ಸಿಎಂಗೆ ಶಾಸಕ ಗಣೇಶ್ ಪ್ರಸಾದ್ ಮನವಿ; ಸ್ಮಾರಕ ನಿರ್ಮಾಣಕ್ಕೆ 1 ಕೋಟಿ ರೂ. ಅನುದಾನ
• ಮಹೇಂದ್ರ ಹಸಗೂಲಿ
ಗುಂಡ್ಲುಪೇಟೆ: ಕರ್ನಾಟಕ ವಿಧಾನಸಭೆಯ ಮೊದಲ ಮಹಿಳಾ ಸ್ಪೀಕರ್ ಕೆ.ಎಸ್. ನಾಗರತ್ನಮ್ಮ ಅವರು ಗುಂಡ್ಲುಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ಏಳು ಬಾರಿ ಶಾಸಕಿಯಾಗಿ, ಎರಡು ಬಾರಿ ಸಚಿವೆಯಾಗಿ, ವಿರೋಧಪಕ್ಷ ನಾಯಕಿಯಾಗಿ ಗುಂಡ್ಲು ಪೇಟೆ ಕ್ಷೇತ್ರದ ಕೆರೆಗಳ ನಿರ್ಮಾತೃವಾಗಿ ಮಾಡಿದ ಅಪಾರ ಅಭಿವೃದ್ಧಿ ಕೆಲಸಗಳಿಂದಾಗಿ ಇಂದಿಗೂ ಅವರನ್ನು ಜನರು ಪ್ರೀತಿಯಿಂದ ಅಮ್ಮ’ ಎಂದು ಕರೆಯುತ್ತಾರೆ.
ಅವರು ನಿಧನರಾಗಿ 32 ವರ್ಷ ಕಳೆದರೂ ಕಬ್ಬಹಳ್ಳಿಯಲ್ಲಿ ಅವರ ಸಮಾಧಿ ಇಂದಿಗೂ ಪೊದೆ, ಗಿಡಗಂಟಿಗಳ ನಡುವೆ ದುಸ್ಥಿತಿಯಲ್ಲಿ ರುವುದನ್ನು ನೋಡಿ ಜನರು ಮರುಗುತ್ತಿದ್ದರು.
ಕೆ. ಎಸ್. ನಾಗರತ್ಮರವರ ಸ್ಮಾರಕವು ಶಿಥಿಲವಾಗಿರುವುದರಿಂದ ಸದರಿ ಸ್ಮಾರಕವನ್ನು ಅಭಿವೃದ್ಧಿಪಡಿಸಲು 1 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡುವಂತೆ ಶಾಸಕ ಎಚ್. ಎಂ. ಗಣೇಶ್ ಪ್ರಸಾದ್ ಸರ್ಕಾರಕ್ಕೆ ಮನವಿ ಮಾಡಿದ ಫಲವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರವಾಸೋದ್ಯಮ ಇಲಾಖೆಯ ಮೂಲಕ ಒಂದು ಕೋಟಿ ರೂ. ಅನುದಾನ ನೀಡಿದ್ದು, ಶಾಸಕರ ಕೋರಿಕೆಯಂತೆ ಕೆ. ಎಸ್. ನಾಗರತ್ನಮ್ಮರವರ ಸ್ಥಾರಕವನ್ನು ಅಭಿವೃದ್ಧಿಪಡಿಸಿ ನಿರ್ಮಾಣ ಮಾಡಲು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
ನಾಗರತ್ನಮ್ಮ ಅವರು ನಮ್ಮ ಕ್ಷೇತ್ರದ ಅತ್ಯಂತ ಪ್ರಭಾವಿ ಹಾಗೂ ಧೀಮಂತ ರಾಜಕಾರಣಿಯಾಗಿದ್ದರು. ತಾಲ್ಲೂಕಿಗೆ ಸೀಮಿತವಾಗದೆ ರಾಜ್ಯಮಟ್ಟದ ನಾಯಕರಾಗಿದ್ದರು. ಅವರ ರಾಜಕೀಯ ಹಾದಿ ಎಲ್ಲರಿಗೂ ಸ್ಫೂರ್ತಿ. ಅವರ ಹೆಸರು, ಆಡಳಿತ ವೈಖರಿಯ ಬಗ್ಗೆ ಕೇಳಿ ಬೆಳೆದವರು ನಾವು. ನಮ್ಮ ಅವಧಿಯಲ್ಲಿ ಅವರ ಸಮಾಧಿ ಸಾರಕವಾಗುತ್ತಿರುವುದು ಸಂತಸದ ವಿಚಾರ. ಹಣ ಬಿಡುಗಡೆಯಾಗಿದ್ದು, ಸ್ಮಾರಕ ಅಭಿವೃದ್ಧಿ ಮಾಡಿಯೇ ತೀರುತ್ತೇನೆ.
– ಎಚ್. ಎಂ. ಗಣೇಶ್ ಪ್ರಸಾದ್, ಶಾಸಕ
ಸಮಾಧಿ ಅಭಿವೃದ್ಧಿ ಬಗ್ಗೆ ಧ್ವನಿ ಎತ್ತಿದ್ದೇ ನಾನು : ವಾಟಾಳ್
ಆಂದೋಲನ ದಿನಪತ್ರಿಕೆಯೊಂದಿಗೆ ಮಾತನಾಡಿದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜು ಅವರು, ನಾನು 1967ರಲ್ಲಿ ಮೊದಲ ಬಾರಿ ಶಾಸಕನಾಗಿದ್ದಾಗಿಂದಲೂ ಕೆ. ಎಸ್. ನಾಗರತ್ನಮ್ಮ ಪರಿಚಿತರು. ಅವರು ಧೀಮಂತ ನಾಯಕಿ, ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರು. ಏಳು ಬಾರಿ ಶಾಸಕರಾಗಿ ಆಯ್ಕೆಯಾಗುವುದು ಅಷ್ಟು ಸುಲಭವಲ್ಲ. ಅವರು ನಿಧನರಾದಾಗಲೂ ನಾನು ಕಬ್ಬಹಳ್ಳಿ ಗ್ರಾಮಕ್ಕೆ ಹೋಗಿದ್ದೆ. ಅವರು ಅಗಲಿ 32 ವರ್ಷಗಳಾಗಿದ್ದರೂ ಸ್ಮಾರಕ ಮಾಡಲು ಆಗಿರಲಿಲ್ಲ. ಈ ವಿಚಾರವಾಗಿ ಏಳು ತಿಂಗಳ ಹಿಂದೆ ಮಾತನಾಡಿದ್ದೆ. ಇನ್ನೆರಡು ದಿನಗಳಲ್ಲಿ ಕಬ್ಬಹಳ್ಳಿಗೆ ಬಂದು ಪ್ರತಿಭಟನೆ ಮಾಡುವ ಬಗ್ಗೆ ಯೋಚಿಸಿದ್ದೆ. ಅಷ್ಟರಲ್ಲಿ ಸರ್ಕಾರ ಎಚ್ಚೆತ್ತು ಅನುದಾನ ಬಿಡುಗಡೆ ಮಾಡಿದೆ. ಆದಷ್ಟು ಬೇಗ ಸ್ಮಾರಕವಾಗಬೇಕು. ಎರಡು ದಿನಗಳಲ್ಲಿ ಕಬ್ಬಹಳ್ಳಿಗೆ ಬಂದು ದಿ. ನಾಗರತ್ನಮ್ಮ ಸಮಾಧಿ ವೀಕ್ಷಿಸಲಿದ್ದೇನೆ.
– ವಾಟಾಳ್ ನಾಗರಾಜು, ಕನ್ನಡಪರ ಹೋರಾಟಗಾರ
ಮೈಸೂರು : ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ದುಡಿಯುತ್ತಿರುವ ಮಹಿಳೆಯರಿಗೆ ಋತುಚಕ್ರದ ರಜೆ ಕಡ್ಡಾಯವಾಗಿ ಕೊಡಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ…
ಮೈಸೂರು : ಪೊಲೀಸ್ ಠಾಣೆಯಲ್ಲಿ ಮಹಿಳೆಯುರು ದೂರು ದಾಖಲಿಸಲು ಅಥವಾ ಯಾವುದೇ ರೀತಿಯ ಮಾಹಿತಿ ಪಡೆಯಲು ಬಂದಾಗ ಅವರೊಂದಿಗೆ ಗೌರವಯುತವಾಗಿ…
• ವಿಧಾನಸಭೆಯಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಮಾಹಿತಿ • ಇ-ಆಸ್ತಿ ತಂತ್ರಾಂಶದಲ್ಲಿ ಯಾವುದೇ ತೊಡಕಿಲ್ಲ ವಿಧಾನಸಭೆ : ಸದ್ಯದಲ್ಲೇ…
ಹೊಸದಿಲ್ಲಿ : ಇರಾನ್-ಇಸ್ರೇಲ್,ಅಮೆರಿಕ ಸಂಘರ್ಷದ ಪರಿಣಾಮವಾಗಿ ದೇಶದಲ್ಲಿ ಇಂಧನ ಬಿಕ್ಕಟ್ಟು ಎದುರಾಗುವು ಸಂಭವ ಇದ್ದು, ಡಿಸೇಲ್,ಪೆಟ್ರೋಲ್ ಮತ್ತು ಅಡುಗೆ ಅನಿಲ…
ವಿಧಾನಸಭೆ : ಸಾಂಸ್ಕೃತಿಕ ನಗರ ಮೈಸೂರಿನ ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆ ಅಭಿವೃದ್ಧಿಗೆ ಈ ಬಾರಿ ಬಜೆಟ್ ನಲ್ಲಿ…
ಬೆಂಗಳೂರು : ಮಧ್ಯಪ್ರಾಚ್ಯದಲ್ಲಿ ಸಂಘರ್ಷದಿಂದ ದೇಶದಲ್ಲಿ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಈ ಮಧ್ಯೆ ಸಿಲಿಂಡರ್ ಕಳ್ಳತನ ಸಹ ಹೆಚ್ಚಾಗಿದ್ದು…