Andolana originals

ಶಾಸಕರ ಪತ್ರಾಸ್ತ್ರ ; ಸಿಎಂಗೆ ಬಲ

ಆರ್.ಟಿ.ವಿಠ್ಠಲಮೂರ್ತಿ

ಬೆಂಗಳೂರು: ರಾಜ್ಯ ಸಚಿವ ಸಂಪುಟವನ್ನು ಪುನರ್ರಚಿಸಬೇಕು, ಮೊದಲ ಬಾರಿ ಶಾಸಕರಾಗಿರುವವರಿಗೆ ಸಂಪುಟದಲ್ಲಿ ಐದು ಸ್ಥಾನಗಳನ್ನು ನೀಡಬೇಕು, ಕೆಲಸ ಮಾಡದ ಮಂತ್ರಿಗಳನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಆಗ್ರಹಿಸಿ ವರಿಷ್ಠರಿಗೆ ೩೧ ಶಾಸಕರು ಪತ್ರ ಬರೆದಿರುವುದು ಇದೀಗ ಕಾಂಗ್ರೆಸ್ ಪಾಳೆಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಹೈಕಮಾಂಡ್‌ಗೆ ಹೊಸ ಶಾಸಕರು ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ ಗರಿಗೆದರಿ ಕುಳಿತಿದ್ದರೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪಾಳೆಯ ಬೇಗುದಿಗೆ ಸಿಲುಕಿದೆ.ರಾಜ್ಯ ಕಾಂಗ್ರೆಸ್‌ನಲ್ಲಿ ಮೊದಲ ಬಾರಿ ಆಯ್ಕೆಯಾಗಿ ಬಂದಿರುವ ೩೮ ಶಾಸಕರಿದ್ದು, ಈ ಶಾಸಕರು ತಮ್ಮ ಬೇಡಿಕೆಗಳನ್ನು ಮುಂದಿಟ್ಟು ವರಿಷ್ಠರಿಗೆ ಬರೆದಿರುವ ಪತ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಕ್ತಿ ತುಂಬಿದೆ ಎಂದು ರಾಜಕೀಯ ವಲಯಗಳು ಬಣ್ಣಿಸುತ್ತಿದ್ದು, ಕಳೆದ ನವೆಂಬರ್ ತಿಂಗಳಿನಿಂದ ಸಿದ್ದರಾಮಯ್ಯನವರು ಇದೇ ಬೇಡಿಕೆಯನ್ನು ವರಿಷ್ಠರ ಮುಂದಿಟ್ಟಿದ್ದರು. ಈಗ ಹೊಸ ಶಾಸಕರ ಬೇಡಿಕೆ ಕೂಡ ಅವರ ಮಾತಿಗೆ ಪುಷ್ಟಿ ನೀಡಿದೆ ಎಂಬುದು ಸಿದ್ಧರಾಮಯ್ಯ ಬಣದ ವಾದ.

ರಾಜ್ಯ ಸರ್ಕಾರಕ್ಕೆ ಎರಡೂವರೆ ವರ್ಷ ಭರ್ತಿಯಾದ ಹಿನ್ನೆಲೆಯಲ್ಲಿ ಸಚಿವ ಸಂಪುಟವನ್ನು ಪುನರ್ರಚಿಸಲು ನಿರ್ಧರಿಸಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಈ ಕೆಲಸಕ್ಕೆ ಒಪ್ಪಿಗೆ ನೀಡುವಂತೆ ರಾಹುಲ್ ಗಾಂಧಿಯವರನ್ನು ಕೋರಿದ್ದರು.

ಸಿದ್ದರಾಮಯ್ಯನವರ ಈ ಪ್ರಸ್ತಾಪಕ್ಕೆ ರಾಹುಲ್ ಗಾಂಧಿ ಒಪ್ಪಿಗೆ ನೀಡಿದರೂ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಧಿಕಾರ ಹಂಚಿಕೆಯ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನ ಸಂಪುಟ ಪುನರ್ರಚನೆಗೆ ಅವಕಾಶ ನೀಡಬಾರದು ಎಂದು ಪಟ್ಟು ಹಿಡಿದು ವರಿಷ್ಠರನ್ನು ಒಪ್ಪಿಸಿದ್ದರು. ಹೀಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಒತ್ತಡದ ಹಿನ್ನೆಲೆಯಲ್ಲಿ ಸಂಪುಟ ಪುನರ್ರಚನೆ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ರಾಜ್ಯ ಕಾಂಗ್ರೆಸ್‌ನಲ್ಲಿ ಭಾರೀ ಅಸಮಾಧಾನವನ್ನು ಮೂಡಿಸಿದ್ದು, ಅಧಿಕಾರ ಹಂಚಿಕೆಯ ಮಾತನ್ನು ವರಿಷ್ಠರು ಇತ್ಯರ್ಥಪಡಿಸಬೇಕು. ಆದರೆ ಅದನ್ನು  ಮಾಡುವುದು ಬಿಟ್ಟು ಸಂಪುಟ ಪುನರ್ರಚನೆಗೆ ಬ್ರೇಕ್ ಹಾಕಿದರೆ ಏನರ್ಥ ಎಂದು ಹಿರಿಯ ನಾಯಕರು, ಶಾಸಕರು ಪ್ರಶ್ನಿಸತೊಡಗಿದ್ದರು.

ಅಧಿಕಾರ ಹಂಚಿಕೆಯ ವಿಷಯ ಹೈಕಮಾಂಡ್ ಮಟ್ಟದಲ್ಲಿ ತೀರ್ಮಾನವಾಗಲಿ. ಆದರೆ ಅದನ್ನು ಒಂದು ಕಡೆಗಿಟ್ಟು ಸಂಪುಟ ಪುನರ್ರಚನೆ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡರೆ ದಕ್ಷ ಮಂತ್ರಿ ಮಂಡಲ ರಚನೆಗೆ ದಾರಿಯಾಗುತ್ತಿತ್ತು ಎಂದು ಈ ನಾಯಕರು, ಶಾಸಕರು ಅಭಿಪ್ರಾಯಿಸಿದ್ದರು.

ಇದೀಗ ಮೊಟ್ಟ ಮೊದಲ ಬಾರಿ ಆಯ್ಕೆಯಾಗಿ ಬಂದಿರುವ ಮೂವತ್ತೊಂದು ಮಂದಿ ಶಾಸಕರು ಸಂಪುಟ ಪುನರ್ರಚನೆಗೆ ಒತ್ತಾಯಿಸಿ ವರಿಷ್ಠರಿಗೆ ಪತ್ರ ಬರೆದಿರುವುದು ಸಿದ್ಧರಾಮಯ್ಯ ಅವರ ಪಾಳೆಯಕ್ಕೆ ಹರ್ಷ ತಂದಿದ್ದು, ಇಂತಹ ಬೇಡಿಕೆಗೆ ಪೂರಕವಾಗಿ ವರಿಷ್ಠರ ಜತೆ ಸಿದ್ಧರಾಮಯ್ಯ ಚರ್ಚಿಸಿದರೆ ಒಪ್ಪಿಗೆ ಸಿಗುತ್ತದೆ, ನನೆಗುದಿಗೆ ಬಿದ್ದಿರುವ ಸಂಪುಟ ಪುನರ್ರಚನೆ ಪ್ರಕ್ರಿಯೆಯೂ ಪೂರ್ಣಗೊಂಡಂತಾಗುತ್ತದೆ ಎನ್ನತೊಡಗಿದ್ದಾರೆ.

ಮೂಲಗಳ ಪ್ರಕಾರ,ಬಜೆಟ್ ಅಧಿವೇಶನದ ನಂತರ ದಿಲ್ಲಿಗೆ ತೆರಳಲಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸಂಪುಟ ಪುನರ್ರಚನೆ  ಪ್ರಕ್ರಿಯೆಗೆ ಅನುಮತಿ ಪಡೆಯಲಿದ್ದು, ಏಪ್ರಿಲ್ ತಿಂಗಳಲ್ಲಿ ಸಚಿವ ಸಂಪುಟ ಪುನರ್ರಚನೆಗೆ ಕೈ ಹಾಕಲಿದ್ದಾರೆ.

ಇದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಬಣದ ವಿಶ್ವಾಸವಾದರೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬಣ, ಮೂವತ್ತೊಂದು ಮಂದಿ ಶಾಸಕರ ಪತ್ರದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತದೆ. ಮೊಟ್ಟ ಮೊದಲ ಬಾರಿ ಆಯ್ಕೆಯಾಗಿ ಬಂದಿರುವ ಮೂವತ್ತೊಂದು ಮಂದಿ ಶಾಸಕರು ಸಂಪುಟ ಪುನರ್ರಚನೆಗೆ ಒತ್ತಾಯಿಸಿರುವುದು, ಸಂಪುಟದಲ್ಲಿ ಹೊಸ ಶಾಸಕರಿಗೆ ಐದು ಸ್ಥಾನಗಳನ್ನು ನೀಡಬೇಕು ಎಂದು ಕೋರಿರುವುದು, ಅಸಮರ್ಥರನ್ನು ಸಂಪುಟದಿಂದ ಕೈ ಬಿಡುವಂತೆ ಒತ್ತಾಯಿಸಿರುವುದು ನಿಜ. ಆದರೆ ಹೀಗೆ ಅವರು ಬರೆದಿರುವ ಪತ್ರ ಹೊಸದಲ್ಲ. ಬದಲಿಗೆ ಒಂದು ವರ್ಷದ ಹಿಂದೆ ಬರೆದಿದ್ದು ಎಂಬುದು ಡಿ.ಕೆ.ಶಿವಕುಮಾರ್ ಬಣದ ವಾದ.

ಪತ್ರಕ್ಕೆ ಸಹಿ ಹಾಕಿದವರಲ್ಲಿ ಡಿ.ಕೆ.ಶಿವಕುಮಾರ್ ಅವರ ಕಟ್ಟಾ ಬೆಂಬಲಿಗರಾದ ರಾಮನಗರ ಶಾಸಕ ಇಕ್ಪಾಲ್ ಹುಸೇನ್, ಚನ್ನಗಿರಿಯ ಬಸವರಾಜ ಶಿವಗಂಗಾ ಅವರು ಸೇರಿದಂತೆ ಹಲವರಿದ್ದಾರೆ. ಗಮನಿಸಬೇಕಾದ ಸಂಗತಿ ಎಂದರೆ ಇವರೆಲ್ಲ ಡಿ.ಕೆ.ಶಿವಕುಮಾರ್ ಬೇಗ ಮುಖ್ಯಮಂತ್ರಿಯಾಗಲಿ ಎನ್ನುತ್ತಿದ್ದಾರೆ. ಹೀಗೆ ಬಹಿರಂಗ ಹೇಳಿಕೆಗಳನ್ನು ನೀಡುತ್ತಿರುವ ಇವರು ಈಗಿರುವ ಸ್ಥಿತಿಯಲ್ಲಿಯೇ ಸಚಿವ ಸಂಪುಟ ಪುನರ್ರಚನೆಯಾಗಬೇಕು ಎಂದು ಹೇಳಲು ಸಾಧ್ಯವೇ ಎಂದು ಡಿ.ಕೆ.ಶಿವಕುಮಾರ್ ಅವರ ಬಣ ಪ್ರತಿಪಾದಿಸುತ್ತಿದೆ.

ಹೀಗೆ ಮೊಟ್ಟ ಮೊದಲ ಬಾರಿ ಆಯ್ಕೆಯಾಗಿರುವ ೩೮ ಮಂದಿ ಶಾಸಕರು ಕಾಂಗ್ರೆಸ್ ಹೈಕಮಾಂಡ್‌ಗೆ ಬರೆದಿರುವ ಪತ್ರ ಬರೆದಿರುವುದು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಬಣದಲ್ಲಿ ಭಿನ್ನ ಭಿನ್ನ ಅಭಿಪ್ರಾಯಗಳನ್ನು ಮೂಡಿಸಿದ್ದು, ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ

ಸಿಎಂ ಬದಲಾವಣೆ ಮಾಹಿತಿ ಎಚ್‌ಸಿಎಂಗೆ ಇದೆ: ಡಿಕೆಶಿ ವ್ಯಂಗ್ಯ

ಬೆಂಗಳೂರು: ಹೈಕಮಾಂಡ್‌ನವರು ಮುಖ್ಯ ಮಂತ್ರಿಯನ್ನು ಬದಲಾವಣೆ ಮಾಡುತ್ತಾರೆ ಎಂಬ ಮಾಹಿತಿ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಅವರಿಗೆ ಮಾಹಿತಿ ಇರಬಹುದು. ಅದಕ್ಕಾಗಿ ದಲಿತರಿಗೆ ಅವಕಾಶ ನೀಡಲಿ ಎಂದು ಹೇಳಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ನನಗಂತೂ ಮಾಹಿತಿ ಇಲ್ಲ. ರಾಜ್ಯದಲ್ಲಿ ನಾಯಕತ್ವ ವಿಚಾರವಾಗಿ ಬೇರೆ ಯಾರೂ ಮಾತನಾಡಿಲ್ಲ. ಮಹದೇವಪ್ಪ ಮಾತ್ರ ಮಾತನಾಡಿದ್ದಾರೆ. ಗೊಂದಲದ ಹೇಳಿಕೆ ನೀಡುವ ಸಚಿವರು ಮತ್ತು ಶಾಸಕರನ್ನು ನಿಯಂತ್ರಿಸಬೇಕಿರುವುದು ಶಾಸಕಾಂಗ ಪಕ್ಷದ ನಾಯಕರಾಗಿರುವ ಮುಖ್ಯಮಂತ್ರಿಯವರ ಜವಾಬ್ದಾರಿ. ಪಕ್ಷದ ಅಧ್ಯಕ್ಷ ನಾಗಿ ನಾನು ಹೈಕಮಾಂಡ್‌ಗೆ ವರದಿ ನೀಡುವ ಕೆಲಸವನ್ನು ಮಾಡುತ್ತಿದ್ದೇನೆ ಎಂದರು.

 

 

 

ಆಂದೋಲನ ಡೆಸ್ಕ್

Recent Posts

ಮೊದಲ ಬಾರಿ ಗೆದ್ದವರು ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ: ಶಾಸಕ ಕೆ.ಹರೀಶ್‌ ಗೌಡ

ಮೈಸೂರು: ಮೊದಲ ಬಾರಿ ಗೆದ್ದವರು ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ ಎಂದು ಶಾಸಕ ಕೆ.ಹರೀಶ್‌ ಗೌಡ ಹೇಳಿದ್ದಾರೆ. ಈ ಕುರಿತು…

2 hours ago

ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ವಿಫಲರಾಗಿದ್ದೇವೆ: ಶಾಸಕ ತನ್ವೀರ್‌ ಸೇಠ್‌

ಮೈಸೂರು: ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ವಿಫಲರಾಗಿದ್ದೇವೆ ಎಂದು ಶಾಸಕ ತನ್ವೀರ್‌ ಸೇಠ್‌ ಹೇಳಿದ್ದಾರೆ. ಈ ಕುರಿತು ಮಾತನಾಡಿದ ಅವರು, ಗ್ಯಾರಂಟಿ…

2 hours ago

ಕಾಂಗ್ರೆಸ್‌ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ: ಶಾಸಕ ತನ್ವೀರ್‌ ಸೇಠ್‌

ಮೈಸೂರು: ಅಧಿಕಾರ ಹಸ್ತಾಂತರ ವಿಚಾರದಲ್ಲಿ ರಾಜ್ಯದಲ್ಲಿ ಗೊಂದಲವಿದೆ ಎಂದು ಶಾಸಕ ತನ್ವೀರ್‌ ಸೇಠ್‌ ಹೇಳಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ…

2 hours ago

ಅಜ್ಞಾತ ಸ್ಥಳದಿಂದ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ ಮಲ್ಲಿಕಾರ್ಜುನ ಮುತ್ಯಾ

ಯಾದಗಿರಿ: ಪೋಕ್ಸೋ ಪ್ರಕರಣ ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿರುವ ಸ್ವಯಂ ಘೋಷಿತ ದೇವಮಾನವ ಮಲ್ಲಿಕಾರ್ಜುನ ಮುತ್ಯಾ ಅಜ್ಞಾತ ಸ್ಥಳದಿಂದ ವಿಡಿಯೋ ಹೇಳಿಕೆ ಬಿಡುಗಡೆ…

2 hours ago

ಟಿ.ನರಸೀಪುರ ತಾಲ್ಲೂಕಿನಲ್ಲಿ ಚಿರತೆಗಳ ಹಾವಳಿ: ಭಯಭೀತರಾದ ಜನತೆ

ಟಿ.ನರಸೀಪುರ: ತಾಲ್ಲೂಕಿನಲ್ಲಿ ಚಿರತೆಗಳ ಹಾವಳಿ ಮಿತಿಮೀರಿದ್ದು, ಜನತೆ ಭಯಭೀತರಾಗಿದ್ದಾರೆ. ತಾಲ್ಲೂಕಿನ ಎಸ್.ಕೆಬ್ಬೆಹುಂಡಿ, ಕನ್ನಾಯಕನಹಳ್ಳಿ ಗ್ರಾಮದ ಮಧ್ಯೆ ಚಿರತೆ ಪ್ರತ್ಯಕ್ಷವಾಗಿದ್ದು, ಈ…

2 hours ago

ರಾಜಧಾನಿಯ ಮಾಲಿನ್ಯ ನಿಯಂತ್ರಣಕ್ಕೆ ನಿರ್ದಿಷ್ಟ ಮಾನದಂಡ- ಪರಿಸರ ಸಚಿವ ಈಶ್ವರ್‌ ಖಂಡ್ರೆ

ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಯಂತೆ ಬೆಂಗಳೂರು ಸಹ ಮತ್ತೊಂದು ಗ್ಯಾಸ್ ಛೇಂಬರ್ ಆಗದಂತೆ ಕ್ರಮ ವಹಿಸಲು ಶೀಘ್ರವೇ ನಗರದ ಎಲ್ಲ…

2 hours ago