Andolana originals

ಅಡಕೆ ಬೆಳೆಗೆ ಕಾಡುತ್ತಿರುವ ಹಳದಿ ಎಲೆ ರೋಗ ಭಾಧೆ

29,450 ಹೆಕ್ಟೇರ್‌ ಪ್ರದೇಶದಲ್ಲಿ 529 ಹೆಕ್ಟೇರ್‌ನಲ್ಲಿ ರೋಗ ಉಲ್ಬಣ

ಮಡಿಕೇರಿ: ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಅಡಕೆ ಬೆಳೆಗೆ ಮಾರಕವಾಗಿ ಕಾಡುತ್ತಿರುವ ಎಲೆಚುಕ್ಕಿ ಮತ್ತು ಹಳದಿ ಎಲೆ ರೋಗ ಕೊಡಗಿನ ಅಡಕೆ ಬೆಳೆಗಾರರನ್ನೂ ಕಾಡುತ್ತಿದೆ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಅಂತರ ಬೆಳೆಯಾಗಿ, ಕೆಲವೆಡೆ ಪ್ರಮುಖ ಬೆಳೆಯಾಗಿ ಅಡಕೆ ಬೆಳೆಯಲಾಗುತ್ತಿದ್ದು, ರೋಗದ ಹಾವಳಿಯಿಂದ ಬೆಳೆಗಾರರು ತತ್ತರಿಸಿದ್ದಾರೆ. ರೋಗ ಪೀಡಿತ ಪ್ರದೇಶ ಮತ್ತು ಅಂದಾಜು ನಷ್ಟದ ಪ್ರಮಾಣವನ್ನು ಸರ್ಕಾರ ಗುರುತಿಸಿದ್ದರೂ ಈ ತನಕ ರೈತರಿಗೆ ಯಾವುದೇ ಪರಿಹಾರ ಸಿಕ್ಕಿಲ್ಲ.

ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಅಡಕೆ ಬೆಳೆಗಾರರನ್ನು ಕಂಗಾಲು ಮಾಡಿ ರುವ ಎಲೆಚುಕ್ಕಿ ಮತ್ತು ಹಳದಿ ಎಲೆ ರೋಗ ಕೊಡಗಿನ ಅಡಕೆ ತೋಟ ಗಳಲ್ಲೂ ಕಾಣಿಸಿಕೊಂಡಿದ್ದು, ಉತ್ತಮ ಆದಾಯ ಗಳಿಸುವ ನಿರೀಕ್ಷೆ ಇಟ್ಟು ಕೊಂಡು ಅಡಕೆ ಕೃಷಿ ಮಾಡಿದ್ದ ವರಿಗೆ ಈ ಎರಡೂ ಮಾರಕ ರೋಗಗಳು ಸರಿ ಯಾದ ಹೊಡೆತವನ್ನೇ ನೀಡಿದ್ದು, ರೈತರಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲು ಕುವ ಆತಂಕ ಸೃಷ್ಟಿಯಾಗಿದೆ.

ರೋಗ ಪೀಡಿತ ಪ್ರದೇಶಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇರುವುದು ಬೆಳೆಗಾರರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ತೋಟಗಾರಿಕೆ ಇಲಾಖೆಯ ೨೦೨೨-೨೩ನೇ ಸಾಲಿನ ಅಂಕಿ ಅಂಶಗಳ ಪ್ರಕಾರ ಕೊಡಗಿನಲ್ಲಿ ೨೯,೪೫೦ ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆ ಬೆಳೆಯಲಾಗುತ್ತಿದೆ. ಈ ಪೈಕಿ ೫೨೯ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ಅಡಕೆ ಬೆಳೆಯಲ್ಲಿ ಎಲೆ ಚುಕ್ಕಿ ರೋಗ ಕಾಣಿಸಿಕೊಂಡಿದ್ದು, ಸುಮಾರು ೩. ೫ ಕೋಟಿ ರೂ. ನಷ್ಟದ ಅಂದಾಜು ಮಾಡ ಲಾಗಿದೆ. ೨,೧೪೨ ಹೆಕ್ಟೇರ್ ಪ್ರದೇಶ ದಲ್ಲಿ ಹಳದಿ ಎಲೆ ರೋಗ ಕಂಡುಬಂದಿದೆ. ಇದರಿಂದಾಗಿ ಬೆಳೆಗಾರರಿಗೆ ಸುಮಾರು ೧೩. ೫ ಕೋಟಿ ರೂ. ನಷ್ಟವಾಗಿ ರುವುದಾಗಿ ಸಮೀಕ್ಷಾ ವರದಿಯಲ್ಲಿ ಹೇಳಲಾಗಿದೆ. ಅಡಕೆಗೆ ತಗುಲಿರುವ ಎಲೆ ಚುಕ್ಕಿ ಮತ್ತು ಹಳದಿ ಎಲೆ ರೋಗದ ಬಾಧೆಯನ್ನು ವೈಜ್ಞಾನಿಕವಾಗಿ ನಿಯಂತ್ರಿಸಲು ಮತ್ತು ಹಾನಿಗೀಡಾಗಿರುವ ಅಡಕೆ ತೋಟಗಳ ಪುನಶ್ಚೇತನಕ್ಕೆ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಆದರೆ, ನಷ್ಟಕ್ಕೆ ಒಳಗಾಗಿರುವ ಬೆಳೆಗಾರರಿಗೆ ಪರಿಹಾರ ನೀಡುವ ಕುರಿತು ಯಾವುದೇ ಚಿಂತನೆ ನಡೆಸದೇ ಇರುವುದು ಬೆಳೆಗಾರರ ಆಕ್ರೋಶಕ್ಕೆ ಕಾರಣವಾಗಿದೆ.

ಅಡಕೆ ಸಸಿಗಳಲ್ಲಿ ಸಸ್ಯ ಸಂರಕ್ಷಣಾ ಔಷಽ ಸಿಂಪಡಣೆ, ಕಟಾವು ಮಾಡಲು ತೋಟಗಾರಿಕೆಯಲ್ಲಿ ಯಾಂತ್ರೀಕರಣ ಯೋಜನೆಯಡಿ ಕಾರ್ಬನ್ ಫೈಬರ್ ದೋಟಿ ಖರೀದಿಸಲು ಸಾಮಾನ್ಯ ವರ್ಗದ ರೈತರಿಗೆ ಶೇ. ೪೦ರಂತೆ ೪೦ ಸಾವಿರ ರೂ. , ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ರೈತರಿಗೆ ಶೇ. ೫೦ ರಂತೆ ೫೦ ಸಾವಿರ ರೂ. ಸಹಾಯಧನ ನೀಡಲಾಗುತ್ತಿದೆ.

೨೦೨೨-೨೦೨೩ ಮತ್ತು ೨೦೨೩-೨೪ನೇ ಸಾಲಿನಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಹಳದಿ ಎಲೆ ರೋಗ ಬಾಽತ ಪ್ರದೇಶಗಳಲ್ಲಿ ಅಡಕೆ ಬೆಳೆಯ ಬದಲಾಗಿ ಇತರೆ ವಾಣಿಜ್ಯ ತೋಟಗಾರಿಕೆ ಬೆಳೆಗಳಾದ ಬಾಳೆ, ತೆಂಗು, ಕಾಫಿ, ಕೋಕೋ, ಕಾಳು ಮೆಣಸು, ಜಾಯಿಕಾಯಿ, ಬೆಣ್ಣೆ ಹಣ್ಣು ಹಾಗೂ ಇತರೆ ಬೆಳೆಗಳನ್ನು ಬೆಳೆಯಲು ಆಯಾ ಬೆಳೆಗೆ ಅನುಗುಣವಾಗಿ ಶೇ. ೪೦ ರಷ್ಟು ಪ್ರತಿ ಹೆಕ್ಟೇರ್‌ಗೆ ೧೧,೯೫೨ರಿಂದ ೧,೨೩,೪೮೩ ರೂ. ತನಕ ನಾಲ್ಕು ಹೆಕ್ಟೇರ್‌ಗಳವರೆಗೆ ಸಹಾಯಧನವನ್ನು ನೀಡಲಾಗಿದೆ ಎಂದು ತೋಟಗಾರಿಕೆ ಇಲಾಖೆ ಅಂಕಿ-ಅಂಶಗಳು ಹೇಳುತ್ತವೆ

ಎಲೆಚುಕ್ಕಿ ಮತ್ತು ಹಳದಿ ಎಲೆ ರೋಗಕ್ಕೆ ಸಂಬಂಽಸಿದಂತೆ ಸರ್ಕಾರ ದೀರ್ಘಾವಽ ಪರಿಹಾರಗಳ ಬಗ್ಗೆ ಮಾತ್ರ ಚಿಂತನೆ ನಡೆಸುತ್ತಿದೆ. ಆದರೆ, ಈ ರೋಗಗಳಿಂದ ಬೆಳೆಗಾರರಿಗೆ ಆಗಿರುವ ಮತ್ತು ಆಗುತ್ತಿರುವ ನಷ್ಟಕ್ಕೆ ತಕ್ಷಣ ಪರಿಹಾರ ಕಲ್ಪಿಸುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕೆಲವರಂತೂ ಜೀವನಾಧಾರವಾಗಿರುವ ತೋಟವನ್ನೇ ಕಳೆದುಕೊಂಡಿದ್ದಾರೆ. ಈ ಬಗ್ಗೆ ಸರ್ಕಾರ ಚಿಂತಿಸಬೇಕಿದೆ.

-ಹೇಮಂತ್ ಪಾರೇರ, ಬೆಳೆಗಾರ, ಯಡವನಾಡು. ಅಡಕೆ ಬೆಳೆಯನ್ನು ಬಾಧಿಸುತ್ತಿರುವ

ಎಲೆ ಚುಕ್ಕಿ ಮತ್ತು ಹಳದಿ ಎಲೆ ರೋಗವನ್ನು ವೈಜ್ಞಾನಿಕವಾಗಿ ನಿಯಂತ್ರಿಸಲು ಮತ್ತು ಹಾನಿಗೀಡಾಗಿರುವ ಅಡಕೆ ತೋಟಗಳ ಪುನಶ್ಚೇತನಕ್ಕೆ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ತೋಟಗಾರಿಕೆ ಇಲಾಖೆಯಲ್ಲಿ ರೈತರಿಗೆ ಪರಿಹಾರ ನೀಡುವ ಯಾವುದೇ ಯೋಜನೆಗಳು ಇಲ್ಲ.

-ಎಸ್. ಎಸ್. ಮಲ್ಲಿಕಾರ್ಜುನ್, ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿ

ಆಂದೋಲನ ಡೆಸ್ಕ್

Recent Posts

ಈ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ ಒಟ್ಟು 2,800 ರೈತರ ಆತ್ಮಹತ್ಯೆ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

ಮೈಸೂರು: ರಾಜ್ಯ ಸರ್ಕಾರದ ದುರಾಡಳಿತದಿಂದ ರಾಜ್ಯದಲ್ಲಿ 2800 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.…

50 seconds ago

ಆರ್‌ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್

ಮೈಸೂರು: ಆರ್‌ಸಿಬಿ ಅಭಿಮಾನಿಗಳಿಗೆ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್‌ ಪ್ರಸಾದ್‌ ಗುಡ್‌ನ್ಯೂಸ್‌ ನೀಡಿದ್ದು, ಈ ಬಾರಿಯ ಐಪಿಎಲ್‌ ಉದ್ಘಾಟನಾ ಪಂದ್ಯ ಬೆಂಗಳೂರಿನಲ್ಲಿ…

6 mins ago

ಮಗಳಿಗಾಗಿ ಕಿರುತೆರೆ ಪತ್ನಿಯನ್ನೇ ಕಿಡ್ನ್ಯಾಪ್‌ ಮಾಡಿದ ಸ್ಯಾಂಡಲ್‌ವುಡ್‌ ನಿರ್ಮಾಪಕ

ಬೆಂಗಳೂರು: ಮಗಳಿಗಾಗಿ ಪತ್ನಿ ಹಾಗೂ ನಟಿ ಚೈತ್ರಾರಾಮ್‌ ಅವರನ್ನು ನಿರ್ಮಾಪಕ ಹರ್ಷವರ್ಧನ್‌ ಕಿಡ್ನ್ಯಾಪ್‌ ಮಾಡಿದ ಘಟನೆ ನಡೆದಿದ್ದು, ಪ್ರಕರಣ ಸುಖಾಂತ್ಯವಾಗಿದೆ.…

19 mins ago

ಸಹಕಾರಿ ರಂಗಕ್ಕೆ ಅನುದಾನ ನೀಡಿಕೆಯಲ್ಲಿ ತಾರತಮ್ಯವಾದಲ್ಲಿ ಕ್ರಮ: ಸಿಎಂ ಸಿದ್ದರಾಮಯ್ಯ

ಬೆಳಗಾವಿ: ಕುಣಿಗಲ್ ತಾಲ್ಲೂಕಿನ ಸಹಕಾರಿ ರಂಗಕ್ಕೆ ಅನುದಾನ ನೀಡಿಕೆಯಲ್ಲಿ ತಾರತಮ್ಯವಾಗಿದ್ದಲ್ಲಿ, ಮುಂದಿನ ವರ್ಷದಿಂದ ನಿವಾರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.…

27 mins ago

2023ರಂತೆ 2028ರಲ್ಲಿಯೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ: ಸಿಎಂ ಸಿದ್ದರಾಮಯ್ಯ

ಬೆಳಗಾವಿ: 2023ರಂತೆ 2028ರಲ್ಲಿಯೂ ಜನಾರ್ಶೀವಾದದೊಂದಿಗೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದ್ದು, ಬಿಜೆಪಿಯವರು ಸದಾ ವಿರೋಧಪಕ್ಷದ ಸ್ಥಾನದಲ್ಲಿಯೇ ಇರಲಿದ್ದಾರೆ ಎಂದು ಮುಖ್ಯಮಂತ್ರಿ…

2 hours ago

ಹಾಸನ | ವಿದ್ಯುತ್‌ ಶಾಕ್‌ಗೆ ಕಂಬದಿಂದ ಬಿದ್ದ ಕಾರ್ಮಿಕರು: ಓರ್ವ ಸಾವು

ಹಾಸನ: ಕಂಬ ಏರಿ ವಿದ್ಯುತ್‌ ತಂತಿ ದುರಸ್ತಿ ಮಾಡುವಾಗ ವಿದ್ಯುತ್‌ ಪ್ರವಹಿಸಿ ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಘಟನೆ ಹಾಸನದ ಕಾಟೀಹಳ್ಳಿಯ ಟೀಚರ್ಸ್‌…

2 hours ago