ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಮೈಸೂರು ವಿಶ್ವ ವಿದ್ಯಾನಿಲಯ ಮಹಾಲೇಖಪಾಲರ ಕಚೇರಿಯಿಂದಲೇ ಭರಿಸಲು ವಿವಿ ಮೊರೆ
– ಕೆ.ಬಿ.ರಮೇಶನಾಯಕ
ಮೈಸೂರು:ರಾಜ್ಯಸರ್ಕಾರದಿಂದ ನಿರೀಕ್ಷಿತ ಅನುದಾನ ಬಾರದಿರುವುದು, ಆಂತರಿಕ ಆರ್ಥಿಕ ಸಂಪನ್ಮೂಲ ಕೊರತೆ, ಯುಜಿಸಿ ಅನುದಾನದಲ್ಲಿನ ಕಡಿತದಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಪಿಂಚಣಿ ನಿರ್ವಹಣೆಯೇ ದೊಡ್ಡ ಭಾರವಾಗಿದೆ.
ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವ ಪಿಂಚಣಿ ಭಾರವನ್ನು ತಗ್ಗಿಸಲು ಮಹಾಲೇಖಪಾಲರ ಕಚೇರಿಯಿಂದಲೇ ನೇರವಾಗಿ ಭರಿಸುವಂತೆ ವಿವಿಯು ಸರ್ಕಾರದ ಮೊರೆ ಹೊಕ್ಕಿದೆ.
ಈಗಾಗಲೇ ವಿವಿಯಲ್ಲಿ ತಲೆ ಎತ್ತಿ ನಿಂತಿರುವ ನೂತನ ಕಟ್ಟಡಗಳ ನಿರ್ಮಾಣದ ಗುತ್ತಿಗೆದಾರರಿಗೆ ಬಾಕಿ ಪಾವತಿಸಲಾಗದೆ ಬೀಗ ಹಸ್ತಾಂತರ ಪ್ರಕ್ರಿಯೆ ಆಗದಿರುವ ಹೊತ್ತಿನಲ್ಲಿ ಪಿಂಚಣಿದಾರರ ಸಮಸ್ಯೆ ನಿವಾರಿಸಲಾಗದ ಸಂಕಟಕ್ಕೆ ಸಿಲುಕಿದೆ. ಹೀಗಾಗಿ, ಮೈಸೂರು ವಿವಿಯ ಸಿಂಡಿಕೇಟ್ ಸದಸ್ಯರು ಮುಖ್ಯಮಂತ್ರಿ, ಉಪ ಮುಖ್ಯ ಮಂತ್ರಿಗಳಿಗೆ ಪತ್ರ ಬರೆಯುವ ಮೂಲಕ ವಿವಿಯು ಎದುರಿಸುತ್ತಿರುವ ಆರ್ಥಿಕ ಸಮಸ್ಯೆಯನ್ನು ಬಿಚ್ಚಿಟ್ಟಿದ್ದಾರೆ.
ವಾರ್ಷಿಕ ಅಂದಾಜು 150 ಕೋಟಿ ರೂ. ಅನುದಾನ ಅಗತ್ಯ: ಶತಮಾನವನ್ನು ಪೂರೈಸಿರುವ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಖಾಯಂ ಬೋಧಕ-ಬೋಧಕೇತರ ನೌಕರರ ಪ್ರಮಾಣ ವರ್ಷದಿಂದ ವರ್ಷಕ್ಕೆ
ಕುಗ್ಗುತ್ತಲೇ ಇದ್ದು, ಮತ್ತೊಂದೆಡೆ ಅತಿಥಿ ಉಪನ್ಯಾಸಕರನ್ನು ನಿಯೋಜಿಸಿಕೊಳ್ಳಲಾಗಿದೆ. ದಶಕಗಳಿಂದ ಸೇವಾ ನಿವೃತ್ತಿ ಪಡೆದಿರುವ 1,840 ಪಿಂಚಣಿದಾರರು ಇದ್ದು, ಪ್ರತಿ ತಿಂಗಳು ಅಂದಾಜು 9.5 ಕೋಟಿ ರೂ. ಪಿಂಚಣಿ
ಪಾವತಿಸಬೇಕಿದೆ.
ವಿವಿಗಳ ಖಾಲಿ ಹುದ್ದೆ ಶೀಘ್ರ ಭರ್ತಿ
2,800 ಬೋಧಕ ಸಿಬ್ಬಂದಿ ಹುದ್ದೆಗಳು ಖಾಲಿ ಇವೆ. ನಮ್ಮ ಸರ್ಕಾರ ಬಂದಾಗಿನಿಂದ ಅನೇಕ ಹುದ್ದೆಗಳನ್ನು ತುಂಬಿದ್ದೇವೆ ಎಂದರು. ವಿವಿಗಳ ವಿಚಾರವಾಗಿ ಚರ್ಚೆ ಮಾಡಿದ್ದೇವೆ. ಹೊಸ ವಿವಿ ತೆರೆಯುವಾಗ ಹೊಣೆಗಾರಿಕೆ ಬಗ್ಗೆ ಯೋಚನೆ ಮಾಡಿಲ್ಲ. ಪಿಂಚಣಿ ಯೋಜನೆ ಹೊಸ ವಿವಿಗಳಿಗೂ ಸಿಗಬೇಕಿತ್ತು, ಆದರೆ ಆಗಿಲ್ಲ. 70 ಕೋಟಿ ರೂ.ವರೆಗೂ ಹೊಣೆಗಾರಿಕೆ ಕೊಡಲಾಗಿದೆ. ಪದವೀಧರ ಮತ್ತು ಶಿಕ್ಷಣ ಕ್ಷೇತ್ರದವರ ಜೊತೆ ಚರ್ಚೆ ಮಾಡಿದ್ದೇವೆ. ದುಂದು ವೆಚ್ಚಗಳಿಗೆ ಕಡಿವಾಣ ಹಾಕಬೇಕಿದೆ. ಹಣಕಾಸು ಇಲಾಖೆ ಕೂಡ ತನ್ನದೇ ಆದ ಜವಾಬ್ದಾರಿ ಹೊಂದಿದೆ ಎಂದು ಸಚಿವರು ಹೇಳಿದರು.
ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ. ಪಿಂಚಣಿದಾರರಿಗೆ ನಿಗದಿತ ಸಮಯದಲ್ಲಿ ಪಿಂಚಣಿ ಪಾವತಿಗೆ ಸಮಸ್ಯೆಯಾಗಿದೆ. ಆಂತರಿಕ ಸಂಪನ್ಮೂಲದಲ್ಲೂ ಕೊರತೆಯಾಗಿರುವುದರಿಂದ ನಿರ್ವಹಣೆ ಮಾಡುವುದಕ್ಕೆ ತೊಂದರೆಯಾಗಿದೆ.
-ಪ್ರೊ.ಎನ್.ಕೆ.ಲೋಕನಾಥ್, ಕುಲಪತಿ.
ಹನೂರು: ಹಣ ಡಬ್ಲಿಂಗ್ ಮಾಡಲು ತಮಿಳುನಾಡಿನ ಕಡೆ ಬಿಳಿ ಬಣ್ಣದ ಕಾರಿನಲ್ಲಿ ವಂಚನೆ ಮಾಡುವ ನೋಟು ಹಾಗೂ ಹಣ ಎಣಿಕೆ…
ಮೈಸೂರು: ಕಾರು ಹಾಗು ಕೆಎಸ್ಆರ್ಟಿಸಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರಿನ ಮುಂಭಾಗ ನಜ್ಜುಗುಜ್ಜಾದ ಘಟನೆ ಮೈಸೂರಿನ ಕೆ.ಜಿ.ಕೊಪ್ಪಲು…
ಗುಂಡ್ಲುಪೇಟೆ: ರಾಷ್ಟ್ರೀಯ ಉದ್ಯಾನವನ ಬಂಡೀಪುರದಲ್ಲಿ ಏಕಾಏಕಿ ರೊಚ್ಚಿಗೆದ್ದ ಸಾಕಾನೆ ರೋಹಿತ್ ಮಾವುತನ ಮೇಲೆ ದಾಳಿ ನಡೆಸಿದ್ದು, ರಸ್ತೆಯಲ್ಲೇ ರಂಪಾಟ ನಡೆಸಿದ…
ನವದೆಹಲಿ: ಒತ್ತುವರಿ ಮಾಡಿಲ್ಲ ಎಂದಾದರೆ ಕುಮಾರಸ್ವಾಮಿ ಏಕೆ ಗಾಬರಿಯಾಗಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ. ಈ ಕುರಿತು ನವದೆಹಲಿಯಲ್ಲಿಂದು…
ಹನೂರು: ಅರಣ್ಯಕ್ಕೆ ಅತಿಕ್ರಮ ಪ್ರವೇಶ ಮಾಡಿ ಬೆಂಕಿ ಹಚ್ಚುತ್ತಿದ್ದ ವ್ಯಕ್ತಿಯೋರ್ವನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊಳ್ಳೇಗಾಲ ತಾಲ್ಲೂಕಿನ…
ಶ್ರೀಧರ್ ಆರ್ ಭಟ್ ನಂಜನಗೂಡು: ಸರ್ಕಾರಿ ಶಾಲೆಯ ಮಕ್ಕಳ ಜೀವದ ಜೊತೆ ಶಿಕ್ಷಕರೇ ಚೆಲ್ಲಾಟವಾಡುತ್ತಿರುವ ಘಟನೆಯೊಂದು ನಂಜನಗೂಡು ತಾಲ್ಲೂಕಿನ ವರುಣಾ…