ಹೊಸ ನಿಯಮಗಳನ್ನು ಸಡಿಲಿಸಿ ಅನುಕೂಲ ಕಲ್ಪಿಸಲು ಮನವಿ
ಮೈಸೂರು: ಮಾರ್ಗದರ್ಶಕ ಪ್ರಾಧ್ಯಾಪಕರ ಸಂಖ್ಯೆ ಕೊರತೆಯಿಂದ ಪಿಎಚ್.ಡಿ. ವ್ಯಾಸಂಗಕ್ಕೆ ಅವಕಾಶ ನೀಡುವುದಕ್ಕೆ ಸಮಸ್ಯೆ ಎದುರಾಗಿದೆ ಎಂಬ ಮೈಸೂರು ವಿಶ್ವವಿದ್ಯಾನಿಲಯದ ನಿಲುವಿಗೆ ಹಲವು ಅರ್ಹ ವಿದ್ಯಾರ್ಥಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
‘ಆಂದೋಲನ’ ದಿನಪತ್ರಿಕೆ ಜು.೩ರ ಸಂಚಿಕೆಯಲ್ಲಿ ‘ಮೈಸೂರು ವಿವಿ: ಪಿಎಚ್.ಡಿ.ಗೆ ಬಾಗಿಲು ಮುಚ್ಚುವ ಆತಂಕ’ ತಲೆಬರಹದಡಿ ಪ್ರಕಟವಾದ ಲೇಖನದ ಹಿನ್ನೆಲೆಯಲ್ಲಿ ಜೆಆರ್‌ಎ-, ಸಿಇಟಿ ಮುಂತಾದ ಅರ್ಹತಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು, ವಿವಿ ಕುಂಟುನೆಪ ಹೇಳುತ್ತಿದೆ ಎಂದು ಕಿಡಿಕಾರಿದ್ದಾರೆ.
” ವಿದ್ಯಾರ್ಥಿಗಳ ವಿಷಯದಲ್ಲಿ ಮೀನಮೇಷ ಉನ್ನತ ಶಿಕ್ಷಣ ಸಮಿತಿಯನ್ನು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸ್ಥಾಪಿಸಲಾಗಿದೆ. ಆದರೆ, ಆ ಸಮಿತಿ ಯಾವುದೇ ತೀರ್ಮಾನ ಕೈಗೊಳ್ಳದೇ ಯುಜಿಸಿ ನಿಯಮದ ಇಂಗ್ಲಿಷ್‌ನಿಂದ ಕನ್ನಡ ತರ್ಜುಮೆ ಮಾಡಿ ನಿಯಮ ಹೊರಡಿಸಿದೆ. ಹಿಂದಿನ ಕುಲಪತಿಗಳು ಹೆಚ್ಚುವರಿ ಅವಕಾಶ ಕಲ್ಪಿಸಿಕೊಟ್ಟಿದ್ದರು. ಈಗಿನ ಕುಲಪತಿ ವಿದ್ಯಾರ್ಥಿಗಳ ವಿಷಯದಲ್ಲಿ ಮೀನಮೇಷ ಎಣಿಸುತ್ತಿದ್ದಾರೆ.”
ನವೀನ್ ಕುಮಾರ್ ಅಳಗಂಚಿ, ಸಿಇಟಿ ಉತ್ತೀರ್ಣ ವಿದ್ಯಾರ್ಥಿ
” ಹೆಚ್ಚುವರಿಯಾಗಿ ಇಬ್ಬರಿಗೆ ಅವಕಾಶ ನೀಡಲಿ: ಮೈಸೂರು ವಿವಿ ಕರ್ನಾಟಕದ ಮೊದಲ ವಿವಿ. ಈ ವಿವಿಯಲ್ಲೇ ಪಿಎಚ್.ಡಿ.ಗೆ ಅವಕಾಶ ನೀಡಲು ಹಿಂದೇಟು ಹಾಕುತ್ತಿರುವುದು ಸರಿಯಲ್ಲ. ಹೊಸ ನಿಯಮ ಜಾರಿಗೊಳಿಸಿರುವುದು ಅಸಂಬದ್ಧ. ಶೇ.೨೦ರಷ್ಟು ಹಿರಿಯ ಪ್ರಾಧ್ಯಾಪಕರಿದ್ದಾರೆ. ಅವರಲ್ಲಿ ಹೆಚ್ಚುವರಿಯಾಗಿ ಕನಿಷ್ಠ ಇಬ್ಬರಿಗೆ ಅವಕಾಶ ಕಲ್ಪಿಸಿದರೆ ಹಲವು ಪ್ರತಿಭಾವಂತರು ಉದ್ಧಾರವಾಗುತ್ತಾರೆ.”
ಧೀರಜ್, ಸಿಇಟಿ ಉತ್ತೀರ್ಣ ವಿದ್ಯಾರ್ಥಿ
” ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಪಿಎಚ್.ಡಿ. ಅವಕಾಶದ ಅವಧಿ ಮುಗಿದು ಹೋಗುವ ಆತಂಕ ಎದುರಾಗಿದೆ. ಮತ್ತೊಮ್ಮೆ ಪರೀಕ್ಷೆ ಬರೆಯಬೇಕಾಗುತ್ತದೆ. ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಪ್ರಾಧ್ಯಾಪಕರ ಕೊರತೆ ಇದ್ದು, ಸರ್ಕಾರದಿಂದ ನೇಮಕಗೊಳ್ಳಬೇಕು ಎಂದು ಕುಂಟುನೆಪ ಹೇಳುತ್ತಿದ್ದಾರೆ.
ಎಸ್.ರವಿಕುಮಾರ್, ಸಿಇಟಿ ಉತ್ತೀರ್ಣ ವಿದ್ಯಾರ್ಥಿ.
” ವಿವಿ ಹೊಸ ನಿಯಮದಿಂದ ಕೆಟ್ಟ ಪರಿಣಾಮ: ಅಧಿಕಾರಿಗಳು ಮತ್ತೊಮ್ಮೆ ಸಮಾಲೋಚನೆ ನಡೆಸಬೇಕು. ಹೆಚ್ಚುವರಿಯಾಗಿ ಅವಕಾಶ ನೀಡಿದರೆ ಸಾಕು. ಅವಕಾಶ ನೀಡಲು ಸಾಧ್ಯವಿಲ್ಲದಿದ್ದಲ್ಲಿ ಪ್ರವೇಶಾತಿ ಪರೀಕ್ಷೆ ನಡೆಸಬಾರದಿತ್ತು. ಹೊಸ ನಿಯಮ, ಕಾನೂನು ತಂದಿರುವುದು ವಿದ್ಯಾರ್ಥಿಗಳ ಭವಿಷ್ಯದಲ್ಲಿ ಕೆಟ್ಟ ಪರಿಣಾಮ ಬೀರುತ್ತದೆ.”
ರೋಜಾ, ಜೆಆರ್‌ಎ- ಉತ್ತೀರ್ಣ ವಿದ್ಯಾರ್ಥಿನಿ
” ವಿದ್ಯಾರ್ಥಿಗಳ ಹಿತರಕ್ಷಣೆಗಾಗಿ ಸಮಿತಿ ರಚಿಸಿದ್ದರು. ಇಂದು ಅದೇ ಸಮಿತಿ ವಿದ್ಯಾರ್ಥಿಗಳ ಪರವಾಗಿ ಕೆಲಸ ಮಾಡುವ ನಿರೀಕ್ಷೆಯಿತ್ತು. ಆದರೆ, ಸಮಿತಿ ನಿಯಮಾವಳಿ ಪಾಲಿಸುವುದಾಗಿ ವಿದ್ಯಾರ್ಥಿಗಳ ವಿರುದ್ಧ ತೀರ್ಪು ಬಂದಿದೆ. ವಿದ್ಯಾರ್ಥಿಗಳಿಗೆ ಅವಕಾಶ ನೀಡದ ಮೇಲೆ ವಿವಿ ಮತ್ಯಾವುದರ ಮುಖೇನ ನಡೆಸಲು ಸಾಧ್ಯ.”
ರೋಹನ್, ನೀಟ್ ಉತ್ತೀರ್ಣ ವಿದ್ಯಾರ್ಥಿ
” ಪ್ರವೇಶ ಪರೀಕ್ಷೆ ನಿಯಮಗಳೇ ಸರಿ ಇಲ್ಲ” ಜೆಆರ್‌ಎ- ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದೇನೆ. ಪ್ರವೇಶಾತಿ ಪರೀಕ್ಷೆ ನಿಯಮಾವಳಿಗಳು ಸರಿಯಾದ ರೀತಿಯಲ್ಲಿ ಇಲ್ಲ. ಹಾಗಾಗಿ ಹಿಂದಿನ ವರ್ಷ ಪ್ರವೇಶಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಪ್ರಾಧ್ಯಾಪಕರಿಗೆ ನೀಡಿರುವ ೮ ವಿದ್ಯಾರ್ಥಿಗಳ ಆಯ್ಕೆಯಲ್ಲಿ ಹೊಸಬರನ್ನು ನೇಮಿಸಿಕೊಳ್ಳುವ ಕೆಲಸವಾಗಬೇಕು.”
ಯಶಸ್ವಿನಿ, ಮೈಸೂರು
ಮನೆ ಮುಂಭಾಗ ತ್ಯಾಜ್ಯ ನೀರು ನಿಂತು ಗಬ್ಬುನಾರುತ್ತಿರುವ ಚರಂಡಿ ; ಸಾಂಕ್ರಾಮಿಕ ರೋಗ ಹರಡುವ ಭೀತಿ, ಚುನಾವಣೆ ಬಹಿಷ್ಕಾರಕ್ಕೆ ಸ್ಥಳೀಯರ…
ಚಾಮರಾಜನಗರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳಿಗೆ ಕೋಳಿಮೊಟ್ಟೆ ವಿತರಣೆಗಾಗಿ ನೀಡಲಾಗುವ ಅನುದಾನ ಕಳೆದ ೬ತಿಂಗಳಿಂದ…
ಗುತ್ತಲು ಕೆರೆ, ಕಾಳೇನಹಳ್ಳಿ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ ಭೇಟಿ ಮಂಡ್ಯ: ನಗರದ ಗುತ್ತಲು ಕೆರೆಗೆ ತ್ಯಾಜ್ಯ…
ಪ್ರಶಾಂತ್ ಎಸ್. ಆರು ತಿಂಗಳಿನಿಂದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತ ನೀರಿನ ಘಟಕ ನಿರ್ವಹಣೆ ಮಾಡುವಲ್ಲಿ ಕೆಎಸ್‌ಆರ್‌ಟಿಸಿ ವಿಫಲ…
ಗಿರೀಶ್ ಹುಣಸೂರು ಹೊಸ ವರ್ಷಾಚರಣೆ, ಕ್ರಿಸ್‌ಮಸ್ ರಜೆ ನಿರೀಕ್ಷೆಯಲ್ಲಿ ವ್ಯಾಪಾರಸ್ಥರು, ಉದ್ಯಮಿಗಳು ಮೈಸೂರು: ೨೦೨೫ನೇ ವರ್ಷಕ್ಕೆ ವಿದಾಯ ಹೇಳಿ, ೨೦೨೬ರ…