ಮಂಚೇಗೌಡನಕೊಪ್ಪಲಿನ ಸ್ಮಶಾನ ಸರಿಪಡಿಸಲು ನಿವಾಸಿಗಳ ಆಗ್ರಹ
ಎಚ್. ಎಸ್. ದಿನೇಶ್‌ಕುಮಾರ್
ಮೈಸೂರು : ದುರ್ವಾಸನೆ ಬೀರುವ ಶೌಚಾಲಯ.., ಎಲ್ಲೆಂದರಲ್ಲಿ ಹರಡಿಕೊಂಡಿರುವ ಕಸದ ರಾಶಿ.., ಮುರಿದು ಬಿದ್ದಿರುವ ಆಸನಗಳು… ಇದು ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಮಂಚೇಗೌಡನಕೊಪ್ಪಲು ಸ್ಮಶಾನದ ದುಸ್ಥಿತಿ. ಇಲ್ಲಿನ ಎಲ್ಲ ವ್ಯವಸ್ಥೆಗಳೂ ಅಧ್ವಾನಗೊಂಡಿವೆ. ಜನರು ಸ್ಮಶಾನವನ್ನು ಕಸವನ್ನು ಸುರಿಯುವ ತಾಣವಾಗಿಸಿಕೊಂಡಿದ್ದಾರೆ.
ನಗರ ವ್ಯಾಪ್ತಿಯಲ್ಲಿ ಇರುವ ಸ್ಮಶಾನಗಳು ಉತ್ತಮ ಸ್ಥಿತಿಯಲ್ಲಿ ಇರಬೇಕು. ತಮ್ಮ ಬಂಧು, ಬಳಗದಲ್ಲಿ ಯಾರಾದರೂ ಮೃತಪಟ್ಟಲ್ಲಿ ಅಂತ್ಯಸಂಸ್ಕಾರಕ್ಕೆ ಬರುವವರಿಗೆ ಸ್ಮಶಾನದ ಆವರಣದಲ್ಲಿ ಉತ್ತಮ ವಾತಾವರಣವಿರಬೇಕು ಎಂದು ಎಲ್ಲರೂ ಬಯಸುತ್ತಾರೆ. ಇದಕ್ಕೆ ಪೂರಕವಾಗಿ ಅಧಿಕಾರಿಗಳು ಕೂಡ ಕೆಲಸ ನಿರ್ವಹಿಸಬೇಕು. ಸ್ಮಶಾನಗಳ ನಿರ್ವಹಣೆಗೆಂದು ಜನರು ಕಟ್ಟುವ ತೆರಿಗೆಯಲ್ಲಿ ಪ್ರತ್ಯೇಕ ಹಣವನ್ನು ಪಡೆಯಲಾಗುತ್ತದೆ. ಈ ಹಣ ಯಾವುದಕ್ಕೆ ಬಳಕೆಯಾಗುತ್ತದೆ ಎಂಬುದು ಗೊತ್ತಾಗುತ್ತಿಲ್ಲ.
ಮೃತರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳುವವರು ಇಲ್ಲಿ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಶೌಚಾಲಯಕ್ಕೆ ತೆರಳಿದರಂತೂ ಜನರು ವಾಂತಿ ಮಾಡುವುದು ಗ್ಯಾರಂಟಿ ಎಂಬ ಸ್ಥಿತಿ ಇದೆ. ಸುಮಾರು ನಾಲ್ಕು ಎಕರೆ ಪ್ರದೇಶದಲ್ಲಿರುವ ಈ ಸ್ಮಶಾನ ಬಡಾವಣೆಯ ಮಧ್ಯಭಾಗದಲ್ಲಿದೆ. ಇದನ್ನು ಜನಸ್ನೇಹಿಯಾಗಿ ಹಾಗೂ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂಬುದು ಸ್ಥಳೀಯರ ಆಶಯ. ಆದರೆ, ಅಧಿಕಾರಿ ಗಳದ್ದು ಮಾತ್ರ ಜಾಣ ಕುರುಡುತನವಾಗಿದೆ.
ಸ್ಮಶಾನ ತ್ಯಾಜ್ಯ ಸುರಿಯುವ ತಾಣ
ರಾತ್ರಿಯಾದರೆ ಸಾಕು ಇಲ್ಲಿ ಕಸ ಸುರಿಯುವವರ ಕಾಟ ಹೆಚ್ಚುತ್ತದೆ. ಆಟೋ, ಮಿನಿ ಗೂಡ್ಸ್ ವಾಹನಗಳಲ್ಲಿ ತ್ಯಾಜ್ಯವನ್ನು ತಂದು ಇಲ್ಲಿ ಸುರಿಯಲಾಗುತ್ತದೆ. ಕಾವಲುಗಾರರು ಇಲ್ಲದ ಕಾರಣ ಇಲ್ಲಿ ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದ್ದಾರೆ ಎಂದು ನಿವಾಸಿಗಳು ಆರೋಪಿಸುತ್ತಾರೆ.
ಶುಚಿತ್ವವಿಲ್ಲದ ಶೌಚಾಲಯ
ಇನ್ನು ಇಲ್ಲಿ ನೀರಿನ ಟ್ಯಾಂಕ್ ಸಮೇತ ಉತ್ತಮ ಶೌಚಾಲಯವಿದೆ. ಆದರೆ, ಸೂಕ್ತ ನಿರ್ವಹಣೆ ಇಲ್ಲದ ಕಾರಣ ಜನರು ಅಲ್ಲಿಗೆ ಹೋಗದ ಸ್ಥಿತಿ ನಿರ್ಮಾಣವಾಗಿದೆ. ಶೌಚಾಲಯಗಳನ್ನು ಸ್ವಚ್ಛಗೊಳಿಸಿ ವರ್ಷಗಳೇ ಕಳೆದಿವೆ.
ಮುರಿದು ಬಿದ್ದಿರುವ ಆಸನಗಳು
ಅಂತ್ಯಸಂಸ್ಕಾರಕ್ಕೆಂದು ಬಂದವರು ಕುಳಿತುಕೊಳ್ಳಲು ಆಸನಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ, ಅವುಗಳಲ್ಲಿ ಬಹುತೇಕ ಮುರಿದು ಬಿದ್ದಿವೆ. ಇನ್ನು ಶವ ಸಾಗಿಸಲು ಬಳಸಿದ ಹಾಸಿಗೆ, ತಂದು ಹಾಕಿರುವ ಕುಷನ್ ಕುರ್ಚಿಗಳು ಎಲ್ಲೆಂದರಲ್ಲಿ ಬಿದ್ದಿವೆ. ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ಅಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸಬೇಕಿದೆ ಎಂಬುದು ಪ್ರಜ್ಞಾವಂತ ಜನರ ಆಗ್ರಹವಾಗಿದೆ.
ಸ್ಮಶಾನ ದುಸ್ಥಿತಿಯ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿ ಅಧಿಕಾರಿಗಳನ್ನು ನಿಯಂತ್ರಿಸಲು ಯಾರಿಂದಲೂ ಆಗುವುದಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ಬಡಾವಣೆಗಳಲ್ಲಿ ಸಂಗ್ರಹ ವಾಗುವ ಕಸದ ಮೂಲಕ ಅನಿಲ ಉತ್ಪಾದನೆ ಮಾಡುವ ಜೈವಿಕ ಅನಿಲ ಸ್ಥಾವರ ಯೋಜನೆ ನನೆಗುದಿಗೆ ಬಿದ್ದಿದೆ. ಆರಂಭವಾದಲ್ಲಿ ಇಲ್ಲಿಯೇ ಅನಿಲ ಹಾಗೂ ವಿದ್ಯುತ್ ಉತ್ಪಾದನೆ ಮಾಡಿದರೆ ಮೃತದೇಹಗಳ ಅಂತ್ಯಕ್ರಿಯೆಗೆ ಬಳಕೆ ಮಾಡಬಹುದು. ಇಂತಹ ತಂತ್ರಜ್ಞಾನ ಮುಂದಿನ ದಿನಗಳಲ್ಲಿ ಜನಸ್ನೇಹಿಯಾಗಲಿದೆ. ಅಧಿಕಾರಿಗಳು ಇತ್ತ ಗಮನಹರಿಸಬೇಕು.
– ಪ್ರೇಮಾ ಶಂಕರೇಗೌಡ, ನಗರಪಾಲಿಕೆ ಮಾಜಿ ಸದಸ್ಯರು
ಜೆರುಸಲೆಮ್ : ಇಸ್ರೇಲ್‌ನ ಸೇನಾ ದಾಳಿಯಲ್ಲಿ ಇರಾನ್‌ನ ಹಿರಿಯ ಭದ್ರತಾ ಅಧಿಕಾರಿ ಅಲಿ ಲಾರಿಜಾನಿ ಹತ್ಯೆಯಾದ್ದಾರೆ ಎಂದು ಇಸ್ರೇಲ್ ರಕ್ಷಣಾ…
ಬೆಂಗಳೂರು : ನಾಳೆಯಿಂದ ರಾಜ್ಯಾದ್ಯಂತ 2026ರ ಎಸ್ಎಸ್ಎಲ್‌ಸಿ ಪರೀಕ್ಷೆ-1 ಆರಂಭವಾಗಲಿದ್ದು, ಒಟ್ಟು 9,02,899 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಏಪ್ರಿಲ್ 2ರ ವರೆಗೂ…
ಕಾಬೂಲ್ : ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಗಡಿ ಸಂಘರ್ಷ ಈಗ ಭೀಕರ ಯುದ್ಧಕ್ಕೆ ತಿರುಗಿದ್ದು, ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್…
ಅಹಮದಬಾದ್ : 47,000 ಟನ್ ಎಲ್‌ಪಿಜಿ ಹೊತ್ತ ನಂದಾದೇವಿ ಹಡಗು ಗುಜರಾತ್‌ನ ಕಾಂಡ್ಲಾ ಬಂದರಿಗೆ ಸುರಕ್ಷಿತವಾಗಿ ಇಂದು(ಮಾರ್ಚ್.17) ತಲುಪಿರುವುದಾಗಿ ವರದಿಯಾಗಿದೆ.…
ವಾಷಿಂಗ್ಟನ್ : ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ನ ಪ್ರತೀಕಾರಿ ದಾಳಿಗಳನ್ನು ಕಂಡು "ನಾವು ನಿಜಕ್ಕೂ ಆಘಾತಗೊಂಡಿದ್ದೇವೆ" ಎಂದು…
ವಾಷಿಂಗ್ಟನ್ : ಇರಾನ್ ವಿರುದ್ಧದ ಅಮೆರಿಕಾ-ಇಸ್ರೇಲ್ ಯುದ್ಧದ ಪರಿಣಾಮ ಪ್ರಪಂಚದ ಅತಿ ಮುಖ್ಯ ತೈಲ ಮಾರ್ಗ ಹೊರ್ಮುಜ್ ಜಲಸಂಧಿಯ ಮೂಲಕ…