Andolana originals

ಪಿಡಿಒನಿಂದ ಸರ್ಕಾರಿ ಆಸ್ತಿ ಗುಳುಂ ಆರೋಪ

ಮಹಾದೇಶ್ ಎಂ. ಗೌಡ

ಹನೂರು : ಸರ್ಕಾರದ ಆಸ್ತಿ ರಕ್ಷಣೆ ಮಾಡಬೇಕಾದ ಅಧಿಕಾರಿಯೇ ಸರ್ಕಾರಿ ಆಸ್ತಿಯನ್ನು ಗುಳುಂ ಮಾಡಿರುವ ಗಂಭೀರ ಆರೋಪ ತಾಲ್ಲೂಕಿನ ಶೆಟ್ಟಹಳ್ಳಿ ಗ್ರಾಪಂ ಪಿಡಿಒ ವಿರುದ್ಧ ಕೇಳಿಬಂದಿದೆ.

ಹಾಲಿ ಶೆಟ್ಟಹಳ್ಳಿ ಗ್ರಾಪಂ ಪಿಡಿಒ ಆಗಿರುವ ವೈರ ಮಾಣಿಕ್ಯಂ ಎಂಬವರು ಮಂಗಲ ಗ್ರಾಮ ಪಂಚಾಯಿತಿ ಪ್ರಭಾರ ಪಿಡಿಒ ಆಗಿದ್ದ ವೇಳೆ ಅಧಿಕಾರ ದುರುಪಯೋಗಪಡಿಸಿಕೊಂಡು ಲಕ್ಷಾಂತರ ರೂ. ಬೆಲೆ ಬಾಳುವ ಸರ್ಕಾರಿ ಆಸ್ತಿಯನ್ನು ತಮ್ಮ ತಾಯಿ ಹೆಸರಿನಲ್ಲಿ ಖಾತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ವಾಟರ್ ಮನ್ ಮೂಲಕ ಆಸ್ತಿ ಕಬಳಿಕೆ ಗುಮಾನಿ: ೨೦೧೮ರಲ್ಲಿ ಮಂಗಲ ಗ್ರಾಪಂ ಪ್ರಭಾರ ಪಿಡಿಒ ಆಗಿದ್ದ ವೈರ ಮಾಣಿಕ್ಯಂ ತಮ್ಮ ಅಧಿಕಾರ ಬಳಸಿಕೊಂಡು ಗ್ರಾಪಂನ ನೀರು ಗಂಟಿಯ ತಂದೆಯ ಹೆಸರಿಗೆ ಸರ್ಕಾರಿ ಜಾಗವನ್ನೇ ಅಕ್ರಮವಾಗಿ ಖಾತೆ ಮಾಡಿ ನಂತರ ಅದೇ ವರ್ಷ ತಮ್ಮ ತಾಯಿ ಹೆಸರಿಗೆ ಕ್ರಯ ಮಾಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಮಂಗಲ ಗ್ರಾಮದ ಸ.ನಂ ೩೮೩ರಲ್ಲಿ ೨.೩೫ ಎಕರೆ ಖಾಲಿ ನಿವೇಶನವಿದ್ದು, ಪ್ರಸ್ತುತ ಪಹಣಿಯಲ್ಲಿ ರಸ್ತೆ ಐಜಿ ಎಂದು ನಮೂದಾಗಿದೆ. ಆದರೂ ಸರ್ಕಾರಿ ನಿವೇಶನಕ್ಕೆ ಭೂ ಪರಿ ವರ್ತನೆಯಾಗಿದೆ ಎಂದು ಬೇರೆ ಜಮೀನಿಗೆ ಅನ್ಯಕ್ರಾಂತವಾಗಿರುವ ನಿವೇಶನದ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಪುಟ್ಟಯ್ಯ ಎಂಬವರಿಗೆ ಇ-ಸ್ವತ್ತು ಮಾಡಿ ಕೊಟ್ಟಿದ್ದಾರೆ.

ಇವರ ಪ್ರಕಾರ ಸರ್ಕಾರಿ ಆಸ್ತಿ ಯನ್ನು ಭೂ ಪರಿವರ್ತನೆ ಮಾಡಿಕೊಟ್ಟಿದ್ದರೆ ಅದನ್ನು ಮಾಡಿಕೊಟ್ಟವರು ಯಾರು ಎಂಬುದು ಕೂಡ ತನಿಖೆಯಿಂದ ತಿಳಿದುಬರಬೇಕಿದೆ.

ಒಂದು ವರ್ಷದ ಅವಧಿಗೆ ಪ್ರಭಾರ ಪಿಡಿಒ ಆಗಿದ್ದ ವೈರ ಮಾಣಿಕ್ಯಂ ಪಿಐಡಿ ಸಂಖ್ಯೆ೧೫೦೮೦೦೩೦೧೬೦೦೧೨೦೭೯೩ ಸ್ವತ್ತಿನ ಸಂಖ್ಯೆ ೧೪೧೫/೪ ಪೂರ್ವ-ಪಶ್ಚಿಮ ೧೦.೫೮ ಚದರ ಮೀಟರ್, ಉತ್ತರ-ದಕ್ಷಿಣ ೩೫.೩೫೬ ಚದರ ಮೀಟರ್ ಆಸ್ತಿ ಹಾಗೂ ಪಿಐಡಿ ಸಂಖ್ಯೆ ೧೫೦೮೦೦೩೦೧೬೦೦೧೨೦೭೯೪ ಸ್ವತ್ತಿನ ಸಂಖ್ಯೆ ೧೪೧೫/೫ ಪೂರ್ವ-ಪಶ್ಚಿಮ ೯.೭೫೩ ಚದರ ಮೀಟರ್, ಉತ್ತರ-ದಕ್ಷಿಣ ೩೫.೩೫೬ ಚದರ ಮೀಟರ್ ಆಸ್ತಿಯನ್ನು ತಮ್ಮ ತಾಯಿಯ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದಾರೆ. ಮಂಗಲ ಗ್ರಾಮದ ಮಲೆ ಮಹದೇಶ್ವರ ಬೆಟ್ಟ ಹಾಗೂ ಕೊಳ್ಳೇಗಾಲ ಮುಖ್ಯ ರಸ್ತೆಯ ಬಲಬದಿಯಲ್ಲಿ ಈ ನಿವೇಶನವಿದ್ದು ಲಕ್ಷಾಂತರ ರೂ. ಬೆಲೆ ಬಾಳಲಿದೆ.

ಸರ್ಕಾರಿ ಆಸ್ತಿ ಭೂ ಪರಿವರ್ತನೆ, ಇ-ಸ್ವತ್ತಾದ ೮ ದಿನಕ್ಕೆ ಕ್ರಯ: ಒಂದೆಡೆ ಸರ್ಕಾರಿ ಆಸ್ತಿ ಭೂ ಪರಿವರ್ತನೆ ಹೇಗಾಯ್ತು ಎಂಬುದು ಯಕ್ಷ ಪ್ರಶ್ನೆಯಾದರೆ ಮತ್ತೊಂದೆಡೆ ಇ-ಸ್ವತ್ತಾದ ಒಂದೇ ವಾರದಲ್ಲಿ ಕ್ರಯ ಆಗಿದೆ. ಪ್ರಸ್ತುತ ಎರಡೂ ನಿವೇಶನಗಳಿಗೆ ೨೦೧೬ರ ಏ.೧ರಿಂದ ೨೦೨೬ವರೆಗೆ ಇಸಿ ಪಡೆದುಕೊಂಡಿದ್ದು, ಈ ನಿವೇಶನಗಳಿಗೆ ಸಂಬಂಧಪಟ್ಟಂತೆ ಯಾವುದೇ ವಹಿವಾಟು ನಡೆದಿಲ್ಲ. ಒಟ್ಟಾರೆ ಇವರೇ ಅಕ್ರಮ ಖಾತೆ ಮಾಡಿ ಇವರ ತಾಯಿ ಮಾದಮ್ಮ ಎಂಬವರ ಹೆಸರಿಗೆ ನೋಂಣಿ ಮಾಡಿಸಿಕೊಂಡಿರುವ ಗುಮಾನಿ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

೨೦೧೮ರ ಸೆಪ್ಟೆಂಬರ್ ೧೦ರಂದು ಪುಟ್ಟಯ್ಯ ಎಂಬವರಿಗೆ ಇ-ಸ್ವತ್ತು ಮಾಡಿ ೨೦೧೮ರ ಸೆಪ್ಟೆಂಬರ್ ೧೭ರಂದು ಪಿಡಿಒ ತಮ್ಮ ತಾಯಿ ಮಾದಮ್ಮರವರ ಹೆಸರಿಗೆ ಶುದ್ಧ ಕ್ರಯ ಪತ್ರ ಪಡೆದುಕೊಂಡಿದ್ದಾರೆ. ಸರ್ಕಾರಿ ರಸ್ತೆಗೆ ಅಕ್ರಮ ಖಾತೆ ಮಾಡಿರುವುದಲ್ಲದೆ ಇವರ ತಾಯಿ ಹೆಸರಿನಲ್ಲಿ ಬೇನಾಮಿ ಪಡೆದುಕೊಂಡಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಜ್ಞಾವಂತ ನಾಗರಿಕರು ಪ್ರಶ್ನಿಸಿದ್ದಾರೆ.

ಪಿಡಿಒ ವಿರುದ್ಧ ಕ್ರಮಕ್ಕೆ ಆಗ್ರಹ: 

ಒಬ್ಬ ಸರ್ಕಾರಿ ಅಧಿಕಾರಿ ತಮ್ಮ ತಾಯಿಯವರಿಗೆ ನಿವೇಶನ ಕ್ರಯ ಪಡೆದುಕೊಳ್ಳುವಾಗ ಸಂಬಂಧಪಟ್ಟ ದಾಖಲಾತಿಗಳನ್ನು ಪರಿಶೀಲನೆ ಮಾಡದೆ ಯಾವ ರೀತಿ ಕ್ರಯ ಮಾಡಿಕೊಂಡರು, ಇವರ ಪಾತ್ರ ಏನು ಎಂಬುದನ್ನು ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿ ಇವರ ವಿರುದ್ಧ ಸೂಕ್ತ ಕ್ರಮ ವಹಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರ

” ಸರ್ಕಾರಿ ನಿವೇಶನವನ್ನು ಅಕ್ರಮ ಖಾತೆ ಮಾಡಿ ಕ್ರಯಕ್ಕೆ ಪಡೆದಿರುವುದು ಗಮನಕ್ಕೆ ಬಂದಿಲ್ಲ. ಈ ಹಿಂದೆ ವಿಚಾರಣೆ ನಡೆದಿರಬಹುದು, ಒಂದೊಮ್ಮೆ ಯಾವುದೇ ವಿಚಾರಣೆ ನಡೆಯದಿದ್ದರೆ ದಾಖಲಾತಿಗಳನ್ನು ಪರಿಶೀಲಿಸಿ ವಿಚಾರಣೆ ನಡೆಸಲಾಗುವುದು.”

 -ಮೊನಾ ರೋತ್, ಚಾ.ನಗರ ಜಿಪಂ ಸಿಇಒ

” ಪುಟ್ಟಯ್ಯ ಎಂಬವರಿಗೆ ನಾನು ಯಾವುದೇ ಖಾತೆ ಮಾಡಿ ಕೊಟ್ಟಿಲ್ಲ. ಆದರೆ ನಮ್ಮ ತಂದೆ ತಾಯಿಯ ವರು ಆಸ್ತಿಯನ್ನು ಖರೀದಿ ಮಾಡಿರುವುದು ನಿಜ.”

-ವೈರ ಮಾಣಿಕ್ಯಂ, ಪಿಡಿಒ, ಶೆಟ್ಟಳ್ಳಿ ಗ್ರಾಮ ಪಂಚಾಯಿತಿ

” ಸರ್ಕಾರಿ ನಿವೇಶನಕ್ಕೆ ಅಕ್ರಮ ಖಾತೆ ಮಾಡಿ ಕ್ರಯಕ್ಕೆ ಪಡೆದಿರುವುದು ಗಮನಕ್ಕೆ ಬಂದಿಲ್ಲ. ಈ ಕೂಡಲೇ ಪರಿಶೀಲನೆ ನಡೆಸಿ ಸೂಕ್ತ ಕ್ರಮ ವಹಿಸಲಾಗುವುದು. ಸರ್ಕಾರಿ ನಿವೇಶನಗಳನ್ನು ಸರ್ಕಾರಿ ಸೌಲಭ್ಯಕ್ಕಾಗಿ ಮಾತ್ರ ಬಳಸಿಕೊಳ್ಳಬಹುದು. ಸರ್ಕಾರಿ ನಿವೇಶನಗಳಿಗೆ ಭೂ ಪರಿವರ್ತನೆ ಮಾಡಲು ಬರುವುದಿಲ್ಲ.”

 -ಚೈತ್ರ, ತಹಸಿಲ್ದಾರ್, ಹನೂರು ತಾಲ್ಲೂಕು

 

 

ಆಂದೋಲನ ಡೆಸ್ಕ್

Recent Posts

ತಮಿಳುನಾಡು ಮಾಜಿ ಸಿಎಂ ಪನ್ನೀರ್‌ ಸೆಲ್ವಂ ಡಿಎಂಕೆಗೆ ಸೇರ್ಪಡೆ

ಚೆನ್ನೈ: ತಮಿಳುನಾಡಿನ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ತಮಿಳುನಾಡು ಮಾಜಿ ಸಿಎಂ ದಿವಂಗತ ಜಯಲಲಿತಾ ಅವರ ಮೆಚ್ಚಿನ ಶಿಷ್ಯರಾಗಿದ್ದ ಪನ್ನೀರ್…

12 mins ago

ಅರವಿಂದ್‌ ಕೇಜ್ರಿವಾಲ್‌, ಮನೀಶ್‌ ಸಿಸೋಡಿಯಾಗೆ ಬಿಗ್‌ ರಿಲೀಫ್

ನವದೆಹಲಿ: ದೆಹಲಿಯ ಮಾಜಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಹಾಗೂ ಮಾಜಿ ಡಿಸಿಎಂ ಮನೀಶ್‌ ಸಿಸೋಡಿಯಾ ಅವರನ್ನು ದೆಹಲಿ ಅಬಕಾರಿ ನೀತಿ…

20 mins ago

ಮಾರ್ಚ್.‌3ರಂದು ಚಂದ್ರಗ್ರಹಣ: ದೇವಾಲಯ ದರ್ಶನ ಸಮಯ ಬದಲು

ಕೊಡಗು: ಮಾರ್ಚ್.‌3ರಂದು ಈ ವರ್ಷದ ಮೊದಲ ಪೂರ್ಣ ಚಂದ್ರಗ್ರಹಣ ಸಂಭವಿಸಲಿದೆ. ಆಗಸದಲ್ಲಿ ನಡೆಯಲಿರುವ ಅಪರೂಪದ ವಿದ್ಯಾಮಾನ ಇದಾಗಿದ್ದು, ಈ ಗ್ರಹಣದ…

31 mins ago

ಹುಣಸೂರು: ತಾಲ್ಲೂಕು ಕಚೇರಿ ಹಿಂಭಾಗದಲ್ಲಿ ಹೊತ್ತಿ ಉರಿದ ಗಿಡಮರಗಳು !

ಹುಣಸೂರು: ಹುಣಸೂರಿನಲ್ಲಿ ಒಣಗಿಡಮರಗಳಿಗೆ ಬೆಂಕಿ ಕಾಣಿಸಿಕೊಂಡ ಪರಿಣಾಮ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ಹುಣಸೂರಿನ ತಾಲ್ಲೂಕು ಕಚೇರಿ ಬಳಿ ಈ ಘಟನೆ…

47 mins ago

ಓದುಗರ ಪತ್ರ: ನಾಗನಹಳ್ಳಿಗೆ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಿ

ಮೈಸೂರು ತಾಲ್ಲೂಕಿನ ನಾಗನಹಳ್ಳಿಯಿಂದ ಪ್ರತಿನಿತ್ಯ ಸಾರ್ವಜನಿಕರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಮೈಸೂರು ನಗರಕ್ಕೆ ತೆರಳುತ್ತಾರೆ. ಆದರೆ ನಾಗನಹಳ್ಳಿಯಿಂದ ಮೈಸೂರಿಗೆ…

6 hours ago

ಓದುಗರ ಪತ್ರ: ತಾಲ್ಲೂಕು ಕಚೇರಿ ಆವರಣದಲ್ಲಿ ಕಸ ತೆರವುಗೊಳಿಸಿ

ಮೈಸೂರಿನಲ್ಲಿ ಪಾರಂಪರಿಕತೆ ಹಾಗೂ ಆಧುನಿಕತೆಯನ್ನು ಸಮ್ಮಿಳಿಸಿಕೊಂಡು ನಿರ್ಮಿಸಲಾಗಿರುವ ತಾಲ್ಲೂಕು ಕಚೇರಿಯ ಕಟ್ಟಡದ ಆವರಣದಲ್ಲೇ ಕಸ ಸಂಗ್ರಹವಾಗಿದ್ದು, ಕೆಲಸ ಕಾರ್ಯಗಳಿಗಾಗಿ ಪ್ರತಿ…

6 hours ago