ಭೇರ್ಯ ಮಹೇಶ್
ಉತ್ತಮ ಬೆಳೆ ಎದುರು ನೋಡುತ್ತಿರುವ ರೈತರಿಗೆ ಕೀಟಬಾಧೆಯ ಆತಂಕ
ಕೆ.ಆರ್.ನಗರ: ಭತ್ತದ ನಾಡು ಎಂದೇ ಪ್ರಸಿದ್ಧಿಯಾಗಿರುವ ಕೆ.ಆರ್.ನಗರ ಮತ್ತು ಸಾಲಿಗ್ರಾಮ ಅವಳಿ ತಾಲ್ಲೂಕುಗಳಲ್ಲಿ ಈಗಾಗಲೇ ಭತ್ತ ನಾಟಿ ಕಾರ್ಯ ಮುಕ್ತಾಯಗೊಂಡಿದ್ದು, ಅಂದಾಜು ೧೯ ರಿಂದ ೨೨ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿದೆ.
ಶೇ.೮೦ರಷ್ಟು ಪ್ರದೇಶದಲ್ಲಿ ಈಗಾಗಲೇ ರೈತರು ಕಳೆ ತೆಗೆದು ಮೇಲು ಗೊಬ್ಬರವನ್ನು ನೀಡಿ ಒಳ್ಳೆಯ ಬೆಳೆಯನ್ನು ಎದುರು ನೋಡುತ್ತಿದ್ದಾರೆ. ಕೆ.ಆರ್.ನಗರ ತಾಲ್ಲೂಕಿನ ಕಸಬಾ, ಹೆಬ್ಬಾಳು, ಹೊಸಅಗ್ರಹಾರ ಹೋಬಳಿಗಳ ಬಹುತೇಕ ಗ್ರಾಮಗಳಲ್ಲಿ ನಾಟಿ ಮಾಡಲಾಗಿರುವ ಭತ್ತದ ಬೆಳೆಯಲ್ಲಿ ಎಲೆ ಸುರುಳಿ ಕೀಟವು ವ್ಯಾಪಕವಾಗಿ ಕಂಡು ಬಂದಿದ್ದು ರೈತರಲ್ಲಿ ಆತಂಕ ಮನೆ ಮಾಡಿದೆ.
ರೋಗಬಾಧೆ: ನೆಫಲೋಕ್ರೋಸಿಸ್ ಮೆಡಿನಾಲಿಸ್ ಎಂಬ ವೈಜ್ಞಾನಿಕ ಹೆಸರಿನ ಈ ಎಲೆ ಸುರುಳಿ ಕೀಟವು ಸಾಮಾನ್ಯವಾಗಿ ಆಗಸ್ಟ್ ಹಾಗೂ ಅಕ್ಟೋಬರ್ ತಿಂಗಳುಗಳಲ್ಲಿ ಭತ್ತವು ಬೆಳವಣಿಗೆಯ ಹಂತದಲ್ಲಿದ್ದಾಗ ಕಂಡು ಬರುತ್ತದೆ. ಕಡಿಮೆ ಉಷ್ಣಾಂಶ ಹಾಗೂ ಗಾಳಿಯಲ್ಲಿ ಹೆಚ್ಚಿನ ಆದ್ರತೆ ಇರುವ ಹವಾಗುಣವು ಈ ಕೀಟದ ಬೆಳವಣಿಗೆ ಹಾಗೂ ಸಂತಾನೋತ್ಪತ್ತಿಗೆ ಪೂರಕವಾಗಿರುತ್ತದೆ.
ಕಂದು ಹಳದಿ ಬಣ್ಣದ ರೆಕ್ಕೆಯಲ್ಲಿ ಅಲೆಯ ರೀತಿ ಗೆರೆಗಳನ್ನು ಹೊಂದಿದ್ದು ಪ್ರೌಢ ಕೀಟವು ಎಲೆಯ ತುದಿಯಲ್ಲಿ ದುಂಡನೆಯ ಮೊಟ್ಟೆಗಳನ್ನು ಇಡುತ್ತದೆ. ೬-೮ ದಿನಗಳಲ್ಲಿ ಮರಿಹುಳು ಹೊರಬಂದು ಮರಿಹುಳುಗಳು ಚಿಕ್ಕದಾಗಿ ಇರುವಾಗ ಎಲೆಯ ಹಸಿರು ಭಾಗವನ್ನು ಕೊರೆದು ತಿನ್ನುವುದರಿಂದ ಬಿಳಿ ಬಣ್ಣದ ಮಚ್ಚೆಗಳು ಕಾಣಿಸುತ್ತವೆ. ಇದನ್ನೇ ರೈತರುಗಳು ಬಿಳಿ ಕಟಗಲು ಎಂದು ಕರೆಯುತ್ತಾರೆ. ಜೊತೆಗೆ ಇದು ಒಂದು ರೋಗ ಎಂದು ತಪ್ಪಾಗಿ ಗ್ರಹಿಸಲಾಗುತ್ತದೆ.
೨೦ ರಿಂದ ೩೦ ದಿನಗಳ ಕಾಲ ಮರಿ ಹುಳುವು ಎಲೆಯನ್ನು ಕೆರೆದು ಹಾಗೂ ಕತ್ತರಿಸಿ ತಿಂದು ನಂತರ ಸುರುಳಿ ಮಾಡಿ ಬಾಧಿಸುತ್ತದೆ. ದೊಡ್ಡದಾಗಿ ಬೆಳೆದ ಕೀಟವು ತಿಳಿ ಹಸಿರು ಬಣ್ಣದ್ದಾಗಿದ್ದು ಎಲೆಯನ್ನು ಲಂಬವಾಗಿ ಮಡಚಿ ಸುರುಳಿ ಮಾಡಿಕೊಂಡು ಒಳಗಡೆ ಇದ್ದುಕೊಂಡು ಕೋಶಾವಸ್ಥೆಗೆ ತಲುಪುತ್ತದೆ. ಈ ಕೀಟದ ಬಾಧೆಯು ತೀವ್ರವಾದ ತಾಕು ಗಳಲ್ಲಿ ಎಲೆಯ ಮೇಲೆ ಬಿಳಿ ಬಣ್ಣದ ಮಚ್ಚೆ ಗಳು ಕಾಣಿಸುತ್ತವೆ ಹಾಗೂ ಸುಟ್ಟಂತೆ ಕಾಣಿಸುತ್ತದೆ. ಕೆಲವು ತಾಕುಗಳಲ್ಲಿ ಕೊಳವೆ ಹುಳುವಿನ ಭಾದೆ (ನಿಂಫುಲಾ ಡಿಪಂಕ್ಟಾಲಿಸ್) ಕಾಣಿಸಿಕೊಂಡಿದ್ದು, ಕೀಟವು ಎಲೆಯನ್ನು ಕೊರೆದು ತಿಂದು ನಂತರ ಗಾತ್ರ ದೊಡ್ಡದಾದಾಗ ಎಲೆಯ ತುದಿಯನ್ನು ಕತ್ತರಿಸಿ ಕೊಳವೆ ರೂಪದಲ್ಲಿ ಮಡಚಿ ಕೊಳವೆಯಲ್ಲಿ ಕೋಶಾವಸ್ಥೆಗೆ ತಲುಪುತ್ತದೆ.
ನಿವಾರಣಾ ಕ್ರಮಗಳು: ಬದುವಿನ ಮೇಲೆ ಹುಲ್ಲಿನ ಜಾತಿಯ ಕಳೆಯನ್ನು ಕೊಚ್ಚಿ ಬದುಗಳನ್ನು ಕಳೆ ರಹಿತವಾಗಿ ಇಡುವುದು. ಹೆಚ್ಚು ಯೂರಿಯಾ ರಸಗೊಬ್ಬರವನ್ನು ಬಳಸುವುದನ್ನು ತಡೆಯುವುದು. ಶೇ.೧೦ರಷ್ಟು ಎಲೆಯಲ್ಲಿ ಹಾನಿ ಕಾಣಿಸಿಕೊಂಡಲ್ಲಿ ರಾಸಾಯನಿಕ ಹತೋಟಿ ಯನ್ನು ಕೈಗೊಳ್ಳಬೇಕು.
ಕೀಟ ಬಾಧೆಯು ತೀವ್ರವಾದಲ್ಲಿ ಈ ಕೆಳಕಂಡ ಕೀಟನಾಶಕಗಳನ್ನು ಸಿಂಪಡಣೆ ಮಾಡಬಹುದಾ ಗಿದೆ. ಇದರಲ್ಲಿ ಫೆನಿಟ್ರೋಥಿಯಾನ್ ೫೦ ಇಸಿ ೪೦೦ ಮಿಲಿ/ ಎಕರೆಗೆ (ಅಥವಾ) ಪೋಸಲೋನ್ ೩೫ ಇಸಿ ೫೦೦ ಮಿಲಿ/ ಎಕರೆ (ಅಥವಾ) ಕ್ವಿನಾಲ್ಛೋಸ್ ೨೫ ಇಸಿ ೪೦೦ ಮಿಸಿ/ ಎಕರೆ (ಅಥವಾ) ಫಾಸ್ಟಮಿಡಾನ್ ೪೦ ಎಸ್.ಎಲ್. ೨೫೦ ಮಿಲಿ/ ಎಕರೆ (ಅಥವಾ) ಕ್ಲೋರ್ ಪಿರಿಪೋಸ್ ೨೦ ಇಸಿ ೫೦೦ ಮಿಲಿ/ ಎಕರೆ (ಅಥವಾ) ಕರ‍್ಬರಿಲ್ ೫೦ ಡಬ್ಲ್ಯೂಪಿ ೦.೫ ಕೆಜಿ/ ಎಕರೆ (ಅಥವಾ) ಫೆಂಥಿಯಾನ್ ೧೦೦ ಇಸಿ ೨೦೦ ಮಿಲೆ/ ಎಕರೆ (ಅಥವಾ) ಪ್ರೊಫೆನೋಪ್ರೋಸ್ ೫೦ ಇಸಿ ೪೦೦ ಮಿಲೆ/ ಎಕರೆ. ಫಿಪ್ರೋನಿಲ್ ಶೇ.೫ ಎಸ್.ಸಿ. ೨೫೦ ಮಿಲಿ/ಎಕರೆಗೆ ಅಥವಾ ಪ್ಲೋಬೆಂಡಿಯಾಮೈಡ್ ಶೇ.೪೮ ಎಸ್.ಸಿ. ೩೦ ಮಿಲಿ/ ಎಕರೆಗೆ ಸಿಂಪಡಣೆ ಮಾಡಿ ಎಂದು ಕೃಷಿ ಸಹಾಯಕ ನಿರ್ದೇಶಕ ಕೆ.ಜೆ.ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
” ರೈತ ಸಂಪರ್ಕ ಕೇಂದ್ರ ಸಂಪರ್ಕಿಸಿ ರೈತರು ಆತಂಕ ಪಡದೆ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರದ ತಾಂತ್ರಿಕ ಸಿಬ್ಬಂದಿಯನ್ನು ಭೇಟಿ ಮಾಡಿ ಮಾಹಿತಿ/ ಮಾರ್ಗದರ್ಶನ ಪಡೆಯಲು ಕೋರಲಾಗಿದೆ.”
ವಿದೇಶಿ ನೆಲದಲ್ಲಿ ದೇಶವನ್ನು ಟೀಕಿಸುವುದಿಲ್ಲ ಎಂಬ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರ ನಿಲುವು ಸ್ವಾಗತಾರ್ಹವಾಗಿದೆ. ಗಣರಾಜ್ಯೋತ್ಸವದ ಸಂದರ್ಭದಲ್ಲೇ ಅವರು…
ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಬಾಂಗ್ಲಾ ದೇಶಕ್ಕೆ ೧೯೭೨ ರಲ್ಲಿ ಪಾಕಿಸ್ತಾನದಿಂದ ಬೇರ್ಪಡಿಸಿ…
ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾಗಿರುವ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತಾದಿಗಳು ಆಗಮಿಸುತ್ತಾರೆ. ಆದರೆ ಕೆಲವು ಆಟೋ ಚಾಲಕರು…
ಏಷ್ಯಾದ ಪ್ರಪ್ರಥಮ ಎದೆಹಾಲಿನ ಬ್ಯಾಂಕನ್ನು ಆರಂಭಿಸಿದ ಕೀರ್ತಿ ಕರ್ನಾಟಕದಲ್ಲಿ ಹುಟ್ಟಿದ, ಗೋವಾ ಮೂಲದ, ಈಗ ಮುಂಬೈಯಲ್ಲಿ ತನ್ನ ಸಾಮಾಜಿಕ ಕಾರ್ಯಗಳನ್ನು…
ಮಹಾದೇಶ್ ಎಂ ಗೌಡ, ಹನೂರು ತಾಲ್ಲೂಕು ವರದಿಗಾರರು ಹನೂರು: ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಸಹ…
ಕೊಳ್ಳೇಗಾಲ: ಅಕ್ರಮವಾಗಿ ಕೇರಳ ಲಾಟರಿಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಅಗರ ಮಾಂಬಳ್ಳಿ ಠಾಣೆಯ ಪೊಲೀಸರು ಬಂಧಿಸಿರುವ ಘಟನೆ ಮಂಗಳವಾರ ಜರುಗಿದೆ.…