Andolana originals

ನೋಟ ಪ್ರತಿನೋಟ: ಒಂದು ರಾಷ್ಟ್ರ ಒಂದು ಚುನಾವಣೆ

ಕೇಂದ್ರ ಸಚಿವ ಸಂಪುಟ ಬುಧವಾರ ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಂಡಿದೆ. ಅದರಲ್ಲಿ ಪ್ರಮುಖವಾಗಿ ‘ಒಂದು ರಾಷ್ಟ್ರ, ಒಂದು ಚುನಾವಣೆ’ ನಿರ್ಧಾರ ಬಹುಚರ್ಚಿತವಾಗುತ್ತಿದೆ. ವಿರೋಧ ಪಕ್ಷ ಕಾಂಗ್ರೆಸ್ ನಾಯಕರು ಕಟುವಾಗಿ ಟೀಕಿಸುತ್ತಿದ್ದು, ಬಿಜೆಪಿ ನಾಯಕರು ಅಷ್ಟೇ ಪ್ರಬಲವಾಗಿ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಇಡೀ ದೇಶದಲ್ಲಿ ಸಂಸತ್ ಮತ್ತು ಎಲ್ಲ ರಾಜ್ಯಗಳ ವಿಧಾನಸಭೆಗೆ ಒಟ್ಟಿಗೆ ಚುನಾವಣೆ ನಡೆಸುವುದರಿಂದ ಅಂತಹ ಬದಲಾವಣೆ ಏನೂ ಆಗುವುದಿಲ್ಲ ಎಂದು ಕಾಂಗ್ರೆಸ್ ಹೇಳಿದರೆ, ಕೇಂದ್ರ ಸರ್ಕಾರದ ನಿಲುವು ಎಲ್ಲರಿಗೂ ಕ್ಷೇಮಕರ ಎಂಬುದು ಬಿಜೆಪಿ ಪ್ರತಿಪಾದನೆಯಾಗಿದೆ. ಇದೇ ನೆಲೆಯಲ್ಲಿ ಕಾಂಗ್ರೆಸ್ ನಾಯಕ ವಿ. ಎಸ್. ಉಗ್ರಪ್ಪ ಮತ್ತು ಬಿಜೆಪಿ ನಾಯಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಒಂದು ರಾಷ್ಟ್ರ; ಒಂದು ಚುನಾವಣೆಗೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

 

ಒಂದೇ ಚುನಾವಣೆ ಎಲ್ಲರಿಗೂ ಕ್ಷೇಮಕರ

ಒಂದು ದೇಶ, ಒಂದು ಚುನಾವಣೆ ಏಕೆ ಬೇಕು ಎಂಬುದರ ಬಗ್ಗೆ ಬಹಳಷ್ಟು ವಿವರವಾಗಿ ನಾನು ಸ್ಪೀಕರ್ ಆಗಿದ್ದಾಗಲೇ ಸದನದ ಗಮನಕ್ಕೆ ತಂದಿದ್ದೇನೆ. ಆ ವಿಷಯವನ್ನು ಸೂಕ್ಷ್ಮವಾಗಿ ಪರಿಗಣಿಸಿ ಎಲ್ಲ ಪಕ್ಷದ ರಾಜಕಾರಣಿಗಳೂ ಸಹಮತದಿಂದ ಬೆಂಬಲ ನೀಡಬೇಕು ಎಂದು ಪ್ರಸ್ತಾಪದಲ್ಲಿ ಮನವಿ ಮಾಡಿದ್ದೇನೆ. ಆದರೆ ಆಗ ಕಾಂಗ್ರೆಸ್ ಪಕ್ಷದ ಮುಖಂಡರು ನನ್ನ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಲಿಲ್ಲ. ಇನ್ನು ದೇಶದ ಅಭಿವೃದ್ಧಿ ದೃಷ್ಟಿಯಿಂದ ಮತ್ತು ಅಭಿವೃದ್ಧಿಯ ವೇಗ ಹೆಚ್ಚಾಗಬೇಕಾದರೆ ಪದೇ ಪದೇ ಚುನಾವಣೆಗಳು ನಡೆಯುವುದು ಸರಿಯಲ್ಲ. ಎಲ್ಲವುಗಳಿಗಿಂತ ಹೆಚ್ಚಾಗಿ ಹಲವಾರು ಬಾರಿ ಚುನಾವಣೆಗಳು ನಡೆಯುವುದರಿಂದ ಅದಕ್ಕೆ ತಗಲುವ ವೆಚ್ಚವೂ ದುಬಾರಿಯಾಗುತ್ತದೆ. ಇದು ಸರ್ಕಾರದ ಬೊಕ್ಕಸಕ್ಕೆ ಭಾರಿ ಹೊರೆಯಾಗುವುದು. ಅಲ್ಲದೇ ಅಽಕಾರಿಗಳ ಕೆಲಸಗಳು ಅಸ್ತವ್ಯಸ್ತವಾಗಿ ಸಮರ್ಪಕ ಆಡಳಿತಕ್ಕೂ ಹಿನ್ನಡೆಯಾಗುತ್ತದೆ. ಅಧಿಕಾರಿಗಳ ಮೇಲೆ ಹಿಡಿತ ತಪ್ಪುತ್ತದೆ. ಹಿಂದೆ ವಿಧಾನಸಭೆ ಹಾಗೂ ಲೋಕಸಭೆ ಎರಡಕ್ಕೂ ಒಂದೇ ಬಾರಿ ಚುನಾವಣೆ ನಡೆಯುತ್ತಿದ್ದವು. ಅದೇ ಪದ್ಧತಿಯನ್ನು ಈಗಲೂ ಅಳವಡಿಸಿಕೊಂಡರೆ, ದೇಶ, ಆಡಳಿತ ನಡೆಸುವವರೆಗೂ, ಜನರಿಗೂ ಕ್ಷೇಮ ಕರ ಎಂಬುದು ನನ್ನ ಅಭಿಪ್ರಾಯ.
– ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದರು, ಉತ್ತರ ಕನ್ನಡ.

 

ಮೊದಲು ಚುನಾವಣೆ ಪ್ರಕ್ರಿಯೆಯಲ್ಲಿ ಸುಧಾರಣೆ ತರಬೇಕು

ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ಸತ್ವ ಇರುವುದೇ ಚುನಾವಣೆಯಲ್ಲಿ. ಚುನಾವಣೆಗಳ ಮೂಲಕ ಜನಾಭಿಪ್ರಾಯದ ಮೇಲೆ ಸರ್ಕಾರಗಳು ರಚನೆಯಾಗುತ್ತವೆ. ಚುನಾವಣೆಗಳು ಪಾರದರ್ಶಕವಾಗಿ, ಭ್ರಷ್ಟಾಚಾರ ರಹಿತವಾಗಿ ನಡೆದಾಗ ಮಾತ್ರ ನೈಜ ಜನಾಭಿಪ್ರಾಯ ಹೊರಹೊಮ್ಮಲು ಸಾಧ್ಯ. ಏಕಕಾಲದಲ್ಲಿ ವಿಧಾನ ಸಭೆ ಮತ್ತು ಲೋಕಸಭೆ ಚುನಾವಣೆಗಳನ್ನು ನಡೆಸುವುದರಿಂದ ಯಾವುದೇ ವ್ಯತ್ಯಾಸ ಆಗುವುದಿಲ್ಲ.

ಬಹುಶಃ ಪ್ರಧಾನಿ ನರೇಂದ್ರ ಮೋದಿಯವರಿಗೆ ತಮ್ಮ ವರ್ಚಸ್ಸಿನಿಂದ ವಿಧಾನಸಭೆ ಮತ್ತು ಲೋಕಸಭೆ ಎರಡೂ ಕಡೆ ತಮ್ಮ ಪಕ್ಷ ಗೆಲುವು ಪಡೆಯಬಹುದು ಎಂದು ಅನಿಸಿರಬಹುದು. ಆದರೆ ಮೋದಿಯವರು ಹತ್ತು ವರ್ಷಗಳ ಕಾಲ ಆಡಳಿತ ನಡೆಸಿದ್ದರೂ ನೆಹರೂ ಅಥವಾ ಇಂದಿರಾ ಗಾಂಧಿ ಅವರಂತೆ ನೈಜ ರಾಷ್ಟ್ರ ನಾಯಕರಾಗಿ ಇದುವರೆಗೂ ಕಾಣಿಸಿಕೊಂಡಿಲ್ಲ. ಇನ್ನು ರಾಹುಲ್‌ಗಾಂಽಯವರನ್ನು ಹೊರತುಪಡಿಸಿ ಇಡೀ ಭಾರತದಲ್ಲಿ ಪಾದಯಾತ್ರೆ ಮಾಡಿ ಭಾರತದ ನೈಜ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡಿರುವಂತಹ ನಾಯಕರು ನಮ್ಮ ದೇಶದಲ್ಲಿ ಇಲ್ಲ ಎನ್ನಬಹುದು. ಚುನಾವಣೆ ಸಮಯದಲ್ಲಿ ನಡೆಯುವಂತಹ ವಾಮಮಾರ್ಗಗಳು, ಭ್ರಷ್ಟಾಚಾರವನ್ನು ತಡೆಯಬೇಕಾದರೆ, ಒಂದು ದೇಶ, ಒಂದು ಚುನಾವಣೆಗಿಂತ ಮೊದಲು ಚುನಾವಣೆ ಪ್ರಕ್ರಿಯೆಯಲ್ಲಿ ಸುಧಾರಣೆ ತರಬೇಕಾದ ಅಗತ್ಯ ಇದೆ.
– ವಿ. ಎಸ್. ಉಗ್ರಪ್ಪ, ಮಾಜಿ ಸಂಸದರು

 

 

andolana

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

2 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

3 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

4 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

4 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

5 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

6 hours ago