Andolana originals

ಚಾವಣಿ, ಬಣ್ಣ, ಬೆಳಕು ಇಲ್ಲದ ಪ್ರಯಾಣಿಕರ ತಂಗುದಾಣಗಳು

ಚಿರಂಜೀವಿ ಸಿ. ಹುಲ್ಲಹಳ್ಳಿ
ಮೈಸೂರು: ವಿದ್ಯುತ್ ಇಲ್ಲ, ಚಾವಣಿ ಕಿತ್ತುಹೋಗಿದೆ, ಕಬ್ಬಿಣದ ಬೆಂಚುಗಳು ಮುರಿದಿವೆ, ಕಸದ ರಾಶಿ, ಹಗಲಿನಲ್ಲಿ ಬಿಸಿಲು, ರಾತ್ರಿ ವೇಳೆ ವಿದ್ಯುತ್ ದೀಪಗಳಿಲ್ಲದ, ಪಾಳುಬಿದ್ದ ಪ್ರಯಾಣಿ ಕರ ತಂಗುದಾಣಗಳ ದುಸ್ಥಿತಿ ಇದು!

ನಿರ್ವಹಣೆಯ ಲೋಪದಿಂದ ನಗರದ ಬಹುತೇಕ ತಂಗುದಾಣಗಳು ಇಂಥ ಶೋಚನೀಯ ಸ್ಥಿತಿಗೆ ತಲುಪಿವೆ.

ಆಕಾಶವಾಣಿ ಪಕ್ಕದ ಯಾದವಗಿರಿ ಅಂಚೆ ಕಚೇರಿಯ ಎಡಭಾಗ ಮತ್ತು ಎದುರಿನ ತಂಗುದಾಣಗಳು, ಮೈಸೂರು ರೈಲ್ವೆ ನಿಲ್ದಾಣದ ಬಳಿಯ ಬಸ್ ನಿಲ್ದಾಣ, ದಾಸಪ್ಪ ವೃತ್ತ, ಕೃಷ್ಣರಾಜೇಂದ್ರ ಆಸ್ಪತ್ರೆ, ಸಯ್ಯಾಜಿರಾವ್ ರಸ್ತೆ, ಅಗ್ರಹಾರ ವೃತ್ತ, ಚಾಮುಂಡಿಪುರಂ ವೃತ್ತ, ವಿಶೇಶ್ವರನಗರ ಗಣಪತಿ ದೇವಸ್ಥಾನ, ಮಹರ್ಷಿ ಪಬ್ಲಿಕ್ ಶಾಲೆ, ಜೆ. ಪಿ. ನಗರದ ಶನೇಶ್ವರ ಸ್ವಾಮಿ ದೇವಸ್ಥಾನ, ಜೆ. ಪಿ. ನಗರದ ಗೊಬ್ಬಳಿಮರ, ಕವಿತಾ ಬೇಕರಿ ಬಳಿಕ ನಿಲ್ದಾಣಗಳು ಸೇರಿದಂತೆ ನಗರದ ಬಹುತೇಕ ಬಸ್ ನಿಲ್ದಾಣಗಳಲ್ಲಿ ವಿದ್ಯುತ್ ಇಲ್ಲ, ಬೆಂಚುಗಳು ಮುರಿದಿವೆ, ಕಸದ ರಾಶಿ ತುಂಬಿದ್ದು, ಚಾವಣಿ ಕಿತ್ತು ಬಂದಿವೆ, ಕಬ್ಬಿಣದ ಶೀಟುಗಳು ತುಕ್ಕು ಹಿಡಿದಿವೆ. ಮೇಲ್ಕಂಡ ನಿಲ್ದಾಣಗಳ ಜೊತೆಗೆ ನಗರದ ಬಹುತೇಕ ಪ್ರಯಾಣಿಕರ ತಂಗುದಾಣಗಳ ಪರಿಸ್ಥಿತಿ ಇದೇ ಆಗಿದೆ.

ಇನ್ನು ಖಾಸಗಿ ಸಂಸ್ಥೆಗಳ ಪ್ರಕಟಣೆಗಳು, ಭಿತ್ತಿಪತ್ರಗಳು ಪ್ರಯಾಣಿಕರ ತಂಗುದಾಣಗಳ ಸೌಂದರ್ಯವನ್ನು ಹಾಳು ಮಾಡಿವೆ. ಶಾಸಕರು, ಸಂಸದರು, ವಿಧಾನ ಪರಿ ಷತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ ದಡಿ ಪ್ರಯಾಣಿಕರ ತಂಗುದಾಣಗಳನ್ನು ನಿರ್ಮಿಸಿದ್ದರೂ ಅವುಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಅನುಕೂಲಕ್ಕೆ ಅಳವಡಿಸಿದ್ದ ಡಿಜಿಟಲ್ ಮಾಹಿತಿ ಫಲಕಗಳು ಕೆಟ್ಟು ನಿಂತಿವೆ. ಡಿಸ್‌ಪ್ಲೇ ಬೋರ್ಡ್‌ಗಳು ಒಡೆದು ಹೋಗಿವೆ. ವಿದ್ಯುತ್ ವೈರ್‌ಗಳು ಹೊರಗಡೆ ಬಂದು ಅಪಾಯಕ್ಕೆ ಆಹ್ವಾನಿಸುತ್ತಿರುವ ಪ್ರಯಾಣಿಕರ ತಂಗುದಾಣಗಳು ನಗರದಾದ್ಯಂತ ಬಹಳಷ್ಟು ಇವೆ.

ಕೆಲವು ಪ್ರಯಾಣಿಕರ ತಂಗುದಾಣಗಳು ಬಿಡಾಡಿ ದನಗಳ ಮತ್ತು ಬೀದಿ ನಾಯಿಗಳ ಆಶ್ರಯ ತಾಣವಾಗಿ ಮಾರ್ಪಟ್ಟಿವೆ. ಇದಲ್ಲದೆ, ನಗರದಲ್ಲಿ ಹೊಸ ಬಸ್ ತಂಗುದಾಣಗಳನ್ನು ನಿರ್ಮಿಸುವ ಪ್ರಕ್ರಿಯೆ ನಡೆಯುತ್ತಿದೆ. ಆದರೆ, ಇರುವ ತಂಗುದಾಣಗಳನ್ನು ನಿರ್ವಹಣೆ ಮಾಡದೆ ಹೊಸದಾಗಿ ನಿರ್ಮಿಸುವ ಅಗತ್ಯ ಏನಿದೆ? ಎಂಬುದಾಗಿ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಂಗುದಾಣಗಳ ಒಳಗೆ ಹೋಗುವುದಕ್ಕೆ ಹಿಂಜರಿಕೆ ಬಸ್ ತಂಗುದಾಣಗಳು ನಿರ್ವಹಣೆಯ ಕೊರತೆಯಿಂದ ಪಾಳು ಬಿದ್ದಿವೆ. ಅವುಗಳ ಒಳಗೆ ಹೋಗಲು ಪ್ರಯಾಣಿಕರು ಹಿಂಜರಿಯುತ್ತಿದ್ದಾರೆ. ಹೀಗಾಗಿ ಹಲವು ಬಸ್ ತಂಗುದಾಣಗಳ ಹಿಂದೆ-ಮುಂದೆ ನಿಂತು ಬಸ್ಸಿಗಾಗಿ ಕಾಯುವ ಸ್ಥಿತಿ ಎದುರಾಗಿದೆ. ಈಗಲಾದರೂ ಸಂಬಂಧಪಟ್ಟವರು ಸಮಸ್ಯೆಯನ್ನು ಬಗೆಹರಿಸಲು ಕ್ರಮವಹಿಸಬೇಕು. – ಚೇತನ್, ಪ್ರಯಾಣಿಕ.

ಸುಣ್ಣ ಬಣ್ಣ ಕಾಣದ ತಂಗುದಾಣಗಳು ಪ್ರಯಾಣಿಕರ ತಂಗುದಾಣಗಳನ್ನು ನಿರ್ಮಿಸುವಾಗ ಇರುವ ಉತ್ಸಾಹವನ್ನು ನಿರ್ವಹಣೆಯಲ್ಲಿ ತೋರಿಸುವುದಿಲ್ಲ. ಹಲವು ತಂಗುದಾಣಗಳು ಸುಣ್ಣ, ಬಣ್ಣ ಕಾಣದೇ ಎಷ್ಟೋ ವರ್ಷಗಳಾಗಿವೆ. ಮಳೆಗಾಲದಲ್ಲಂತೂ ಆಶ್ರಯ ಪಡೆಯುವಂತಿಲ್ಲ. ಬೇಸಿಗೆಯಲ್ಲಿ ದೂಳು ತುಂಬಿರುತ್ತವೆ. – ಚಂದ್ರು, ಪ್ರಯಾಣಿಕ. 

ಹಲವು ತಂಗುದಾಣಗಳು ಕತ್ತಲಲ್ಲಿ ತಂಗುದಾಣಗಳು ಹಲವಾರು ಪ್ರಯಾಣಿಕರ ತಂಗುದಾಣಗಳಲ್ಲಿ ವಿದ್ಯುತ್ ದೀಪಗಳಿಲ್ಲದೆ ರಾತ್ರಿ ವೇಳೆ ಬಸ್ಸಿಗಾಗಿ ಕಾಯುವ ಪ್ರಯಾಣಿಕರು ಪರದಾಡುವಂತಾಗಿದೆ. ಕೆಲವು ತಂಗುದಾಣಗಳಿಗೆ ಬೀದಿ ದೀಪಗಳ ಬೆಳಕೇ ಗತಿ. ಇದರಿಂದ ರಾತ್ರಿ ವೇಳೆ ಹೆಂಗಸರು ಮತ್ತು ಮಕ್ಕಳು ದೀಪಗಳಿಲ್ಲದ ತಂಗುದಾಣಗಳಲ್ಲಿ ನಿಲ್ಲುವುದಕ್ಕೆ ಹೆದರುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ನಿರ್ವಹಣೆ ಮಾಡಿದರೆ ಎಲ್ಲ ಸಮಸ್ಯೆಗಳನ್ನೂ ಪರಿಹಾರ ಮಾಡಬಹುದು. – ಶ್ರೀನಿವಾಸ, ಪ್ರಯಾಣಿಕ.

 

ಫೋಟೊ ಕಳುಹಿಸಿ

ನಿಮ್ಮ ಬಡಾವಣೆಗಳು ಅಥವಾ ಮುಖ್ಯ ರಸ್ತೆಗಳಲ್ಲಿ ಸಮಸ್ಯೆ ಬಿಂಬಿಸುತ್ತಿರುವ ಪ್ರಯಾಣಿಕರ ತಂಗುದಾಣಗಳ ಫೋಟೊ ಮತ್ತು ವಿಳಾಸ ಕಳುಹಿಸಿ. ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು. ಮೊ. ಸಂ. ೯೦೭೧೭ ೭೭೦೭೧

 

ಆಂದೋಲನ ಡೆಸ್ಕ್

Recent Posts

ಮೈಸೂರು ದಸರಾ | ಯುವ ಸಂಭ್ರಮ ಉದ್ಘಾಟನೆಗೆ ವಿಜಯಪ್ರಕಾಶ್‌

ಮೈಸೂರು : ದಸರಾ ಮಹೋತ್ಸವಕ್ಕೆ ಆರಂಭದ ಮುನ್ನುಡಿಯಂತಿರುವ ಯುವ ಸಂಭ್ರಮಕ್ಕೆ ಈ ಬಾರಿ ಮೈಸೂರಿನ ಮನೆ ಮಗ ಖ್ಯಾತ ಗಾಯಕ…

7 hours ago

ಕೊಡಗು: ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ

ಕೊಡಗು: ಜಿಲ್ಲೆಯ ನೆಲ್ಯಹುದಿಕೇರಿ ಸಮೀಪದ ಅತ್ತಿಮಂಗಲದಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ ನಡೆಸಿದೆ. ಸ್ಕೂಟರ್‌ನಲ್ಲಿ ತೆರಳುತ್ತಿದ್ದ 60…

13 hours ago

ಓದುಗರ ಪತ್ರ: ಗ್ರಹಣ..!

ಗ್ರಹಣ..! ಸೂರ್ಯ-ಚಂದ್ರರ ನಡುವೆ ಭೂಮಿ ಬಂದರೆ ಚಂದ್ರ ಗ್ರಹಣ ! ಭಾರತ-ರಷ್ಯಾ ನಡುವೆ ಅಮೆರಿಕ ಬಂದರೆ ‘ಸುಂಕ ’ ಗ್ರಹಣ…

16 hours ago

ಓದುಗರ ಪತ್ರ: ಪೆಟ್ರೋಲ್ ಬಂಕ್‌ಗಳಲ್ಲಿ ಮೋಸ: ಗರಿಷ್ಟ ಕ್ರಮ ಕೈಗೊಳ್ಳಲಿ

ರಾಜ್ಯದ ೮೦೫ ಪೆಟ್ರೋಲ್ ಬಂಕ್‌ಗಳ ತಪಾಸಣೆಯಲ್ಲಿ ಬರೋಬ್ಬರಿ ೭೬೮ ಬಂಕ್‌ಗಳಲ್ಲಿ (ಶೇ. ೮೫ ರಷ್ಟು) ಅಳತೆಯಲ್ಲಿ ಮೋಸ ಕಂಡುಬಂದಿರುವುದು ಸಾರ್ವಜನಿಕರಿಗೆ…

16 hours ago

ಓದುಗರ ಪತ್ರ: ಉದ್ಯೋಗ ಸೃಷ್ಟಿ : ಫ್ಲಿಪ್‌ಕಾರ್ಟ್ ನಡೆ ಸ್ವಾಗತಾರ್ಹ

ಒಂದು ಕಡೆ ಒರಾಕಲನಂತಹ ಕಂಪೆನಿಗಳು ತಮ್ಮ ನೌಕರರನ್ನು ಯಾವುದೇ ಮುನ್ಸೂಚನೆ ನೀಡದೇ ಕೇವಲ ಒಂದೇ ಒಂದು ಇ ಮೇಲ್ ಸಂದೇಶದ…

16 hours ago

ಸುಗಮ ಸಂಗೀತದ ಅದ್ಬುತ ಗಾಯಕ ಮಡಿಕೇರಿ ನಾಗೇಂದ್ರ

ಡಾ.ಕೆ.ವಿ.ಲಕ್ಷ್ಮೀದೇವಿ, ಗುರುಕೃಪಾ ಸಂಗೀತ ಕೇಂದ್ರ, ಮೈಸೂರು ಇಂದು ಗುರು ನಮನ ಮಡಿಕೇರಿ ನಾಗೇಂದ್ರರೆಂದೇ ಪ್ರಖ್ಯಾತರಾದ ‘ಗುರು ಕೃಪಾ ಸಂಗೀತ ಕೇಂದ್ರ’ದ…

20 hours ago