Andolana originals

ಮುಟ್ಟಿನ ರಜೆ ಮಹಿಳೆಯರ ಹಕ್ಕು

ಎಂ.ಜೆ.ಇಂದುಮತಿ, ಸಹಾಯಕ ಪ್ರಾಧ್ಯಾಪಕರು, ವಿದ್ಯಾವರ್ಧಕ ಕಾನೂನು ಕಾಲೇಜು, ಮೈಸೂರು

ಭಾರತೀಯ ಕಾರ್ಮಿಕ ಕಾನೂನುಗಳು ಅನಾರೋಗ್ಯ ಮತ್ತು ಸಾಂದ ರ್ಭಿಕ ರಜೆಗಳಿಗೆ ಸಂಬಂಧಿಸಿದಂತೆ ಉಪಬಂಧಗಳನ್ನು ಒಳಗೊಂಡಿದ್ದರೂ, ದೇಶದಲ್ಲಿ ಋತುಚಕ್ರದ ರಜೆಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಶಾಸನವಿಲ್ಲ. ಹಾಗೆಯೇ ಆಯಾ ಸಂಸ್ಥೆಗಳು ಮುಟ್ಟಿನ ರಜೆಗೆ ಸಂಬಂಧಿಸಿದಂತೆ ತಮ್ಮ ನೀತಿಗಳನ್ನು ರಚಿಸಲು ನಮ್ಯತೆಯನ್ನು ಹೊಂದಿವೆ. ಆಹಾರ ವಿತರಣಾ ವೇದಿಕೆಯಾದ Zomato ತನ್ನ ಸಾಂಸ್ಥಿಕ ನೀತಿಯನ್ನು ಬಲಪಡಿಸಲು 10 ದಿನಗಳ ಅವಧಿ ರಜೆಯನ್ನು ಪರಿಚಯಿಸಿದ ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿದೆ. ಮತ್ತೊಂದು ಆಹಾರ ವಿತರಣಾ ವೇದಿಕೆಯಾದ Swiggyಯೂ ತನ್ನ ಮಹಿಳಾ ವಿತರಣಾ ಪಾಲುದಾರರಿಗೆ ‘ಟೈಮ್ ಆಫ್’ ಎಂಬ ನೀತಿಯನ್ನು ಜಾರಿಗೆ ತಂದಿದೆ. ಅಂತೆಯೇ ವಿವಿಧ Byjus, Culture machine, FilmyBiz ಮತ್ತು Gozoop ಋತುಚಕ್ರದ ರಜೆಯನ್ನು ಬಗೆಹರಿಸುವ ನೀತಿಗಳನ್ನು ಈಗಾಗಲೇ ಪೂರ್ವಭಾವಿಯಾಗಿ ರೂಪಿಸಿವೆ.

ಭಾರತ ಹಾಗೂ ವಿಶ್ವದಾದ್ಯಂತ ಋತುಚಕ್ರದ ಮೇಲಿನ ನೀತಿ: ಬಿಹಾರ ಸೇರಿದಂತೆ ಹಲವು ರಾಜ್ಯಗಳಲ್ಲಿ 1992ರಿಂದ ಮುಟ್ಟಿನ ರಜೆ ನೀತಿಯನ್ನು ನೀಡಲಾಗುತ್ತಿದೆ. ಕೇರಳ ಸರ್ಕಾರವು 2023ರಲ್ಲಿ ರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿ ಮುಟ್ಟಿನ ರಜೆಯನ್ನು ಘೋಷಿಸಿತು. ಮಹಾರಾಷ್ಟ್ರದಲ್ಲಿ ನೌಕರರಿಗೆ ಜಾರಿಗೆ ತರಲು ಪರಿಗಣಿಸುತ್ತಿದೆಯಾದರೂ ಔಪಚಾರಿಕವಾಗಿ ಇನ್ನೂ ಜಾರಿಯಾಗಿಲ್ಲ.

ಸ್ಪೇನ್ ದೇಶದಲ್ಲಿ ಮಹಿಳೆಯರಿಗೆ ತಿಂಗಳಿಗೆ ಮೂರು ದಿನಗಳು ಮುಟ್ಟಿನ ರಜೆ ಯನ್ನು ಪಡೆಯಲು ಹಕ್ಕಿದೆ. ಹಾಗೆಯೇ ಜಪಾನ್, ಇಂಡೋನೇಷ್ಯಾ, ಜಾಂಬಿಯಾ ದೇಶಗಳಲ್ಲಿಯೂ ಮಹಿಳೆಯರಿಗೆ ಪ್ರತಿ ತಿಂಗಳು ಮುಟ್ಟಿನ ರಜೆ ನೀಡಲಾಗುತ್ತಿದೆ. 2017ರಲ್ಲಿ ಖಾಸಗಿ ಸದಸ್ಯರ ಮಸೂದೆ ಹಾಗೂ ಮುಟ್ಟಿನ ಪ್ರಯೋಜನಗಳ ಮಸೂದೆ 2017 ಅನ್ನು ಅರುಣಾಚಲ ಪ್ರದೇಶದ ಲೋಕಸಭಾ ಸದಸ್ಯರಾಗಿದ್ದ ನಿನೋಂಗ್ ಎರಿಂಗ್ ಅವರು ಸಂಸತ್ತಿನಲ್ಲಿ ಮಂಡಿಸಿದರು. ನಂತರ 2018ರಲ್ಲಿ ಮಹಿಳೆಯರ ಲೈಂಗಿಕ ಸಂತಾನೋತ್ಪತ್ತಿ ಮತ್ತು ಮುಟ್ಟಿನ ಹಕ್ಕುಗಳ ಮಸೂದೆಯನ್ನು ಕೇರಳದ ತಿರುವನಂತಪುರಂನ ಸಂಸದರಾಗಿದ್ದ ಡಾ.ಶಶಿ ತರೂರು ಅವರು ಮಂಡಿಸಿದ್ದರು. ಎರಡೂ ಮಸೂದೆಗಳು ಮುಟ್ಟಿನ ಆರೋಗ್ಯ ಉತ್ಪನ್ನಗಳನ್ನು ಪಡೆಯುವುದು ಹಾಗೂ ಮುಟ್ಟಿನ ರಜೆಗೆ ಅರ್ಹತೆಯನ್ನು ಖಚಿತಪಡಿಸುವ ಗುರಿಯನ್ನು ಹೊಂದಿದ್ದವು. ಆದರೆ ಅಂಗೀಕರಿಸಲಾಗಲಿಲ್ಲ!

ಇತ್ತೀಚೆಗೆ ‘ಮಹಿಳೆಯರ ಋತುಚಕ್ರದ ರಜೆಯ ಹಕ್ಕು ಮತ್ತು ಆರೋಗ್ಯ ಉತ್ಪನ್ನಗಳ ಉಚಿತ ಪಡೆಯುವ ಮಸೂದೆ 2023’ ಎಂಬ ಪ್ರಸ್ತಾವಿತ ಮಸೂದೆಯನ್ನು ಪರಿಚಯಿಸಲಾಯಿತು. ಮಹಿಳೆಯರು ಮತ್ತು ತೃತೀಯ ಲಿಂಗಿಗಳು ಅವರ ಅವಧಿಗಳಲ್ಲಿ ಮೂರು ದಿನಗಳ ವೇತನದ ರಜೆಯನ್ನು ಪಡೆಯಬಹುದಾಗಿದೆ. ವಿದ್ಯಾರ್ಥಿಗಳಿಗೆ ಈ ಪ್ರಯೋಜನವನ್ನು ವಿಸ್ತರಿಸಲು ಕೋರಿದಾಗ ವಿಫಲವಾಯಿತು.

ಅದೇ ರೀತಿ ಈ ವರ್ಷದ ಆರಂಭದಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯವು ರಾಷ್ಟ್ರವ್ಯಾಪಿ ಮಹಿಳಾ ವಿದ್ಯಾರ್ಥಿಗಳು ಮತ್ತು ಉದ್ಯೋಗಸ್ಥ ಮಹಿಳೆಯರಿಗೆ ಮುಟ್ಟಿನ ರಜೆಯನ್ನು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆಯನ್ನು ಪರಿಹರಿಸಲು ನಿರಾಕರಿಸಿತು. ಅರ್ಜಿದಾರರ ಪರವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಯ ಸಚಿವಾಲಯವು ಈ ನಿಟ್ಟಿನಲ್ಲಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಬಹುದು ಎಂದು ಸೂಚಿಸಿದೆ.

ಋತುಚಕ್ರದ ರಜೆಗೆ ಅವಕಾಶ ಕಲ್ಲಿಸುವ ಕುರಿತು ರಾಷ್ಟ್ರಮಟ್ಟದಲ್ಲಿ ನಡೆಯುತ್ತಿರುವ ಚರ್ಚೆಯ ನಡುವೆ ಕರ್ನಾಟಕ ಸರ್ಕಾರವು ಕಾರ್ಖಾನೆಗಳು, ಮಾಹಿತಿ ತಂತ್ರಜ್ಞಾನ, ಗಾರ್ಮೆಂಟ್ ವಲಯಗಳು ಮತ್ತು ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಒಂದು ದಿನದ ವೇತನಸಹಿತ ಋತುಚಕ್ರದ ರಜೆ ನೀಡಲು ಸಮಾಲೋಚನೆಯನ್ನು ಪ್ರಾರಂಭಿಸಿದೆ. ಕರ್ನಾಟಕದಲ್ಲಿ ಋತುಚಕ್ರದ ರಜೆಗೆ ಅವಕಾಶ ಕಲ್ಪಿಸುವ ಸಾಧ್ಯತೆಗಳ ಕುರಿತು ಚರ್ಚಿಸಲು ಮತ್ತು ವರದಿಯನ್ನು ಸಲ್ಲಿಸಲು ಕಾರ್ಮಿಕ ಇಲಾಖೆಯು ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಲಾ ವಿಭಾಗದ ಮುಖ್ಯಸ್ಥರಾದ ಪ್ರೊ.ಸಾ ಮೋಹನ್ ಅವರ ನೇತೃತ್ವದಲ್ಲಿ 18 ಸದಸ್ಯರ ಸಮಿತಿಯನ್ನು ರಚಿಸಿದೆ.

ಸಮಿತಿಯು ಕಾರ್ಮಿಕ ಇಲಾಖೆಯ ಅಧಿಕಾರಿಗಳೊಂದಿಗೆ ಕಾನೂನು ಮತ್ತು ವೈದ್ಯಕೀಯ ತಜ್ಞರು, ಮನಶಾಸ್ತ್ರಜ್ಞರು, ಕೈಗಾರಿಕೆ ಮತ್ತು ಕಾರ್ಮಿಕ ಸಂಘಗಳ ಪ್ರತಿನಿಧಿಗಳನ್ನು ಒಳಗೊಂಡಿದೆ.

ಈ ಸಮಿತಿಯ ಕರಡು ಪ್ರತಿಯಲ್ಲಿ ಋತುಚಕ್ರದ ರಜೆಯನ್ನು ಮಹಿಳೆಯರ ಹಕ್ಕು ಎಂದು ಗುರುತಿಸಲಾಗಿದೆ. ವೈದ್ಯಕೀಯ ದಾಖಲಾತಿಗಳ ಅಗತ್ಯವಿಲ್ಲದೆ, 55 ವರ್ಷ ವಯಸ್ಸಿನೊಳಗಿನ ಎಲ್ಲ ಮಹಿಳಾ ಉದ್ಯೋಗಿಗಳಿಗೆ ವೇತನ ಸಹಿತ ಋತುಚಕ್ರದ ರಜೆಯನ್ನು ವಿಸ್ತರಿಸಲು ಶಿಫಾರಸ್ಸು ಮಾಡಿದೆ. ರಜೆಯನ್ನು ನಿರಾಕರಿಸುವ ಉದ್ಯೋಗದಾತರಿಗೆ ಸಂಬಂಧಿಸಿದ ದಂಡನಾ ಶುಲ್ಕವನ್ನು ಹಾಕಲು ಸರ್ಕಾರಕ್ಕೆ ಕರೆ ನೀಡಿದೆ. ರಾಜ್ಯಗಳು ಮತ್ತು ಇತರ ಪಾಲುದಾರರೊಂದಿಗೆ ಸಮಾಲೋಚನೆ ನಡೆಸುವ ಮೂಲಕ ಮಹಿಳಾ ಉದ್ಯೋಗಿಗಳಿಗೆ ಋತುಚಕ್ರದ ರಜೆಯ ಬಗ್ಗೆ ಮಾದರಿ ತಂತ್ರವನ್ನು ರೂಪಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ನಿರ್ದೇಶನ ನೀಡಿದೆ.

ಗಡಿ ಒಳಗೆ ಕೆಲಸ ಮಾಡುವ ನೌಕರರ ಒಳಿತಿಗಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಡ್ಡಿಯಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
vagvilasini1@gmail.com

ಆಂದೋಲನ ಡೆಸ್ಕ್

Recent Posts

ರೈತರ ಹಿತರಕ್ಷಣೆಗೆ ಕೇಂದ್ರದ ಕದ ತಟ್ಟಿದ ಚಲುವರಾಯಸ್ವಾಮಿ : ತುರ್ತು ಪರಿಹಾರಕ್ಕೆ ಮನವಿ

ಬೆಂಗಳೂರು :  ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಬುಧವಾರ (ಜನವರಿ 7)  ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ…

2 hours ago

ಮೈಸೂರು | ಪಿಸಿ ಮೇಲೆ ಹಲ್ಲೆ, ಮೊಬೈಲ್‌ ದೋಚಿದ ಖದೀಮರು ; ನಾಲ್ವರ ಬಂಧನ

ಮೈಸೂರು : ಮಾದಕ ವ್ಯಸನಿಗಳಾದ ನಾಲ್ವರು ಯುವಕರ ತಂಡ ಪೊಲೀಸ್ ಕಾನ್‌ಸ್ಟೇಬಲ್ ಮೇಲೆ ಹಲ್ಲೆ ನಡೆಸಿ ನಗದು ಹಾಗೂ ಮೊಬೈಲ್…

2 hours ago

ಫಿಟ್‌ ಮೈಸೂರು ವಾಕ್‌ಥಾನ್‌ಗೆ ಮೈಸೂರು ಸಜ್ಜು

 ಸಾವಿರಾರು ಹೆಜ್ಜೆಗಳೊಂದಿಗೆ ಆರೋಗ್ಯದ ಸಂದೇಶ ಜ.11ರಂದು ನಡೆಯಲಿರುವ ಜಾಗೃತಿ ಅಭಿಯಾನ ಮೈಸೂರು : ಹಲವು ಮೊದಲುಗಳಿಗೆ ನಾಂದಿ ಹಾಡಿರುವ ಸಾಂಸ್ಕೃತಿಕ…

2 hours ago

ಹಿಮದಿಂದ ಆವೃತವಾದ ಕೇದರನಾಥ

ರಾಂಚಿ : ಉತ್ತರ ಭಾರತವು ತೀವ್ರ ಶೀತಗಾಳಿಗೆ ತತ್ತರಿಸಿದ್ದು, ಭಾರೀ ಹಿಮಪಾತದಿಂದ ಪಟ್ಟಣಗಳು, ದೇವಾಲಯಗಳು ಮತ್ತು ಸುತ್ತಮುತ್ತಲಿನ ಬೆಟ್ಟಗಳು ದಟ್ಟ…

2 hours ago

ಹುಲಿ ದಾಳಿಗೆ ಹಸು ಬಲಿ : ವ್ಯಾಘ್ರ ಸೆರೆಗೆ ಗ್ರಾಮಸ್ಥರ ಒತ್ತಾಯ

ಸಿದ್ದಾಪುರ : ವಿರಾಜಪೇಟೆ ತಾಲೂಕು ಮಠ ಗ್ರಾಮದಲ್ಲಿ ಬುಧವಾರ ಸಂಜೆ ಹುಲಿಯೊಂದು ಹಾಲು ಕರೆಯುವ ಹಸುವಿನ ಮೇಲೆ ದಾಳಿ ನಡೆಸಿ…

2 hours ago

ಹಂತ ಹಂತವಾಗಿ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ,ಟ್ರಾಮಾ ಸೆಂಟರ್ ಸ್ಥಾಪನೆ : ಸಿಎಂ ಭರವಸೆ

ಹಾವೇರಿ  : ಉತ್ತರ ಕರ್ನಾಟಕದ ಹೆಬ್ಬಾಗಿಲು ಎನಿಸಿಕೊಂಡಿರುವ ಹಾವೇರಿ ಜಿಲ್ಲೆಯಲ್ಲಿ ಕ್ಯಾನ್ಸರ್, ಟ್ರಾಮಾ ಸೆಂಟರ್ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ…

3 hours ago