Andolana originals

ಎಂಸಿಡಿಸಿಸಿಬಿ: ಅನಿಲ್ ಚಿಕ್ಕಮಾದು-ಪ್ರಕಾಶ್ ನಡುವೆ ಪೈಪೋಟಿ

ಮಂಜು ಕೋಟೆ

ಕೋಟೆ: ಎರಡೂ ಕಡೆಯವರಿಂದ ಕಾರ್ಯತಂತ್ರ; ಫಲಿತಾಂಶ ಕುರಿತು ಮೂಡಿದ ಕುತೂಹಲ

ಎಚ್.ಡಿ.ಕೋಟೆ: ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಹೆಚ್.ಡಿ.ಕೋಟೆ ಕ್ಷೇತ್ರದ ನಿರ್ದೇಶಕರ ಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್ ಪಕ್ಷದ ಶಾಸಕ ಅನಿಲ್ ಚಿಕ್ಕಮಾದು, ಜಾ.ದಳ-ಬಿಜೆಪಿ ಮೈತ್ರಿ ಬೆಂಬಲಿತರಾದ ರೈತ ಗುಂಡತ್ತೂರು ಪ್ರಕಾಶ್ ಲಕ್ಷ್ಮೀಪ್ರಸಾದ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು ತೀವ್ರ ಕುತೂಹಲ ಮೂಡಿಸಿದೆ.

ತಾಲ್ಲೂಕಿನಲ್ಲಿ ಇದೇ ಪ್ರಥಮ ಬಾರಿಗೆ ಎಂಸಿಡಿಸಿಸಿ ಬ್ಯಾಂಕಿನ ನಿರ್ದೇಶಕರ ಚುನಾವಣೆಯಲ್ಲಿ ಕ್ಷೇತ್ರದ ಶಾಸಕರು ಸ್ಪರ್ಧಿಸಿರುವುದರಿಂದ ಕ್ಷೇತ್ರದ ಜನರಲ್ಲಿ ಕುತೂಹಲ ಇಮ್ಮಡಿಸಿದೆ. ಶಾಸಕ ಅನಿಲ್ ಚಿಕ್ಕಮಾದು ಗೆಲ್ಲುವುದು ಖಚಿತ ಎಂಬ ಮಾತುಗಳೂ ಕೇಳಿಬರುತ್ತಿವೆ.

ನಾಗನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿರುವ ಅನಿಲ್ ಚಿಕ್ಕಮಾದು ಎಂಡಿಸಿಡಿಸಿಬಿಗೆ ಸ್ಪರ್ಧಿಸಿರುವುದರಿಂದ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದು, ಗೆಲ್ಲಲು ಎಲ್ಲಾ ರೀತಿಯ ಕಾರ್ಯತಂತ್ರಗಳನ್ನು ನಡೆಸುತ್ತಿದ್ದು, ಕ್ಷೇತ್ರದ ೧೭ ಬ್ಯಾಂಕುಗಳ ಡೆಲಿಕೇಟ್ ಪ್ರತಿನಿಧಿಗಳ ಪೈಕಿ ೧೨ ಮಂದಿ ಶಾಸಕರ ಬೆಂಬಲಕ್ಕೆ ನಿಂತಿದ್ದಾರೆ.

ಕ್ಷೇತ್ರದ ಶಾಸಕತ್ವದ ಅಧಿಕಾರದ ಜೊತೆಗೆ ಸಹಕಾರ ಕ್ಷೇತ್ರದ ಅಧಿಕಾರವನ್ನು ಅನಿಲ್ ಅವರಿಗೆ ನೀಡಲೇಬೇಕೆಂದು ಮುಖಂಡರಾದ ನಾಗನಹಳ್ಳಿ ಪ್ರದೀಪ, ಭಾಸ್ಕರ, ಈರೇಗೌಡ, ನರಸೀಪುರ ರವಿ, ಹಿರೇಹಳ್ಳಿ ಸೋಮೇಶ್, ಪರಶಿವ ಮೂರ್ತಿ, ಶಿವಮಲ್ಲಪ್ಪ, ಹೋಂಡಾ ನಯಾಜ್, ನರಸಿಂಹಮೂರ್ತಿ, ರಾಜು ವಿಶ್ವಕರ್ಮ, ಗಣೇಶಾಚಾರ್, ಜಿನ್ನಹಳ್ಳಿ ರಾಜನಾಯಕ, ಕ್ಯಾತನಹಳ್ಳಿ ನಾಗರಾಜು, ವಡ್ಡರಗುಡಿ ರವಿ, ಚಂದ್ರು, ಸತೀಶ್‌ಗೌಡ ಮತ್ತಿತರ ಮುಖಂಡರು, ಡೆಲಿಕೇಟ್ಗಳು ಶ್ರಮಿಸುತ್ತಿದ್ದಾರೆ.

ಶಾಸಕರ ನಿರ್ದೇಶನದಂತೆ ಕಾರಣಾಂತರಗಳಿಂದ ಕಾಂಗ್ರೆಸ್ ಪಕ್ಷದವರಾದ ಮನುಗನಹಳ್ಳಿ ಮಾದಪ್ಪ ಮತ್ತು ಬಡಗಲಪುರ ಶಿವನಂಜೇಗೌಡ ಇಬರೂ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೂ ಇವರು ಕೂಡ ಶಾಸಕರಿಗೆ ಮತದಾನ ಮಾಡಲಿದ್ದಾರೆ ಎನ್ನಲಾಗಿದೆ. ಗುಂಡತ್ತೂರು ಪ್ರಕಾಶ್ ಲಕ್ಷ್ಮೀಪ್ರಸಾದ್ ಜಾ.ದಳ ಮತ್ತು ಬಿಜೆಪಿ ಮೈತ್ರಿ ಪಕ್ಷದ ಬೆಂಬಲಿತರಾಗಿ ಅಂತರಸಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಡೆಲಿಕೇಟ್ ಆಗಿ ಪ್ರಪ್ರಥಮವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.

ಚುನಾವಣೆಯಲ್ಲಿ ಶಾಸಕರಿಗೆ ಪೈಪೋಟಿ ನೀಡಲು ತಮ್ಮದೇ ಕಾರ್ಯತಂತ್ರಗಳನ್ನು ರೂಪಿಸಿಕೊಂಡು ಅಧಿಕೃತವಾಗಿ ಐವರು ಡೆಲಿಗೇಟ್ ಗಳನ್ನು ತಮ್ಮ ಬೆಂಬಲಕ್ಕೆ ಇಟ್ಟುಕೊಂಡು ಮತ್ತೆ ಹಲವರನ್ನು ಸೆಳೆಯಲು ತೆರೆ ಮೆರೆಯಲ್ಲಿ ಪ್ರಯತ್ನಿಸುತಿದ್ದಾರೆ. ಹಲವು ವರ್ಷಗಳಿಂದ ಇವರ ಬಣದವರನ್ನೇ ತಾಲ್ಲೂಕಿನಲ್ಲಿ ನಿರ್ದೇಶಕರನ್ನಾಗಿ ಆಯ್ಕೆ ಮಾಡಿಕೊಂಡು ಬರುತ್ತಿದ್ದು, ಕ್ಷೇತ್ರವನ್ನು ಭದ್ರಕೋಟೆಯನ್ನಾಗಿ ಉಳಿಸಿಕೊಳ್ಳಬೇಕೆಂಬ ಛಲದಿಂದ ಶಾಸಕರಾದ ಜಿ.ಡಿ.ಹರೀಶ್ ಗೌಡ, ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ, ಮುಖಂಡರಾದ ಕೆ.ಎಸ್.ಗೌಡ್ರು, ಹರೀಶ್ ಗೌಡ, ಗುಂಡತ್ತೂರು ಮಹೇಶ, ಕರವೇ ನಟರಾಜ್, ಬೆಳಗನಹಳ್ಳಿ ಶಿವರಾಜ್, ಪ್ರಕಾಶ್, ಸಿರಿ ಹೊಸಮಾಳ, ಶಿವರಾಜ್, ವಕೀಲ ರವಿಕುಮಾರ್, ಮಟಕೆರೆ ರಾಜೇಶ್, ಯೋಗೇಶ್, ಸೋಮ ಶೇಖರ್, ಮಾಯಿ ಮತ್ತಿತರ ಮುಖಂಡರು, ಡೆಲಿಗೇಟ್‌ಗಳು ಕೆಲಸ ನಿರ್ವಹಿಸುತ್ತಿದ್ದಾರೆ.

ಒ ಟ್ಟಾರೆ ಜೂ.೨೬ರಂದು ನಡೆಯುವ ಚುನಾವಣೆಯಲ್ಲಿ ಕೋಟೆ ಕ್ಷೇತ್ರದ ಮತದಾರರು ಯಾವ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

” ಜನತೆ ಈಗ ನನ್ನನ್ನು ಶಾಸಕನನ್ನಾಗಿ ಮಾಡಿ ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನು ಮಾಡಲು ಅವಕಾಶ ನೀಡಿದ್ದಾರೆ. ಅದೇ ರೀತಿ ರೈತರ ಅಭಿವೃದ್ಧಿಗಾಗಿ ಸಹಕಾರ ಕ್ಷೇತ್ರದಲ್ಲಿ ಕೆಲಸ ಮಾಡಬೇಕೆಂದು ಅಗತ್ಯ ಸಹಕಾರ ನೀಡಿರುವುದರಿಂದ ಅಧಿಕ ಮತಗಳಿಂದ ಜಯ ಸಾಧಿಸುತ್ತೇನೆ.”

-ಅನಿಲ್ ಚಿಕ್ಕಮಾದು, ಶಾಸಕ

” ಕ್ಷೇತ್ರದ ಶಾಸಕರಿಗೆ ಪ್ರತಿಸ್ಪರ್ಧಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿದೆ. ರೈತನಾಗಿರುವುದರಿಂದ ನನಗೆ ಎಲ್ಲರ ಉತ್ತಮ ಬೆಂಬಲ ದೊರಕಿದೆ. ಗೆದ್ದೇ ಗೆಲ್ಲುತ್ತೇನೆ ಎಂಬ ಪೂರ್ಣ ವಿಶ್ವಾಸ ನನಗಿದೆ.”

-ಗುಂಡತ್ತೂರು ಪ್ರಕಾಶ್ ಲಕ್ಷ್ಮೀ ಪ್ರಸಾದ್

ಆಂದೋಲನ ಡೆಸ್ಕ್

Recent Posts

2026ರ ದಸರಾ ಗಜಪಡೆ ಪಟ್ಟಿ ಬಿಡುಗಡೆ: ಅಂಬಾರಿ ಸಾರಥಿ ಅಭಿಮನ್ಯುವಿಗೆ ಕೊಕ್‌

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಈ ಬಾರಿ ದಸರಾ ಗಜಪಡೆಯ ಪಟ್ಟಿಯಲ್ಲಿ ಮಹತ್ವದ…

5 hours ago

ಹನೂರು ಶೂಟೌಟ್‌ ಪ್ರಕರಣ: ತಮಿಳುನಾಡು ಸರ್ಕಾರದಿಂದಲೂ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ

ಚೆನ್ನೈ: ಹನೂರು ಶೂಟೌಟ್ ಪ್ರಕರಣದಲ್ಲಿ ಮೃತರ ಕುಟುಂಬಗಳಿಗೆ ತಮಿಳುನಾಡು ಸರ್ಕಾರದಿಂದಲೂ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ.…

5 hours ago

ಗ್ಯಾರೇಜ್‌ಗೆ ಬೆಂಕಿ ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

ಗುಂಡ್ಲುಪೇಟೆ: ಪಟ್ಟಣದ ಕೇರಳ ರಸ್ತೆಯಲ್ಲಿರುವ ಗ್ಯಾರೇಜ್‌ಗೆ ಬೆಂಕಿ ತಗುಲಿ ಸಂಪೂರ್ಣ ಗ್ಯಾರೇಜ್ ಸುಟ್ಟುಹೋಗಿರುವ ಘಟನೆ ನಡೆದಿದೆ. ಪಟ್ಟಣದ ವಾಹಿದ್ ಎಂಬುವವರಿಗೆ…

6 hours ago

ಕೆಆರ್‌ಎಸ್‌ನಿಂದ ತಮಿಳುನಾಡಿಗೆ 4917 ಕ್ಯೂಸೆಕ್‌ ನೀರು ಬಿಡುಗಡೆ

ಮಂಡ್ಯ: ರಾಜ್ಯದಲ್ಲಿ ಕೆಆರ್‌ಎಸ್‌ ಜಲಾಶಯದ ನೀರಿನ ವಿಚಾರವೂ ಚರ್ಚೆಗೆ ಬಂದಿದ್ದು, ಕೇವಲ 1951 ಕ್ಯೂಸೆಕ್ಸ್‌ ನೀರು ಹರಿದು ಬರುತ್ತಿರುವ ಡ್ಯಾಂನಿಂದ…

7 hours ago

ಕಾಡಾನೆಗಳ ಸೆರೆಗೆ ಕಾರ್ಯಾಚರಣೆ: ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್ 144 ಜಾರಿ

ಕೊಡಗು: ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಮೂರು ಗಂಡಾನೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಆದೇಶ ನೀಡಿದೆ. ಇಂದು ಬೆಳಿಗ್ಗೆ 10…

12 hours ago

ಹನೂರು ಎನ್‌ಕೌಂಟರ್: ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದೆವು: ACF ಮರಿಸ್ವಾಮಿ

ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ನಡೆದ ಹನೂರು ಎನ್‌ಕೌಂಟರ್ ಬಗ್ಗೆ ಮೊದಲ ಬಾರಿಗೆ ಕಾವೇರಿ ವನ್ಯಧಾಮದ ACF ಮರಿಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯೆ…

12 hours ago