ನಂಜನಗೂಡು: ಶಾಸಕ ದರ್ಶನ್ ಧ್ರುವನಾರಾ ಯಣ ಅವರು ನಗರದ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿಗಳ ಬೆವರಿಳಿಸಿದ ಘಟನೆ ಆಸ್ಪತ್ರೆಯಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿಯ ಪ್ರಥಮ ವಾರ್ಷಿಕ ಸಭೆಯಲ್ಲಿ ನಡೆಯಿತು.
ತಾಲ್ಲೂಕು ಆಸ್ಪತ್ರೆಯಲ್ಲಿ ಬುಧವಾರ ನಡೆದ ಆರೋಗ್ಯ ರಕ್ಷಾ ಸಮಿತಿಯ ಪ್ರಥಮ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕರು, ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಶಿವಪ್ರಸಾದ ಅವರು ೨೦೨೩-೨೪ನೇ ಸಾಲಿನ ಆಯವ್ಯಯಗಳ ವರದಿಯನ್ನು ಮಂಡಿಸಿದಾಗ ಅದನ್ನು ಪರಿಶೀಲನೆಗೆ ಕೈಗೆತ್ತಿಕೊಂಡು ಕೆಂಡಾಮಂಡಲರಾಗಿ ಸಭೆ ನಡೆಸುವ ರೀತಿ ಇದಲ್ಲ ಎಂದರು.
ಈ ಸಭೆಗೆ ಎಂಟು ಜನ ನಾಮನಿರ್ದೇಶಿತ ಸದಸ್ಯರಿದ್ದಾರೆ. ಅವರು ಹಾಗೂ ತಮಗೆ ಈ ಅಂದಾಜು ವೆಚ್ಚಗಳ ಆಮೂಲಾಗ್ರ ಮಾಹಿತಿಯನ್ನು ಮೊದಲೇ ನೀಡಿ ನಂತರ ವಾರ್ಷಿಕ ಸಭೆ ಕರೆಯಬೇಕಿತ್ತು. ಆದರೆ ಇದಾಗಿಲ್ಲ, ಯಾವ ಸದಸ್ಯರಿಗೂ ಮಾಹಿತಿ ನೀಡಿಲ್ಲ. ಈಗ ದಿಢೀರೆಂದು ಚರ್ಚಿಸಿ ಅನುಮೋದನೆ ನೀಡಿ ಎಂದರೆ ಹೇಗೆ? ವಿವರಗಳ ಪಟ್ಟಿ ನೀಡಿದ ೩-೪ ದಿನಗಳ ನಂತರ ಸದ್ಯದಲ್ಲೇ ಮತ್ತೆ ಸಭೆ ಕರೆಯಿರಿ. ಆ ಸಭೆಯಲ್ಲಿ ಚರ್ಚೆ ಮಾಡೋಣ. ಬೇರೆ ವಿಷಯಗಳ ಕುರಿತು ಮಾತ್ರ ಇಲ್ಲಿ ಚರ್ಚಿಸೋಣ ಎಂದರು. ವಾರ್ಷಿಕವಾಗಿ ಉಳಿದ ಹಣವನ್ನು ಯಾವ ಬಾಬ್ತಿಗೆ ಉಪಯೋಗಿಸಿಕೊಳ್ಳಬಹುದು? ಯಾವು ದಕ್ಕೆ ಬಳಸಿಕೊಳ್ಳುವಂತಿಲ್ಲ ಎಂಬುದರ ಕುರಿತಂತೆ ತಮಗೆ ಮಾಹಿತಿ ಬೇಕು. ಉದಾಹರಣೆಗೆ ತಾಯಿ-ಮಕ್ಕಳ ಆಸ್ಪತ್ರೆಯ ನಿರ್ವಹಣೆ ಇಬ್ಬರೇ ಮಹಿಳಾ ವೈದ್ಯರಿಂದ ಸಾಧ್ಯವಿಲ್ಲ. ಹಾಗಾಗಿ ಅತಿಥಿ ವೈದ್ಯರನ್ನಾದರೂ ಬಳಸಿ ಕೊಳ್ಳಬಹುದೇ ಎಂಬುದರ ಕುರಿತು ತಮಗೆ ಲಿಖಿತವಾಗಿ ಮಾಹಿತಿ ನೀಡಬೇಕು ಎಂದು ಶಾಸಕರು ಆಡಳಿತಾಧಿಕಾರಿ ಶಿವಪ್ರಸಾದರಿಗೆ ತಾಕೀತು ಮಾಡಿದರು.
ಮೇಲ್ದರ್ಜೆಗೇರಿದ ಆಸ್ಪತ್ರೆಯಲ್ಲಿ ಕುಡುಕರ ಹಾವಳಿ ಹೆಚ್ಚಾಗಿದೆ. ನಮಗೆ ರಕ್ಷಣೆ ಬೇಕು ಎಂದು ವೈದ್ಯರು ಮನವಿ ಮಾಡಿದರು. ಅಲ್ಲದೆ, ಆಸ್ಪತ್ರೆಗೆ ಶುದ್ಧ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಬೇಕು. ಶಿಥಿಲವಾದ ತಾಯಿ-ಮಕ್ಕ ಆಸ್ಪತ್ರೆಯ ಆವರಣದ ವಸತಿಗೃಹಗಳನ್ನು ಕೆಡವಿ ಹೊಸ ಕಟ್ಟಡ ನಿರ್ಮಿ ಸಬೇಕು ಎಂಬ ಬೇಡಿಕೆ ಇಟ್ಟರು. ಆಗ ಶಾಸಕರು, ಆಸ್ಪತ್ರೆಗೆ ಪೊಲೀಸ್ ಬೀಟ್ ವ್ಯವಸ್ಥೆ ಕಲ್ಪಿಸುವಂತೆ ಅಲ್ಲಿಂದಲೇ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು. ಕುಡಿಯುವ ನೀರಿನ ಸಂಪರ್ಕ ನೀಡುವಂತೆ ನಗರಸಭೆಯ ಅಧಿಕಾರಿಗಳಿಗೆ ತಿಳಿಸಿದರು.
ಶಿಥಿಲವಾದ ಕಟ್ಟಡಗಳ ಕುರಿತಂತೆ ಲೋಕೋಪ ಯೋಗಿ ಅಧಿಕಾರಿಗಳಿಗೆ ವರದಿ ನೀಡುವಂತೆ ಆದೇಶಿಸಿದರು. ಸಾರ್ವಜನಿಕ ಆಸ್ಪತ್ರೆಯ ವಿಸ್ತೀರ್ಣ ಹಾಗೂ ಮಾಲೀಕತ್ವದ ಕುರಿತು ಪ್ರಶ್ನಿಸಿದಾಗ ಆಘಾತಕಾರಿ ವಿಷಯ ಬೆಳಕಿಗೆ ಬಂತು. ಅದಕ್ಕೆ ಉತ್ತರಿಸಿದ ಅಧಿಕಾರಿಗಳು, ಆಸ್ಪತ್ರೆಯ ವಿಸ್ತಿರ್ಣ ೩ ಎಕರೆ ೧೬ ಗುಂಟೆ ಇದ್ದು, ೧೯೯೦ರ ದಶಕದಲ್ಲಿ ನಿರ್ಮಾಣವಾದ ಈ ಜಾಗದ ಮಾಲೀಕತ್ವ ಇಂದಿಗೂ ಮೈಸೂರು ಮಹಾ ರಾಜರ ಹೆಸರಲ್ಲೇ ಇದೆ ಎಂಬುದನ್ನು ಬಹಿರಂಗಪಡಿಸಿದಾಗ ಶಾಸಕರೂ ಸೇರಿದಂತೆ ಸಭೆಯಲ್ಲಿದ್ದವರು ಆಶ್ವರ್ಯಚಕಿತರಾದರು. ಆರೋಗ್ಯ ರಕ್ಷಾ ಸಮಿತಿಯ ೮ ಸದಸ್ಯರುಗಳೊಂದಿಗೆ ತಾಲ್ಲೂಕು ವೈದ್ಯಾಧಿಕಾರಿ ಡಾ. ಈಶ್ವರ್, ಡಾ. ಸುರೇಶ, ಡಾ. ಸುವರ್ಣ, ಡಾ. ಚಂದ್ರಕಲಾ, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಮತ್ತಿತರರು ಭಾಗಿಯಾಗಿದ್ದರು.
ಕುವೆಂಪು ಮಲೆನಾಡಿನಲಿ ಹುಟ್ಟಿದರು ಮೈಸೂರಿಗೆ ಕಾಲಿಟ್ಟರು ಕವಿಯಾಗಿ ಕನ್ನಡದ ಮೊದಲ ಜ್ಞಾನಪೀಠ ಗಳಿಸಿದರು ಮೂಢನಂಬಿಕೆಯನು ಬದಿಗೊತ್ತಿ ವಿಜ್ಞಾನದ ಬೀಜ ಬಿತ್ತಿ…
ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿವಿ (ಕೆಎಸ್‌ಒಯು) ರಸ್ತೆ ಸಂಪೂರ್ಣ ಹಾಳಾಗಿದ್ದು, ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಮಳೆಗಾಲದಲ್ಲಿ ಈ…
ಹೆಗ್ಗಡದೇವನಕೋಟೆ ತಾಲ್ಲೂಕಿನ ಹಂಪಾಪುರ ಗ್ರಾಮದಿಂದ ಜಿನ್ನಹಳ್ಳಿ -ಮಲಾರದಹುಂಡಿಗೆ ತೆರಳುವ ಮುಖ್ಯ ರಸ್ತೆ ಹಾಳಾಗಿದ್ದು, ವಿಪರೀತ ಹಳ್ಳ-ಕೊಳ್ಳಗಳಿಂದ ಕೂಡಿದೆ. ಹಲವಾರು ಬಾರಿ…
ಹೊಸ ವರ್ಷದ ಆಚರಣೆ ಡಿ.೩೧ರ ರಾತ್ರಿ ಮತ್ತು ಜನವರಿ ೧ ರಂದು ನಡೆಯುತ್ತದೆ. ಯುವ ಜನತೆಗೆ ಹೊಸ ವರ್ಷದ ಆಚರಣೆ…
ಡಾ.ಪಿ.ಮಂಜುನಾಥ ನಕಾರಾತ್ಮಕ ಭಾವನೆ ಮಕ್ಕಳಲ್ಲಿ ಮೂಡದಂತೆ ಎಚ್ಚರ ಅಗತ್ಯ ಪರೀಕ್ಷೆಗಳು ಕೆಲವೇ ತಿಂಗಳುಗಳಲ್ಲಿ ಸಾಲು ಸಾಲಾಗಿ ಪ್ರಾರಂಭವಾಗಲಿವೆ. ಪರೀಕ್ಷೆ ಹತ್ತಿರವಾಗುತ್ತಿದ್ದಂತೆ…
೨೦೨೫ ನೇ ಸಾಲಿನಲ್ಲಿ ಹಲವಾರು ಸಾಧಕರು ಹೊರಹೊಮ್ಮಿದ್ದು, ಸಾಹಿತ್ಯ, ಕಲೆ, ವಿಜ್ಞಾನ, ಸಂಶೋಧನೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆ,…