೆಳಕಿನ ಲೋಕ ಕಾಣಿಸುತ್ತಿದೆ. ವಿಶೇಷವಾಗಿ ಬನ್ನಿಮಂಟಪದಲ್ಲಿ ನಾಲ್ಕು ದಿನಗಳ ಕಾಲ ಡೋನ್ ಮೂಲಕ ದೀಪಗಳ ಸೌಂದರ್ಯವನ್ನು ವೀಕ್ಷಿಸಬಹುದಾಗಿದೆ. ಎಲ್‌ಇಡಿ ಬಲ್ಬಗಳನ್ನು ಅಳವಡಿಸಿರುವ 1,500 ಡೋನ್ ಗಳನ್ನು ಬಳಸಿ ಆಕಾಶದಲ್ಲಿ ಅದ್ಭುತ ವಿನ್ಯಾಸಗಳನ್ನು ಮೂಡಿಸುವ ಕಾರ್ಯಕ್ಕೂ ಸಜ್ಜುಗೊಂಡಿದ್ದು, ಈಗಾಗಲೇ ಪ್ರಾತ್ಯಕಿಕೆ ಸಫಲವಾಗಿದೆ.

ಕಳೆದ ವರ್ಷ 120 ಕಿ.ಮೀ. ಹಾಗೂ 91 ವೃತ್ತಗಳಿಗೆ ದೀಪಾಲಂಕಾರ ಮಾಡಲಾಗಿತ್ತು. ಈ ವರ್ಷ ದೀಪಾಲಂಕಾರದಲ್ಲಿ ಕೆಲವು ಬದಲಾವಣೆ ಮಾಡಿದ್ದು, ನಗರದ ಹೊರ ವರ್ತುಲ ರಸ್ತೆಯ 42 ಕಿ.ಮೀ. ರಸ್ತೆಗೂ ದೀಪಾಲಂಕಾರದ ಜತೆಗೆ ಸದ್ಯ ಆಯ್ಕೆ ಮಾಡಿರುವ 100 ವೃತ್ತಗಳನ್ನು ಸೇರ್ಪಡೆ ಮಾಡಲಾಗಿದೆ.

ನಗರದ ಪ್ರಮುಖ ರಸ್ತೆ, ವೃತ್ತ ಹಾಗೂ ಪಾರಂಪರಿಕ ಕಟ್ಟಡಗಳಿಗೆ ದೀಪಾಲಂಕಾರ ಮಾಡುವ ಮೂಲಕ ದಸರಾ ವೈಭಕ್ಕೆ ಮೆರುಗು ನೀಡಿ ಮೈಸೂರನ್ನು ವಿದ್ಯುತ್‌ ದೀಪಗಳಿಂದ ಪ್ರಕಾಶಿಸುವಂತೆ ಮಾಡಲಾಗಿದೆ.

ದೀಪಾಲಂಕೃತಗೊಳ್ಳುವ ವೃತ್ತಗಳು: ವಿಶೇಷವಾಗಿ ರಾಜಶ್ರೀ ಚಾಮರಾಜ ವೃತ್ತ, ಕೃಷ್ಣರಾಜ ವೃತ್ತ, ಜಯಚಾಮರಾಜೇಂದ್ರ ವೃತ್ತ, ಬಸವೇಶ್ವರ ವೃತ್ತ, ಗಾಂಧಿ ವೃತ್ತ, ಅಂಬೇಡ್ಕರ್ ವೃತ್ತ, ಫೌಂಟೆನ್ ವೃತ್ತ, ಮುಡಾ ವೃತ್ತ, ರೈಲ್ವೆ ನಿಲ್ದಾಣ ಸಮೀಪವಿರುವ ಬಾಬು ಜಗಜೀವನ್ ರಾವ್ ವೃತ್ತ ಆಯುರ್ವೇದ ವೃತ್ತ, ಮೈಸೂರು-ಬೆಂಗಳೂರು ರಸ್ತೆಯ ಕಮಾನು ಗೇಟು, ಅಗ್ರಹಾರ ವೃತ್ತ ಸೇರಿದಂತೆ ನಗರದ ಪ್ರಮುಖ ವೃತ್ತಗಳನ್ನು ದೀಪಾಲಂಕೃತಗೊಳಿಸಲಾಗಿದೆ.

ಯಾವ್ಯಾವ ಪ್ರತಿಕೃತಿಗಳು?: ವಿವಿಧೆಡೆ 65 ಪ್ರತಿಕೃತಿಗಳ ಮಾದರಿಗಳನ್ನು ಅಳವಡಿಸಿದ್ದು, ಪ್ರಜಾಪ್ರಭುತ್ವ ಸಾಗಿಬಂದ ಹಾದಿ, ಭುವನೇಶ್ವರಿ, ಸೋಮನಾಥೇಶ್ವರ ದೇವಾ ಲಯ, ಸಂವಿಧಾನದ ಪ್ರಸ್ತಾವನೆ, ಮುಮ್ಮಡಿ ಕೃಷ್ಣರಾಜ ಒಡೆಯರ್, ನಾಲ್ವಡಿ ಕೃಷ್ಣರಾಜ ಒಡೆಯರ್, ಕೆ.ಎಂ.ಮುನಿಗೋಪಾಲರಾಜು, ತಾಂತ್ರಿಕ ನಿರ್ದೇಶಕರು, ಸೆಸ್ ಕೆಂಪನಂಜಮ್ಮಣ್ಣಿ, ಜಯಚಾಮರಾಜೇಂದ್ರ ಒಡೆಯರ್, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಪ್ರತಿಕ್ರಿತಿಗಳು ಗಮನ ಸೆಳೆಯಲಿವೆ.

ಸಯ್ಯಾಜಿರಾವ್ ರಸ್ತೆ, ಇರ್ವಿನ್ ರಸ್ತೆ, ನಂಜನಗೂಡು ರಸ್ತೆ, ಹರ್ಷ ರಸ್ತೆ, ಅಶೋಕ ರಸ್ತೆ, ಮಹದೇಶ್ವರ ರಸ್ತೆ, ಹುಣಸೂರು ರಸ್ತೆ, ಜೆ.ಎಲ್.ಬಿ.ರಸ್ತೆ, ಮೈಸೂರು ಬೆಂಗಳೂರು ರಸ್ತೆ, ವಿನೋಬಾ ರಸ್ತೆ, ಧನ್ವಂತರಿ ರಸ್ತೆ, ನಾರಾಯಣಶಾಸ್ತ್ರಿ ರಸ್ತೆ, ಚಾಮರಾಜ ಜೋಡಿ ರಸ್ತೆ, ಬುಲೇವಾರ್ಡ್ ರಸ್ತೆ, ಸಿದ್ದಾರ್ಥನಗರ ರಸ್ತೆ, ಸರ್ಕಾರಿ ಕಚೇರಿಗಳು, ಪಾರಂಪರಿಕ ಕಟ್ಟಡಗಳು, ಸಾರ್ವಜನಿಕರ ಉದ್ಯಾನವನ ಗಳಿಗೂ ದೀಪಾಲಂಕಾರ ಮಾಡಲಾಗುತ್ತಿದೆ. ರಾತ್ರಿ 7 ಗಂಟೆಗೆ ಅರಮನೆಯಲ್ಲಿ ವಿದ್ಯುತ್ ದೀಪ ಬೆಳಗುತ್ತಿದ್ದಂತೆ ಇಡೀ ಕ್ಷಣಾರ್ಧದಲ್ಲಿ ಬೆಳಕಿನ ಮಯವಾಗಲಿದೆ.

ದಸರಾ ಆಚರಣೆ ಮೈಸೂರಿನ ಸಾಂಸ್ಕೃತಿಕ ವೈಭವವಾಗಿದೆ. ಜಂಬೂ ಸವಾರಿಯಂತೆ ದೀಪಾಲಂಕಾರವು ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾಗಿದೆ. ಈ ಆಚರಣೆಯಿಂದ ಇಂದಿನ ಪೀಳಿಗೆಗೆ ನಮ್ಮ ಪೂರ್ವಜರ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯವಾಗಿದೆ.

ಆಂದೋಲನ ಡೆಸ್ಕ್

Recent Posts

ಮೈಸೂರಿನಲ್ಲಿ ಮಾಗಿ ಉತ್ಸವ: ಸಂಗೀತದ ಹೊನಲು ಹರಿಸಿದ ವಿಜಯ್‌ ಪ್ರಕಾಶ್‌

ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್‌ ಪ್ರಕಾಶ್‌ ಅವರು…

2 hours ago

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…

3 hours ago

ರೈತರಿಗೆ ಮತ್ತೊಂದು ಸಂಕಷ್ಟ: ಈ ಬಾರಿ ಮಾವಿನ ಇಳುವರಿ ಭಾರೀ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…

3 hours ago

ಬಂಡೀಪುರದಲ್ಲಿ ಮತ್ತೊಂದು ಕಾಡಾನೆ ಸಾವು

ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…

4 hours ago

ಪ್ರಮುಖ ಆಕರ್ಷಣೀಯ ಕೇಂದ್ರವಾಗಿ ಹೊರಹೊಮ್ಮಿದ ಅಯೋಧ್ಯೆ ರಾಮಮಂದಿರ

ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್‌ ಒನ್‌ ಪಟ್ಟ ಪಡೆದಿದೆ. ಈ ಮೂಲಕ ಈಗ…

4 hours ago

ಪ್ರವಾಸಿಗರಿಗೆ ಬಿಗ್‌ ಶಾಕ್: ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್‌

ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್‌ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್‌ ಶಾಕ್‌ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…

4 hours ago