Andolana originals

ಜ್ಞಾನದ ಬೆಳಕು ನೀಡುವ ಮೈವಿವಿ ಕ್ಯಾಂಪಸ್ ಕತ್ತಲಿನಲ್ಲಿ!

ಮೈಸೂರು ದೀಪಾಲಂಕಾರದ ಸಂಭ್ರಮದಲ್ಲಿದ್ದರೂ ಮಾನಸಗಂಗೋತ್ರಿ ಕ್ಯಾಂಪಸ್‌ನಲ್ಲಿ ಬೆಳಗದ ದೀಪಗಳು

ವಾಸು ವಿ.ಹೊಂಗನೂರು
ಮೈಸೂರು: 60ರ ದಶಕದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಹೊಸ ಕ್ಯಾಂಪಸ್ ಆಗಿ ಮಾನಸಗಂಗೋತ್ರಿ ರೂಪುಗೊಂಡಿತು. ಅಂದಿನಿಂದ ಇಲ್ಲಿಯವರೆಗೂ ಅದು ತನ್ನದೇ ಆದ ಘನತೆ, ಕೀರ್ತಿಯನ್ನು ಕಾಪಾಡಿಕೊಂಡು ಬಂದಿದೆ.

ದಶಕದಿಂದೀಚೆಗೆ ವಿಜ್ಞಾನ್ ಭವನ್, ಬಿಎಂ ಶ್ರೀ ಸಭಾಂಗಣ, ಬಯಲು ರಂಗಮಂದಿರ, ನೂತನ ರಸ್ತೆ ನಿರ್ಮಾಣ, ವಾಕಿಂಗ್ ಪಾಥ್, ಪಾರಂಪರಿಕ ವಿದ್ಯುತ್ ದೀಪಗಳ ಅಳವಡಿಕೆ, ಗಡಿಯಾರ ಗೋಪುರ, ಗೌತಮ ಬುದ್ದ, ಅಂಬೇಡ್ಕರ್, ಗಾಂಧಿ, ಕುವೆಂಪು ಪ್ರತಿಮೆಗಳು ಗಂಗೋತ್ರಿಯನ್ನು ಕಳೆಗಟ್ಟುವಂತೆ ಮಾಡಿವೆ.

ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಈ ವಿಶ್ವವಿದ್ಯಾನಿಲಯದಲ್ಲಿ ಸಮರ್ಪಕ ನಿರ್ವಹಣೆ ಆಗದೆ ಒಂದಾದ ಮೇಲೊಂದರಂತೆ ಸಮಸ್ಯೆಗಳು ಕಾಡ ತೊಡಗಿವೆ. ‘ಆಂದೋಲನ’ ದಿನಪತ್ರಿಕೆಯಲ್ಲಿ ಈ ಹಿಂದೆ ಆರ್‌ಓ ಪ್ಲಾಂಟ್‌ಗಳ ಅವ್ಯವಸ್ಥೆಯ ಬಗ್ಗೆ ವರದಿ ಪ್ರಕಟಗೊಂಡಿತ್ತು.

ಇದರ ಬೆನ್ನಲ್ಲೇ ಮತ್ತೊಂದು ಸಮಸ್ಯೆ ಎದುರಾಗಿದ್ದು, ಕ್ಯಾಂಪಸ್‌ನಲ್ಲಿ ವಿದ್ಯುತ್ ದೀಪಗಳು ಕೈ ಕೊಡುತ್ತಿರುವುದು ರಾತ್ರಿ ವೇಳೆ ಓದುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ.

ಗಡಿಯಾರ ಗೋಪುರದಿಂದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಕಡೆಗೆ ತೆರಳುವ ಮಾರ್ಗದಲ್ಲಿನ ದೀಪಗಳು ಸಂಪೂರ್ಣವಾಗಿ ಕೆಟ್ಟು ಹೋಗಿದ್ದು, ಅಲ್ಲಲ್ಲಿ ಒಂದೊಂದು ದೀಪಗಳು ಮಾತ್ರ ಉರಿಯುತ್ತಿವೆ. ರಾತ್ರಿ ವೇಳೆ ಕ್ಯಾಂಪಸ್‌ನಲ್ಲಿ ನಾಯಿಗಳ ಹಾವಳಿ ಹೆಚ್ಚಾ ಗಿದ್ದು, ಕ್ಯಾಂಪಸ್‌ನಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.

ಮಾನಸ ಗಂಗೋತ್ರಿಯ ಆಕರ್ಷಣೀಯ ಸ್ಥಳಗಳಲ್ಲಿ ಒಂದಾದ ಬುದ್ಧನ ಪ್ರತಿಮೆಯ ಸುತ್ತ ಹಾಕಲಾಗಿರುವ ದೀಪಗಳು ಒಂದೂ ಕೆಲಸ ಮಾಡುತ್ತಿಲ್ಲ. ಹಲವು ಬಲ್ಬ್‌ಗಳು ನುಚ್ಚುನೂರಾಗಿದ್ದರೇ, ಉಳಿದವು ಕೆಲಸಕ್ಕೆ ಬಾರದ ಸ್ಥಿತಿಯಲ್ಲಿವೆ. ರಾತ್ರಿಯಾದರೇ ವಿದ್ಯಾರ್ಥಿ ನಿಲಯಕ್ಕೆ ತೆರಳುವ ವಿದ್ಯಾರ್ಥಿಗಳು ಭಯದಿಂದ ಸಂಚಾರ ನಡೆಸುವ ಸ್ಥಿತಿ ನಿರ್ಮಾಣವಾಗಿದೆ.

ಮೈಸೂರು ದಸರಾ ಸಂಭ್ರಮ ದಲ್ಲಿದ್ದರೂ ಗಂಗೋತ್ರಿಗೆ ಸಿಗಬೇಕಿರುವ ಕನಿಷ್ಠ ಮೂಲಸೌಕರ್ಯಗಳು ದೊರೆತಿಲ್ಲ. ಬೆಳಕಿನ ಅವಶ್ಯಕತೆ ತುಂಬಾ ಇರುವ ಕಡೆಗಳಲ್ಲಿ ವಿದ್ಯುತ್ ದೀಪಗಳು ಕೆಲಸ ಮಾಡುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಸಮಸ್ಯೆ ಪರಿಹರಿಸುವಂತೆ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಮೈಸೂರು ವಿವಿಯ ಮಾನಸ ಗಂಗೋತ್ರಿಗೆ ವಿಶ್ವಮಟ್ಟದಲ್ಲಿ ಒಂದು ವಿಶೇಷ ಸ್ಥಾನಮಾನವಿದೆ. ಇಂತಹ ವಿವಿಯ ನಿರ್ವಹಣೆಯಲ್ಲಿ ಆಡಳಿತ ಮಂಡಳಿ ನಿರಾಸಕ್ತಿ ತೋರುತ್ತಿರುವುದು ಬೇಸರದ ಸಂಗತಿ. ಸಂಬಂಧಪಟ್ಟ ಅಧಿಕಾರಿಗಳು ಕಾರ್ಯೋನ್ಮುಖರಾಗಿ ಕೂಡಲೇ ಸಮಸ್ಯೆ ಪರಿಹರಿಸಬೇಕು. ವಿವಿಯಲ್ಲಿನ ವಿದ್ಯುತ್‌ ಸಮಸ್ಯೆ ಬಗ್ಗೆ ಮುಂದಿನ ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಲಾಗುವುದು.

-ಡಾ.ನಟರಾಜ್ ಶಿವಣ್ಣ, ಸಿಂಡಿಕೇಟ್ ಸದಸ್ಯರು, ಮೈಸೂರು ವಿಶ್ವವಿದ್ಯಾನಿಲಯ.

ಆಂದೋಲನ ಡೆಸ್ಕ್

Recent Posts

ಸ್ನೇಹಮಯಿ ಕೃಷ್ಣ ಸಿಸಿಬಿ ಪೊಲೀಸ್ ವಶಕ್ಕೆ

ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣದ ಪ್ರಮುಖ ದೂರುದಾರ ಮತ್ತು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು…

29 mins ago

ರಾಜ್ಯದ ಜನತೆಗೆ ದರ ಏರಿಗೆ ಶಾಕ್‌ : ಏಪ್ರಿಲ್‌ನಿಂದ ವಿದ್ಯುತ್‌ ದರ ಹೆಚ್ಚಳ

ಬೆಂಗಳೂರು : ಮುಂಬರುವ ಏಪ್ರಿಲ್ 1ರಿಂದ ವಿದ್ಯುತ್ ದರ ಹೆಚ್ಚಾಗಲಿದ್ದು, ಪ್ರತಿ ಯೂನಿಟ್‍ಗೆ 12ರಿಂದ 15 ಪೈಸೆ ಹೆಚ್ಚುವರಿ ಶುಲ್ಕ…

45 mins ago

ಮೈಸೂರು | ಅನಧಿಕೃತ ಪ್ಲೇಕ್ಸ್, ಬ್ಯಾನರ್ ತೆರವುಗೊಳಿಸಿ ; ಜಿಲ್ಲಾಧಿಕಾರಿ ಆದೇಶ

ಮೈಸೂರು : ಸಂಘ ಸಂಸ್ಥೆ, ಸಂಘಟನೆಗಳು, ಸಾರ್ವಜನಿಕರು ಹಾಗೂ ಇತರರು ಸಾರ್ವಜನಿಕ ಪ್ರದೇಶದಲ್ಲಿ ಪ್ಲೇಕ್ಸ್ ಮತ್ತು ಬ್ಯಾನರ್ ಗಳನ್ನು ಅಳವಡಿಸಬೇಕಾದ್ದಲ್ಲಿ…

1 hour ago

ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ : ಸಿಎಂ ಖಂಡನೆ, ಶಾಂತಿ-ಸೌಹಾರ್ದತೆಗೆ ಮನವಿ

ಬೆಂಗಳೂರು : ಬಾಗಲಕೋಟೆಯ ಹಳೆಯ ನಗರದಲ್ಲಿ ಚತ್ರಪತಿ ಶಿವಾಜಿ ಮಹಾರಾಜ್ ಜಯಂತಿ ಅಂಗವಾಗಿ ನಡೆದ ಭಾವಚಿತ್ರ ಮೆರವಣಿಗೆಯ ವೇಳೆ ನಡೆದ…

3 hours ago

ಮಡಿಕೇರಿ | ಟ್ರಾಕ್ಟರ್ ಮಗುಚಿ ಕಾರ್ಮಿಕ ಸಾವು

ಸಿದ್ದಾಪುರ : ವಾಹನ ಚಲಾಯಿಸುವ ಆಸೆಯಿಂದ ಟ್ರಾಕ್ಟರ್ ಚಲಾಯಿಸಿದ ಕಾರ್ಮಿಕ ನಿಯಂತ್ರಣ ತಪ್ಪಿ ಹಳ್ಳಕ್ಕೆ ಮಗುಚಿದ ಪರಿಣಾಮ ಸ್ಥಳದಲ್ಲೆ ಮೃತ…

3 hours ago

ಬುದನೂರು ಉತ್ಸವ | ಹೆಲಿಕಾಪ್ಟರ್‌ ಜಾಯ್‌ ರೈಡ್‌ಗೆ ಚಾಲನೆ

ಮಂಡ್ಯ : ಜಿಲ್ಲೆಯ ಯುವ ಜನತೆಗೆ ನಗರದ ಚಿತ್ರಣವನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಹೆಲಿಕಾಪ್ಟರ್‌ ಜಾಯ್‌ ರೈಡ್‌ಅನ್ನು ಆಯೋಜಿಸಲಗಿದ್ದು, ಮೂರು ದಿನಗಳ…

4 hours ago