Andolana originals

ಚಾಮುಂಡೇಶ್ವರಿ ದೇಗುಲದಲ್ಲಿ ಆನ್‌ಲೈನ್ ಸೇವೆ!

ಚಿರಂಜೀವಿ ಸಿ.ಹುಲ್ಲಹಳ್ಳಿ

ಡಿಜಿಟಲ್‌ಗೆ ತೆರೆದುಕೊಂಡ ದೇವಾಲಯ; ಧಾರ್ಮಿಕ ಸೇವಾ ಕಾರ್ಯಗಳ ಬುಕ್ಕಿಂಗ್‌ಗೆ ಅವಕಾಶ 

ಮೈಸೂರು: ನಾಡಿನ ಅಧಿದೇವತೆ ಚಾಮುಂಡೇಶ್ವರಿ ದೇವಿಯ ದರ್ಶನ ಹಾಗೂ ವಿವಿಧ ಸೇವೆಗಳನ್ನು ಭಕ್ತರಿಗೆ ಸುಲಭವಾಗಿ ಒದಗಿಸುವ ಉದ್ದೇಶದಿಂದ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಡಿಜಿಟಲ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

ದೇವಾಲಯದ ಅಧಿಕೃತ ವೆಬ್‌ಸೈಟ್ ಆರಂಭಿಸುವ ಮೂಲಕ ದರ್ಶನ, ಅಭಿಷೇಕ ಹಾಗೂ ಅರ್ಚನೆ ಸೇರಿದಂತೆ ವಿವಿಧ ಸೇವೆಗಳಿಗೆ ಆನ್‌ಲೈನ್‌ನಲ್ಲೇ ಟಿಕೆಟ್ ಕಾಯ್ದಿರಿಸುವ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಭಕ್ತರು ದೇವಾಲಯದ ಕಚೇರಿಗೆ ಅಲೆದಾಡದೆ ಮನೆಯಲ್ಲಿಯೇ ಕುಳಿತು ಅಗತ್ಯ ಸೇವೆಗಳನ್ನು ಬುಕ್ ಮಾಡಿಕೊಳ್ಳಬಹುದಾಗಿದೆ.

ಈ ಹಿಂದೆ ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಯ ಅಭಿಷೇಕ ಹಾಗೂ ವಿವಿಧ ಅರ್ಚನೆಗಳಿಗೆ ಕೌಂಟರ್‌ಗಳಲ್ಲಿ ಟಿಕೆಟ್ ವಿತರಿಸಲಾಗುತ್ತಿತ್ತು. ಇದೀಗ ಅಭಿಷೇಕ ಮತ್ತು ಅರ್ಚನೆಯ ಟಿಕೆಟ್‌ಗಳನ್ನು ಸಂಪೂರ್ಣ ವಾಗಿ ಆನ್‌ಲೈನ್ ಮೂಲಕವೇ ನೀಡಲಾಗುತ್ತಿದೆ. ಒಬ್ಬರಿಗೆ ಒಂದು ಅಭಿಷೇಕದ ಟಿಕೆಟ್ ನೀಡಲಾಗುತ್ತಿದ್ದು, ಒಂದು ಟಿಕೆಟ್‌ನಲ್ಲಿ ಇಬ್ಬರಿಗೆ ಪ್ರವೇಶ ಕಲ್ಪಿಸಲಾಗುತ್ತದೆ.

ಟಿಕೆಟ್ ದುರುಪಯೋಗ ತಡೆಯುವ ಉದ್ದೇಶದಿಂದ ಕೆವೈಸಿ ಕಡ್ಡಾಯಗೊಳಿಸಲಾಗಿದೆ. ಆನ್‌ಲೈನ್‌ನಲ್ಲಿ ಅಪ್ ಲೋಡ್ ಮಾಡಿರುವ ಆಧಾರ್ ಕಾರ್ಡ್ ಅನ್ನು ದರ್ಶನದ ವೇಳೆ ಭಕ್ತರು ಪ್ರದರ್ಶಿಸಬೇಕು. ನಿತ್ಯ ಬೆಳಿಗ್ಗೆ ೭ರಿಂದ ೯ ಗಂಟೆ ಹಾಗೂ ಸಂಜೆ ೭.೩೦ ರಿಂದ ೯ ಗಂಟೆಯವರೆಗೆ ಅಭಿಷೇಕದ ಟಿಕೆಟ್ ಪಡೆದವರಿಗೆ ಮಾತ್ರ ಗೇಟ್-೨ರ ಮೂಲಕ ದೇವಾಲಯ ಪ್ರವೇಶಿಸಲು ಅವಕಾಶವಿದೆ. ದಿನಕ್ಕೆ ಗರಿಷ್ಟ ೨೦೦ ಮಂದಿಗೆ ಮಾತ್ರ ಟಿಕೆಟ್ ಲಭ್ಯವಾಗಲಿದೆ.

ದರ್ಶನಕ್ಕೂ ಸಮಯ ನಿಗದಿ: ಧರ್ಮ ದರ್ಶನ ಹಾಗೂ ವಿಶೇಷ ದರ್ಶನ ಪಡೆಯುವ ಜನರು ವೆಬ್ ಸೈಟ್‌ನಲ್ಲಿ ತಾವು ದೇವಾಲಯಕ್ಕೆ ಭೇಟಿ ನೀಡುವ ಸಮಯವನ್ನು ನಮೂದಿಸಿ ಮುಂಗಡ ಬುಕ್ಕಿಂಗ್ ಮಾಡಿಕೊಳ್ಳಬಹುದು. ಇದರಿಂದ ನಿಗದಿತ ಸಮಯದಲ್ಲಿ ದರ್ಶನ ಪಡೆಯಲು ಅನುಕೂಲವಾಗಲಿದೆ. ಸದ್ಯವಿಶೇಷ ದರ್ಶನದ ಟಿಕೆಟ್ ಗಳನ್ನು ಆನ್‌ಲೈನ್ ಹಾಗೂ ಆಫ್‌ಲೈನ್ ಎರಡೂ ವಿಧಾನಗಳಲ್ಲಿ ಪಡೆಯಲು ಅವಕಾಶವಿದೆ.

ವಿವಿಐಪಿಗಳಿಗೂ ಸಮಯ ನಿಗದಿ ದೇವಾಲಯಕ್ಕೆ ಭೇಟಿ ನೀಡುವ ವಿವಿಐಪಿಗಳ ದರ್ಶನಕ್ಕೂ ಸಮಯ ನಿಗದಿಪಡಿಸುವ ಚಿಂತನೆ ಪ್ರಾಧಿಕಾರದಲ್ಲಿದೆ. ಈ ಸಂಬಂಧ ನಿಗದಿತ ದೂರವಾಣಿ ಸಂಖ್ಯೆಗೆ ಮುಂಚಿತವಾಗಿ ಮಾಹಿತಿ ನೀಡುವ ವ್ಯವಸ್ಥೆ ಜಾರಿಗೆ ತರಲು ನಿರ್ಧರಿಸಲಾಗಿದೆ. ಲಭ್ಯವಾಗುವ ಮಾಹಿತಿಯ ಆಧಾರದಲ್ಲಿ ಗಣ್ಯರಿಗೆ ಶಿಷ್ಟಾಚಾರದಂತೆ ದರ್ಶನದ ವ್ಯವಸ್ಥೆ ಕಲ್ಪಿಸಲಾಗುತ್ತದೆ.

” ಆನ್‌ಲೈನ್ ಮೂಲಕ ವಿವಿಧ ಸೇವೆಗಳಿಗೆ ಟಿಕೆಟ್ ನೀಡುವ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ. ಇದರಿಂದ ದೇವಾಲಯಕ್ಕೆ ಬರುವ ಭಕ್ತರು ನಿಗದಿತ ಸಮಯದಲ್ಲಿ ವಿಶೇಷ ದರ್ಶನ ಪಡೆಯಲು ಸಾಧ್ಯವಾಗಲಿದೆ. ಪ್ರತಿಯೊಂದು ಮಾಹಿತಿಗೂ ದೇವಾಲಯದ ಕಚೇರಿಗೆ ಖುದ್ದಾಗಿ ಭೇಟಿ ನೀಡಬೇಕಾದ ಅನಿವಾರ್ಯತೆಯೂ ಕಡಿಮೆಯಾಗಲಿದೆ. ಬುಕ್ಕಿಂಗ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಸರಳತೆ ಮತ್ತು ಅನುಕೂಲತೆ ಕಲ್ಪಿಸುವುದು ಈ ವ್ಯವಸ್ಥೆಯ ಉದ್ದೇಶವಾಗಿದೆ.”

ಎಂ.ಜೆ.ರೂಪಾ, ಕಾರ್ಯದರ್ಶಿ, ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ

” ಒಂದೇ ವೆಬ್‌ಸೈಟ್‌ನಲ್ಲಿ ಸಮಗ್ರ ಮಾಹಿತಿ https://srichamundeshwaridevi.in ವೆಬ್‌ಸೈಟ್‌ಗೆ ಭೇಟಿ ನೀಡಿ ಶ್ರೀ ಚಾಮುಂಡೇಶ್ವರಿ ದೇವಾಲಯದ ಪರಿಚಯ, ಚಾಮುಂಡಿಬೆಟ್ಟದ ಮಾಹಿತಿ, ದರ್ಶನದ ವಿವರಗಳು, ವಿವಿಧ ಸೇವೆಗಳು, ದೈನಂದಿನ ಪೂಜಾ ಕೈಂಕರ್ಯಗಳು, ವಿಶೇಷ ಧಾರ್ಮಿಕ ಆಚರಣೆಗಳು, ಹಬ್ಬ-ಉತ್ಸವಗಳು, ಭಕ್ತರಿಗೆ ಅಗತ್ಯವಿರುವ ಮಾರ್ಗದರ್ಶನ, ಲಭ್ಯವಿರುವ ಸೌಲಭ್ಯಗಳು ಹಾಗೂ ಸಂಪರ್ಕ ವಿವರಗಳನ್ನು ಪಡೆದುಕೊಳ್ಳಬಹುದು. ಪ್ರೋಗ್ರೆಸಿವ್ ವೆಬ್ ಅಪ್ಲಿಕೇಶನ್ ತಂತ್ರಜ್ಞಾನದಲ್ಲಿ ವೆಬ್‌ಸೈಟ್ ಅಭಿವೃದ್ಧಿಪಡಿಸಲಾಗಿದ್ದು, ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ ಹಾಗೂ ಕಂಪ್ಯೂಟರ್‌ಗಳಲ್ಲಿ ಸುಲಭವಾಗಿ ಬಳಸಬಹುದಾಗಿದೆ. ”

 

 

 

ಆಂದೋಲನ ಡೆಸ್ಕ್

Recent Posts

ಹಾಸನದಲ್ಲಿ ‘ಲಂಚದ ಚಾಟ್’ ಸಂಚಲನ: ಡಿಸಿ–ಸಚಿವರ ವಿರುದ್ಧ ಕುಮಾರಸ್ವಾಮಿ ಆರೋಪ!

ಹಾಸನ: ಹಾಸನದಲ್ಲಿ ಸರ್ಕಾರಿ ಕಡತಗಳ ವಿಲೇವಾರಿಗೆ ಲಕ್ಷಾಂತರ ರೂಪಾಯಿ ಹಣದ ಬೇಡಿಕೆ ಇಡಲಾಗುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ…

6 hours ago

ಜಪಾನ್‌ನಲ್ಲಿ 5.7 ತೀವ್ರತೆಯ ಭೂಕಂಪ

ಟೋಕಿಯೋ: ಜಪಾನ್‌ನಲ್ಲಿ ಭಾನುವಾರ ಮುಂಜಾನೆ ಸಂಭವಿಸಿದ ಭೂಕಂಪಕ್ಕೆ ಕನಿಷ್ಠ 22 ಮಂದಿ ಗಾಯಗೊಂಡಿದ್ದಾರೆ. ಅಂಗಡಿಗಳ ಕಿಟಕಿ ಗಾಜುಗಳು ಪುಡಿಯಾಗಿದ್ದು, ಭಯಭೀತರಾದ…

6 hours ago

ಹಾಸನಾಂಬೆ ದರ್ಶನ ಪಡೆದ ಸಿಎಂ ಡಿ.ಕೆ.ಶಿವಕುಮಾರ್‌

ಹಾಸನ: ಕುಟುಂಬ ಸಮೇತರಾಗಿ ಹಾಸನಾಂಬ ದೇವಿಯ ದರ್ಶನ ಪಡೆದ ಡಿ.ಕೆ. ಶಿವಕುಮಾರ್, ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು. ನರಕ ಚತುರ್ದಶಿ ಹಿನ್ನೆಲೆಯಲ್ಲಿ…

7 hours ago

ಬಸ್ತಾರ್‌ನಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ

ಬಸ್ತಾರ್: ಬೆಳಕಿನ ಹಬ್ಬ ದೀಪಾವಳಿಯನ್ನು ಭದ್ರತಾ ಸಿಬ್ಬಂದಿಯೊಂದಿಗೆ ಆಚರಿಸಿದ ಪ್ರಧಾನಿ ನರೇಂದ್ರ ಮೋದಿ, ‘ನೀವೆಲ್ಲರೂ ನನ್ನ ಕುಟುಂಬದ ಸದಸ್ಯರು’ ಎಂದು…

7 hours ago

ಓದುಗರ ಪತ್ರ: ರಸ್ತೆ ಅಗಲೀಕರಣದ ಜತೆ ಡಾಂಬರು ಹಾಕಲಿ

ನಂಜನಗೂಡು ತಾಲ್ಲೂಕು ಕೂಡ್ಲಾಪುರ ಗ್ರಾಮದ ರಸ್ತೆಯು ತೀರ ಹದಗೆಟ್ಟಿರುತ್ತದೆ. ಡಾಂಬರು ಇಲ್ಲದೆ ಕಲ್ಲುಮಣ್ಣುಗಳಿಂದ ಕೂಡಿದ್ದು ಸಂಚಾರ ದುರ್ಲಭವೆನಿಸಿದೆ. ಕಚ್ಚಾ ರಸ್ತೆಯಂತಿರುವ…

10 hours ago

ಓದುಗರ ಪತ್ರ: ಕಾವೇರಿ ನೀರು: ಪೆಟ್ಟಿನ ಮೇಲೆ ಪೆಟ್ಟು!

ತಮಿಳುನಾಡಿಗೆ ಪ್ರತಿನಿತ್ಯ ಮೂರು ಸಾವಿರ ಕ್ಯೂಸೆಕ್ ನೀರನ್ನು ಹರಿಸಲು ರಾಜ್ಯಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಶಿಫಾರಸು ಮಾಡಿರುವುದು ಘೋರ…

10 hours ago