ಎಚ್.ಎಸ್.ದಿನೇಶ್ ಕುಮಾರ್
ದಸರಾ ಮಹೋತ್ಸವದಲ್ಲಿ ವಂಚನೆ ಸಾಧ್ಯತೆ ಹಿನ್ನೆಲೆ
ವಂಚಕರ ಬಗ್ಗೆ ಎಚ್ಚರವಹಿಸಲು ಕಮಿಷನರ್ ಸೀಮಾ ಲಾಟ್ಕರ್ ಮನವಿ
ಮೈಸೂರು: ದಸರಾ ಮಹೋತ್ಸವದ ಸಂಭ್ರಮದಲ್ಲಿ ದೇಶ-ವಿದೇಶಗಳಿಂದ ಲಕ್ಷಾಂತರ ಮಂದಿ ಪ್ರವಾಸಿಗರು ಮೈಸೂರಿಗೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಪ್ರವಾಸಿಗರು ಮತ್ತು ಸಾರ್ವಜನಿಕರು ಅಪರಿಚಿತರ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. ಇಲ್ಲವಾದಲ್ಲಿ ವಿನಾ ಕಾರಣ ವಂಚನೆಗೆ ಒಳಗಾಗಬೇಕಾಗುತ್ತದೆ. ಹೀಗಾಗಿ ನಗರ ಪೊಲೀಸರು ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದ್ದಾರೆ.
ಮಫ್ತಿಯಲ್ಲಿ ನಗರಾದ್ಯಂತ ಸಂಚರಿಸುತ್ತಿರುವ ಪೊಲೀಸರು, ಪ್ರತಿದಿನ ವಂಚಕರ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಅವರನ್ನು ವಶಕ್ಕೆ ಪಡೆದು ಎಚ್ಚರಿಕೆ ನೀಡುವ ಕೆಲಸವನ್ನು ಸದ್ದಿಲ್ಲದೆ ಮಾಡುತ್ತಿದ್ದಾರೆ. ಇದರ ಜೊತೆಗೆ ಪ್ರವಾಸಿಗರೂ ಎಚ್ಚರಿಕೆಯಿಂದ ಇರಬೇಕು. ಪೊಲೀಸರ ಸಲಹೆ- ಸೂಚನೆಗಳನ್ನು ಪಾಲಿಸಬೇಕು ಎಂದು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಮನವಿ ಮಾಡಿದ್ದಾರೆ
ಮುನ್ನೆಚ್ಚರಿಕೆಗಳೇನು?:
* ಮೈಸೂರಿಗೆ ಬಂದಿಳಿಯುವ ಪ್ರವಾಸಿಗರನ್ನು ಸ್ವಾಗತಿಸಿ ಕೊಠಡಿಯನ್ನು ಕೊಡಿಸುವುದಾಗಿ ಹೇಳುವ ಮಧ್ಯವರ್ತಿಗಳ ನಡೆಯ ಬಗ್ಗೆ ಎಚ್ಚರದಿಂದಿರಬೇಕು
* ರೈಲು, ಬಸ್ ನಿಲ್ದಾಣಗಳಲ್ಲಿ ಪೊಲೀಸ್ ಹಾಗೂ ಪ್ರವಾಸೋದ್ಯಮ ಸಹಾಯವಾಣಿಗಳಿವೆ. ಅಲ್ಲಿ ಕರ್ತವ್ಯ ನಿರ್ವಹಿಸುವವರನ್ನು ಭೇಟಿ ಮಾಡಿ ಕೊಠಡಿ, ಹೋಟೆಲ್ ಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಿ. ಇಲ್ಲವಾದಲ್ಲಿ ಆನ್‌ಲೈನ್ ಮೂಲಕ ಕೊಠಡಿ ಕಾಯ್ದಿರಿಸುವುದು ಉತ್ತಮ ಎಲ್ಲೆಂದರಲ್ಲಿ ಆಟೋ ಹತ್ತುವ ಬದಲು ಪ್ರೀ-ಪೇಯ್ಡ್ ಆಟೋ ಬಳಸಿ, ನೀವು ಸಂಚರಿಸುವ ಆಟೋ ಮೀಟರ್ ಸುಸ್ಥಿತಿಯಲ್ಲಿದೆಯೇ ಎಂಬುದನ್ನು ಗಮನಿಸಿಕೊಳ್ಳಿ
* ದಸರಾ, ಪಂಜಿನ ಕವಾಯತು ಮತ್ತಿತರ ಕಾರ್ಯಕ್ರಮಗಳ ಪಾಸ್ ಹಾಗೂ ಟಿಕೆಟ್ ಕೊಡಿಸುವುದಾಗಿ ಹೇಳುವವರನ್ನು ಆದಷ್ಟು ದೂರವಿಡಿ, ಟಿಕೆಟ್ ದೊರೆಯುವ ಮಾಹಿತಿಯನ್ನು ಪ್ರವಾಸಿ ಹಾಗೂ ಪೊಲೀಸ್ ಸಹಾಯ ಕೇಂದ್ರಗಳಲ್ಲಿ ಹಾಗೂ ದಸರಾ ವೆಬ್‌ಸೈಟ್ ಮೂಲಕ ತಿಳಿದುಕೊಳ್ಳಿ
* ಅಪರಿಚಿತರೊಂದಿಗೆ ಊಟ, ತಿಂಡಿ ಸೇವಿಸುವ ಮುನ್ನ ಅವರ ಸಾಚಾತನದ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿ, ಇಲ್ಲವೇ ಅವರಿಂದ ಅಂತರ ಕಾಯ್ದುಕೊಳ್ಳಲು ಪ್ರಯತ್ನಿಸಿ ಪ್ರವಾಸಿಗರು ಅಪರಿಚಿತ ಸ್ಥಳಗಳಲ್ಲಿ ಒಂಟಿಯಾಗಿ ಅಥವಾ ಅಪರಿಚಿತರೊಡನೆ ಮದ್ಯ ಸೇವನೆ, ಊಟೋಪಚಾರ ಮಾಡುವುದರಿಂದ ದೂರವಿದ್ದರೆ ಒಳಿತು
* ಖಾಸಗಿಯಾಗಿ ವಾಹನದಲ್ಲಿ ನಗರಕ್ಕೆ ಆಗಮಿಸುವ ಪ್ರಯಾಣಿಕರು ಸಂಚಾರ ನಿಯಮವನ್ನು ತಪ್ಪದೇ ಪಾಲಿಸುವ ಮೂಲಕ ದಂಡದಿಂದ ತಪ್ಪಿಸಿಕೊಳ್ಳಿ
* ಆರೋಗ್ಯ ಕೈಕೊಟ್ಟಲ್ಲಿ ಚಾಮರಾಜ ಜೋಡಿ ರಸ್ತೆ, ರಾಮಾನುಜ ರಸ್ತೆ, ನಜರ್‌ಬಾದ್‌ನಲ್ಲಿರುವ ಆರೋಗ್ಯ ಕೇಂದ್ರಗಳಲ್ಲಿ ಮತ್ತು ಕೆ.ಆರ್.ಆಸ್ಪತ್ರೆ, ಚಲುವಾಂಬ ಆಸ್ಪತ್ರೆ ಸೇರಿದಂತೆ ಇನ್ನಿತರ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಪಡೆದುಕೊಳ್ಳಿ. ಖಾಸಗಿ ಆಸ್ಪತ್ರೆಗಳೂ ಸಾಕಷ್ಟಿವೆ. ಆನ್‌ಲೈನ್ ಮೂಲಕ ಅವುಗಳ ವಿಳಾಸ ತಿಳಿದುಕೊಳ್ಳಿ.
ಕೆ.ಆರ್.ನಗರ : ತಾಲ್ಲೂಕಿನ ಹೊರವಲಯದ ಅರ್ಕೇಶ್ವರ ದೇಗುಲ ಬಳಿಯ ಕಾವೇರಿ ನದಿಯಲ್ಲಿ ಈಜಾಡುತ್ತಿದ್ದ ವೇಳೆ ಸಾವನ್ನಪ್ಪಿದ ಆರು ಮಂದಿಯೂ ಒಂದೇ…
ಚಾಮರಾಜನಗರ : ಕೋವಿಡ್ ವೇಳೆಯಲ್ಲಿ ನಗರದ ಜಿಲ್ಲಾಸ್ಪತ್ರೆಯಲ್ಲಿ (ಈಗ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ) ಸಂಭವಿಸಿದ್ದ ಆಕ್ಸಿಜನ್ ದುರಂತದಲ್ಲಿ 36…
ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏ.20 ಹಾಗೂ 21ರಂದು ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. 20ರಂದು…
ಮೈಸೂರು : ಜಿಲ್ಲೆಯ ಕೆ.ಆರ್.ನಗರದ ಅರ್ಕೇಶ್ವರ ದೇಗುಲದ ಬಳಿ ಕಾವೇರಿ ನದಿಯಲ್ಲಿ ಈಜಲು ತೆರಳಿ ಮೃತಪಟ್ಟವರ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ…
ರಾಣೇಬೆನ್ನೂರ : ಮಾನವ ಸಮಾಜ ನಿರ್ಮಾಣದಲ್ಲಿ ಎಲ್ಲರೂ ಪಾಲುದಾರರಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು. ಅವರು ಇಂದು ರಾಣಿಬೆನ್ನೂರಿನ ನಿಟ್ಟೂರು…
ಕೊಲ್ಕತ್ತಾ : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ 28ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವು ರಾಜಸ್ಥಾನ…