Andolana originals

ಮುಡಾ ಆಡಳಿತಕ್ಕೆ ಶೀಘ್ರದಲ್ಲೇ ಹೊಸ ರೂಪ

ಕೆ.ಬಿ.ರಮೇಶನಾಯಕ

ನಾಲ್ವಡಿ ಕಾಲದಲ್ಲಿ ಸ್ಥಾಪಿತಗೊಂಡಿದ್ದ ಸಿಐಟಿಬಿ

೧೯೮೮ರಲ್ಲಿ ನಗರಾಭಿವೃದ್ಧಿ ಪ್ರಾಧಿಕಾರವಾಗಿ ರಚನೆ

ಆಡಳಿತಾತ್ಮಕ ವಿಚಾರದಲ್ಲೂ ಹಲವು ಬದಲಾವಣೆಗಳು

ಆಡಳಿತದಲ್ಲಿ ಶಾಸಕರ ಅಧಿಕಾರಕ್ಕೂ ಒಂದಿಷ್ಟು ಕೊಕ್

ಮೈಸೂರು: ೫೦:೫೦ ಅನುಪಾತದಡಿ ನಿವೇಶನ ಹಂಚಿಕೆಯಲ್ಲಾಗಿರುವ ಹಗರಣದಿಂದಾಗಿ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗುರಿಯಾಗಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವನ್ನು ರದ್ದುಪಡಿಸಿ ಮೈಸೂರು ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದ್ದು, ಈ ಕುರಿತು ರಾಜ್ಯ ಸರ್ಕಾರದಿಂದ ಅಧಿಕೃತವಾಗಿ ಅಧಿಸೂಚನೆ ಜಾರಿಯಾದ ಮೇಲೆ ಆಡಳಿತಾತ್ಮಕವಾಗಿ ಹೊಸ ಸ್ವರೂಪ ಪಡೆದುಕೊಳ್ಳಲಿದೆ.

ಈ ಸಂಬಂಧ ವಿಧಾನಮಂಡಲ ಅಧಿ ವೇಶನದಲ್ಲಿ ಮಂಡಿಸಿರುವ ಮಸೂದೆಗೆ ಒಪ್ಪಿಗೆ ಸಿಕ್ಕಿದ್ದು, ರಾಜ್ಯಪಾಲರ ಅನುಮೋದನೆ ದೊರೆತ ಮೇಲೆ ರಾಜ್ಯಪತ್ರದಲ್ಲಿ ಪ್ರಕಟವಾಗು ತ್ತಿದ್ದಂತೆ ೧೨೦ ವರ್ಷಗಳ ಇತಿಹಾಸ ಹೊಂದಿ ರುವ ಪ್ರಾಧಿಕಾರ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲಾರಂಭಿಸಲಿದೆ. ಈ ಮೂಲಕ ಪ್ರಾಧಿ ಕಾರ ಆಡಳಿತಾತ್ಮಕವಾಗಿ ಮತ್ತು ರಾಜಕೀಯ ವಾಗಿ ಸಾಕಷ್ಟು ಬದಲಾವಣೆಗಳನ್ನು ಕಾಣುವ ದಿನಗಳು ಸಮೀಪಿಸಿವೆ.

ಮೈಸೂರನ್ನು ದೇಶದಲ್ಲೇ ಸುಂದರ ನಗರವನ್ನಾಗಿ ನಿರ್ಮಾಣ ಮಾಡಬೇಕೆಂಬ ಕನಸು ಕಂಡಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆ ಯರ್ ಅವರು ೧೯೦೪ರಲ್ಲಿ ನಗರಾಭಿವೃದ್ಧಿ ವಿಶ್ವಸ್ಥ ಮಂಡಳಿಯನ್ನು ರಚನೆ ಮಾಡಿದ್ದರು. ಬದಲಾದ ಕಾಲಕ್ಕೆ ತಕ್ಕಂತೆ ನಾಗರಿಕರ ಬೇಡಿಕೆಗಳನ್ನು ಪೂರೈಸಿ ಹೊಸ ಬಡಾವಣೆಗಳ ನಿರ್ಮಾಣದ ಮಹಾದಾಸೆಯಿಂದ ೧೯೮೮ ರಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವನ್ನಾಗಿ ಬದಲಾಯಿಸಲಾಯಿತು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಐದು ದಶಕಗಳಲ್ಲಿ ಹತ್ತಾರು ಬಡಾವಣೆಗಳನ್ನು ನಿರ್ಮಿಸಿ ನಿವೇಶನಗಳನ್ನು ರಚನೆ ಮಾಡಿದ್ದರೆ, ಸಾವಿರಾರು ಖಾಸಗಿ ಬಡಾವಣೆಗಳಿಗೆ ಅನುಮೋದನೆ ನೀಡಿ ಗಮನ ಸೆಳೆದಿತ್ತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಕೆಸರೆ ಬದಲಿಗೆ ವಿಜಯನಗರ ಬಡಾವಣೆಯಲ್ಲಿ ೧೪ ಬದಲಿ ನಿವೇಶನಗಳನ್ನು ನೀಡಿದ್ದರಿಂದಾಗಿ ದೊಡ್ಡ ವಿವಾದ ಉಂಟಾಗಿತ್ತು. ಇದಾದ ಬಳಿಕ ಹಲವಾರು ವಿದ್ಯಮಾನಗಳು ನಡೆದು ಲೋಕಾಯುಕ್ತ, ಜಾರಿ ನಿರ್ದೇಶನಾಲಯ, ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಪಿ.ಎನ್.ದೇಸಾಯಿ ಏಕಸದಸ್ಯ ವಿಚಾರಣಾ ಆಯೋಗ ಪ್ರತ್ಯೇಕವಾಗಿ ತನಿಖೆ ನಡೆಸುತ್ತಿವೆ. ಇದರಿಂದಾಗಿ ಮುಡಾಗೆ ಬಂದಿರುವ ಅಪವಾದವನ್ನು ತೊಡೆದು ಹಾಕಲು ರಾಜ್ಯ ಸರ್ಕಾರ ಮುಂದಾಗಿದ್ದು, ಮೈಸೂರು ಅಭಿವೃದ್ಧಿ ಪ್ರಾಧಿಕಾರವನ್ನು ರಚನೆ ಮಾಡಿದೆ.

ಆಡಳಿತದ ಸ್ವರೂಪದಲ್ಲಿ ಬದಲಾವಣೆ: ನೂತನವಾಗಿ ಅಸ್ತಿತ್ವಕ್ಕೆ ಬರುವ ಮೈಸೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರನ್ನು ಹೊಂದಿರಲಿದೆ. ಓರ್ವ ಹಣಕಾಸು ಸದಸ್ಯ, ಓರ್ವ ಇಂಜಿನಿಯರ್, ಒಬ್ಬ ಟೌನ್ ಪ್ಲಾನರ್, ವಾಸ್ತುಶಿಲ್ಪ ಅನುಭವ ಇರುವ ಓರ್ವ ವ್ಯಕ್ತಿ, ಆಯುಕ್ತರು, ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆಯ ಅಧಿಕಾರಿ, ಸರ್ಕಾರ ನಾಮನಿರ್ದೇಶನ ಮಾಡುವ ಒಬ್ಬ ಶಾಸಕ, ಎಸ್‌ಸಿ, ಎಸ್‌ಟಿ ಸಮುದಾಯಗಳ ತಲಾ ಒಬ್ಬರು, ಮಹಿಳೆಯೊಬ್ಬರು ಸೇರಿ ನಾಲ್ವರು ಸದಸ್ಯರಾಗಿರಲಿದ್ದಾರೆ.

ಪ್ರತ್ಯೇಕ ಅಧಿನಿಯಮ: ೨೦೧೧ನೇ ಸಾಲಿನ ಜನಗಣತಿಯಂತೆ ಮೈಸೂರು ನಗರದ ಜನಸಂಖ್ಯೆಯು ೮,೯೩,೦೬೨ ಇದ್ದು, ಮೈಸೂರು ಸ್ಥಳೀಯ ಯೋಜನಾ ಪ್ರದೇಶದ ಜನಸಂಖ್ಯೆ ೧೬,೯೬,೫೭೭ ಇರುತ್ತದೆ. ಪ್ರಸ್ತುತದಲ್ಲಿ ಮೈಸೂರು ನಗರ ೧೦ ಲಕ್ಷ ಜನಸಂಖ್ಯೆ ಹೊಂದುವ ಸಾಧ್ಯತೆ ಇದ್ದು, ಮೆಟ್ರೋಪಾಲಿಟನ್ ನಗರದ ಎಲ್ಲ ಲಕ್ಷಣಗಳನ್ನೂ ಹೊಂದಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯವ್ಯಯ ಮತ್ತು ಇತರೆ ಕಾರ್ಯಚಟುವಟಿಕೆಗಳು ವಿಸ್ತರಿಸಿಕೊಂಡಿರುತ್ತವೆ. ಅತಿ ವೇಗ ಮತ್ತು ಬೃಹತ್ ಪ್ರಮಾಣದ ಬೆಳವಣಿಗೆಗಳಿಂದಾಗಿ ಪ್ರಾಧಿಕಾರ ಸಂಕೀರ್ಣ ಸವಾಲುಗಳನ್ನು ಎದುರಿಸುತ್ತಿದ್ದು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮಾದರಿಯಲ್ಲಿ ಪ್ರತ್ಯೇಕ ಅಧಿನಿಯಮ ರಚಿಸಿದೆ.

ಏನೆಲ್ಲಾಅಧಿಕಾರ?: ಪ್ರಾಧಿಕಾರವು ಸ್ಥಳೀಯ ಯೋಜನಾ ಪ್ರದೇಶ ವ್ಯಾಪ್ತಿಯಲ್ಲಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸಬಹುದಾಗಿದೆ. ಜೊತೆಗೆ ಸರ್ಕಾರದ ಪೂರ್ವಾನುಮತಿ ಮೇರೆಗೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದೆ. ಭೂ ಸ್ವಾಧಿನ, ಸುಧಾರಣಾ ತೆರಿಗೆ ವಿಧಿಸುವ ಅಧಿಕಾರ, ಭೂಮಿ ಮತ್ತು ಕಟ್ಟಡಗಳಿಗೆ ತೆರಿಗೆ ವಿಧಿಸುವುದು, ರಸ್ತೆ ನಿರ್ವಹಣೆ, ಬಡಾವಣೆ ನಿರ್ಮಾಣ ಸೇರಿದಂತೆ ಕೆಲ ಹೆಚ್ಚುವರಿ ಅಧಿಕಾರವನ್ನು ನೀಡಲಾಗಿದೆ.”

” ರಾಜ್ಯ ಸರ್ಕಾರ ಮೈಸೂರು ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿರುವುದು ಗೊತ್ತಾಗಿದೆ. ಸರ್ಕಾರದಿಂದ ಅಧಿಕೃತವಾಗಿ ಅಧಿಸೂಚನೆ ಹೊರಡಿಸಿದ ಮೇಲೆ ಯಾವ್ಯಾವ ಅಂಶಗಳು ಇವೆ ಎಂಬುದು ತಿಳಿಯಲಿದೆ. ಆದೇಶದಲ್ಲಿರುವ ಅಂಶಗಳನ್ನು ಓದಿದ ಮೇಲೆ ಯಾವ ರೀತಿ ಕೆಲಸ ಮಾಡಬಹುದು ಎಂಬುದು ತಿಳಿಯಲಿದೆ. ಸಾರ್ವಜನಿಕರ ಪರವಾಗಿ ಕೆಲಸ ಮಾಡುವುದು ನಮ್ಮ ಆದ್ಯ ಕರ್ತವ್ಯ. ಸರ್ಕಾರ ಮುಂದಿನ ದೂರದೃಷ್ಟಿ ಇಟ್ಟುಕೊಂಡು ಪ್ರಾಧಿಕಾರ ರಚನೆ ಮಾಡಿದೆ.”

-ರಘುನಂದನ್,ಆಯುಕ್ತರು, ಮುಡಾ. 

ಆಂದೋಲನ ಡೆಸ್ಕ್

Recent Posts

ಪ್ರಧಾನಿ ವಿರುದ್ಧ ಅವಹೇಳನಕಾರಿ ವೀಡಿಯೋ ಮಾಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಯದುವೀರ್‌ ಆಗ್ರಹ

ನಾಳೆಯಿಂದ ಬಿಜೆಪಿ ಪ್ರತಿಭಟನೆ: ಸಂಸದರ ಮಾಹಿತಿ ಮೈಸೂರು : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕುರಿತ ಅವಹೇಳನಕಾರಿ ವೀಡಿಯೋ ಮಾಡಿದವರ…

5 mins ago

ಗೃಹ ಬಳಕೆ, ಕೈಗಾರಿಕೆಗೆ ದಿನದ 24 ಗಂಟೆಯೂ ವಿದ್ಯುತ್

ಬೆಳಗಾವಿ : ಮುಂದಿನ ಮಾರ್ಚ್‌ನಿಂದ ಎರಡೂವರೆ ಸಾವಿರ ಮೆಗಾ ವ್ಯಾಟ್ ಸೌರಶಕ್ತಿ ವಿದ್ಯುತ್ ಸೇರ್ಪಡೆಯಾಗುತ್ತಿದ್ದು, ಗೃಹ ಬಳಕೆ ಹಾಗೂ ಕೈಗಾರಿಕೆಗಳಿಗೆ…

10 mins ago

ಬೆಳಗಾವಿ ಅಧಿವೇಶನದಲ್ಲೂ ನಟ ದರ್ಶನ್‌ ಬಗ್ಗೆ ಚರ್ಚೆ : ಏನದು?

ಬೆಳಗಾವಿ : ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೈದಿಗಳಿಗೆ ರಾಜ್ಯಾಥಿತ್ಯ ಸೌಲಭ್ಯಗಳು ಸಿಗುತ್ತಿರುವ ಬಗ್ಗೆ ವಿಧಾನಪರಿಷತ್‌ನಲ್ಲಿ ಪ್ರಸ್ತಾಪವಾಯಿತು. ಶೂನ್ಯವೇಳೆಯಲ್ಲಿ ಸದಸ್ಯ ಧನಂಜಯ್…

11 mins ago

ದಿ ಡೆವಿಲ್‌ ಚಿತ್ರದ ವಿಮರ್ಶೆ ಹಂಚಿಕೊಂಡ ಪತ್ನಿ ವಿಜಯಲಕ್ಷ್ಮಿ….!

ಬೆಂಗಳೂರು : ನಟ ದರ್ಶನ್ ಅವರ ಅನುಪಸ್ಥಿತಿಯಲ್ಲಿ ದಿ ಡೆವಿಲ್ ಸಿನಿಮಾ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾವನ್ನು ಅಭಿಮಾನಿಗಳು, ದರ್ಶನ್…

20 mins ago

ಸರ್ಕಾರಿ ಶಾಲೆಗಳಿಗೆ ಗುಡ್‌ನ್ಯೂಸ್‌ : ಶಾಲಾ ಕೊಠಡಿ ದುರಸ್ಥಿಗೆ ರೂ.360 ಕೋಟಿ ಬಿಡುಗಡೆ

ಬೆಳಗಾವಿ : ರಾಜ್ಯದಲ್ಲಿ ಹೊಸ ಶಾಲಾ ಕೊಠಡಿಗಳ ನಿರ್ಮಾಣಕ್ಕೆ 360 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ಶಾಲಾ ಶಿಕ್ಷಣ…

32 mins ago

ಹೊಸ ತಾಲ್ಲೂಕುಗಳಿಗೆ ಸದ್ಯಕ್ಕಿಲ್ಲ ಆಸ್ಪತ್ರೆ ಭಾಗ್ಯ

ಬೆಳಗಾವಿ : ರಾಜ್ಯದಲ್ಲಿ ಹೊಸ ತಾಲ್ಲೂಕುಗಳಲ್ಲಿ ಸದ್ಯಕ್ಕೆ ತಾಲ್ಲೂಕು ಮಟ್ಟದ ಆಸ್ಪತ್ರೆಗಳ ಮಂಜೂರಾತಿ ಇಲ್ಲ ಎಂದು ಆರೋಗ್ಯ ಮತ್ತು ಕುಟುಂಬ…

38 mins ago