ಶೀಘ್ರದಲ್ಲೇ ನಿಲುಗಡೆ, ಎಕ್ಸ್‌ಪ್ರೆಸ್ ಬಸ್‌ಗಳಿಗೂ ಸೇವೆ ವಿಸ್ತರಣೆ
ಮೈಸೂರು: ಚಿಲ್ಲರೆ ಸಮಸ್ಯೆ, ಪ್ರಯಾಣಿಕರಿಗೆ ಟಿಕೆಟ್ ಕೊಡಲು ವಿಳಂಬವಾಗುತ್ತಿರುವುದನ್ನು ತಪ್ಪಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಮೈಸೂರು-ಬೆಂಗಳೂರು ನಡುವ ಸಂಚರಿಸುವ ತಡೆರಹಿತ ಬಸ್‌ಗಳಿಗೆ ಇ-ಪಾವತಿ (ಇ-ಟಿಕೆಟಿಂಗ್ ವ್ಯವಸ್ಥೆ ಜಾರಿಗೆ ತಂದಿದ್ದು, ಶೀಘ್ರದಲ್ಲಿ ಶಟಲ್, ಎಕ್ಸ್‌ಪ್ರೆಸ್ ಬಸ್‌ಗಳಿಗೂ ಈ ಸೇವೆಯನ್ನು ವಿಸ್ತರಿಸಲು ಅಗತ್ಯ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಮೈಸೂರು ನಗರದಿಂದ ಬೆಂಗಳೂರಿಗೆ ತೆರಳುವ ಬಸ್‌ಗಳಲ್ಲಿ ಮೂರು ವಿಧದ ವ್ಯವಸ್ಥೆ ಇದ್ದು, ನಾನ್ ಸ್ಟಾಪ್, ಎಕ್ಸ್‌ಪ್ರೆಸ್ ಹಾಗೂ ಶಟಲ್ (ಕೃತೋರಿದಲ್ಲಿ ನಿಲ್ಲುವ) ಬಸ್‌ಗಳಿವೆ. ಮೈಸೂರು-ಬೆಂಗಳೂರು ನಡುವೆ ಸಂಚರಿಸುವ ನಾನ್‌ಸ್ಟಾಪ್ ಬಸ್‌ಗಳ ಟಿಕೆಟ್ ದರ 187 ರೂ. ಇದ್ದು, ಮೂರು ರೂ. ಚಿಲ್ಲರೆ ಮರು ಪಾವತಿ ಮಾಡುವುದು ತುಂಬಾ ಕಷ್ಟಕರವಾಗಿತ್ತು. ಬಸ್‌ನಿಂದ ಇಳಿದಾಗ ನಿರ್ವಾಹಕರು ಮೂರು ರೂ. ಕೊಡುವುದಕ್ಕೆ ಚಿಲ್ಲರೆ ಇಲ್ಲವೆಂದು ಹೇಳಿದಾಗ ವಾಗ್ವಾದಕ್ಕೂ ಕಾರಣವಾಗಿತ್ತು. ಇದನ್ನು ಮನಗಂಡ ಅಧಿಕಾರಿಗಳು ನವೀಕೃತ ಟಿಕೆಟ್ ಮಷಿನ್‌ನಲ್ಲಿ ಟಿಕೆಟ್ ಕೊಡುವ ಮತ್ತು ಇ-ಪಾವತಿ ವ್ಯವಸ್ಥೆ ಕೂಡ ಇರುವುದನ್ನು ಬಳಸಿಕೊಂಡು ಚಿಲ್ಲರೆ ಸಮಸ್ಯೆಗೆ ಬ್ರೇಕ್ ಹಾಕಲು ಆರಂಭಿಸಿದ ವ್ಯವಸ್ಥೆ ಸಫಲವಾಗಿದೆ.
ಸದ್ಯಕ್ಕೆ ಮೈಸೂರು-ಬೆಂಗಳೂರು ನಡುವೆ ಸಂಚರಿಸುವ 300 ನಾನ್‌ಸ್ಟಾಪ್ ಬಸ್‌ಗಳಲ್ಲಿ ಅಳವಡಿಸಿಕೊಂಡಿದ್ದು, ಶೀಘ್ರದಲ್ಲೇ ಶಟಲ್, ಎಕ್ಸ್‌ಪ್ರೆಸ್ ಬಸ್‌ಗಳಿಗೂ ಈ ಸೇವೆಯನ್ನು ವಿಸ್ತರಿಸಲಾಗುತ್ತದೆ. ಹಾಲಿ ಇರುವ ಟಿಕೆಟ್ ಮೆಷಿನ್‌ನಿಂದ ಒಬ್ಬರಿಗೆ ಟಿಕೆಟ್ ಕೊಡಲು ಕನಿಷ್ಠ ಒಂದೂವರೆ ನಿಮಿಷ ತೆಗೆದುಕೊಳ್ಳುತ್ತದೆ.
ಈ ಪರಿಣಾಮ ನಿರ್ವಾಹಕರು ಮೂರು ರೀತಿಯ ಆಯ್ಕೆಯನ್ನು ಮಾಡಬೇಕಿತ್ತು. ಇ-ಪೇಮೆಂಟ್‌ನಲ್ಲಿ ಸ್ಕ್ಯಾನ್ ಮಾಡಿದ ತಕ್ಷಣ ಪಾವತಿಯಾಗುತ್ತಿದ್ದಂತೆ ಟಿಕೆಟ್ ಹರಿದುಕೊಡುಗುವುದು ಸುಲಭವಾಗಲಿದೆ. ಹೀಗಾಗಿಯೇ, ಗ್ರಾಮಾಂತರ ವಿಭಾಗದ ವ್ಯಾಪ್ತಿಯಲ್ಲಿರುವ ಎಲ್ಲಾ ಬಸ್‌ಗಳಿಗೂ ಯೋಜನೆ ರೂಪಿಸಲಾಗಿದೆ.
ನಗರ ವ್ಯಾಪ್ತಿಯಲ್ಲಿ ಸ್ಪಂದನೆ: ಪ್ರತಿನಿತ್ಯ ಸಾವಿರಾರು ಮಂದಿ ಪ್ರಯಾಣಿಸುವ ಮೈಸೂರು ನಗರ ಸಾರಿಗೆ ಬಸ್‌ಗಳಲ್ಲಿ ಚಿಲ್ಲರೆ ಪೂರೈಸುವುದು ಕಷ್ಟಕರವಾಗಿದ್ದು, ಇದಕ್ಕೆ ಬ್ರೇಕ್ ಹಾಕುವ ಜೊತೆಗೆ ನಿಗದಿತ ಸಮಯದಲ್ಲಿ ರೂಟ್‌ಗಳನ್ನು ತಲುಪುವಂತೆ ಮಾಡಲು ವಾರದ ಹಿಂದೆ ಜಾರಿಗೆ ತಂದ ಇ-ಪೇಮೆಂಟ್ ವ್ಯವಸ್ಥೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಮಹಿಳೆಯರಿಗೆ ಉಚಿತ ಪ್ರಯಾಣ ಇರುವ ಕಾರಣ ಗುರುತಿನ ಚೀಟಿಗಳನ್ನು ಪರಿಶೀಲಿಸಿ ಟಿಕೆಟ್ ಕೊಡುತ್ತಾರೆ. ಆದರೆ ಪಾಸ್ ಹೊಂದಿಲ್ಲದ ಕಾಳೇಜು ವಿದ್ಯಾರ್ಥಿಗಳು, ಸರ್ಕಾರಿ ನೌಕರರು, ಅರೆ ಸರ್ಕಾರಿ ನೌಕರರು, ಸಾರ್ವಜನಿಕರು ಇ-ಪೇಮೆಂಟ್ ಮೂಲಕವೇ ಪಾವತಿಸಿ ಟಿಕೆಟ್ ಖರೀದಿಸುತ್ತಿದ್ದಾರೆ. ಇದರಿಂದ ಅರ್ಧದಷ್ಟು ಸಮಸ್ಯೆ ಇತ್ಯರ್ಥವಾಗಿದೆ ಎಂದು ನಿರ್ವಾಹಕರೊಬ್ಬರು ಹೇಳಿದರು.
ಮೈಸೂರು ನಗರದಲ್ಲಿ 514 ಅನು ಸೂಚಿತ ಮಾರ್ಗಗಳಿದ್ದು, ಎಲ್ಲಾ ಬಸ್ ಗಳಲ್ಲೂ ಇ-ಪೇಮೆಂಟ್ ವ್ಯವಸ್ಥೆ ಜಾರಿಗೆ ತಂದಿದ್ದೇವೆ. ಕಾಲೇಜು ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗುವವರು ಜಾಸ್ತಿ ಬಳಸುತ್ತಿದ್ದಾರೆ.
ಚಿಲ್ಲರೆ ಸಮಸ್ಯೆ ನೀಗುವ ಜತೆಗೆ ಬಹುಬೇಗನೆ ಟಿಕೆಟ್ ವಿತರಿಸುವುದಕ್ಕೂ ತುಂಬಾ ಅನುಕೂಲವಾಗಿದೆ.
–ವೀರೇಶ್, ಮೈಸೂರು ನಗರ ವಿಭಾಗೀಯ ನಿಯಂತ್ರಣಾಧಿಕಾರಿ
ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…
ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…
ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…
ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…
ಮೈಸೂರು: ನಟ ದರ್ಶನ್ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…