Mysuru Drug case | warning given before 3 months
ನರಸಿಂಹರಾಜ ಠಾಣೆ ವ್ಯಾಪ್ತಿಯ ಜನ ಸಂಪರ್ಕ ಸಭೆಯಲ್ಲಿ ಗಮನ ಸೆಳೆದಿದ್ದ ಸಾರ್ವಜನಿಕರು
ಚಿರಂಜೀವಿ ಸಿ. ಹುಲ್ಲಹಳ್ಳಿ
ಮೈಸೂರು: ಮಹಾರಾಷ್ಟ್ರ ಪೊಲೀಸರು, ಮೈಸೂರು ಪೊಲೀಸರ ಸಹಕಾರದಿಂದ ಮಾದಕ ದ್ರವ್ಯ ತಯಾರಿಕಾ ಘಟಕದವೊಂದನ್ನು ಭೇದಿಸಿದ ಪ್ರಕರಣ ರಾಷ್ಟ್ರ ಮಟ್ಟ ದಲ್ಲಿ ಸುದ್ದಿಯಾಗಿದೆ. ಡ್ರಗ್ಸ್ ದಂಧೆಯ ಬಗ್ಗೆ ಸಾರ್ವ ಜನಿಕರು ಮೂರು ತಿಂಗಳ ಹಿಂದೆಯೇ ಎಚ್ಚರಿಸಿದ್ದರು.
ಉದಯಗಿರಿ, ಶಾಂತಿನಗರ, ಬನ್ನಿಮಂಟಪ, ಕಲ್ಯಾಣ ಗಿರಿ, ಕ್ಯಾತರಮಾರನಹಳ್ಳಿ ಸೇರಿದಂತೆ ಎನ್. ಆರ್. ಕ್ಷೇತ್ರದ ಬಹುತೇಕ ಭಾಗಗಳಲ್ಲಿ ಡ್ರಗ್ಸ್ ದಂಧೆ ಹಾವಳಿ ಹೆಚ್ಚಾಗಿದ್ದು, ಸ್ಮಶಾನ, ಉದ್ಯಾನವನ, ಖಾಲಿ ಜಾಗಗಳಲ್ಲಿ ಗಾಂಜಾ ಸೇವನೆ, ಎಂಡಿಎಂಎ ಮಾದಕ ವಸ್ತು ಸೇರಿದಂತೆ ‘ಎಂ’ ಎಂಬ ಮತ್ತು ಬರಿಸುವಂತಹ ಮಾತ್ರೆ ಸೇವನೆಯ ಹಾವಳಿ ನಗರದಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ. ಎಷ್ಟು ಬಾರಿ ಮನವಿ ಮಾಡಿದರೂ ಇದಕ್ಕೆ ಕಡಿ ವಾಣ ಬಿದ್ದಿಲ್ಲ. ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಬೇಕು ಎಂದು ಪಕ್ಷಾತೀತವಾಗಿ, ಧರ್ಮಾತೀತವಾಗಿ ಎನ್. ಆರ್. ಕ್ಷೇತ್ರದ ಜನರು ಪೊಲೀಸರ ಎದುರೇ ಪರಿಪರಿಯಾಗಿ ಮನವಿ ಮಾಡಿಕೊಂಡಿದ್ದರು.
ಕಳೆದ ಏಪ್ರಿಲ್ ೧೯ರಂದು ಸಂಜೆ ಶಿವಾಜಿ ರಸ್ತೆಯ ಶಿವಾಜಿ ಪಾರ್ಕ್‌ನಲ್ಲಿ ನಡೆದ ನರಸಿಂಹರಾಜ ಪೊಲೀಸ್ ಠಾಣೆ ವ್ಯಾಪ್ತಿಯ ಜನ ಸಂಪರ್ಕ ಸಭೆಯಲ್ಲಿ ಭಾಗವಹಿಸಿದ್ದ ನಗರಪಾಲಿಕೆ ಮಾಜಿ ಸದಸ್ಯರು, ಬನ್ನಿಮಂಟಪ ವೆಲ್ಫೈರ್ ಅಸೋಸಿಯೇಷನ್ ಸದಸ್ಯರು, ದಲಿತ ಮುಖಂಡರು, ಬಿಜೆಪಿ, ಜಾ. ದಳ, ಕಾಂಗ್ರೆಸ್ ಮುಖಂಡರು ಹಾಗೂ ಮಹಿಳೆಯರು, ಇಂತಹ ಜಾಗದಲ್ಲಿಯೇ ಡ್ರಗ್ಸ್ ಮಾರಾಟ ಮತ್ತು ಸೇವನೆ ನಡೆಯುತ್ತಿದೆ ಎಂದು ಪೊಲೀಸರ ಗಮನಕ್ಕೆ ತಂದಿದ್ದರು. ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ನೇತೃತ್ವದಲ್ಲಿ ನಡೆದ ಸಭೆಯಲ್ಲೇ ಮಾದಕ ವಸ್ತುಗಳ ಸೇವನೆಯ ಕುರಿತು ಮಾಹಿತಿ ಬಿಚ್ಚಿಟ್ಟಿದ್ದ ಸಾರ್ವಜನಿಕರು, ವೈದ್ಯರ ಸಲಹೆ ಇಲ್ಲದೆ ಕೆಲ ಮೆಡಿಕಲ್ ಸ್ಟೋರ್‌ಗಳಲ್ಲಿ ‘ಎಂ’ ಮಾತ್ರೆಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ತಿಳಿಸಿದ್ದರು.
ಆಗಲೇ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಪೊಲೀಸರ ಗಸ್ತು ಹೆಚ್ಚಿಸಿ ನಿರಂತರ ಕಾರ್ಯಾಚರಣೆ ನಡೆಸಿದ್ದರೆ ಮಹಾರಾಷ್ಟ್ರ ಪೊಲೀಸರು ಮೈಸೂರಿಗೆ ಬಂದು ಡ್ರಗ್ಸ್ ಘಟಕವನ್ನು ಪತ್ತೆಹಚ್ಚುವ ಪ್ರಮೇಯ ಬರುತ್ತಿರಲಿಲ್ಲ, ಮೈಸೂರಿನ ಮಾನವೂ ಹರಾಜಾಗುತ್ತಿರಲಿಲ್ಲ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ. ದಲಿತರು, ಮುಸ್ಲಿಮರು ಹೆಚ್ಚು ವಾಸವಿರುವ ಈ ಪ್ರದೇಶದಲ್ಲಿ ಯುವಕರು ಹೆಚ್ಚು ಮಾದಕ ವಸ್ತುಗಳ ದಾಸರಾಗುತ್ತಿದ್ದಾರೆ. ರಾತ್ರಿ ವೇಳೆ ಸ್ಮಶಾನ, ಉದ್ಯಾವನ, ಮೋರಿ ಪಕ್ಕದಲ್ಲಿ, ರಸ್ತೆಯ ತಿರುವಿನಲ್ಲಿ ನಿಂತು ಗಾಂಜಾ, ಮತ್ತು ಬರುವ ಇಂಜೆಕ್ಷನ್, ಸೆಲ್ಯೂಷನ್ ತೆಗೆದುಕೊಳ್ಳುತ್ತಾರೆ. ಇದನ್ನು ಪ್ರಶ್ನಿಸಿದವರ ಮೇಲೆ ಹಲ್ಲೆ ಮಾಡುವುದು, ಅವ್ಯಾಚ ಶಬ್ದಗಳಿಂದ ನಿಂದಿಸುವ ಘಟನೆಗಳು ನಡೆಯುತ್ತಿವೆ ಎಂದು ಹೇಳಿದ್ದರು. ಆದರೆ, ಪೊಲೀಸರು ಸರಿಯಾದ ರೀತಿ ಕ್ರಮ ಕೈಗೊಂಡಿದ್ದರೆ ಮೈಸೂರಿನಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಡ್ರಗ್ಸ್ ಜಾಲ ಬೆಳೆಯುತ್ತಿರಲಿಲ್ಲ ಎಂದು ಸಾರ್ವಜನಿಕರು ವಿಷಾದ ವ್ಯಕ್ತಪಡಿಸಿದ್ದಾರೆ.
ವಿಶೇಷ ಕಾರ್ಯಪಡೆ ಸ್ಥಾಪಿಸಿ
ನರಸಿಂಹ ರಾಜ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುಗಳ ಸೇವನೆ ತಡೆಯಲು ಪುಂಡ, ಪೋಕರಿಗಳ ಹಾವಳಿ ನಿಯಂತ್ರಿಸಲು ಪೊಲೀಸ್ ಇಲಾಖೆ ವಿಶೇಷ ಕಾರ್ಯ ಪಡೆಯನ್ನು ರಚಿಸಬೇಕು. ಈ ಕಾರ್ಯಪಡೆ ಸದಾ ಗಸ್ತು ತಿರುಗಬೇಕು. ಅದರಲ್ಲಿಯೂ ರಾತ್ರಿ ವೇಳೆ ಹೆಚ್ಚಿನ ಗಸ್ತು ನಡೆಸಿ ಸಾರ್ವಜನಿಕರಲ್ಲಿ ಮೂಡಿರುವ ಭಯದ ವಾತಾವರಣವನ್ನು ನಿರ್ಮೂಲನೆಗೊಳಿಸ ಬೇಕು ಎನ್ನುತ್ತಾರೆ ಮೈಸೂರಿನ ನಾಗರಿಕರಾದ ಪುರುಷೋತ್ತಮ್
ಕುಟುಂಬಸ್ಥರ ಜವಾಬ್ದಾರಿ ಅಗತ್ಯ
ಗಾಂಜಾ, ಎಂಡಿಎಂಎ ಸೇವಿಸುವವರು ಕೇವಲ ಎನ್. ಆರ್. ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಮೈಸೂರಿನ ಹಲವಾರು ಬಡಾವಣೆಗಳಲ್ಲಿ ಈ ಕೃತ್ಯಗಳು ನಡೆಯುತ್ತಿವೆ. ನಿರ್ಜನ ಪ್ರದೇಶಗಳು, ಖಾಲಿ ನಿವೇಶನಗಳು, ನಗರದ ಹೊರ ವಲಯದ ಭಾಗಗಳಲ್ಲಿ ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆ ನಡೆಯುತ್ತಿದೆ. ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕುವುದು ಕೇವಲ ಪೊಲೀಸ್ ಇಲಾಖೆಯ ಜವಾಬ್ದಾರಿ ಮಾತ್ರವಲ್ಲ, ಪ್ರತಿಯೊಬ್ಬ ನಾಗರಿಕರ ಕರ್ತವ್ಯ. ಮನೆಯಲ್ಲೂ ಕೂಡ ಪೋಷಕರು ತಮ್ಮ ಮಕ್ಕಳ ಮೇಲೆ ನಿಗಾವಹಿಸಬೇಕಿದೆ.
ಡ್ರಗ್ಸ್ ದಂಧೆಗೆ ಕಡಿವಾಣ ಹಾಕಲು ಪೊಲೀಸರು ರಾತ್ರಿ ವೇಳೆ ಗಸ್ತು ಹೆಚ್ಚಿಸಬೇಕು. ಈ ವಿಚಾರದಲ್ಲಿ ಸಾರ್ವಜನಿಕರಾದ ನಮ್ಮ ಜವಾಬ್ದಾರಿಯೂ ಇದ್ದು. ಡ್ರಗ್ಸ್ ಮಾರಾಟ ಮಾಡುವ ಸ್ಥಳದ ಬಗ್ಗೆ ಮಾಹಿತಿ ದೊರೆತರೆ ಪೊಲೀಸರಿಗೆ ತಿಳಿಸಬೇಕು.
-ಸ್ವಾಮಿ, ನಗರಪಾಲಿಕೆ ಮಾಜಿ ಸದಸ್ಯ
ನಶ ಚೋಡೋ
ಎನ್. ಆರ್. ಕ್ಷೇತ್ರದಲ್ಲಿ ಮಾದಕ ವಸ್ತುಗಳ ಮಾರಾಟ ಹಾವಳಿ ಹೆಚ್ಚುತ್ತಿದ್ದುದನ್ನು ಮನಗಂಡು ೨೦೨೩ರಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಮಾದಕ ವಸ್ತುಗಳ ಸೇವನೆ ವಿರುದ್ಧ ಜಾಗೃತಿ ಮೂಡಿಸಲು ಕ್ಷೇತ್ರದಲ್ಲಿ ‘ನಶ ಚೋಡೋ’ ಅಭಿಯಾನ ನಡೆಸಲಾಗಿತ್ತು. ಇದೀಗ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಡ್ರಗ್ಸ್ ಜಾಲ ಪತ್ತೆಯಾಗಿರುವುದು ಆತಂಕ ಉಂಟುಮಾಡಿದೆ. ಹೀಗಾಗಿ ಮತ್ತೆ ಅಭಿಯಾನ ಆರಂಭಿಸುತ್ತೇವೆ.
– ಎಂ. ಎ-. ಖಲೀಮ್, ರಾಜ್ಯಾಧ್ಯಕ್ಷ, ರೆಸ್ಪಾನ್ಸಿಬಲ್ ಸಿಟಿಜನ್ ವಾಯ್ಸ್
ಜೀಪ್ ವ್ಯವಸ್ಥೆ ಮಾಡುವಂತೆ ತಹಸಿಲ್ದಾರ್‌ಗೆ ಮನವಿ ಮಾಡಿದ ಬಿಇಒ ಹನೂರು: ಹನೂರು ಶೈಕ್ಷಣಿಕ ವಲಯದ ಪಚ್ಚೆದೊಡ್ಡಿ ಗ್ರಾಮದ ಶಾಲೆಗೆ ಕ್ಷೇತ್ರ…
ಮಂಜು ಕೋಟೆ ಪ್ರತಿನಿತ್ಯ ಅಧಿಕಾರಿಗಳ ಬಳಿ ಅಲೆದಾಡುತ್ತಿರುವ ನೌಕರರು; ಕುಟುಂಬ ನಿರ್ವಹಣೆಗೆ ಪರದಾಟ ಎಚ್.ಡಿ.ಕೋಟೆ: ಪಟ್ಟಣದ ಪುರಸಭೆಯ ಪೌರಕಾರ್ಮಿಕರು ಮತ್ತು…
ಪುಸ್ತಕ ಪ್ರಿಯರಿಗಾಗಿ ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ ಮೈಸೂರು: ವಿಶ್ವಕೋಶ, ಶಬ್ಧಕೋಶ, ಇಂಗ್ಲಿಷ್-ಕನ್ನಡ ನಿಘಂಟು, ಕನ್ನಡ-ಇಂಗ್ಲಿಷ್ ನಿಘಂಟು, ಕನ್ನಡ ಗ್ರಂಥಮಾಲೆ,…
ಕೆ.ಬಿ.ರಮೇಶನಾಯಕ ಅಕ್ಟೋಬರ್ ತಿಂಗಳ ಅಂತ್ಯಕ್ಕೆ ಶೇ.೮೨.೯೭ರಷ್ಟು ತೆರಿಗೆ ಸಂಗ್ರಹ ಮೈಸೂರು: ಗುತ್ತಿಗೆದಾರರಿಗೆ ಹಣ ಪಾವತಿಸಲಾಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಮೈಸೂರು…
ಬೆಂಗಳೂರು : ಬೆಂಗಳೂರಿನಲ್ಲಿ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಟ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ…