ಮಂಜು ಕೋಟೆ
ವಿದೇಶಕ್ಕೆ ಭೇಟಿ ನೀಡಿದಾಗ ಕನ್ನಡ ಧ್ವಜ ಪ್ರದರ್ಶಿಸಿ, ನಾಡು, ನುಡಿ, ಸಂಸ್ಕೃತಿಯ ಅರಿವು ಮೂಡಿಸುವುದು ಇವರ ವಿಶೇಷ
ಎಚ್.ಡಿ.ಕೋಟೆ: ಕನ್ನಡ ನಾಡು-ನುಡಿ, ಸಂಸ್ಕ ತಿಗೆ ಹೆಚ್ಚು ಆದ್ಯತೆ ನೀಡುವ ಸಲುವಾಗಿ ಕನ್ನಡ ಅಭಿಮಾನಿಯೊಬ್ಬರು ಪ್ರತಿ ವರ್ಷವೂ ವಿದೇಶಗಳಿಗೆ ಭೇಟಿ ನೀಡಿದಾಗ, ಪ್ರಮುಖ ಸ್ಥಳಗಳಲ್ಲಿ ಕನ್ನಡದ ಬಾವುಟ ಪ್ರದರ್ಶಿಸಿ, ಅಲ್ಲಿನ ಕೆಲ ಜನರಿಗೆ ಕನ್ನಡ ನಾಡು-ನುಡಿಯ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.
ರಾಜ್ಯದಲ್ಲೇ ಹಿಂದುಳಿದ ಮತ್ತು ಗಡಿ ಭಾಗದ ತಾಲ್ಲೂಕಾಗಿರುವ ಕೋಟೆ ಪಟ್ಟಣದ ಪೇಂಟ್ ನಾಗೇಗೌಡ ವಿಶೇಷ ಕನ್ನಡ ಅಭಿಮಾನಿಯಾಗಿದ್ದಾರೆ. ಒಂದನೇ ತರಗತಿಯಿಂದ ಪದವಿಯ ವರೆಗೂ ಸರ್ಕಾರಿ ಶಾಲೆಯಲ್ಲಿ ಓದಿ ಕನ್ನಡ ನಾಡು-ನುಡಿಗೆ ಒತ್ತು ನೀಡುತ್ತಾ, ವಿನಾಯಕ ಬಣ್ಣದ ಅಂಗಡಿಯನ್ನು ನಡೆಸುತ್ತಾ ಪ್ರತಿ ಸಾಲಿನಲ್ಲೂ ಒಂದೊಂದು ದೇಶಕ್ಕೆ ಪ್ರವಾಸ ಹೋಗುತ್ತಾರೆ. ಆಗ ನಾಡು-ನುಡಿ ಮತ್ತು ಕರ್ನಾಟಕದ ಬಾವುಟಗಳನ್ನು ಪ್ರದರ್ಶಿಸುವ ಮೂಲಕ ಕನ್ನಡ ಅಭಿಮಾನಿ ಎಂದೇ ಹೆಸರು ಗಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಬಹುತೇಕರು ದೇಶ-ವಿದೇಶಗಳಿಗೆ ಮೋಜು ಮಸ್ತಿಗಾಗಿ ಪ್ರವಾಸ ಕೈಗೊಳ್ಳುತ್ತಾರೆ. ಆದರೆ ಪೇಂಟ್ ನಾಗೇಗೌಡ ತಮ್ಮ ವಿದೇಶ ಪ್ರವಾಸಗಳಲ್ಲಿ ನಮ್ಮ ಕನ್ನಡ ನಾಡು, ನುಡಿ, ಸಂಸ್ಕೃತಿಗೆ ಆದ್ಯತೆ ನೀಡಿ, ರಾಜ್ಯ ಮತ್ತು ದೇಶದ ಬಾವುಟಗಳನ್ನು ಅಲ್ಲಿನ ಕೆಲ ಜನರಿಗೆ ಪರಿಚಯಿಸುತ್ತಿರುವುದು ವಿಶೇಷವಾಗಿದೆ. ಆರು ವರ್ಷಗಳ ಅವಧಿಯಲ್ಲಿ ಖಜಕಿಸ್ತಾನ, ರಷ್ಯಾ, ಇಂಡೋನೇಷ್ಯಾ, ಮಲೇಶಿಯಾ, ಬ್ಯಾಂಕಾಕ್, ವಿಯೆಟ್ನಾಂ, ಪುಕೆಟ್ ಮುಂತಾದ ೧೨ಕ್ಕೂ ಹೆಚ್ಚು ದೇಶಗಳಲ್ಲಿ ಕನ್ನಡದ ಬಾವುಟವನ್ನು ಪ್ರದರ್ಶಿಸಿದ್ದಾರೆ.
ರಾಜ್ಯದ ಗಡಿಭಾಗದಲ್ಲಿರುವ ತಾಲ್ಲೂಕು ಮತ್ತು ಪಟ್ಟಣಗಳಲ್ಲಿ ಕನ್ನಡವೇ ನಶಿಸುತ್ತಿರುವ ಪರಿಸ್ಥಿತಿ ಎದುರಾಗಿ ಪರಭಾಷಿಗರ ಹಾವಳಿ ಹೆಚ್ಚಾಗುತ್ತಿದೆ. ಜೊತೆಗೆ ಗಡಿ ಭಾಗಗಳಲ್ಲಿ ಮೂಲ ಸೌಕರ್ಯ, ಶೈಕ್ಷಣಿಕ ಮತ್ತು ಆರೋಗ್ಯದ ಪ್ರಗತಿ ಸಮರ್ಪಕವಾಗಿರದೆ ಹೊರ ರಾಜ್ಯಗಳಿಗೆ ಜನಸಾಮಾನ್ಯರು ವಲಸೆ ಹೋಗುತ್ತಿದ್ದು, ಅಲ್ಲಿನ ಸಂಸ್ಕ ತಿ, ನಾಡು-ನುಡಿಗೆ ಮಾರುಹೋಗುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ನಾಗೇಗೌಡರ ಕನ್ನಡಾಭಿಮಾನ ಇತರರಿಗೆ ಮಾದರಿಯಾಗಿದೆ. ಇದೇ ರೀತಿ ಪ್ರತಿಯೊಬ್ಬರೂ ನಾಡು ನುಡಿ, ಸಂಸ್ಕ ತಿ ಬಗ್ಗೆ ಒಲವು ತೋರಿಸಿ ಉಳಿಸಿ ಬೆಳೆಸಲು ಮುಂದಾದರೆ ಮಾತ್ರ ಗಡಿ ಭಾಗದ ತಾಲ್ಲೂಕಿನಲ್ಲಿ ಕನ್ನಡಕ್ಕೆ ಉಳಿಗಾಲ ಎಂಬುದು ಅನೇಕರ ಅನಿಸಿಕೆಯಾಗಿದೆ.
” ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿರುವುದರಿಂದ ನಾಡು-ನುಡಿ, ಸಂಸ್ಕ ತಿಗೆ ಹೆಚ್ಚು ಒತ್ತು ಕೊಡಲು ಸಾಧ್ಯವಾಗಿದೆ. ಕರ್ನಾಟಕದಲ್ಲಿರುವ ನಾವು ನಮ್ಮ ಭಾಷೆಯನ್ನು ಉಳಿಸಿ ಬೆಳೆಸದಿದ್ದರೆ ಮುಂದಿನ ದಿನಗಳಲ್ಲಿ ಬಹಳಷ್ಟು ಕಷ್ಟಕರವಾಗಲಿದೆ. ಈ ಹಿನ್ನೆಲೆಯಲ್ಲಿ ವಿದೇಶಗಳಲ್ಲೂ ನಮ್ಮ ಕರ್ನಾಟಕದ ನಾಡು-ನುಡಿ, ಬಾವುಟಗಳ ಮಹತ್ವವನ್ನು ಕೆಲವರಿಗಾದರೂ ಪರಿಚಯಿಸುವ ಸಲುವಾಗಿ ವಿದೇಶಗಳಿಗೆ ಪ್ರವಾಸ ಕೈಗೊಂಡಾಗ ಇಂತಹ ಕಾರ್ಯಕ್ರಮ ನಡೆಸುತ್ತಿದ್ದೇನೆ.”
-ಪೇಂಟ್ ನಾಗೇಗೌಡ
ಮಹಾದೇಶ್ ಎಂ ಗೌಡ ಹನೂರು: ಕೆಎಸ್‌ಆರ್‌ಟಿಸಿ ಬಸ್ ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿ ದ್ವಿಚಕ್ರ ವಾಹನ ಸವಾರರಿಬ್ಬರೂ…
ಮಹಾದೇಶ್ ಎಂ ಗೌಡ ಹನೂರು: ದ್ವಿಚಕ್ರ ವಾಹನ ಸವಾರ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡು ಮೃತಪಟ್ಟಿರುವ ಘಟನೆ…
ಮೈಸೂರು: ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್…
ಮಹಾದೇಶ್ ಎಂ ಗೌಡ ಹನೂರು: ಅಂತರ ರಾಜ್ಯ ನೆರೆಯ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಮಾಪುರ ರಸ್ತೆಯಲ್ಲಿ ನಿತ್ಯ ಗಜರಾಜ ಎಂಟ್ರಿ…
ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಚಿತಾವಣೆಯಿಂದ ಬಳ್ಳಾರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಹೆಣ ಬಿದ್ದಿದೆ ಎಂದು ಹೇಳಿಕೆ…
ಬೆಂಗಳೂರು: ನಾಯಕತ್ವ ಬದಲಾವಣೆ ಚರ್ಚೆಗೆ ಹೈಕಮಾಂಡ್ ಸ್ಪಷ್ಟನೆ ಕೊಡಬೇಕು ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಒತ್ತಾಯಿಸಿದ್ದಾರೆ. ಜನವರಿ.16ಕ್ಕೆ ಸಿಹಿಸುದ್ದಿ ಬರಲಿದೆ…