ಟಿ.ಎ.ಸಾದಿಕ್ ಪಾಷಾ
ಬೆಳಿಗ್ಗೆ ೮.೩೦ಕ್ಕೇ ಪಾಠ ಪ್ರವಚನ ಆರಂಭ; ಫಲಿತಾಂಶ ಸುಧಾರಣೆಗೆ ಶಿಕ್ಷಕರ ಶ್ರಮ
ತಲಕಾಡು: ಹೋಬಳಿಯ ಮೇದನಿ ಸರ್ಕಾರಿ ಪ್ರೌಢಶಾಲೆ ಕಲಿಕಾ ಓಟದಲ್ಲಿ ಮುಂದಿದೆ. ಸಾಮಾನ್ಯವಾಗಿ ಸರ್ಕಾರಿ ಶಾಲೆಗಳು ಬೆಳಿಗ್ಗೆ ೧೦ರಿಂದ ಸಂಜೆ ೪.೩೦ರವರೆವಿಗೆ ಪಾಠ ಪ್ರವಚನ ಮಾಡುವುದು ವಾಡಿಕೆ. ಆದರೆ ಮೇದನಿ ಸರ್ಕಾರಿ ಪ್ರೌಢಶಾಲೆ ಬೆಳಿಗ್ಗೆ ೮.೩೦ಕ್ಕೆ ಬಾಗಿಲು ತೆಗೆದು ಸಂಜೆ ೫.೩೦ರವರೆಗೂ ಕಾರ್ಯ ನಿರ್ವಹಣೆ ಮಾಡುತ್ತಿರುವುದರಿಂದ ಸಾರ್ವಜನಿಕರ ಗಮನ ಸೆಳೆಯುತ್ತಿದೆ.
ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶದಲ್ಲಿ ಸುಧಾರಣೆ ಕಾಣಲು ಇಡೀ ಶಾಲೆಯ ಶಿಕ್ಷಕರು ಒಂದು ತಂಡವಾಗಿ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣ ಇಲಾಖೆಯ ೨೯ ಅಂಶಗಳ ಕಾರ್ಯಕ್ರಮವನ್ನು ಪ್ರಾಮಾಣಿಕವಾಗಿ ಶಾಲೆಯಲ್ಲಿ ಅಳವಡಿಸಿಕೊಂಡಿರುವುದಕ್ಕೆ ಹೊಸದೊಂದು ಮನ್ವಂತರದ ಫಲಿತಾಂಶವನ್ನು ಮೇದನಿ ಗ್ರಾಮಸ್ಥರು ನಿರೀಕ್ಷೆ ಮಾಡುತ್ತಿದ್ದಾರೆ.
ಈ ಹಿಂದೆಯೂ ಉತ್ತಮ ಶಾಲೆಯೆಂದು ಮೇದನಿ ಪ್ರೌಢಶಾಲೆ ಹೆಸರು ಮಾಡಿತ್ತು. ಫಲಿತಾಂಶ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ರಾಷ್ಟ್ರಮಟ್ಟದಲ್ಲಿ ಈ ಶಾಲೆಯ ವಿದ್ಯಾರ್ಥಿಗಳು ಹೆಸರು ಮಾಡಿದ್ದರು. ಕಳೆದ ವರ್ಷ ರಾಷ್ಟ್ರಮಟ್ಟದ ಥ್ರೋ ಬಾಲ್ನಲ್ಲಿ ಪ್ರಶಸ್ತಿ ಬಾಚಿಕೊಂಡ ಈ ಶಾಲೆಯ ವಿದ್ಯಾರ್ಥಿಗಳು ಬದಲಾದ ಸರ್ಕಾರದ ನಿಲುವಿಗೆ ಹೊಂದಿಕೊಳ್ಳಲು ಎಸ್‌ಎಸ್ ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಹೋರಾಟ ಮಾಡಿ ಶೇ.೬೦ರಷ್ಟಿನ ಗುರಿ ಮಾತ್ರ ತಲುಪಿತ್ತು.
ಈಗ ಮುಂದಿನ ಪರೀಕ್ಷೆಯಲ್ಲಿ ಇದರ ಫಲಿತಾಂಶ ಮತ್ತಷ್ಟು ಸುಧಾರಣೆ ಮಾಡಲೇ ಬೇಕೆಂದು ಮಾಡಿರುವ ದೃಢಸಂಕಲ್ಪದ ಪ್ರತಿಫಲ ಎಂಬಂತೆ ೨ ತಾಸುಗಳ ಕಾಲ೧೦ನೇ ತರಗತಿಯ ವಿದ್ಯಾರ್ಥಿಗಳಿಗೆ ವಿಶೇಷ ಬೋಧನೆಗೆ ಮುಂದಾಗಿದೆ. ೮ ಮತ್ತು ೯ನೇ ತರಗತಿಯ ವಿದ್ಯಾರ್ಥಿಗಳಿಗೂ ಕ್ರೀಡಾ ಚಟುವಟಿಕೆಗಳನ್ನು ಮೇದನಿ ಶಾಲೆ ಹಮ್ಮಿಕೊಂಡು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
” ಈ ಶಾಲೆಯ ಫಲಿತಾಂಶ ಸುಧಾರಣೆಗೆ ಶಾಲಾ ಶಿಕ್ಷಕರಾದ ಹರಿಕುಮಾರ್, ಮಾದಲಾಂಬಿಕಾ, ಮಹಾದೇವ ಪ್ರಸಾದ್, ಸುರೇಶ್ ಕುಮಾರ್, ಕಾವ್ಯ, ಸಿದ್ದೇಶ್, ಶಿಲ್ಪಶ್ರೀ ಅವರ ಜೊತೆಗೆ ಮೇದನಿ ಗ್ರಾಮಸ್ಥರು, ಎಸ್‌ಡಿಎಂಸಿ ಆಡಳಿತ ಮಂಡಳಿಯ ಸದಸ್ಯರು ಹೆಚ್ಚು ಆಸಕ್ತಿ ವಹಿಸಿದ್ದಾರೆ.”
-ಶಿವನಂಜು, ಮುಖ್ಯ ಶಿಕ್ಷಕ
” ಫಲಿತಾಂಶ ಸುಧಾರಣೆಗೆ ಬಿಇಒ ಶಿವಮೂರ್ತಿ ಅವರ ಮಾರ್ಗದರ್ಶನದಲ್ಲಿ ಮುಖ್ಯಶಿಕ್ಷಕ ಶಿವನಂಜುರವರು ಬಹಳ ಶ್ರಮ ಪಡುತ್ತಿದ್ದಾರೆ. ಗ್ರಾಮದಲ್ಲಿ ವ್ಯಾಸಂಗ ಮಾಡಿದ ಹಳೇ ವಿದ್ಯಾರ್ಥಿಗಳು ಮತ್ತು ವಿವಿಧೆಡೆ ನೌಕರಿ ಮಾಡುತ್ತಿರುವ ಜನರು ಸಲಹೆ, ಸಹಾಯ ನೀಡುವಂತಾಗಲಿ.”
-ಕುಮಾರ್, ಎಸ್‌ಡಿಎಂಸಿ ಅಧ್ಯಕ್ಷರು
ಲಕ್ಕುಂಡಿ : ಅದೊಂದು ಐತಿಹಾಸಿಕ ಗ್ರಾಮ. ದೇವಾಲಯಗಳ ಸ್ವರ್ಗ, ಶಿಲ್ಪ ಕಲೆಯ ತೊಟ್ಟಿಲು..... ಅದ್ಭುತ ವಾಸ್ತು ಶಿಲ್ಪ ಕಲೆಗಳನ್ನು ಹೊಂದಿದ…
ಮೈಸೂರು : ನಗರದ ಎಲ್ಲ ಸಮಸ್ಯೆಗಳಿಗೆ ಕಾಲಮಿತಿಯಲ್ಲಿ ಪರಿಹಾರ ದೊರಕಿಸಿಕೊಡಲಾಗುವುದು. ಈ ನಿಟ್ಟಿನಲ್ಲಿ ಸಲ್ಲಿಕೆಯಾಗಿರುವ ಅಹವಾಲುಗಳನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳಲಾಗುವುದು…
ಬೆಂಗಳೂರು: ಮುಂಬರುವ ಮಾರ್ಚ್ ತಿಂಗಳಲ್ಲಿ ಬಜೆಟ್ ಮಂಡಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಮಾರ್ಚ್.6ರಂದು ಬಜೆಟ್ ಮಂಡಿಸುವ ಬಗ್ಗೆ ಸಿಎಂ…
ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಭೀಮನಬೀಡು ಗ್ರಾಮದ ಸಮೀಪ ಎರಡು ಕಾರುಗಳ ನಡುವೆ ಮುಖಾಮುಕಿ ಡಿಕ್ಕಿ ಸಂಭವಿಸಿ ಪ್ರಯಾಣಿಕರಿಗೆ ಗಂಭೀರವಾದ…
ಮೈಸೂರು: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೇರಳದಲ್ಲಿ ಕನ್ನಡ ಶಾಲೆಗಳನ್ನು ಬಂದ್ ಮಾಡಿಸಲು ಹೊರಟಿದ್ದಾರೆ ಎಂದು ಆರೋಪಿಸಿ ಕನ್ನಡಪರ…
ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ನೂತನವಾಗಿ ಉದ್ಘಾಟನೆ ಮಾಡಿರುವ ಸೋಲಾರ್ ಘಟಕದಿಂದ ಪ್ರಾಧಿಕಾರಕ್ಕೆ ಪ್ರತಿ ತಿಂಗಳು 15…