Andolana originals

‘ಮಿಷನ್ ಸುರಕ್ಷಾ’ ಅಭಿಯಾನ ಸರಿಯಲ್ಲ

  • ರಾಜ್ಯ ಸರ್ಕಾರದ ಕ್ರಮಕ್ಕೆ ಅಖಿಲ ಭಾರತ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಖಂಡನೆ
  • ವಿದ್ಯಾರ್ಥಿನಿಯರ ಮುಟ್ಟಿನ ಚಕ್ರದ ಮಾಹಿತಿ ಸಂಗ್ರಹ ಯಾವುದೇ ಕಾರಣಕ್ಕೂ ಸ್ವೀಕಾರಾರ್ಹವಲ್ಲ ಎಂದು ಚಿಂತಕರ ಆಕ್ರೋಶ
  • ಈ ಅಭಿಯಾನವೇ ಅಸಂಬದ್ಧ ಕ್ರಮ;  ಮುಟ್ಟಿನ ಚಕ್ರದ ಬಗ್ಗೆ ಡೇಟಾ ಸಂಗ್ರಹಿಸುವುದು ಅನಗತ್ಯ ನಡ

ಮೈಸೂರು: ಬಾಲ್ಯ ವಿವಾಹ ಮತ್ತು ಹದಿಹರಯದ ಗರ್ಭಧಾರಣೆಯ ಬಗ್ಗೆ ಸಾಕಷ್ಟು ಕಳವಳ ವ್ಯಕ್ತವಾದ ಕಾರಣ ಶಿವಮೊಗ್ಗ  ಜಿಲ್ಲಾಡಳಿತವು ಮಿಷನ್ ಸುರಕ್ಷಾ ಅಭಿಯಾನವನ್ನು ನಡೆಸಲು ಮುಂದಾಗಿರುವುದು ಸರಿಯಾದ ಕ್ರಮವಲ್ಲ ಎಂದು ಅಖಿಲ ಭಾರತ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ (ಎಐಪಿಡಬ್ಲ್ಯೂಎ)  ಅಸಮಾಧಾನ ವ್ಯಕ್ತಪಡಿಸಿದೆ.

ಸುರಕ್ಷಾ ಅಭಿಯಾನ ಕೈಗೊಳ್ಳುವ ಸಂಬಂಧ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.  ಹೇಮಂತ್ ಅವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು,  ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಮತ್ತು ಜಿಲ್ಲೆಯ ಐಟಿಐ ಮತ್ತು ಡಿಪ್ಲೊಮಾ ಕಾಲೇಜುಗಳ ಪ್ರಾಂಶುಪಾಲರಿಗೆ ಜ್ಞಾಪಕ ಪತ್ರವನ್ನು ಬಿಡುಗಡೆ ಮಾಡಿದ್ದಾರೆ.

ಇದರ ಅನ್ವಯ ಇನ್ನು ಮುಂದೆ ಕಾಲೇಜುಗಳು ವಿದ್ಯಾರ್ಥಿನಿಯರ ಮುಟ್ಟಿನ ಚಕ್ರದ ಬಗ್ಗೆ ದಾಖಲೆಯನ್ನು ನಿರ್ವಹಿಸಬೇಕು ಎಂಬುದು ಒಪ್ಪುವಂತಹ ವಿಷಯವಲ್ಲ ಎಂದು  ಅಖಿಲ ಭಾರತ ಮಹಿಳಾ ದೌರ್ಜನ್ಯ ವಿರೋಧಿ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷರಾದ ಡಾ.ಇ.ರತಿ ರಾವ್,  ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಸುಮನಾ, ಸಬಿಹಾ,  ನಾ.ದಿವಾಕರ್, ಸರಸ್ವತಿ, ಶಬಾನಾ ಹೇಳಿದ್ದಾರೆ. ಶಿವಮೊಗ್ಗ ಜಿಲ್ಲಾಡಳಿತದ ಈ ಮಿಷನ್ ಅಭಿಯಾನದ ಉದ್ದೇಶ ಒಳ್ಳೆಯದೇ ಎಂದು ಹಲವರು ಭಾವಿಸಿದ್ದುಂಟು. ಆದರೆ ವಿದ್ಯಾರ್ಥಿ ನಿಯರ ಮುಟ್ಟಿನ ಚಕ್ರದ ಮಾಹಿತಿಯನ್ನು ಸಂಗ್ರಹಿಸುವುದು ಯಾವುದೇ ಕಾರಣಕ್ಕೂ ಸ್ವೀಕಾರಾರ್ಹವಲ್ಲ.

ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶಕ್ಕೋಸ್ಕರ ಗ್ರಾಮ ಮಟ್ಟದ ಸಮಿತಿಗಳೊಂದಿಗೆ ಈ ಸೂಕ್ಷ್ಮ ಡೇಟಾವನ್ನು ಕಾಲೇಜು ಆಡಳಿತ ಹಂಚಿಕೊಳ್ಳುವುದು ಅಗತ್ಯ ಎಂದು ಜ್ಞಾಪಕ ಪತ್ರದಲ್ಲಿ ಸೂಚಿಸಲಾಗಿದೆ. ಹೀಗಾಗಿ ಈ ಸುರಕ್ಷಾ ಅಭಿಯಾನವು ಸಂಪೂರ್ಣವಾಗಿ ಸ್ಪಷ್ಟತೆಯ ಕೊರತೆಯಿಂದ ಕೂಡಿದೆ ಎಂದು ದೂರಿದ್ದಾರೆ.  ಈ ಅಭಿಯಾನವೇ ಅಸಂಬದ್ಧ ಕ್ರಮವಾಗಿರುವ ಕಾರಣ ಮುಟ್ಟಿನ ಚಕ್ರದ ಬಗ್ಗೆ ಡೇಟಾವನ್ನು ಸಂಗ್ರಹಿಸುವುದು ಅನಗತ್ಯ ನಡೆಯಾಗಿದೆ. ಬದಲಾಗಿ ವೈಜ್ಞಾನಿಕ ಆಧಾರದ ಮೇಲೆ ಪುರುಷ ಮತ್ತು ಮಹಿಳೆಯ ದೇಹ ರಚನೆ,  ಅಂಗಾಂಗಗಳ ಕಾರ್ಯನಿರ್ವಹಣೆ ಕುರಿತು ವಿದ್ಯಾರ್ಥಿಗಳಲ್ಲಿ, ಜನರಲ್ಲಿ ಆಡಳಿತದ ಎಲ್ಲ ವಿಭಾಗವೂ ಜಾಗೃತಿ ಮೂಡಿಸಬೇಕಾಗಿದೆ.

ಹದಿಹರೆಯದ ಗಂಡು ಮತ್ತು ಹೆಣ್ಣು ಮಕ್ಕಳು ಇಬ್ಬರೂ ಅನುಭವಿಸುವ ದೈಹಿಕ ಮತ್ತು ಮಾನಸಿಕ ಬದಲಾವಣೆಗಳು ಮತ್ತು ಅವುಗಳನ್ನು ಹೇಗೆ ಎದುರಿಸಬೇಕು ಎಂಬುದರ ಬಗ್ಗೆ ಪೋಷಕರು ಮತ್ತು ಶಿಕ್ಷಕರನ್ನು ಸಂವೇದನಾಶೀಲರನ್ನಾಗಿ ಮಾಡುವ ಅಗತ್ಯ ಇದೆ. ಜತೆಗೆ ಈ ಅಭಿಯಾನದಲ್ಲಿ ಹುಡುಗ ಮತ್ತು ಹುಡುಗಿಯರು ಇಬ್ಬರೂ ಭಾಗಿಯಾಗಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ. ಸಂತಾನೋತ್ಪತ್ತಿ ಪ್ರಕ್ರಿಯೆಯ ವೈಜ್ಞಾನಿಕ ಅರಿವಿನ ಕೊರತೆಯಿಂದಾಗಿ ಬಾಲ್ಯವಿವಾಹ, ಹದಿಹರೆಯದ ಗರ್ಭಧಾರಣೆಗಳು,  ಲೈಂಗಿಕ ದೌರ್ಜನ್ಯಗಳು ಸಮಾಜದಲ್ಲಿ ವ್ಯಾಪಕವಾಗಿವೆ.

ಮುಖ್ಯವಾಗಿ ಪ್ರಾರಂಭಿಕವಾಗಿ ಶಿವಮೊಗ್ಗ ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಽಕಾರಿಗಳಿಗೆ ಜಾಗೃತಿ ತರಗತಿಯನ್ನು ನೀಡಬೇಕಾಗಿದೆ. ಹೆಣ್ಣು ಮಕ್ಕಳ ಮುಟ್ಟಿನ ಚಕ್ರವನ್ನು ಗುರಿಯಾಗಿರಿಸಿ ಕೊಂಡು ಏಕೆ ಹೀಗೆ ಚಿಂತನೆ ನಡೆಸಿದ್ದಾರೆ ಎಂಬುದು ನಿಜಕ್ಕೂ ಆಘಾತಕಾರಿಯಾದ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಋತುಚಕ್ರದ ದತ್ತಾಂಶ ಸಂಗ್ರಹ ಕಾರ್ಯ ನಿಲ್ಲಿಸಲು ಆಗ್ರಹ:“ಋತುಚಕ್ರದ ಬಗ್ಗೆ ದತ್ತಾಂಶ ಸಂಗ್ರಹ ಕಾರ್ಯವನ್ನು ನಿಲ್ಲಿಸಬೇಕು. ‘ನನ್ನ ದೇಹ ನನ್ನ ಹಕ್ಕು’ ಮತ್ತು ‘ಲೈಂಗಿಕ ಕಿರುಕುಳ ತಡೆಗಟ್ಟುವಿಕೆ’ ಕುರಿತು ಸಮಾಜದ ಎಲ್ಲಾ ಹಂತಗಳಲ್ಲಿ ಜಾಗೃತಿ ಅಭಿಯಾನವನ್ನು ಪ್ರಾರಂಭಿಸಬೇಕು. ಇದರಲ್ಲಿ ವೈದ್ಯಕೀಯ ತಂಡದ ಒಳಗೊಳ್ಳುವಿಕೆಯೂ ಅತ್ಯಗತ್ಯ. ಹೀಗಾಗಿ ಪುರುಷ ಮತ್ತು ಸ್ತ್ರೀ ದೇಹಗಳ ಸುತ ಲಿನ ವೈಜ್ಞಾನಿಕ ಪರಿಕಲ್ಪನೆಗಳು, ಬಾಲ್ಯವಿವಾಹ ಮತ್ತು ಹದಿಹರೆಯದ ಗರ್ಭಧಾರಣೆಗಳು ಸೇರಿದಂತೆ ಎಲ್ಲ ರೀತಿಯ ಮಹಿಳಾ ದೌರ್ಜನ್ಯಗಳನ್ನು ತಡೆಗಟ್ಟುವಲ್ಲಿ ಪ್ರತಿಯೊಬ್ಬ ನಾಗರಿಕನ ಸಾಮಾಜಿಕ ಜವಾಬ್ದಾರಿಯನ್ನು ಜನಪ್ರಿಯಗೊಳಿಸಲು ಮಿಷನ್ ಸುರಕ್ಷಾ ಅಗಾಧ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಬಹುದಾಗಿದೆ ಎಂದು ರತಿ ರಾವ್ ಹಾಗೂ ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಸುಮನಾ, ಸಬಿಹಾ, ನಾ.ದಿವಾಕರ್, ಸರಸ ತಿ, ಶಬಾನಾ ಅವರು ತಿಳಿಸಿದ್ದಾರೆ. “

ಆಂದೋಲನ ಡೆಸ್ಕ್

Recent Posts

ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ: 9 ಮಂದಿಗೆ ಗಾಯ

ಹನೂರು: ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ 9 ಜನರು ಗಾಯಗೊಂಡಿರುವ ಘಟನೆ ಹನೂರು ಪಟ್ಟಣದ ಹೊರವಲಯದ ಮಹದೇಶ್ವರ ಐಟಿಐ ಕಾಲೇಜು…

4 hours ago

ಹುಬ್ಬೆ ಹುಣಸೆ ಡ್ಯಾಂ ಭರ್ತಿ, ಇದು ಮಾದಪ್ಪನ ಕೃಪೆ ಎಂದ ಶಾಸಕ ಮಂಜುನಾಥ್

ಹನೂರು : ಕ್ಷೇತ್ರದ ಅಧಿದೇವತೆ ಮಲೆ ಮಾದೇಶ್ವರ ಸ್ವಾಮಿ ಕೃಪೆಯಿಂದಲೇ ಈ ಬಾರಿ ಉತ್ತಮ ಮಳೆಯಾಗಿ, ಬರಗಾಲದಿಂದ ಕಂಗೆಟ್ಟಿದ್ದ ರೈತರ…

4 hours ago

ಓದುಗರ ಪತ್ರ: ‘ಜಗವೆ ಕೊಂಡಾಡುವ ಹಾಗೆ’

‘ಜಗವೆ ಕೊಂಡಾಡುವ ಹಾಗೆ’ ಕರುನಾಡ ಕಂಬನಿ, ಜನಮನದ ನಾಡಿ ಅರ್ಜುನನಿಗೆ ಅಶ್ರುತರ್ಪಣೆ ಅಭಿಮಾನದ ಅಭಿಮನ್ಯುಗೆ ಹೃದಯದ ಅಭಿನಂದನೆ ಅಂಬಾರಿಯ ಹೊತ್ತು…

8 hours ago

ಓದುಗರ ಪತ್ರ: ಮೈಕ್ರೋ ಜೆರಾಕ್ಸ್ ಹಾವಳಿಗೆ ಕಡಿವಾಣ ಹಾಕಿ

ಪರೀಕ್ಷಾ ಸಮಯದಲ್ಲಿ ಬಹುತೇಕ ಜೆರಾಕ್ಸ್ ಅಂಗಡಿಗಳ ಮುಂದೆ ವಿದ್ಯಾರ್ಥಿಗಳ ದಂಡೇ ನೆರೆದಿರುತ್ತದೆ. ಪರೀಕ್ಷಾ ಸಮಯದಲ್ಲಿ ನೋಟ್ಸ್‌ಗಳನ್ನು ಜೆರಾಕ್ಸ್ ಮಾಡಿಸಲು ಬರುವವರಿಗಿಂತ…

8 hours ago

ಓದುಗರ ಪತ್ರ: ಅಂಬೇಡ್ಕರ್ ಪ್ರತಿಮೆಗೆ ದೀಪಾಲಂಕಾರ ವ್ಯವಸ್ಥೆಯಾಗಲಿ

ಮೈಸೂರು ವಿಶ್ವವಿದ್ಯಾಲಯದ ಮಾನಸಗಂಗೋತ್ರಿ ಆವರಣದಲ್ಲಿ ಕಳೆದ  ಕೆಲವು ದಿನಗಳಿಂದ ೨೦೨೬ರ ದಸರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ಯುವ ಸಂಭ್ರಮ…

8 hours ago

ಓದುಗರ ಪತ್ರ: ಮಿತಿ ಹೆಚ್ಚಳ ಕಾರ್ಮಿಕ ಸ್ನೇಹಿ ನಿರ್ಧಾರ

ಸಾಮಾಜಿಕ ಭದ್ರತೆಯ ಒಂದು ಭಾಗವಾದ ನೌಕರರ ಭವಿಷ್ಯ ನಿಧಿ ವ್ಯಾಪ್ತಿಗೆ ಒಳಪಡುವ ನೌಕರರ ವೇತನ ಮಿತಿಯನ್ನು ೧೫ ಸಾವಿರ ರೂಪಾಯಿಗಳಿಂದ…

8 hours ago