ನಾಗಮಂಗಲ: ಪಟ್ಟಣದಲ್ಲಿ ಶಾಂತಿಯುತವಾಗಿ ಜೀವನ ನಡೆಸಿಕೊಂಡು ಹೋಗುವುದರೊಂದಿಗೆ ತಮ್ಮ ಗುಂಪುಗಳ ಯುವಕರಿಗೆ ಸರಿಯಾದ ಮಾರ್ಗದರ್ಶನ ನೀಡುತ್ತೇವೆ ಎಂದು ಎರಡೂ ಸಮುದಾಯಗಳ ಹಲವು ನಾಯಕರು, ಮುಖಂಡರು ಸಚಿವರಿಗೆ ಭರವಸೆ ನೀಡಿದರು.
ಪಟ್ಟಣದ ಜಯಮ್ಮ ಕೃಷ್ಣಪ್ಪ ಸಮುದಾಯ ಭನವದಲ್ಲಿ ಶನಿವಾರ ಜಿಲ್ಲಾಡಳಿತ ಆಯೋಜಿಸಿದ್ದ ಸಾರ್ವಜನಿಕ ಶಾಂತಿ ಸಭೆಯಲ್ಲಿ ಎರಡೂ ಸಮುದಾಯದವರು ಪರಸ್ಪರ ಹೊಂದಾಣಿಕೆಯಿಂದ ಹೋಗುವುದಲ್ಲದೆ, ಇನ್ನು ಮುಂದೆ ಪರಸ್ಪರ ಸಹಬಾಳ್ವೆ ಮೂಲಕ ಜೀವನ ಸಾಗಿಸುವುದಾಗಿ ಹೇಳಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತು ವಾರಿ ಸಚಿವ ಎನ್. ಚಲುವರಾಯಸ್ವಾಮಿ ಮಾತನಾಡಿ, ನಾಗಮಂಗಲ ಸೌಹಾರ್ದತೆಗೆ ಹೆಸರಾಗಿದೆ. ಈಗ ನಡೆದಿರುವುದು ಆಕಸ್ಮಿಕ ಘಟನೆ. ಇದನ್ನು ಮರೆತು ಎಲ್ಲರೂ ಶಾಂತಿಯಿಂದ ಇರಬೇಕು ಎಂದು ಮನವಿ ಮಾಡಿದರು.
ಶಾಂತಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಚಲುವರಾಯಸ್ವಾಮಿ ಅವರು, ಬುಧವಾರ ರಾತ್ರಿ ಪಟ್ಟಣದಲ್ಲಿ ಗಣೇಶ ಮೂರ್ತಿ ಮೆರವಣಿಗೆ ವೇಳೆ ನಡೆದ ಗಲಭೆಗೆ ಸಂಬಂಽಸಿದಂತೆ ಹಲವರನ್ನು ಪೊಲೀಸರು ಬಂಽಸಿದ್ದು, ಗಲಭೆಯಲ್ಲಿ ಭಾಗಿಯಾಗದ ಅಮಾಯಕರನ್ನು ಚಾರ್ಜ್‌ಶೀಟ್‌ನಿಂದ ಕೈಬಿಡಲಾಗುವುದು ಎಂದು ತಿಳಿಸಿದರು. ಶಾಂತಿ ಸಭೆಯಲ್ಲಿ ಹಿಂದೂ-ಮುಸ್ಲಿಮರು ಅಣ್ಣ-ತಮ್ಮಂದಿರಂತೆ ಕುಳಿತಿದ್ದರು. ಈ ಕ್ಷಣದಿಂದ ನಾವೆಲ್ಲ ಒಗ್ಗಟ್ಟಾಗಿರುತ್ತೇವೆ ಎಂದಿದ್ದಾರೆ. ಗಣಪತಿ ಹಬ್ಬವನ್ನೂ ಮಾಡು ತ್ತೇವೆ, ಮುಸ್ಲಿಂ ಹಬ್ಬಗಳಿಗೂ ಸಹಕಾರ ಕೇಳು ತ್ತೇವೆ ಎಂದು ಮುಸ್ಲಿಮರು ಹೇಳಿದ್ದಾರೆ ಎಂದರು. ಸರ್ಕಾರದಿಂದ ಪರಿಹಾರ: ಗಲಭೆಯಲ್ಲಿ ನಷ್ಕಕ್ಕೊಳಗಾದವರಿಗೆ ಪರಿಹಾರ, ಅಮಾಯ ಕರ ಬಿಡುಗಡೆಗೆ ಮನವಿ ಮಾಡಿದ್ದಾರೆ. ಸರ್ಕಾರದಿಂದ ಪರಿಹಾರ ಕೊಡಿಸಲು ಕ್ರಮವಹಿಸಲಾಗುವುದು ಎಂದು ಅವರು ಹೇಳಿದರು.
ಒಂದು ಬಾರಿ ಬಂಧನವಾದರೆ ಜಾಮೀನು ಪಡೆಯಲೇಬೇಕು. ಅಮಾಯಕರೆಂದು ಖಚಿತವಾದರೆ ಜಾರ್ಜ್‌ಶೀಟ್‌ನಿಂದ ಅವರನ್ನು ಕೈಬಿಡುತ್ತೇವೆ. ಗುಂಪು ಘರ್ಷಣೆಗಳಾದಾಗ ಕೆಲವರನ್ನು ವಶಕ್ಕೆ ಪಡೆಯಲಾಗುತ್ತದೆ. ಸಿಸಿ ಕ್ಯಾಮೆರಾದ ದೃಶ್ಯಾವಳಿಯನ್ನು ನೋಡಿಯೋ ಅಥವಾ ಗುಂಪಲ್ಲಿದ್ದರು ಎನ್ನುವ ಕಾರಣಕ್ಕೋ ಬಂಽಸಿರುತ್ತಾರೆ. ಅಮಾಯಕರಿದ್ದರೆ ಖಂಡಿತವಾಗಿ ಜಾರ್ಜ್‌ಶೀಟ್ ವೇಳೆ ಅವರನ್ನು ಕೈಬಿಡುತ್ತೇವೆ ಎಂದರು.
ಈ ವಿಚಾರ ಪ್ರಸ್ತಾಪ ಬೇಡ: ಸಭೆಯಲ್ಲಿ ಸಾರ್ವಜನಿಕರ ಸಲಹೆಗಳನ್ನು ಸ್ವೀಕರಿಸಿದ್ದೇವೆ. ಸೋಮವಾರ ಮುಸ್ಲಿಮರ ಈದ್‌ಮಿಲಾದ್ ಹಬ್ಬವಿರುವುದರಿಂದ ಗಣಪತಿ ವಿಸರ್ಜನೆ ಮಾಡುವುದು ಬೇಡ ಎಂದು ತಿಳಿಸಿದ್ದೇವೆ. ನಾಗಮಂಗಲದಲ್ಲಿ ನಡೆದ ಘಟನೆಯನ್ನು ನಂಬಲು ಸಾಧ್ಯವಾಗುತ್ತಿಲ್ಲ, ರಾಜಕಾರಣಿಗಳು, ಸಂಘಟನೆಗಳು ಈ ವಿಚಾರವನ್ನು ಇನ್ನುಮುಂದೆ ಪ್ರಸ್ತಾಪ ಮಾಡುವುದನ್ನು ನಿಲ್ಲಿಸಬೇಕೆಂದು ಮನವಿ ಮಾಡಿದರು.
ಗಲಭೆ ಸಂಬಂಧ ವಿಶೇಷ ತನಿಖೆ: ಬಿಜೆಪಿ, ಜಾ. ದಳ ಹಾಗೂ ಕಾಂಗ್ರೆಸ್‌ನಲ್ಲಿ ಸ್ನೇಹಿತರಿದ್ದಾರೆ. ನಮ್ಮೆಲ್ಲರ ಉದ್ದೇಶ ಕರ್ನಾಟಕ ರಾಜ್ಯವು ಶಾಂತಿಯಾಗಿರಬೇಕು. ಜನರು ನೆಮ್ಮದಿಯಿಂದ ಬದುಕಬೇಕು ಎಂಬುದಾಗಿದೆ. ನಾಗಮಂಗಲ ಯಥಾಸ್ಥಿತಿಗೆ ಬಂದಿದ್ದು, ಈ ಘಟನೆ ಹಿಂದೆ ಯಾರ ಕೈವಾಡವಿದೆ ಎಂದು ತಿಳಿಯಲು ವಿಶೇಷ ತನಿಖೆ ನಡೆಸಲಾಗುವುದು ಎಂದರು. ನಷ್ಟ ಪ್ರಮಾಣ ವರದಿ ಸಿದ್ಧ ಗಲಭೆಯಿಂದಾಗಿರುವ ನಷ್ಟ ಪ್ರಮಾಣ ವರದಿ ಸಿದ್ಧವಾಗಲಿದೆ. ಅದನ್ನು ಸರ್ಕಾರಕ್ಕೆ ಕಳುಹಿಸಿ ಪರಿಹಾರಕ್ಕೆ ಕ್ರಮವಹಿಸಲಾಗುವುದು. ಪರಿಹಾರದಲ್ಲಿ ಯಾವುದೇ ತಾರತಮ್ಯ ಮಾಡುವುದಿಲ್ಲ ಎಂದು ಸಚಿವರು ಭರವಸೆ ನೀಡಿದರು.
ಎಚ್‌ಡಿಕೆಗೆ ಅಭಿನಂದನೆ: ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಹೇಳಿಕೆ ಏನೇ ಇದ್ದರೂ ನೊಂದವರಿಗೆ ಪರಿಹಾರ ಕೊಟ್ಟಿದ್ದಾರೆ, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ರಾಜ್ಯ ಸರ್ಕಾರದಿಂದಲೂ ಪರಿಹಾರ ಕೊಡಲಾಗುವುದು. ಈ ಸಮಯದಲ್ಲಿ ರಾಜಕೀಯ ಬೇಡ. ಬಿಜೆಪಿ ಸತ್ಯಶೋಧನಾ ಸಮಿತಿ ವರದಿಯನ್ನು ಕೊಡಲಿ. ನಾಗಮಂಗಲದಲ್ಲಿ ಮತ್ತೆ ಶಾಂತಿ ಸ್ಥಾಪನೆ ಆಗಬೇಕು. ಈ ಘಟನೆ ಇಲ್ಲಿಗೆ ನಿಲ್ಲಲು ಮಾಧ್ಯಮದವರ ಸಹಕಾರ ಬೇಕು. – ಎನ್. ಚಲುವರಾಯಸ್ವಾಮಿ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಡ್ಯ ನಗರದಲ್ಲಿನ ವಿದ್ಯುತ್ ದೀಪಾಲಂಕಾರಕ್ಕೆ ಕೃಷಿ ಸಚಿವರು ಹಾಗೂ…
ಕೇರಳ ಮೂಲದ ಮಾಸ್ಟರ್ ಮೈಂಡ್ ಸೇರಿದಂತೆ 12 ಆರೋಪಿಗಳ ಬಂಧನ; ಮತ್ತೊಂದು ಮೋಸದ ಜಾಲ ಬಯಲಿಗೆಳೆದ ಕೊಡಗು ಜಿಲ್ಲಾ ಪೊಲೀಸರು…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜನವರಿ…