Andolana originals

ಪ್ರವಾಸಿಗರೇ ಇರಲಿ ಎಚ್ಚರ

ಎಚ್.ಎಸ್.ದಿನೇಶ್‌ ಕುಮಾರ್‌ 

ದಸರಾ ಮಹೋತ್ಸವದಲ್ಲಿ ವಂಚನೆ ಸಾಧ್ಯತೆ ಹಿನ್ನೆಲೆ

ವಂಚಕರ ಬಗ್ಗೆ ಎಚ್ಚರವಹಿಸಲು ಕಮಿಷನರ್ ಸೀಮಾ ಲಾಟ್ಕರ್ ಮನವಿ 

ಮೈಸೂರು: ದಸರಾ ಮಹೋತ್ಸವದ ಸಂಭ್ರಮದಲ್ಲಿ ದೇಶ-ವಿದೇಶಗಳಿಂದ ಲಕ್ಷಾಂತರ ಮಂದಿ ಪ್ರವಾಸಿಗರು ಮೈಸೂರಿಗೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಪ್ರವಾಸಿಗರು ಮತ್ತು ಸಾರ್ವಜನಿಕರು ಅಪರಿಚಿತರ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. ಇಲ್ಲವಾದಲ್ಲಿ ವಿನಾ ಕಾರಣ ವಂಚನೆಗೆ ಒಳಗಾಗಬೇಕಾಗುತ್ತದೆ. ಹೀಗಾಗಿ ನಗರ ಪೊಲೀಸರು ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದ್ದಾರೆ.

ಮಫ್ತಿಯಲ್ಲಿ ನಗರಾದ್ಯಂತ ಸಂಚರಿಸುತ್ತಿರುವ ಪೊಲೀಸರು, ಪ್ರತಿದಿನ ವಂಚಕರ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಅವರನ್ನು ವಶಕ್ಕೆ ಪಡೆದು ಎಚ್ಚರಿಕೆ ನೀಡುವ ಕೆಲಸವನ್ನು ಸದ್ದಿಲ್ಲದೆ ಮಾಡುತ್ತಿದ್ದಾರೆ. ಇದರ ಜೊತೆಗೆ ಪ್ರವಾಸಿಗರೂ ಎಚ್ಚರಿಕೆಯಿಂದ ಇರಬೇಕು. ಪೊಲೀಸರ ಸಲಹೆ- ಸೂಚನೆಗಳನ್ನು ಪಾಲಿಸಬೇಕು ಎಂದು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಮನವಿ ಮಾಡಿದ್ದಾರೆ

ಮುನ್ನೆಚ್ಚರಿಕೆಗಳೇನು?: 

* ಮೈಸೂರಿಗೆ ಬಂದಿಳಿಯುವ ಪ್ರವಾಸಿಗರನ್ನು ಸ್ವಾಗತಿಸಿ ಕೊಠಡಿಯನ್ನು ಕೊಡಿಸುವುದಾಗಿ ಹೇಳುವ ಮಧ್ಯವರ್ತಿಗಳ ನಡೆಯ ಬಗ್ಗೆ ಎಚ್ಚರದಿಂದಿರಬೇಕು

* ರೈಲು, ಬಸ್ ನಿಲ್ದಾಣಗಳಲ್ಲಿ ಪೊಲೀಸ್ ಹಾಗೂ ಪ್ರವಾಸೋದ್ಯಮ ಸಹಾಯವಾಣಿಗಳಿವೆ. ಅಲ್ಲಿ ಕರ್ತವ್ಯ ನಿರ್ವಹಿಸುವವರನ್ನು ಭೇಟಿ ಮಾಡಿ ಕೊಠಡಿ, ಹೋಟೆಲ್ ಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಿ. ಇಲ್ಲವಾದಲ್ಲಿ ಆನ್‌ಲೈನ್ ಮೂಲಕ ಕೊಠಡಿ ಕಾಯ್ದಿರಿಸುವುದು ಉತ್ತಮ  ಎಲ್ಲೆಂದರಲ್ಲಿ ಆಟೋ ಹತ್ತುವ ಬದಲು ಪ್ರೀ-ಪೇಯ್ಡ್ ಆಟೋ ಬಳಸಿ, ನೀವು ಸಂಚರಿಸುವ ಆಟೋ ಮೀಟರ್ ಸುಸ್ಥಿತಿಯಲ್ಲಿದೆಯೇ ಎಂಬುದನ್ನು ಗಮನಿಸಿಕೊಳ್ಳಿ

* ದಸರಾ, ಪಂಜಿನ ಕವಾಯತು ಮತ್ತಿತರ ಕಾರ್ಯಕ್ರಮಗಳ ಪಾಸ್ ಹಾಗೂ ಟಿಕೆಟ್ ಕೊಡಿಸುವುದಾಗಿ ಹೇಳುವವರನ್ನು ಆದಷ್ಟು ದೂರವಿಡಿ, ಟಿಕೆಟ್ ದೊರೆಯುವ ಮಾಹಿತಿಯನ್ನು ಪ್ರವಾಸಿ ಹಾಗೂ ಪೊಲೀಸ್ ಸಹಾಯ ಕೇಂದ್ರಗಳಲ್ಲಿ ಹಾಗೂ ದಸರಾ ವೆಬ್‌ಸೈಟ್ ಮೂಲಕ ತಿಳಿದುಕೊಳ್ಳಿ

* ಅಪರಿಚಿತರೊಂದಿಗೆ ಊಟ, ತಿಂಡಿ ಸೇವಿಸುವ ಮುನ್ನ ಅವರ ಸಾಚಾತನದ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿ, ಇಲ್ಲವೇ ಅವರಿಂದ ಅಂತರ ಕಾಯ್ದುಕೊಳ್ಳಲು ಪ್ರಯತ್ನಿಸಿ  ಪ್ರವಾಸಿಗರು ಅಪರಿಚಿತ ಸ್ಥಳಗಳಲ್ಲಿ ಒಂಟಿಯಾಗಿ ಅಥವಾ ಅಪರಿಚಿತರೊಡನೆ ಮದ್ಯ ಸೇವನೆ, ಊಟೋಪಚಾರ ಮಾಡುವುದರಿಂದ ದೂರವಿದ್ದರೆ ಒಳಿತು

* ಖಾಸಗಿಯಾಗಿ ವಾಹನದಲ್ಲಿ ನಗರಕ್ಕೆ ಆಗಮಿಸುವ ಪ್ರಯಾಣಿಕರು ಸಂಚಾರ ನಿಯಮವನ್ನು ತಪ್ಪದೇ ಪಾಲಿಸುವ ಮೂಲಕ ದಂಡದಿಂದ ತಪ್ಪಿಸಿಕೊಳ್ಳಿ

* ಆರೋಗ್ಯ ಕೈಕೊಟ್ಟಲ್ಲಿ ಚಾಮರಾಜ ಜೋಡಿ ರಸ್ತೆ, ರಾಮಾನುಜ ರಸ್ತೆ, ನಜರ್‌ಬಾದ್‌ನಲ್ಲಿರುವ ಆರೋಗ್ಯ ಕೇಂದ್ರಗಳಲ್ಲಿ ಮತ್ತು ಕೆ.ಆರ್.ಆಸ್ಪತ್ರೆ, ಚಲುವಾಂಬ ಆಸ್ಪತ್ರೆ ಸೇರಿದಂತೆ ಇನ್ನಿತರ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಪಡೆದುಕೊಳ್ಳಿ. ಖಾಸಗಿ ಆಸ್ಪತ್ರೆಗಳೂ ಸಾಕಷ್ಟಿವೆ. ಆನ್‌ಲೈನ್ ಮೂಲಕ ಅವುಗಳ ವಿಳಾಸ ತಿಳಿದುಕೊಳ್ಳಿ.

ಆಂದೋಲನ ಡೆಸ್ಕ್

Recent Posts

ಮೈಸೂರು ದಸರಾ | ಯುವ ಸಂಭ್ರಮ ಉದ್ಘಾಟನೆಗೆ ವಿಜಯಪ್ರಕಾಶ್‌

ಮೈಸೂರು : ದಸರಾ ಮಹೋತ್ಸವಕ್ಕೆ ಆರಂಭದ ಮುನ್ನುಡಿಯಂತಿರುವ ಯುವ ಸಂಭ್ರಮಕ್ಕೆ ಈ ಬಾರಿ ಮೈಸೂರಿನ ಮನೆ ಮಗ ಖ್ಯಾತ ಗಾಯಕ…

6 hours ago

ಕೊಡಗು: ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ

ಕೊಡಗು: ಜಿಲ್ಲೆಯ ನೆಲ್ಯಹುದಿಕೇರಿ ಸಮೀಪದ ಅತ್ತಿಮಂಗಲದಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ ನಡೆಸಿದೆ. ಸ್ಕೂಟರ್‌ನಲ್ಲಿ ತೆರಳುತ್ತಿದ್ದ 60…

11 hours ago

ಓದುಗರ ಪತ್ರ: ಗ್ರಹಣ..!

ಗ್ರಹಣ..! ಸೂರ್ಯ-ಚಂದ್ರರ ನಡುವೆ ಭೂಮಿ ಬಂದರೆ ಚಂದ್ರ ಗ್ರಹಣ ! ಭಾರತ-ರಷ್ಯಾ ನಡುವೆ ಅಮೆರಿಕ ಬಂದರೆ ‘ಸುಂಕ ’ ಗ್ರಹಣ…

15 hours ago

ಓದುಗರ ಪತ್ರ: ಪೆಟ್ರೋಲ್ ಬಂಕ್‌ಗಳಲ್ಲಿ ಮೋಸ: ಗರಿಷ್ಟ ಕ್ರಮ ಕೈಗೊಳ್ಳಲಿ

ರಾಜ್ಯದ ೮೦೫ ಪೆಟ್ರೋಲ್ ಬಂಕ್‌ಗಳ ತಪಾಸಣೆಯಲ್ಲಿ ಬರೋಬ್ಬರಿ ೭೬೮ ಬಂಕ್‌ಗಳಲ್ಲಿ (ಶೇ. ೮೫ ರಷ್ಟು) ಅಳತೆಯಲ್ಲಿ ಮೋಸ ಕಂಡುಬಂದಿರುವುದು ಸಾರ್ವಜನಿಕರಿಗೆ…

15 hours ago

ಓದುಗರ ಪತ್ರ: ಉದ್ಯೋಗ ಸೃಷ್ಟಿ : ಫ್ಲಿಪ್‌ಕಾರ್ಟ್ ನಡೆ ಸ್ವಾಗತಾರ್ಹ

ಒಂದು ಕಡೆ ಒರಾಕಲನಂತಹ ಕಂಪೆನಿಗಳು ತಮ್ಮ ನೌಕರರನ್ನು ಯಾವುದೇ ಮುನ್ಸೂಚನೆ ನೀಡದೇ ಕೇವಲ ಒಂದೇ ಒಂದು ಇ ಮೇಲ್ ಸಂದೇಶದ…

15 hours ago

ಸುಗಮ ಸಂಗೀತದ ಅದ್ಬುತ ಗಾಯಕ ಮಡಿಕೇರಿ ನಾಗೇಂದ್ರ

ಡಾ.ಕೆ.ವಿ.ಲಕ್ಷ್ಮೀದೇವಿ, ಗುರುಕೃಪಾ ಸಂಗೀತ ಕೇಂದ್ರ, ಮೈಸೂರು ಇಂದು ಗುರು ನಮನ ಮಡಿಕೇರಿ ನಾಗೇಂದ್ರರೆಂದೇ ಪ್ರಖ್ಯಾತರಾದ ‘ಗುರು ಕೃಪಾ ಸಂಗೀತ ಕೇಂದ್ರ’ದ…

18 hours ago