Andolana originals

ಆಲಕೆರೆ ಗ್ರಾಮದಲ್ಲಿ ಮುಯ್ಯಾಳು ಸಂಸ್ಕೃತಿ ಉತ್ಸವ

ಭತ್ತ ನಾಟಿ ಮಾಡಿದ ಡಿಸಿ, ಎಸ್ಪಿ, ನಿಶ್ಚಲಾನಂದನಾಥ ಶ್ರೀ 

ಮಂಡ್ಯ: ಜಿಲ್ಲಾ ಅಧಿಕಾರಿ ತಲೆಗೆ ಟವಲ್ ಸುತ್ತಿಕೊಂಡು ಮಣೆ ಹೊಡೆದರೆ, ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಅವರು ಹಲುಬೆ ಹೊಡೆದು ಭತ್ತದ ಪೈರು ಎಳೆದರು. ಯುವಕರೂ ನಾಚುವಂತೆ ಅರ್ಧ ಗಂಟೆಗೂ ಹೆಚ್ಚು ಕಾಲ ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಭತ್ತ ನಾಟಿ ಮಾಡಿದರು.

ತಾಲ್ಲೂಕಿನ ಆಲಕೆರೆ ಗ್ರಾಮದಲ್ಲಿ ರೈತರ ಶಾಲೆಯಿಂದ ಆಯೋಜಿಸಿದ್ದ ‘ಮುಯ್ಯಾಳು ಸಂಸ್ಕೃತಿ ಉತ್ಸವ’ ಹೊಸತನಕ್ಕೆ ನಾಂದಿಹಾಡಿತು. ಅಲ್ಲದೆ ಸ್ವಾಮೀಜಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು, ಐಟಿ ಉದ್ಯೋಗಿಗಳು ಇಡೀ ದಿನ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದು ಯುವಪೀಳಿಗೆಗೆ ಸ್ಛೂರ್ತಿ ತುಂಬಿತು.

ಕೃಷಿ ಚಟುವಟಿಕೆಗೆ ಕೂಲಿಯಾಳುಗಳ ಸಮಸ್ಯೆ ತಲೆದೋರಿದೆ. ಇದರಿಂದಾಗಿ ನಾಟಿ ಮಾಡಲು ರೈತರು ಪರದಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ರೈತರ ಶಾಲೆಯಿಂದ ‘ನೆಲದ ನಂಟು’ ಶೀರ್ಷಿಕೆಯಡಿ ಭತ್ತ ನಾಟಿ ಮಾಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ವರ್ಷ ಪೂರ್ತಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ರೈತರಿಗೆ ಸಹಕಾರ ನೀಡುವ ಉದ್ದೇಶದಿಂದ ಮುಯ್ಯಾಳು ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಅಽಕ್ಷಕ, ಸ್ವಾಮೀಜಿ ಹಾಗೂ ಕೃಷಿ ವಿಶ್ವವಿದ್ಯಾನಿಲಯದ ೫೦ ವಿದ್ಯಾರ್ಥಿಗಳು, ಕನ್ನಡ ಮನಸ್ಸುಗಳು ಕರ್ನಾಟಕ ತಂಡ, ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್, ಕೆಂಪೇಗೌಡ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘ, ಗ್ರಾಮಸ್ಥರು ನಾಟಿ ಹಾಕುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮುಯ್ಯಾಳು ಸಂಸ್ಕೃತಿ ಉತ್ಸವದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿತ್ತು.

ಅದರಂತೆ ಪಕ್ಕಾ ಗ್ರಾಮೀಣ ಶೈಲಿಯ ಬಟ್ಟೆ ಧರಿಸಿ ನಾಟಿಯಲ್ಲಿ ಪಾಲ್ಗೊಂಡರು. ಸುಮಾರು ಮೂರು ಎಕರೆ ಜಮೀನಿನಲ್ಲಿ ಭತ್ತ ನಾಟಿ ಮಾಡುವ ಕಾರ್ಯ ಯಶಸ್ವಿಯಾಗಿ ನಡೆಯಿತು. ಆಗಮಿಸಿದ್ದವರಿಗೆ ಸೊಪ್ಪಿನ ಸಾರು, ಎರಡು ರೀತಿ ಪಲ್ಯ, ಪಾಯಸ, ಅನ್ನ ತಯಾರಿಸಲಾಗಿತ್ತು.

ವಿಭಿನ್ನ ಪ್ರಯತ್ನಕ್ಕೆ ಮೆಚ್ಚುಗೆ : ರೈತರಿಗೆ ಕೃಷಿಯ ಬಗ್ಗೆ ಉಪನ್ಯಾಸ, ಮಾಹಿತಿ ನೀಡುವ ಸದುದ್ದೇಶದೊಂದಿಗೆ ಕೆಂಪೇಗೌಡ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘ ತೆರೆದಿರುವ ರೈತರ ಶಾಲೆ ಬಗ್ಗೆ ಗಣ್ಯರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲೆಯಿಂದ ನಡೆಸಲಾಗುತ್ತಿರುವ ವಿಭಿನ್ನ ಕಾರ್ಯಕ್ರಮವನ್ನು ಮುಂದುವರಿಸಿಕೊಂಡು ಹೋಗಲು ಸಲಹೆ ನೀಡಿದರು.

ಯಾಚೇನಹಳ್ಳಿ ರಾಮಕೃಷ್ಣ ಆಶ್ರಮದ ನಾದಾನಂದನಾಥ ಸ್ವಾಮೀಜಿ, ಟ್ರಸ್ಟ್‌ನ ಸತ್ಯಮೂರ್ತಿ, ಆರ್.ಜಗದೀಶ್, ಎಂ.ಎನ್. ನವೀನ್‌ಕುಮಾರ್, ಚಂದ್ರಶೇಖರ್, ಧರ್ಮರಾಜ್, ನಂದೀಶ್, ಎ.ಎಸ್.ಚಂದ್ರು, ಮಹೇಶ್, ಚೇತನ್, ಪ್ರದೀಪ್‌ಕುಮಾರ್, ಮಂಜು, ಎ.ಎಸ್.ಚಂದ್ರಶೇಖರ್ ಇತರರು ಭಾಗವಹಿಸಿದ್ದರು.

” ಎರಡು ತಿಂಗಳ ಹಿಂದೆ ಶಾಲೆ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದೆ. ಎಲ್ಲರೂ ಸಹಕಾರ ನೀಡಿದರೆ ಭವಿಷ್ಯದಲ್ಲಿ ದೇಶಕ್ಕೆ ರೈತರ ಶಾಲೆ ಮಾದರಿಯಾಗಲಿದೆ. ಏನೇ ಶುರುವಾದರೂ ಮಂಡ್ಯದಿಂದಲೇ ಆಗುತ್ತದೆ. ರೈತರ ಶಾಲೆ ದೇಶಕ್ಕೆ ಮಾದರಿಯಾಗಲಿ.”

-ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ

” ನಾನು ಕೂಡ ಕೃಷಿ ಕುಟುಂಬದಿಂದ ಬಂದವನು. ಕಬ್ಬು ಕಟಾವು ಮಾಡುವ, ಲಾರಿಗೆ ಕಬ್ಬು ತುಂಬುವ ಕೆಲಸ ಮಾಡಿದ್ದೇನೆ. ರೈತರ ಶಾಲೆ ಮಾದರಿಯಾಗಿದೆ. ಪ್ರತಿ ಗ್ರಾಮದಲ್ಲಿಯೂ ಇಂತಹ ಶಾಲೆ ಪ್ರಾರಂಭವಾಗಲಿ. ಇದರಿಂದ ರೈತರಿಗೆ ಉಪಯೋಗವಾಗಲಿದೆ. ರೈತರು ಚೆನ್ನಾಗಿ ದ್ದರೆ ಇಡೀ ದೇಶವೇ ಚೆನ್ನಾಗಿರುತ್ತದೆ.”

-ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

” ಮುಯ್ಯಾಳು ಸಂಸ್ಕೃತಿ ಉತ್ಸವ ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿದೆ. ಅಧಿಕಾರಿಗಳು, ಸ್ವಾಮೀಜಿಗಳು, ಐಟಿ ಉದ್ಯೋಗಿಗಳು ಉತ್ಸಾಹದಿಂದ ಪಾಲ್ಗೊಂಡರು. ವಿಶೇಷ ಪ್ರಯತ್ನಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿರುವುದು ಖುಷಿ ತಂದಿದೆ. ಇದು ಇನ್ನಷ್ಟು ಚಟುವಟಿಕೆ ಆಯೋಜಿಸಲು ಪ್ರೋತ್ಸಾಹ ಸಿಕ್ಕಂತಾಗಿದೆ.”

 – ಪ್ರೊ.ಸತ್ಯಮೂರ್ತಿ, ಮುಖ್ಯಸ್ಥರು, ರೈತರ ಶಾಲೆ

” ರೈತರ ಶಾಲೆ ದೇಶದಲ್ಲಿಯೇ ಮೊದಲು:  ರೈತರಿಗಾಗಿ ತೆರೆದ ದೇಶದಲ್ಲಿಯೇ ಮೊದಲ ಶಾಲೆ ನಮ್ಮ ಜಿಲ್ಲೆಯಲ್ಲಿದೆ. ಇದು ಕರ್ನಾಟಕಕ್ಕೆ ಕೀರ್ತಿಯಂತಾಗಿದೆ. ಶಾಲೆಯಿಂದ ವಿಭಿನ್ನ ಚಟುವಟಿಕೆ ಮಾಡಲಾಗುತ್ತಿದೆ. ಅವುಗಳನ್ನು ಮುಂದುವರೆಸಿಕೊಂಡು ಹೋಗಬೇಕು.”

-ಡಾ.ಕುಮಾರ, ಜಿಲ್ಲಾಧಿಕಾರಿ

ಮಾದರಿಯಾದ ಐಟಿ ಉದ್ಯೋಗಿಗಳು:   ‘ಮುಯ್ಯಾಳು ಸಂಸ್ಕೃತಿ ಉತ್ಸವ’ದಲ್ಲಿ ಭಾಗವಹಿಸಬೇಕೆಂದು ನೀಡಿದ ಆಹ್ವಾನಕ್ಕೆ ಪ್ರೀತಿಯಿಂದ ಆಗಮಿಸಿದ್ದ ೫೦ಕ್ಕೂ ಹೆಚ್ಚು ಐಟಿ ಉದ್ಯೋಗಿಗಳು ಗ್ರಾಮದ ರಸ್ತೆ ಬದಿಯಲ್ಲಿ ೨೫೦ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಮಾದರಿಯಾದರು. ಜತೆಗೆ ನಾಟಿಯಲ್ಲಿ ಖುಷಿಯಿಂದ ಪಾಲ್ಗೊಂಡರು. ಸಂಜೆವರೆಗೂ ಜಮೀನಿನಲ್ಲಿ ಕೆಲಸ ಮಾಡಿ ನಂತರ ಬೆಂಗಳೂರಿಗೆ ಹಿಂದಿರುಗಿದರು.

ಆಂದೋಲನ ಡೆಸ್ಕ್

Recent Posts

ಬಿಳಿಗಿರಿರಂಗನ ಬೆಟ್ಟದಲ್ಲಿ ಹುಂಡಿ ಎಣಿಕೆ: 18 ಲಕ್ಷದ 69 ಸಾವಿರ ರೂ. ಸಂಗ್ರಹ

ಯಳಂದೂರು: ಚಾಮರಾಜನಗರ ಜಿಲ್ಲೆ ಯಳಂದೂರು ತಾಲ್ಲೂಕಿನ ಪ್ರಸಿದ್ಧ ಯಾತ್ರಾ ಸ್ಥಳ ಬಿಳಿಗಿರಿರಂಗನ ಬೆಟ್ಟದ ಶ್ರೀ ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಗುರುವಾರ…

12 hours ago

ಎಥೆನಾಲ್‌ ಮಿಶ್ರಣ: 63 ಸ್ಯಾಂಪಲ್‌ ಪರೀಕ್ಷೆಗೆ ಕಳಿಸಿದರೂ ಫಲಿತಾಂಶ ಕೊಟ್ಟಿಲ್ಲ ಎಂದ ರಿಜ್ವಾನ್‌ ಅರ್ಷದ್‌!

ಬೆಂಗಳೂರು: ಪೆಟ್ರೋಲ್‌ನಲ್ಲಿ ಮಿತಿ ಮೀರಿದ ಎಥೆನಾಲ್‌ ಮಿಶ್ರಣದ ಆರೋಪಕ್ಕೆ ಸಂಬಂಧಿಸಿದಂತೆ ಪರೀಕ್ಷೆಗೆ ಕಳುಹಿಸಿದ್ದ 63 ಸ್ಯಾಂಪಲ್‌ಗಳ ಫಲಿತಾಂಶ ನೀಡಿಲ್ಲ ಎಂದು…

12 hours ago

ಬಿಳಿಗಿರಿರಂಗನ ಬೆಟ್ಟದ ವರದತ್ತಿ ಮಂಟಪೋತ್ಸವ: ವರದೇ ನಾಯಕರ ಕುಲಪರಂಪರೆಯ ಜೀವಂತ ಸಾಕ್ಷಿ

ಯಳಂದೂರು: ಚಾಮರಾಜನಗರ ಜಿಲ್ಲೆಯ ಪವಿತ್ರ ಯಾತ್ರಾ ಕ್ಷೇತ್ರ ಬಿಳಿಗಿರಿರಂಗನ ಬೆಟ್ಟದ ಶ್ರೀ ತಿರುವೆಂಗಳನಾಥ ಸ್ವಾಮಿ ದೇವಾಲಯಕ್ಕೂ ಯಳಂದೂರು ಮೂಲದ ವರದೇ…

13 hours ago

ಅಡುಗೆ ಎಣ್ಣೆ ಮರುಬಳಕೆಗೆ ಕಡಿವಾಣ: ಮೂರು ತಿಂಗಳಲ್ಲಿ ಹೊಸ ಆ್ಯಪ್‌ ಎಂದ ಸಚಿವ ಯು.ಟಿ. ಖಾದರ್‌!

ಬೆಂಗಳೂರು: ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿ ಬಳಸಿದ ಅಡುಗೆ ಎಣ್ಣೆಯನ್ನು ಮತ್ತೆ ಬಳಸುವುದಕ್ಕೆ ಕಡಿವಾಣ ಹಾಕಲು ಹೊಸ ಮೊಬೈಲ್‌ ಆ್ಯಪ್‌ ತರಲು ಯೋಜಿಸಲಾಗಿದೆ.…

13 hours ago

ಬಾಳೆಗೊನೆಯಲ್ಲಿ ಡ್ರಗ್ಸ್‌ ಸಾಗಾಟ ಪ್ರಕರಣ: ನಂಜನಗೂಡು ನಂಟಿನ ಬಗ್ಗೆ ಎಸ್ಪಿ ಸ್ಪಷ್ಟನೆ

ಮೈಸೂರು: ಬಾಳೆಗೊನೆ ಮೂಲಕ ಡ್ರಗ್ಸ್‌ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸ್ಪಷ್ಟನೆ ನೀಡಿದ್ದಾರೆ. ಮೈಸೂರಿನಲ್ಲಿ…

15 hours ago

ಬಿಜೆಪಿಯವರು ರೀಲ್ಸ್‌ ರಾಜರು’: ತೇಜಸ್ವಿ ಸೂರ್ಯ ವಿರುದ್ಧ ಪ್ರಿಯಾಂಕ್‌ ಖರ್ಗೆ ಕಿಡಿ!

ಬೆಂಗಳೂರು:  ‘ಬಿಜೆಪಿಯವರು ರೀಲ್ಸ್‌ ರಾಜರು. ಬೆಂಗಳೂರಿಗೆ ಹೊಸ ಯೋಜನೆ ತಂದಿದ್ದಾರಾ?’ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದ್ದಾರೆ. ಮೆಟ್ರೋ ವಿಚಾರದಲ್ಲಿ…

16 hours ago