Andolana originals

ಇದ್ದೂ ಇಲ್ಲದಂತಿರುವ ಕೆಎಸ್‌ಎನ್‌ ಸಮುದಾಯ ಭವನ

ಮಹೇಶ್ ಕಿಕ್ಕೇರಿ

ಸಂಜೆಯಾಗುತ್ತಲೇ ಕುಡುಕರ ಅಡ್ಡೆ ; ಬಡವರ ಕಲ್ಯಾಣ ಕಾರ್ಯಗಳಿಗೆ ತೆರೆಯದ ಬಾಗಿಲು 

ಕಿಕ್ಕೇರಿ: ಕನ್ನಡದ ಪ್ರೇಮಕವಿ, ಮೈಸೂರು ಮಲ್ಲಿಗೆ ಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ಸ್ಮರಣಾರ್ಥ ಪಟ್ಟಣದಲ್ಲಿ ನಿರ್ಮಿಲಾಗಿರುವ ಸಮುದಾಯ ಭವನ ಇಂದು ಸಾರ್ವಜನಿಕರ ಉಪಯೋಗಕ್ಕೆ ಬಾರದೆ ಭೂತ ಬಂಗಲೆಯಂತಾಗಿರುವುದು ಅDiಕಾರಿಗಳ ನಿರ್ಲಕ್ಷ ತೆಗೆ ಸಾಕ್ಷಿಯಾಗಿದೆ.

ಈ ಸಮುದಾಯ ಭವನ ನಿರ್ಮಾಣದ ಉದ್ದೇಶವೇ ಶ್ರೀಸಾಮಾನ್ಯರ ಕಲ್ಯಾಣಕಾರ್ಯಗಳಿಗೆ ಉಪಯುಕ್ತವಾಗಲೆಂದು. ಆದರೆ ಮೂಲ ಉದ್ದೇಶ ಸಫಲವಾಗಿ ಜನರ ಬಳಕೆಯಿಂದ ಪ್ರವರ್ಧಮಾನಕ್ಕೆ ಬರುವ ಹಂತದಲ್ಲೇ ಕೋವಿಡ್-೧೯ ಕಾಲಿರಿಸಿದ ಪರಿಣಾಮ ಸಮುದಾಯ ಭವನಕ್ಕೆ ಬೀಗ ಬಿದ್ದಿತು.

ಇದೇ ನೆಪದಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಮುದಾಯ ಭವನದ ಬಾಗಿಲು ತೆರೆಯದೆ ಮರೆತು ಕುಳಿತರು. ಇದರ ಪರಿಣಾಮ ಮಂಡ್ಯ ಲೋಕಸಭಾ ಸದಸ್ಯರಾಗಿದ್ದ ಅಂಬರೀಶ್ ಅವರ ಅನುದಾನ ಹಾಗೂ ತಾಲ್ಲೂಕು ಪಂಚಾಯಿತಿ ಅನುದಾನದಲ್ಲಿ ಕವಿ ಕೆ.ಎಸ್. ನರಸಿಂಹಸ್ವಾಮಿ ಸ್ಮರಣಾರ್ಥ ನಿರ್ಮಾಣಗೊಂಡ ಸಮುದಾಯ ಭವನದಲ್ಲಿ ಕೆಲ ವರ್ಷಗಳ ಕಾಲ ಬಡ ಜನರ ಮದುವೆ, ಶುಭ-ಸಮಾರಂಭಗಳಿಗೆ ಅವಕಾಶ ಕಲ್ಪಿಸಿಕೊಡಲಾಗಿತ್ತು.

ಕೆಲ ಖಾಸಗಿ ಸಮುದಾಯ ಭವನಗಳು, ಕಲ್ಯಾಣ ಮಂಟಪಗಳು ದುಬಾರಿ ಶುಲ್ಕ ವಿಽಸಿಬಾಡಿಗೆ ವಸೂಲಿ ಮಾಡುತ್ತಿರುವ ಇಂದಿನ ದಿನಗಳಲ್ಲಿ ಕೆ.ಎಸ್.ನರಸಿಂಹಸ್ವಾಮಿ ಸಮುದಾಯ ಭವನ ಬಡಜನರಿಗೆ ಕೈಗೆಟುಕುವ ದರದ ಬಾಡಿಗೆಯಲ್ಲಿ ಮದುವೆ ಮುಂತಾದ ಕಾರ್ಯಗಳಿಗೆ ನೆರವಿಗೆ ಬರುತ್ತಿತ್ತು. ಇದಲ್ಲದೆ ಅನೇಕ ಸಾಂಸ್ಕೃತಿಕ, ಕನ್ನಡಪರ ಕಾರ್ಯಕ್ರಮಗಳಿಗೆ ಉತ್ತಮ ವೇದಿಕೆಯೂ ಆಗಿತ್ತು.

ಇಂತಹ ಸಮುದಾಯ ಭವನ ಕೋವಿಡ್ ನೆಪದಲ್ಲಿ ಮುಚ್ಚಿಹೋಗಿರುವುದು ದುರಂತವೇ ಸರಿ. ಇದು ಈಗ ಬಯಲು ಶೌಚ ಮಾಡುವವರಿಗೆ, ರಾತ್ರಿಯಾದರೆ ಮದ್ಯಪ್ರಿಯರ ನೆಚ್ಚಿನ ತಾಣವಾಗಿರುವುದು ಕವಿ ನರಸಿಂಹಸ್ವಾಮಿ ಅವರಿಗೆ ಮಾಡುತ್ತಿರುವ ಅಪಮಾನದಂತೆ ಭಾಸವಾಗುತ್ತಿದೆ.

ಊಟದ ಹಾಲ್ ದೂಳು ಹಿಡಿದು ಟೇಬಲ್ ಗಳು ಕಾಣದಂತಾಗಿವೆ. ಶೌಚಾಲಯದಲ್ಲಿ ಗಿಡ ಗಂಟಿ ಬೆಳೆದು ಮುಚ್ಚಿಕೊಂಡಿದ್ದು, ವಿಷಜಂತುಗಳ ಆವಾಸ ಸ್ಥಾನವಾಗಿ ಮಾರ್ಪಪ್ಪಟ್ಟಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ನಿರ್ವಹಣೆ ಇಲ್ಲದಿದ್ದರೆ ಒಂದು ಕಟ್ಟಡ ಏನಾಗಬಹುದೋ ಅದನ್ನು ಕೆ.ಎಸ್.ನ. ಸಮುದಾಯ ಭವನ ಸಾಕ್ಷೀಕರಿಸುತ್ತಿದೆ.

ಕಿಕ್ಕೇರಿ ಹಾಗೂ ಸುತ್ತಮುತ್ತಲ ಗ್ರಾಮಗಳ ಜನತೆ ತಮ್ಮ ಮಕ್ಕಳ ಮದುವೆ ಕಾರ್ಯಗಳಿಗೆ, ಸಾಹಿತ್ಯ, ಸಾಂಸ್ಕೃತಿಕ ವಲಯದ ಆಸಕ್ತರು ಕಾರ್ಯಕ್ರಮ ನಡೆಸಲು ಸೂಕ್ತ ಸಭಾ ಭವನ ಹುಡುಕುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಕೆ. ಎಸ್.ನರಸಿಂಹಸ್ವಾಮಿ ಸಮುದಾಯ ಭವನವನ್ನು ದುರಸ್ತಿಪಡಿಸಿ ಜೀವ ಕಳೆ ತರಬೇಕಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯೋನ್ಮುಖರಾಗುವರೇ ಎಂಬ ನಿರೀಕ್ಷೆಯಲ್ಲಿದ್ದಾರೆ .

” ಕಿಕ್ಕೇರಿಯಲ್ಲಿ ಬಡಜನರ ಕೈಗೆಟುಕುವ ದರದಲ್ಲಿ ಒಂದು ಸಮುದಾಯ ಭವನ ಬಾಡಿಗೆಗೆ ದೊರೆಯುತ್ತಿತ್ತು. ಅದ್ಯಾವ ಲಾಬಿ ಕೆಲಸ ಮಾಡಿದೆಯೋ ಗೊತ್ತಿಲ್ಲ. ಕೋವಿಡ್‌ನಲ್ಲಿ ಮುಚ್ಚಿದ ಈ ಸಮುದಾಯ ಭವನವನ್ನು ಇಂದಿಗೂ ತೆರೆಯದೆ ಭೂತ ಬಂಗಲೆಯಂತಾಗಿದೆ. ಈಗಲಾದರೂ ಈ ಭವನದ ಬಾಗಿಲು ತೆರೆದು ಮೈಸೂರು ಮಲ್ಲಿಗೆ ಕವಿ ನರಸಿಂಹಸ್ವಾಮಿ ಅವರ ಹೆಸರುಳಿಸುವ ಕೆಲಸ ಮಾಡಲಿ.”

-ವಡಕಹಳ್ಳಿ ಮಂಜುನಾಥ್

” ನಾನು ಕೆ.ಆರ್.ಪೇಟೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಕಿಕ್ಕೇರಿಯಲ್ಲಿ ಒಂದು ಸರ್ಕಾರಿ ಸಮುದಾಯಭವನ ಆಗಲೇಬೇಕೆಂದು ಮಂಜೂರಾತಿ ಮಾಡಿಸಿ, ಸಂಸದರಾಗಿದ್ದ ಅಂಬರೀಶ್ ಅವರಿಂದ ಅನುದಾನ ಪಡೆದು ಕೆ.ಎಸ್.ನರಸಿಂಹಸ್ವಾಮಿ ಸ್ಮರಣಾರ್ಥ ಸಮುದಾಯ ಭವನ ನಿರ್ಮಿಸಲಾಯಿತು. ಆದರೀಗ ಈ ಭವನ ಜನತೆಗೆ ಇದ್ದೂ ಇಲ್ಲದಂತಾಗಿದೆ. ಸಾರ್ವಜನಿಕ, ಖಾಸಗಿ ಕಾರ್ಯಕ್ರಮಗಳಿಗೆ ಉಪಯುಕ್ತವಾಗಿದ್ದ ಈ ಭವನವನ್ನು ಕೋವಿಡ್ ವೇಳೆ ಮುಚ್ಚಿದ್ದು, ಐದು ವರ್ಷಗಳಾದರೂ ತೆರೆಯಲಾಗಿಲ್ಲ. ಇದು ಬೇಸರದ ಸಂಗತಿ.”

-ಸುರೇಶ್, ತಾಪಂ ಮಾಜಿ ಅಧ್ಯಕ್ಷರು, ಕಿಕ್ಕೇರಿ

ಆಂದೋಲನ ಡೆಸ್ಕ್

Recent Posts

ಮಂಡ್ಯ | ಕಬ್ಬಿನ ಗದ್ದೆಯಲ್ಲಿ ಮೂರು ಚಿರತೆ ಮರಿಗಳು ಪತ್ತೆ

ಮಂಡ್ಯ : ತಾಲೂಕಿನ ಸೂನಗಹಳ್ಳಿ-ಬೂತನಹೊಸೂರು ನಡುವಿನ ಹೆಬ್ಬಾಳ ಕಟ್ಟೆ ಬಳಿ ಕಬ್ಬಿನ ಗದ್ದೆಯಲ್ಲಿ ಬುಧವಾರ ಮೂರು ಚಿರತೆ ಮರಿಗಳು ಪತ್ತೆಯಾಗಿವೆ.…

13 hours ago

ಹಾರ್ಮುಜ್ ಜಲಸಂಧಿ ಬಳಿ ಅಮೆರಿಕ ದಾಳಿ : ಇರಾನಿನ ಕ್ಷಿಪಣಿ ತಾಣ ನಾಶ

ಟೆಹ್ರಾನ್ : ಇರಾನ್ ಹಿಡಿತದಲ್ಲಿದ್ದ ಜಗತ್ತಿನ ಪ್ರಮುಖ ಹಾರ್ಮುಜ್ ಜಲಸಂಧಿ ಬಳಿ ಅಮೆರಿಕ ತೀವ್ರ ದಾಳಿ ನಡೆಸಿದೆ. ಜಲಮಾರ್ಗದ ಬಳಿಕ…

14 hours ago

ಮರ್ಯಾದಾ ಹತ್ಯೆ ನಿಷೇಧ ಮಸೂದೆ ಮಂಡನೆ

ಬೆಂಗಳೂರು : ರಾಜ್ಯದಲ್ಲಿ ಮರ್ಯಾದೆಯ ಹೆಸರಿನಲ್ಲಿ ಹತ್ಯೆ, ಹಲ್ಲೆ ಮತ್ತು ಬೆದರಿಕೆ ಹಾಕುವವರಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವ…

15 hours ago

ಮೈಸೂರು ನಗರದಲ್ಲಿ ಮಳೆ ; ತಂಪಾದ ಇಳೆ

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿಲ್ಲಿ ಬುಧವಾರ ಸಂಜೆ ಏಕಾಏಕಿ ಮಳೆ ಸುರಿದು ಬಿರು ಬಿಸಿಲಿನಿಂದ ಬಳಲಿದ್ದ ನಗರವನ್ನು ಸ್ವಲ್ಪ…

16 hours ago

ಯುಗಾದಿ ಸಂಭ್ರಮ : ಮೈಸೂರಲ್ಲಿ ಖರೀದಿ ಜೋರು

ಮೈಸೂರು : ನಾಡಿನಾದ್ಯಂತ ಯುಗಾದಿ ಹಬ್ಬದ ಸಂಭ್ರಮ ಜೋರಾಗಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಹಬ್ಬದ ಕಳೆಗಟ್ಟಿದೆ. ಅರಮನೆಯಲ್ಲಿ ವಿಶೇಷ ಸಾಂಸ್ಕೃತಿಕ…

17 hours ago

ನಾಳೆ ಧುರಂಧರ್-2 ಬಿಡುಗಡೆ : ಎಲ್ಲಾ ದಾಖಲೆ ಮುರಿಯುವ ನಿರೀಕ್ಷೆ

ಮುಂಬೈ : ಆದಿತ್ಯ ಧರ್‌ ನಿರ್ದೇಶನದ, ರಣವೀರ್‌ ನಟನೆಯ ಧುರಂಧರ್-2 ಚಿತ್ರದ ಎರಡನೇ ಭಾಗವು ನಾಳೆ(ಮಾರ್ಚ್.‌19) ಬಿಡುಗಡೆಯಾಗಲಿದೆ. ಕಳೆದ ವರ್ಷ…

18 hours ago