Andolana originals

ಬೆಳೆ ಸಮೀಕ್ಷೆಯಲ್ಲಿ ಲೋಪ: ರೈತರಿಗೆ ನಷ್ಟ

• ಮಹೇಂದ್ರ ಹಸಗೂಲಿ

ಗುಂಡ್ಲುಪೇಟೆ: ಬೆಳೆದಿರುವುದು ಸೂರ್ಯ ಕಾಂತಿ… ಪಹಣಿಯಲ್ಲಿ ನಮೂದಾಗಿರುವುದು ಜೋಳ, ಹತ್ತಿ… ಇಂತಹ ಸಂದಿಗ್ಧತೆಯಿಂದ ರೈತರು ಸೂರ್ಯಕಾಂತಿ ಬೆಂಬಲ ಬೆಲೆಯ ಸೌಲಭ್ಯದಿಂದ ವಂಚಿತರಾಗುವ ಆತಂಕ ಎದುರಿಸುತ್ತಿದ್ದಾರೆ.

ಕೇಂದ್ರಸರ್ಕಾರದಿಂದ ಸೂರ್ಯಕಾಂತಿಗೆ ಬೆಂಬಲ ಬೆಲೆ ನಿಗದಿಯಾಗಿದ್ದು ಸೆ.2ರಿಂದ ಬೆಳೆಗಾರರ ನೋಂದಣಿ ಕಾರ್ಯ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಆರಂಭಗೊಂಡಿದೆ. ರೈತರು ಬೆಂಬಲ ಬೆಲೆ ಪಡೆಯಲು ಮುಂದಾಗಿದ್ದು ಕೆಲವು ದಿನಗಳಲ್ಲಿ ಖರೀದಿ ಪ್ರಕ್ರಿಯೆ ಆರಂಭವಾಗಲಿದೆ.

ಸಾಕಷ್ಟು ರೈತರು ಸೂರ್ಯಕಾಂತಿ ಬೆಳೆದಿದ್ದರೂ ಅವರ ಜಮೀನಿನ ಪಹಣಿ (ಆರ್‌ಟಿಸಿ)ಯಲ್ಲಿ ಜೋಳ, ಹತ್ತಿ ಎಂದು ನಮೂದಾಗಿದೆ. ಪಹಣಿ ಯಲ್ಲಿ ಸೂರ್ಯಕಾಂತಿ ಬೆಳೆ ನಮೂದಾಗಿದ್ದರೆ ಮಾತ್ರ ಖರೀದಿ ಕೇಂದ್ರದಲ್ಲಿ ಸೂರ್ಯಕಾಂತಿ ಖರೀದಿ ಸಾಧ್ಯ. ಇಲ್ಲದಿದ್ದರೆ ಅವಕಾಶವಿಲ್ಲ.

ಹಾಗಾಗಿ ಅಂತಹ ರೈತರು ಸೂರ್ಯಕಾಂತಿ ಬೆಳೆದಿ ದ್ದರೂ ಬೆಂಬಲ ಬೆಲೆಯಿಂದ ವಂಚಿತರಾ ಗುವ ಪರಿಸ್ಥಿತಿ ನಿರ್ಮಾಣವಾಗಿ ನಷ್ಟ ಉಂಟಾಗುತ್ತದೆ. ಇದಕ್ಕೆ ಕೃಷಿ ಇಲಾಖೆಯು ಬೆಳೆ ಸಮೀಕ್ಷೆ ನಡೆಸಲು ನೇಮಿಸಿದ ಪಿಆರ್ ಗಳು ನೇರ ಕಾರಣ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ.

ಸೂರ್ಯಕಾಂತಿಯನ್ನು ದಲ್ಲಾಳಿಗಳು 3,500 ರೂ. ಗಳಿಗೆ ಖರೀದಿ ಮಾಡುತ್ತಿದ್ದರು. ಖರೀದಿ ಕೇಂದ್ರ ತೆರೆಯುವುದು ಖಚಿತವಾದಂತೆ 4,500 ರೂ.ಗಳಿಗೆ ಖರೀದಿಸಲು ಮುಂದಾಗಿದ್ದಾರೆ. ಆದರೆ, ಕ್ವಿಂಟಾಲ್ ಸೂರ್ಯಕಾಂತಿಗೆ ಬೆಂಬಲ ಬೆಲೆ 7,280 ರೂ. ಗಳಾಗಿವೆ. ವಿಪರ್ಯಾಸ ಎಂದರೆ ರೈತರು ಪಹಣಿ ಯಲ್ಲಿ ಸೂರ್ಯಕಾಂತಿ ಬೆಳೆ ನಮೂದಾಗಿಲ್ಲ.

ಇದರಿಂದ ರೈತರಿಗೆ ಕ್ವಿಂಟಾಲ್‌ಗೆ 2,500 ರೂ. ನಿಂದ 3,000 ರೂ. ನಷ್ಟವಾಗುತ್ತದೆ. ಒಬ್ಬ ರೈತ ಕನಿಷ್ಠ 4-5 ಕ್ವಿಂಟಾಲ್ ಮಾರಾಟ ಮಾಡಿದರೆ ಆತನಿಗೆ 15,000 ರೂ. ನಷ್ಟವಾಗುತ್ತದೆ. ಇದನ್ನು ತುಂಬಿ ಕೊಡುವವರು ಯಾರು? ಎಂಬುದು ರೈತರ ಪ್ರಶ್ನೆ. ಬೆಳೆ ಸಮೀಕ್ಷೆ ನಡೆಸಲು ನಿಯೋಜಿಸಿದ ಪಿಆರ್ ಗಳು ಫಸಲಿನ ತಾಕುಗಳಿಗೆ ಭೇಟಿ ನೀಡಿ ಸಮೀಕ್ಷೆ ಮಾಡಿಲ್ಲ. ಆದ್ದರಿಂದಲೇ ಸೂರ್ಯಕಾಂತಿ ಬೆಳೆದಿರುವ ಜಮೀನಿನ ಆರ್‌ಟಿಸಿಯಲ್ಲಿ ಹತ್ತಿ, ಜೋಳ ಎಂದು ನಮೂದಾಗಿದೆ ಎಂಬುದು ರೈತರ ಆರೋಪ. ತಾಲ್ಲೂಕಿನ ಹಸಗೂಲಿ ಗ್ರಾಮದ ಈಶ್ವರಪ್ಪ ತಮಗೆ ಸೇರಿದ ಸರ್ವೆ ಸಂಖ್ಯೆ 95/1, ಮತ್ತು 95/2ರ ಜಮೀನುಗಳಲ್ಲಿ ಪ್ರಸ್ತುತ ಸೂರ್ಯಕಾಂತಿ ಬೆಳೆದಿದ್ದರು. ಕೃಷಿ ಇಲಾಖೆ ನಡೆಸಿದ ಸಮೀಕ್ಷೆ ಬಳಿಕ ಇವರ ಪಹಣಿಯಲ್ಲಿ ಜೋಳ, ಹತ್ತಿ ಎಂದು ನಮೂದಾಗಿದೆ. ಯಾವ ಮಾನದಂಡದಲ್ಲಿ ವಾಸ್ತವ ಬೆಳೆಯನ್ನು ಕೈಬಿಟ್ಟು ಬೇರೊಂದು ಬೆಳೆ ಸೇರಿಸಲಾಗಿದೆ. ಇದರಿಂದ ರೈತನಿಗೆ ಆಗುವ ನಷ್ಟವನ್ನು ಭರಿಸುವವರು ಯಾರು ಎಂದು ರೈತರು ಪ್ರಶ್ನಿಸಿದ್ದಾರೆ.

ಕೋಟ್ಸ್‌))

ಕಷ್ಟಪಟ್ಟು ಬೆಳೆದ ಸೂರ್ಯಕಾಂತಿಯನ್ನು ಬೆಂಬಲ ಬೆಲೆಯಲ್ಲಿ ಮಾರಲು ಸಾಧ್ಯವಾಗುತ್ತಿಲ್ಲ. ಬೆಳೆ ಸಮೀಕ್ಷೆಯಲ್ಲಿ ದೋಷವಾಗಿದ್ದು ರೈತರು ಸಮಸ್ಯೆ ತೋಡಿಕೊಳ್ಳುತ್ತಿದ್ದಾರೆ. ಅಂತಹ ರೈತರ ಸೂರ್ಯಕಾಂತಿಯನ್ನು ಖರೀದಿಸಬೇಕು. ಜೊತೆಗೆ ಆರ್‌ಟಿಸಿಯಲ್ಲಿ ಬೆಳೆಯನ್ನು ತಪ್ಪಾಗಿ ನಮೂದಿಸಿರುವುದನ್ನು ಬದಲಿಸಬೇಕು.

-ಸುರೇಶ್, ರೈತರು

‘ಬೆಳೆ ದರ್ಶಕ್ 2024’ ಮುಂಗಾರು ಮಳೆ ಆ್ಯಪ್ ಅನ್ನು ರೈತರು ಸ್ಮಾರ್ಟ್‌ ಫೋನ್‌ನಲ್ಲಿ ಡೌನ್ ಲೋಡ್ ಮಾಡಿಕೊಂಡು ತಮ್ಮ ಜಮೀನಿನಲ್ಲಿ ಬೆಳೆದಿದ್ದ ಯಾವ ಫಸಲು ನಮೂದಾಗಿದೆ ಎಂಬುದನ್ನು ಪರೀಕ್ಷಿಸಿಕೊಳ್ಳಬಹುದು. ಕೊಲ್ಲೋತ್ತರ ಮತ್ತು ನಂತರವೂ ಅಗತ್ಯ ಮಾಹಿತಿಯನ್ನು ನೀಡಿ ಬೆಳೆಯನ್ನು ದಾಖಲಿಸಬಹುದು. ಲೋಪವಾಗಿದ್ದರೆ ಹತ್ತಿರದ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಿ ಸರಿಪಡಿಸಿಕೊಳ್ಳಬಹುದು.

-ವೆಂಕಟೇಶ್, ಸಹಾಯಕ ಕೃಷಿ ನಿರ್ದೇಶಕರು, ಗುಂಡ್ಲುಪೇಟೆ.

Mahendra Hasaguli

ಮೂಲತಃ ಗುಂಡ್ಲುಪೇಟೆ ತಾಲ್ಲೂಕು ಹಸಗೂಲಿ ಗ್ರಾಮದವನಾದ ನಾನು ಪ್ರಾಥಮಿಕ ಶಿಕ್ಷಣವನ್ನು ಹೆಗ್ಗಡಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ, ಗರಗನಹಳ್ಳಿ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿವರೆಗೆ ಮುಗಿಸಿ ಡಿಬಿಜೆಸಿ ಕಾಲೇಜು ಗುಂಡ್ಲುಪೇಟೆಯಲ್ಲಿ ಪಿಯು ವ್ಯಾಸಂಗ, ಜೆಎಸ್‌ಎಸ್‌ನಲ್ಲಿ ಪದವಿ ಮುಗಿಸಿ ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಎಂಎ ಕನ್ನಡ ಸ್ನಾತಕೋತ್ತರ ಪದವಿ ಮುಗಿಸಿ, ಒಂದು ವರ್ಷ ಪತ್ರಿಕೋದ್ಯಮದ ವಿದ್ಯಾರ್ಥಿಯಾಗಿ ಶಿಕ್ಷಣ ಪಡೆದು ಮೊದಲಿಗೆ 2015- 16 ರಲ್ಲಿ ಸಂಜೆದೀಪ ಪತ್ರಿಕೆಯಲ್ಲಿ ವರದಿಗಾರನಾಗಿ 2016-17 ರಲ್ಲಿ ವಿಶ್ವವಾಣಿ ಪತ್ರಿಕೆ ವರದಿಗಾರನಾಗಿ ಹಾಗೂ 2017 ರಿಂದ ಪ್ರಸ್ತುತ ಸಮಯದವರೆಗೂ ಆಂದೋಲನ ಪತ್ರಿಕೆಯಲ್ಲಿ ಗುಂಡ್ಲುಪೇಟೆ ತಾಲ್ಲೂಕು ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ,

Recent Posts

ಬೆಂಗಳೂರಿನಲ್ಲಿ 55 ಕೋಟಿ ಮೌಲ್ಯದ ಡ್ರಗ್ಸ್ ವಶ: ಗೃಹ ಸಚಿವ ಪರಮೇಶ್ವರ್‌ ಹೇಳಿದ್ದಿಷ್ಟು.!

ಬೆಂಗಳೂರು: ಮಹಾರಾಷ್ಟ್ರದ ಎಎನ್‌ಟಿಎಫ್‌ ಅಧಿಕಾರಿಗಳು ಬೆಂಗಳೂರಿನಲ್ಲಿ ಮೂರು ಡ್ರಗ್ಸ್‌ ಫ್ಯಾಕ್ಟರಿಗಳ ಮೇಲೆ ದಾಳಿ ನಡೆಸಿ ಬರೋಬ್ಬರಿ 55 ಕೋಟಿ ಮೌಲ್ಯದ…

9 mins ago

ಹುಣಸೂರು | ಹಾಡಹಗಲೇ 5 ಕೋಟಿ ಚಿನ್ನಾಭರಣ ದರೋಡೆ! ಬೈಕ್‌ನಲ್ಲಿ ಪರಾರಿ

ಹುಣಸೂರು : ಹುಣಸೂರು ನಗರದಲ್ಲಿ ಹಾಡಹಗಲೇ ದೊಡ್ಡ ದರೋಡೆ ನಡೆದಿದ್ದು, ಸುಮಾರು 4 ರಿಂದ 5 ಕೋಟಿ ರೂಪಾಯಿ ಮೌಲ್ಯದ…

55 mins ago

ವರ್ಷದ ಕೊನೆಯ ಮನ್‌ ಕಿ ಬಾತ್‌ನಲ್ಲಿ 2025ರ ಭಾರತದ ಸಾಧನೆ ಸ್ಮರಿಸಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಪ್ರಧಾನಿ ಮೋದಿ ಅವರು ಇಂದು ತಮ್ಮ 129ನೇ ಮನ್‌ ಕಿ ಬಾತ್‌ ಆವೃತ್ತಿಯನ್ನು ಉದ್ದೇಶಿಸಿ ಮಾತನಾಡಿದರು. 2025ರಲ್ಲಿ ಭಾರತದ…

2 hours ago

ಜಲಾಂತರಗಾಮಿ ನೌಕೆಯಲ್ಲಿ ಪ್ರಯಾಣಿಸಿ ಹೊಸ ದಾಖಲೆ ಬರೆದ ರಾಷ್ಟ್ರಪತಿ ದ್ರೌಪದಿ ಮುರ್ಮು

ಕಾರವಾರ: ದೇಶದ ಪ್ರಥಮ ಪ್ರಜೆಯಾಗಿರುವ ಸೇನಾ ಪಡೆಗಳ ಮಹಾದಂಡ ನಾಯಕಿ ರಾಷ್ಟ್ರಪತಿ ದ್ರೌಪದ ಮುರ್ಮು ಅವರು ಇಂದು ಜಲಾಂತರಗಾಮಿ ನೌಕೆಯಲ್ಲಿ…

2 hours ago

800 ಕಿ.ಮೀ ಪಾದಯಾತ್ರೆ ಮೂಲಕ ಅಯ್ಯಪ್ಪನ ದರ್ಶನ ಪಡೆಯುವುದಕ್ಕೆ ಹೊರಟ ಭಕ್ತರು

ಮೈಸೂರು: ಅಯ್ಯಪ್ಪ ಸ್ವಾಮಿ ದೇವಸ್ಥಾನ ಪಕ್ಕದ ಕೇರಳ ರಾಜ್ಯದಲ್ಲಿ ಇದ್ದರೂ ಅಯ್ಯಪ್ಪನಿಗೆ ಹೆಚ್ಚಿನ ಭಕ್ತರು ಇರುವುದು ನಮ್ಮ ಕರ್ನಾಟಕದಲ್ಲಿಯೇ ಪ್ರತಿ…

2 hours ago

ಚಾಮರಾಜನಗರ| ಇಟ್ಟಿಗೆ ಬೇಯಿಸಲು ಮರಗಳ ಮಾರಣಹೋಮ

ಚಾಮರಾಜನಗರ: ಇಟ್ಟಿಗೆ ಬೇಯಿಸಲು ಮರಗಳ ಮಾರಣಹೋಮ ನಡೆಸಿರುವ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನಲ್ಲಿ ನಡೆದಿದೆ. ಇಲ್ಲಿನ ಹಲವು ಗ್ರಾಮಗಳಲ್ಲಿ…

2 hours ago