ಇಂದಿನ ಬಹುಮಾಧ್ಯಮ ಅಬ್ಬರಗಳ ನಡುವೆಯೂ ಸಮಾಜದ ಎಲ್ಲ ಸ್ತರಗಳ ಜನರನ್ನೂ ಒಳಗೊಂಡು ಮುನ್ನಡೆಯುತ್ತಿರುವ ಮೈಸೂರು ಆಕಾಶವಾಣಿ ಎಲ್ಲ ಎಲ್ಲೆಗಳನ್ನು ಮೀರುತ್ತಾ ಹೊಸ ಸಂಕ್ರಮಣ ಕಾಲದತ್ತ ಮುನ್ನಡೆಯುತ್ತಿದೆ.
• ಕೀರ್ತಿ ಬೈಂದೂರು
ದುರಿನ ರಸ್ತೆಯಲ್ಲಿ ವಾಹನಗಳ ಸದ್ದು, ಪಕ್ಕದ ಚೆಲುವಾಂಬ ಉದ್ಯಾನವನದ ಹಸಿರು, ಬಸ್ಸಿನಲ್ಲಿ ಕೂತವರು ಯಾದವಗಿರಿಯನ್ನು ದಾಟಿ ದಾಸಪ್ಪ ವೃತ್ತದ ಕಡೆ ಸಾಗು ವಾಗ, ಕುತೂಹಲದ ಕಣೋಟ ಬೀರುತ್ತಾ ಆಕಾಶವಾಣಿಯ ಕಟ್ಟಡ ವನ್ನು ಗಮನಿಸುವುದಿದೆ. ಖಾಸಗಿ ರೇಡಿಯೋ ಸ್ಟೇಷನ್‌ಗಳ ನಡು ವೆಯೂ ಇಂದು ತನ್ನದೇ ಆದ ಶೋತೃ ಬಳಗವನ್ನು ಹೊಂದಿದೆ ಎಂದರೆ ಅದು ಮೈಸೂರು ಆಕಾಶವಾಣಿಯ ಹೆಗ್ಗಳಿಕೆ ತಾನೆ!
‘ಕೇಳು ಪರಂಪರೆ’ಯ ಕೊಂಡಿಯಂತಿರುವ ಆಕಾಶವಾಣಿ ಪಡೆಯುತ್ತಿರುವ ಜನಪ್ರೀತಿ ಬೆರಗಾಗಿಸುತ್ತದೆ. ನಿಮ್ಮೊಂದಿಗೆ ಮೈಸೂರು ಆಕಾಶವಾಣಿ ಕಾರ್ಯಕ್ರಮಕ್ಕೆ ಇತ್ತೀಚೆಗೆ ಕರೆ ಮಾಡಿದ ಕೇಳುಗರೊಬ್ಬರು, ‘ಬುದ್ಧಿ ಆಕಾಶ್ವಾಣಿ ಇಂದಾನೆ ನಮ್ ಹಳ್ಳಿಗೆ ಬೆಳಕಾಗೋದು. ನಮಗೆಲ್ಲ ಆಕಾಲ್ವಾಣಿ | ಗುಡಿ ಇದ್ದಂಗೆ ಸಾಮಿ’ ಎಂದಿದ್ದರು! ಉತ್ತೇಕೆ ಎನಿಸಬಹುದು, ಆದರೆ ಜನರು ಮೈಸೂರು ಆಕಾಶವಾಣಿಯನ್ನು ತಮ್ಮ ಎದೆಗಪ್ಪಿಕೊಂಡಿದ್ದಾರೆಂಬುದು ವಾಸ್ತವ ಮನಶ್ಯಾಸ್ತ್ರದ ಪ್ರಾಧ್ಯಾಪಕರಾಗಿದ್ದ ಡಾ.ಎಂ.ವಿ.ಗೋಪಾಲಸ್ವಾಮಿ ಅವರು 1935ರ ಸೆಪ್ಟೆಂಬರ್ 10ರಂದು ಒಂಟಿಕೊಪ್ಪಲಿನಲ್ಲಿರುವ ತಮ್ಮ ಮನೆ ‘ವಿಠಲ ವಿಹಾರ’ದಲ್ಲಿ ಪ್ರಾಯೋಗಿಕವಾಗಿ ರೇಡಿಯೋ ಪ್ರಸಾರವನ್ನು ಯುಗದ ಕವಿ ಕುವೆಂಪು ಅವರ ಕವಿವಾಣಿಯನ್ನು ಬಿತ್ತರಿಸುವುದರ ಮೂಲಕ ಆರಂಭಿಸಿದರು. ಮೈಸೂರು ವಾಸುದೇವಾಚಾರ್ಯರ ಗಾಯನ ಎಚ್.ವಿ.ರಾಮರಾಯರಿಂದ ಪಿಟೀಲು ಸಂಗೀತ ಕಾರ್ಯಕ್ರಮಗಳು ನಡೆ ಯುತ್ತಲಿತ್ತು. ಮೊದಲೆಲ್ಲ ಪ್ರಸಾರ ಕಾರ್ಯ ಸಂಜೆಯ ಕೆಲ ಗಂಟೆಗಳಿಗೆ ಮಾತ್ರ ಸೀಮಿತವಾಗಿದ್ದರೂ, ನಂತರ ಕಾರ್ಯಕ್ರಮಕ್ಕೆ ಬೇಡಿಕೆ ಹೆಚ್ಚತೊಡಗಿತು.
ಒಟ್ಟು ಆರು ವರ್ಷಗಳವರೆಗೆ ಪ್ರಸಾರ ಕಾರ್ಯದ ಆರ್ಥಿಕ ಹೊರೆ ಯನ್ನು ಸಂಭಾಳಿಸಿದ ಗೋಪಾಲ ಸ್ವಾಮಿ ಅವರು, ಮುಂದೆ ಮೈಸೂರು ಸಂಸ್ಥಾನದ ಮಹಾರಾಜರ ಆಡಳಿತಕ್ಕೆ ಕೇಂದ್ರದ ಜವಾಬ್ದಾರಿಯನ್ನು ಹಸ್ತಾಂತ ರಿಸಿದರು. ಮೈಸೂರು ದಸರಾ ಮಹೋತ್ಸವದ ವಸ್ತು ಪ್ರದರ್ಶನ ಹಳೆಯ ಕಟ್ಟಡದ ಮೊದಲ ಮಹಡಿಗೆ ಈ ರೇಡಿಯೋ ಕೇಂದ್ರ ಸ್ಥಳಾಂತರ ವಾಯಿತು. ನಂತರ ನಾ.ಕಸ್ತೂರಿ ಅವರ ಅಧಿಕಾರಾವಧಿಯಲ್ಲಿ ‘ಆಕಾಶವಾಣಿ’ ಎಂಬ ಹೆಸರಿನೊಂದಿಗೆ ಹೊಸರೂಪ ಪಡೆಯಿತು. ಬಹುಶಃ ಈ ‘ಹೊಸತು’ ಮೈಸೂರಿನ ಸಾಂಸ್ಕೃತಿಕ ಕ್ಷೇತ್ರದಲ್ಲಿ ಇನ್ನಷ್ಟು ವಿಸ್ತರಿಸಿಕೊಳ್ಳುವುದಕ್ಕೆ ಸಾಧ್ಯವಾ ಗಿಸಿತು. ಗಮನಿಸ ಬೇಕಾದದ್ದು, ದೇಶದ ಅಷ್ಟೂ ಬಾನುಲಿ ಕೇಂದ್ರಗಳನ್ನು ಇಂದು ಆಕಾಶವಾಣಿ ಎಂಬ ಹೆಸರಿನಿಂದಲೇ ಕರೆಯುತ್ತಾರೆ ಎಂದು.
ಎಂ.ವಿ.ಗೋಪಾಲಸ್ವಾಮಿ ಅವರ ಆದಿಯಾಗಿ ಆಗಿನ ನಿರ್ದೇಶಕರಾಗಿದ್ದ ಎ.ಎನ್.ಮೂರ್ತಿರಾಯರ ತನಕವೂ ಆಕಾಶವಾಣಿಗೆ ತನ್ನದೇ ಆದ ಸೂಕ್ತ ಸ್ಥಳವೊಂದು ಬೇಕೆಂದು ಹುಡುಕಾಟ ನಿರಂತರವಾಗಿತ್ತು. ಒಮ್ಮೆ ಗೋಪಾಲಸ್ವಾಮಿ ಅವರು ಕುದುರೆ ಸವಾರಿ ಮಾಡುತ್ತಿರುವಾಗ, ಆಕಸ್ಮಿಕವಾಗಿ ತಮ್ಮ ಮನೆಯ ಸಮೀಪದಲ್ಲಿರುವ ವಿಸ್ತಾರವಾದ ನಿವೇಶನವನ್ನು ಕಂಡರು. ನಂತರ ದಿವಾನರ ಬಳಿ ಚರ್ಚಿಸಿ, ಮೈಸೂರು ಸರ್ಕಾರದಿಂದ ಅದನ್ನು ಖರೀದಿಸಬೇಕೆಂದು ಸಿದ್ಧತೆಯಾಯಿತು. ಆಗ ಮಹಾರಾಜರ ಸೇವೆಯಲ್ಲಿದ್ದ ಜರ್ಮನ್ ಆರ್ಕಿಟೆಕ್ಟ್ ಇಂಜಿನಿಯರ್ ಆಟೋ ಕೊನಿಗ್ಸ್ ಬರ್ಗರ್ ಅವರ ಕೈಚಳಕದಿಂದಲಲಿತಕಲಾಶಾಲೆಯಾಗಿದ್ದ ಕಟ್ಟಡ ಮೈಸೂರು ಆಕಾಶವಾಣಿ ಕೇಂದ್ರವಾಗಿ ತಲೆ ಎತ್ತಿನಿಂತಿತು.
ಸ್ವತಂತ್ರ ಕಟ್ಟಡದಲ್ಲಿ ಕಾರ್ಯಕ್ರಮಗಳ ಪ್ರಸಾರ ಕಾರ್ಯ ಹತ್ತು ವರ್ಷಗಳವರೆಗೆ ಸುಸೂತ್ರವಾಗಿ ಸಾಗಿತು. ಆದರೆ 1955ರಿಂದ ಬೆಂಗಳೂರು ನಿಲಯದಿಂದ ಮೈಸೂರು ಆಕಾಶವಾಣಿಯ ಪ್ರಸಾರ ಮುಂದುವರಿಸಬೇಕಾದ ಅನಿವಾರ್ಯತೆ ಎದುರಾಗಿ ಸಂಗೀತದ ರಾಗಾಲಾಪಕ್ಕೆ ತೊಡಗಿಕೊಳ್ಳುತ್ತಿದ್ದ ಮೈಸೂರು ಆಕಾಶವಾಣಿ, ಸದ್ದಿರದ ನಿರ್ಜೀವ ಕಟ್ಟಡವಾಯಿತು.
ಮೈಸೂರು ಆಕಾಶವಾಣಿಯನ್ನು ಆವರಿಸಿದ ಗ್ರಹಣಬಿಡುವುದಕ್ಕೆ ಬರೋಬ್ಬರಿ ಹತ್ತೊಂಬತ್ತು ವರ್ಷಗಳೇ ಬೇಕಾಯಿತು. 1974ರಂದು ಮೈಸೂರು ಆಕಾಶವಾಣಿ ತನ್ನ ಪ್ರಸಾರ ಕಾರ್ಯವನ್ನು ಮತ್ತೆ ಮೈಸೂರಿನಿಂದಲೇ ಆರಂಭಿಸಿತು. ‘ಆಕಾಶವಾಣಿ ಮೈಸೂರು, ತರಂಗಾಂತರ 294.98 ಮೀಟರ್ ಅಥವಾ 1017 ಕಿ.ಹರ್ಟ್ಸ್’ ಎಂಬಲ್ಲಿಂದ, ‘ಆಕಾಶವಾಣಿ ಮೈಸೂರು, ಎಫ್.100.6’ ವರೆಗೆ ಸಾಗಿದ ನುಡಿಸೇವೆಯ ಪಯಣಕ್ಕೆ ಇಂದು 90 ವರ್ಷದ ಸಂಭ್ರಮ, ಹಳ್ಳಿಯೊ, ನಗರ ಭಾಗವೊ ಅಂತು, ಆಕಾಶವಾಣಿ ಯಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳಿಗೆ ಅನುಗುಣವಾಗಿ ಕೇಳುಗರುತಮ್ಮ ದಿನಚರಿಯನ್ನು ರೂಢಿಸಿಕೊಂಡಿ ದ್ದಾರೆ. ‘ರೈತರಿಗೆ ಸಲಹೆ ಮುಗಿಯುವುದರೊಳಗೆ ಇವಿಷ್ಟು ಕೆಲಸ ಮುಗಿಸಬೇಕು ಎಂಬ ಸಮಯದ ಚೌಕಟ್ಟು ಆಕಾಶವಾಣಿಯ ಕೊಡುಗೆಯೇ ಸರಿ. ಶನಿವಾರ ಬೆಳಿಗ್ಗೆ ‘ಹಾದಿಯಲ್ಲಿ ಕಂಡ ಮುಖ ಕೊಡುಗೆಯೇ ಸರಿ. ಶನಿವಾರ ಬೆಳಿಗ್ಗೆ ‘ಹಾದಿಯಲ್ಲಿ ಕಂಡ ಮುಖ’ ಕೇಳುತ್ತಾ ಕೆಲಸಕ್ಕೆ ಹೊರಡುವವರಿದ್ದಾರೆ. ಹಬ್ಬ ಹರಕೆಯಂತಲೂ ಗಮನಿಸದೆ, ಹನ್ನೊಂದು ಗಂಟೆಗೆ ಪ್ರಸಾರವಾಗುವ ‘ನಿಮ್ಮೊಂದಿಗೆ ಮೈಸೂರು ಆಕಾಶವಾಣಿ’ಗೆ ಮುಗಿಬಿದ್ದು ಕರೆ ಮಾಡುವ ಅಪ್ಪಟ ಅಭಿಮಾನಿಗಳಿದ್ದಾರೆ. ಪುಸ್ತಕದಪುಟತಿರುವಲು ಸಾಧ್ಯವಾಗದವರೆಲ್ಲ ಇಂದು ‘ಕಾದಂಬರಿ ವಿಹಾರ ಕೇಳುತ್ತಾ, ನಾಲ್ಕು ಕಾದಂಬರಿಗಳನ್ನು ಓದಿ ಮುಗಿಸಿದ್ದಾರೆ. ಕಾಯಿಲೆಯಿದ್ದರೂ ಧೃತಿಗೆಡಬಾರದೆಂದು ಆರೋಗ್ಯದ ಬಗ್ಗೆ ಎಚ್ಚರಿಕೆ ತಾಳಿದ್ದಾರೆ.
ಸಂಜೆಯ ‘ಕೃಷಿರಂಗ’ಕ್ಕೆ ಕಾಯುವ ರೈತ ಬಾಂಧವರು, ‘ಯುವವಾಣಿ’ಯಲ್ಲಿ ಬೆಳಗಿದ ಯುವ ಪ್ರತಿಭೆಗಳು, ಸುತ್ತಲ ಹಕ್ಕಿಗಳನ್ನು ಕಾಣುತ್ತಾ ‘ಬಣ್ಣದ ಬಾನಾಡಿ’ಗಳನ್ನು ನೆನಪಿಸಿಕೊಂಡವರು, ಸೈಕಲ್ ಸವಾರಿಗೆ ಜೊತೆಯಾದ ಮಾತುಗಳು, ಗೇಮ್‌ಶೋ ಕಾರ್ಯಕ್ರಮದಲ್ಲಿ ನನಗೊಂದು ಕರೆ ಸಿಗಲಪ್ಪಾ’ ಎಂದು ಪ್ರಾರ್ಥಿಸುವ ಮನಸ್ಸುಗಳು, ಚಟ್ ಪಟ್ ಚುರುಮುರಿಯನ್ನು ತಿನ್ನುತ್ತಾ ನಕ್ಕವರು, ಊರ ಹೆಸರಿನ ಕೌತುಕ ಸವಿಯುವ ಕೇಳುಗರು, ಸಂಗೀತವೆಂದರೆ ಸಂಭ್ರಮ ಎನ್ನುವವರು ಹೀಗೆ ಆಕಾಶವಾಣಿ ಸಮಾಜದ ಪ್ರತಿಯೊಬ್ಬರನ್ನೂ ಇಂದು ತಲುಪುತ್ತಿದೆ. ಸಾಹಿತ್ಯ, ಸಂಗೀತ, ಜಾನಪದ, ನಾಟಕ, ಕೃಷಿ, ವಿಜ್ಞಾನ, ಆರೋಗ್ಯಕ್ಕೆ ಸಂಬಂಧಿಸಿದಂತೆ ಮಹಿಳೆ, ಮಕ್ಕಳು, ಯುವಜನತೆಯನ್ನೂ ಒಳಗೊಂಡು ಕಾರ್ಯಕ್ರಮ ತಯಾರಾಗುತ್ತಿದೆ. ವಿಶೇಷವಾಗಿ ಕುವೆಂಪು, ಶಿವರಾಮ ಕಾರಂತ, ಪುತಿನ, ರಾಜ್‌ಕುಮಾರ್, ವಿಷ್ಣುವರ್ಧನ್, ಗೋಪಾಲಕೃಷ್ಣ ಅಡಿಗ ಸೇರಿದಂತೆ ಅನೇಕ ಗಣ್ಯರ ಕವನ, ಕಥಾ ವಾಚನ ಮತ್ತು ಸಂವಾದ ಕಾರ್ಯಕ್ರಮಗಳು ಇಂದಿಗೂ ಆಕಾಶವಾಣಿಯಲ್ಲಿ ಬಿತ್ತರಗೊಳ್ಳುತ್ತಿವೆ.
ಎರಡು ವರ್ಷಗಳ ಹಿಂದಷ್ಟೇ ಕನ್ನಡ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮುಕ್ತ ಪ್ರವೇಶವನ್ನು ಕಲ್ಪಿಸಲಾಗಿತ್ತು. ಮೈಸೂರು ಆಕಾಶವಾಣಿಯನ್ನು ಕಾಣಬಹುದೆಂಬ ಸುದ್ದಿ ಸಿಕ್ಕಿದ್ದೇ ತಡ, ಉತ್ಸಾಹದ ಒರತೆಯಂತಿರುವ ಸಾವಿರಾರು ಮಂದಿ ಶೋತೃಗಳು ಕೂಡಿದ್ದರು. ಈಗಲೂ ಗೂಗಲ್ ಮ್ಯಾಪ್‌ಗೆ ಸಿಗದ ಎಷ್ಟೋ ಹಳ್ಳಿಗಳಲ್ಲಿ ‘ಬಾನುಲಿ ಕೃಷಿ ಬೆಳಗು ಕಾರ್ಯಕ್ರಮ ನಡೆದಾಗ ಹರಿದುಬರುವ ಜನಸ್ತೋಮ ಕಂಡರೆ ಇಷ್ಟೊಂದು ಕೇಳುಗರಿದ್ದಾರಾ? ಎನಿಸುತ್ತದೆ.
ಬೆಳಿಗ್ಗೆ 5.53ರಿಂದ 11.10ರವರೆಗೆ ಪ್ರಸಾರ ಕಾರ್ಯವನ್ನು ಮೈಸೂರು ಆಕಾಶವಾಣಿ ವಿನೂತನವಾಗಿ ನಡೆಸುತ್ತಿದೆ. ‘ಶಿಕ್ಷಣ, ಮಾಹಿತಿ ಮತ್ತು ಮನರಂಜನೆ’ ತತ್ವಕ್ಕೆ ಬದ್ಧವಾಗಿ ಪ್ರತೀ ದಿನವೂ ಒಂದಿಲ್ಲೊಂದು ವಿಶೇಷ ಕಾರ್ಯಕ್ರಮವನ್ನು ಜನರಿಗಾಗಿ ನೀಡುತ್ತಿದೆ. ಇಂದಿನ ಬಹುಮಾಧ್ಯಮದ ಅಬ್ಬರಗಳ ನಡುವೆ ಸಮಾಜದ ಎಲ್ಲರನ್ನೂ ಒಳಗೊಳ್ಳುತ್ತಾ, ಸ್ಥಿತಪ್ರಜ್ಞತೆಯಿಂದ ಪ್ರಸಾರವನ್ನು ನಡೆಸುತ್ತಿದೆ. ಕೇಳು ಮಾಧ್ಯಮದ ಮಿತಿಗಳನ್ನು ಮೀರುತ್ತಾ ಆಕಾಶವಾಣಿ ಹೊಸ ಸಂಕ್ರಮಣಕ್ಕೆ ಅಣಿಯಾಗುತ್ತಿದೆ.
ಉಮೇಶ್ ಎಸ್.ಎಸ್.
ಮೈಸೂರು ಆಕಾಶವಾಣಿಯ ನಿಲಯ ನಿರ್ದೇಶಕರು, ಬಾನುಲಿ ನಾಟಕದ ನಿರ್ದೇಶನ ಮತ್ತು ನಿರ್ಮಾಣದಲ್ಲಿ ಪರಿಣತರು.
ಎನ್.ಕೇಶವಮೂರ್ತಿ
ಮೈಸೂರು ಆಕಾಶವಾಣಿಯ ಕಾರ್ಯಕ್ರಮ ಸಂಯೋಜಕರು, ಕೃಷಿ ರಂಗದ ಜೀವಾಳ ಇವರು.
ಜಿ.ಶಾಂತಕುಮಾರ್
ಮೈಸೂರು ಆಕಾಶವಾಣಿಯ ಪ್ರಸಾರ ನಿರ್ವಾಹಕ. ಪರಿಸರ ಸಂಬಂಧಿ ಕಾರ್ಯಕ್ರಮಗಳ ರೂವಾರಿ.
ಜಾಂಪಣ್ಣ ಆಶೀಹಾಳ್
ಮೈಸೂರು ಆಕಾಶವಾಣಿಯಲ್ಲಿ ಪ್ರಸಾರ ನಿರ್ವಾಹಕ. ‘ಸೈಕಲ್ ಸವಾರಿ -ಮಾತಿನ ಲಹರಿ’ ಇವರ ಜನಪ್ರಿಯ ಕಾರ್ಯಕ್ರಮ.
ದಿಗ್ವಿಜಯ್ ಬಿ.
ಮೈಸೂರು ಆಕಾಶವಾಣಿಯ ಪ್ರಸಾರ ನಿರ್ವಾಹಕ. ‘ಗೇಮ್ ಶೋ’ ವಿನೂತನ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ.
ತುಮಕೂರು ಬಿ.ರವಿಶಂಕರ್
ಮೈಸೂರು ಆಕಾಶವಾಣಿ ನಿಲಯದ ಮೃದಂಗ ಕಲಾವಿದ.
ಅಬ್ದುಲ್ ರಶೀದ್
ಮೈಸೂರು ಆಕಾಶವಾಣಿಯ ಸಹಾಯಕ ನಿರ್ದೇಶಕ. ಕನ್ನಡದ ಪ್ರಸಿದ್ಧ ಬರಹಗಾರರು ಕೂಡ. ಮೇಘಾಲಯದ ಶಿಲ್ಲಾಂಗ್, ಲಕ್ಷದ್ವೀಪದ ಕವರತ್ತಿ ಅಲ್ಲದೆ ರಾಜ್ಯದ ವಿವಿಧ ಆಕಾಶವಾಣಿ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಟಿ.ವಿ.ವಿದ್ಯಾಶಂಕರ್
ಪ್ರಸ್ತುತ ಮೈಸೂರು ಆಕಾಶವಾಣಿ ಕೇಂದ್ರದ ಸಹಾಯಕ ನಿರ್ದೇಶಕ.
ಬೇದ್ರೆ ಎನ್.ಮಂಜುನಾಥ್
ಮೈಸೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ. ಇವರ ವೃತ್ತಿ ಮಾರ್ಗದರ್ಶನ, ಆರೋಗ್ಯ ಕಾರ್ಯಕ್ರಮಗಳು ಶೋತೃಗಳ ಪ್ರಶಂಸೆಗೆ ಪಾತ್ರವಾಗಿವೆ.
ಪ್ರಭುಸ್ವಾಮಿ ಸಿ.ಮಳೀಮಠ್
ಮೈಸೂರು ಆಕಾಶವಾಣಿಯ ಹಿರಿಯ ಉದ್ವೇಷಕ, ಚಟ್ ಪಟ್ ಚುರುಮುರಿಯ ಖ್ಯಾತಿ ಇವರದು.
ಡಾ.ಮೈಸೂರು ಉಮೇಶ್
ಮೈಸೂರು ಆಕಾಶವಾಣಿಯ ಹಿರಿಯ ಉದ್ವೇಷಕ, ಜಾನಪದಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳು ಇವರ ಹೆಗ್ಗಳಿಕೆ.
ಹೆಚ್.ಎಲ್.ಶಿವಶಂಕರಸ್ವಾಮಿ
ಮೈಸೂರು ಆಕಾಶವಾಣಿ ನಿಲಯದ ಮೃದಂಗ ಕಲಾವಿದ. ಲಯ ಸಂಭ್ರಮ, ಸಂಗೀತ ಸಂಭ್ರಮ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುತ್ತಿದ್ದಾರೆ.
ಮಂಡ್ಯ: ಸಕ್ಕರೆ ನಾಡು ಮಂಡ್ಯ ನಗರಿಯಲ್ಲಿ ಮೂರು ದಿನಗಳ ಕಾಲ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು,…
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ,…
ಮಂಡ್ಯ: ರಾಜ್ಯದಲ್ಲಿ ಅತಿಭಾಷೆ ಹೆಚ್ಚು ಕನ್ನಡ ಭಾಷೆ ಮಾತನಾಡುವ ಸ್ಥಳ ಮಂಡ್ಯ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದು, ಮೂರು ದಿನಗಳ ಕಾಲ…
ಬೆಳಗಾವಿ: ವಿಧಾನ ಪರಿಷತ್ ಶಾಸಕ ಸಿ.ಟಿ.ರವಿ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಇಂದು ಮಧ್ಯಾಹ್ನ 3 ಗಂಟೆಗೆ ಮುಂದೂಡಲಾಗಿದೆ ಎಂದು…
ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಅದ್ಧೂರಿಯಾಗಿ ನೆರವೇರಿದ್ದು, ಇದರಲ್ಲಿ ಸುಮಾರು 157 ಕಲಾತಂಡಗಳು ಭಾಗವಹಿಸಿ ಸಮ್ಮೇಳನಕ್ಕೆ ಮೆರಗು…
ಮಂಡ್ಯ: ಸಾಮಾನ್ಯವಾಗಿ ಯಾವ ಹೆಣ್ಣುಮಕ್ಕಳೂ ಇಂತಹ ಆರೋಪಗಳ ಬಗ್ಗೆ ಸುಳ್ಳು ದೂರು ಕೊಡಲು ಸಾಧ್ಯವಿಲ್ಲ. ಅವಾಚ್ಯ ಪದ ಬಳಕೆ…