Andolana originals

ಕ್ರೀಡಾಂಗಣ ಸೌಲಭ್ಯಕ್ಕಾಗಿ ಆಗ್ರಹಿಸಿ ಫೆ.೧೬ಕ್ಕೆ ಮ್ಯಾರಥಾನ್

ಎಂ.ನಾರಾಯಣ

ಸಾಧಕ ಕ್ರೀಡಾಪಟುಗಳನ್ನು ನೀಡಿದ ತಿ.ನರಸೀಪುರದಲ್ಲಿ ಸುಸಜ್ಜಿತ ಕ್ರೀಡಾಂಗಣವಿಲ್ಲ 

ತಿ.ನರಸೀಪುರ: ಖೋಖೋ ವಿಶ್ವಕಪ್ ನಲ್ಲಿ ಆಡುವಂತಹ ಕ್ರೀಡಾಪಟುಗಳನ್ನು ನೀಡಿದ ತಾಲ್ಲೂಕು ಕೇಂದ್ರದಲ್ಲಿ ಕ್ರೀಡಾಂಗಣ ಸೌಲಭ್ಯ ಬೇಕು ಎಂಬ ಕೂಗು ಈಗ ಹೋರಾಟದ ರೂಪ ಪಡೆದಿದ್ದು, ಅದಕ್ಕಾಗಿ ಫೆಬ್ರವರಿ ೧೬ರ ಭಾನುವಾರ ಬೆಳಿಗ್ಗೆ ೧೦.೩೦ಕ್ಕೆ  ಪಟ್ಟಣದ ವಿದ್ಯೋದಯ ಕಾಲೇಜು ವೃತ್ತದಿಂದ ತಾಲ್ಲೂಕು ಆಡಳಿತದ ಭವನದವರೆಗೆ ಮ್ಯಾರಥಾನ್ ನಡೆಯಲಿದೆ.

ತಾಲ್ಲೂಕಿನಲ್ಲಿ ಹಲವಾರು ದಶಕಗಳಿಂದ ಅಥ್ಲೀಟ್, ಜಾವೆಲಿನ್ ಥ್ರೋ, ವಾಲಿವಾಲ್, ನೆಟ್‌ಬಾಲ್ ಹಾಗೂ ಖೋಖೋ ಆಟಗಳಲ್ಲಿ ಪ್ರತಿಭಾವಂತ ಆಟಗಾರರು ಹೊರಹೊಮ್ಮಿದ್ದಾರೆ.  ಆದರೆ ಕ್ರೀಡಾಪಟುಗಳ ಅಭ್ಯಾಸಕ್ಕೆ   ತಾಲ್ಲೂಕು ಕೇಂದ್ರದಲ್ಲಿ ಕ್ರೀಡಾಂಗಣ ಇಲ್ಲದಿರುವುದು ಮಾತ್ರ ವಿಷಾದನೀಯ.

ಪ್ರಸ್ತುತ ಖಾಸಗಿ ವಿದ್ಯೋದಯ ಶಿಕ್ಷಣ ಸಂಸ್ಥೆಯಲ್ಲಿನ ಕ್ರೀಡಾಂಗಣವನ್ನು ಅವಲಂಬಿಸಲಾಗಿದೆ. ೨೦ ವರ್ಷಗಳಿಂದಲೂ ಕ್ರೀಡಾಂಗಣದ ಬೇಡಿಕೆ ಇದೆ.

ಈ ಹಿನ್ನೆಲೆಯಲ್ಲಿ ಕೆಲ ವರ್ಷಗಳ ಹಿಂದೆ ತಾಲ್ಲೂಕು ಕ್ರೀಡಾಂಗಣ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದು ಹಲವಾರು ಹಿರಿಯ ಕ್ರೀಡಾಪಟುಗಳು ಸ್ಥಳೀಯ ಜನಪ್ರತಿನಿಧಿಗಳಿಗೆ, ಜಿಲ್ಲಾ,  ತಾಲ್ಲೂಕು ಮಟ್ಟದ ಅಽಕಾರಿಗಳಿಗೆ ಮನವಿ ಮಾಡುತ್ತಾ ಬರಲಾಗಿದ್ದರೂ ಪ್ರಯೋಜನವಾಗಿಲ್ಲ.

ನಿರಂತರ ಮನವಿಗಳ ಮೇರೆಗೆ  ಸರ್ಕಾರ ಪಟ್ಟಣದ ಹೃದಯ ಭಾಗದಲ್ಲಿ ಭೈರಾಪುರ ಸರ್ವೆ ನಂ. ೪೬/೨,  ೪೬/೧ಎ,೪೬/೧ಬಿಯಲ್ಲಿ ಸುಮಾರು ೬ ಎಕರೆ ಮತ್ತು ಸರ್ವೆ ನಂ.೫೨ರಲ್ಲಿ ೩.೨೦ ಎಕರೆ ಒಟ್ಟು ೯.೨೦ ಎಕರೆ ಕ್ರೀಡಾಂಗಣಕ್ಕೆ ಯೋಗ್ಯ ಮತ್ತು ಸೂಕ್ತವಾದ ವಿಶಾಲ ಪ್ರದೇಶವನ್ನು ಗುರುತಿಸಿದೆ ಎಂದು ತಿಳಿದು ಬಂದಿದೆಯಾದರೂ ೧ ವರ್ಷದಿಂದ  ಅದು ಕಾರ್ಯರೂಪಕ್ಕೆ ಬರುವಲ್ಲಿ ವಿಳಂಬವಾಗಿದೆ. ಇದರ ನಡುವೆ ತಾಲ್ಲೂಕನ್ನು ಪ್ರತಿನಿಽಸಿ ಸಿದ್ದರಾಮಯ್ಯ ಅವರು ಸಿಎಂ ಆಗಿ ಹಾಗೂ ಡಾ.ಹೆಚ್.ಸಿ.ಮಹದೇವಪ್ಪರವರು  ಜಿಲ್ಲಾ ಉಸ್ತುವಾರಿ ಸಚಿವರಾಗಿ ರುವುದು ಕ್ರೀಡಾಂಗಣ ನಿರ್ಮಾಣದ ಭರವಸೆಯನ್ನು  ಜೀವಂತವಾಗಿಸಿದೆ.

ಇತ್ತೀಚೆಗೆ ತಾಲ್ಲೂಕಿನ ಗ್ರಾಮೀಣ ಪ್ರತಿಭೆ ಕುರುಬೂರಿನ ಬಿ.ಚೈತ್ರಾ ಮೊದಲ ವಿಶ್ವಕಪ್ ಖೋಖೋ ಪಂದ್ಯಾವಳಿಯಲ್ಲಿ ಆಡಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆಯುವ ಜತೆಗೆ ಭಾರತ ವಿಶ್ವಕಪ್ ಪಡೆಯಲು ಕೊಡುಗೆ ನೀಡಿದ್ದರಿಂದ ಕ್ರೀಡಾಂಗಣ ನಿರ್ಮಾಣ ಹೋರಾಟಕ್ಕೆ ಮತ್ತಷ್ಟು ಬಲ ಬಂದಿದೆ.

ಸುಸಜ್ಜಿತ ಕ್ರೀಡಾಂಗಣವಿಲ್ಲದಿದ್ದರೂ,  ಕ್ರೀಡಾಪಟುಗಳ ಕಣಜವಾದ ತಾಲ್ಲೂಕಿನ ನೂರಾರು ಕ್ರೀಡಾಪಟುಗಳು ಈಗಾಗಲೇ ವಿಶ್ವವಿದ್ಯಾನಿಲಯ, ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಾಲ್ಲೂಕಿನ ಕೀರ್ತಿ ಪತಾಕೆ ಹಿಡಿದಿದ್ದಾರೆ. ಕ್ರೀಡಾಪಟು ಗಳು ಹೆಚ್ಚಿನ ಅಭ್ಯಾಸಕ್ಕೆ ಮೈಸೂರಿಗೆ ತೆರಳಬೇಕಿದೆ.

” ಆಟೋಟಗಳಿಗೆ ಹಾಗೂ ಬಿಡುವಿನ ವೇಳೆ ಗ್ರಾಮೀಣ ಕ್ರೀಡಾಪಟುಗಳ ಉತ್ತಮ ಅಭ್ಯಾಸಕ್ಕೆ ತಾಲ್ಲೂಕು ಕೇಂದ್ರದಲ್ಲಿ ಸುಸಜ್ಜಿತ ಕ್ರೀಡಾಂಗಣ ಬೇಕಿದೆ. ಹೀಗಾಗಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಈ ಹೋರಾಟ ಹಮ್ಮಿಕೊಳ್ಳಲಾಗಿದೆ.  ಇದಕ್ಕೆ ಜನತೆ ಸಂಪೂರ್ಣವಾಗಿ ಸಹಕರಿಸಬೇಕು.”

-ಮಣಿಕಂಠರಾಜ್ ಗೌಡ,  ಸೇವಾಶ್ರಯ ಫೌಂಡೇಶನ್ ಅಧ್ಯಕ್ಷ

” ಪಟ್ಟಣದಲ್ಲಿ ವಾಯುವಿಹಾರಕ್ಕೆ ಮುಖ್ಯ ರಸ್ತೆಗಳಲ್ಲಿಯೇ ಸಂಚರಿಸಬೇಕಿದೆ. ಉದ್ಯಾನವನವೂ ಇಲ್ಲ.  ಈ ಕಾರಣದಿಂದ ಪಟ್ಟಣದಲ್ಲಿ ಕ್ರೀಡಾಂಗಣಕ್ಕೆ ಒತ್ತಾಯಿಸಿ   ಫೆ.೧೬ರ ಭಾನುವಾರ ಬೆಳಿಗ್ಗೆ ಕ್ರೀಡಾಂಗಣ ಹೋರಾಟ ಸಮಿತಿಯಿಂದ ವಿದ್ಯೋದಯ ಕಾಲೇಜು ವೃತ್ತದಿಂದ –  ಕಾಲೇಜು ರಸ್ತೆ, ಲಿಂಕ್ ರಸ್ತೆ, ಕೆನರಾ ಬ್ಯಾಂಕ್ ರಸ್ತೆ ಮೂಲಕ   ತಾಲ್ಲೂಕು ಆಡಳಿತ ಸೌಧಕ್ಕೆ ತೆರಳಿ ಮನವಿ ಸಲ್ಲಿಸುವ ಮ್ಯಾರಥಾನ್ ನಡಿಗೆ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ತಾಲ್ಲೂಕಿನ ಎಲ್ಲಾ ಕ್ರೀಡಾಪಟುಗಳು ಸೇರಿದಂತೆ  ಸಾರ್ವಜನಿಕರು ಭಾಗವಹಿಸಬೇಕು.”

 -ಆಲಗೂಡು ಶಿವಕುಮಾರ್, ದಸಂಸ ಜಿಲ್ಲಾ ಸಂಚಾಲಕ

” ೬ ವರ್ಷಗಳ ಹಿಂದೆ ಕ್ರೀಡಾಂಗಣ ಹೋರಾಟ ಸಮಿತಿ ಮೂಲಕ ಹಿಂದಿನ ವರುಣ ಶಾಸಕ ಡಾ.ಯತೀಂದ್ರರವರಿಗೆ ಮನವಿ ಮಾಡಿ ಅವರನ್ನು  ಹಾಗೂ ಈಗಿನ ಸಂಸದ ಸುನಿಲ್ ಬೋಸ್ ಅವರನ್ನು ಬೆನ್ನತ್ತಿದ ಹಿನ್ನೆಲೆಯಲ್ಲಿ ಪಟ್ಟಣದ ವ್ಯಾಪ್ತಿಯಲ್ಲಿ ಕೆಲ ಸ್ಥಳಗಳನ್ನು ಗುರುತಿಸಲಾಗಿದೆ. ೫ ಕೋಟಿ ರೂ. ಅನುದಾನವೂ ಇದೆ. ಅದರಲ್ಲಿ ಕ್ರೀಡಾಂಗಣ ನಿರ್ಮಿಸಲು ಒತ್ತಾಯಿಸಿ ಮ್ಯಾರಥಾನ್ ನಡೆಯಲಿದೆ.”

 -ಎಂ.ರಮೇಶ್, ಹೋರಾಟ  ಸಮಿತಿ ಅಧ್ಯಕ್ಷ.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಜನರ ಹಿತ ಕಾಯಲಿ!

ಜನರ ಹಿತ ಕಾಯಲಿ! ನಕಲಿ ವೈದ್ಯರು, ಕಲಬೆರಿಕೆ ಔಷಧದ ಹಾವಳಿಯಿಂದ ಜನ ಬೇಸ್ತುಬಿದ್ದಿರುವಾಗ ನೈಜ ದರಕ್ಕಿಂತ ಅತ್ಯಧಿಕ ದರಕ್ಕೆ ಔಷಧಿ ಮಾರಾಟ…

4 hours ago

ಓದುಗರ ಪತ್ರ: ಜಾಗೃತಿ, ನಿಯಂತ್ರಣ ಇರಬೇಕು

ಆಹಾರದಲ್ಲಿ ಬಳಸುವ ಉಪ್ಪು, ಸಕ್ಕರೆ ಬಳಕೆ ಪ್ರಮಾಣಕ್ಕೆ ಕಡಿವಾಣ ಹಾಕಲು ಅರೋಗ್ಯ ಇಲಾಖೆ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ಹಾಗೆಯೇ…

4 hours ago

ಓದುಗರ ಪತ್ರ: ಚಾ.ನಗರ ಜಿಲ್ಲೆಗೆ ವಿಶೇಷ ಅನುದಾನ ನೀಡಲು ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಲಿ

ಚಾಮರಾಜನಗರ ಜಿಯ ಕೊಳ್ಳೇಗಾಲ ಮತ್ತು ಹನೂರು ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು ರೂ.೫೦೦ ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ…

4 hours ago

ಆಯಾ ಕೆಲಸ ಮಾಡಿ ಮಕ್ಕಳನ್ನು ಮಾಸ್ಟರ್ಸ್‌ ಮಾಡಿದ ಸತ್ಯಮ್ಮ

ಪಂಜುಗಂಗೊಳ್ಳಿ ಅವರ ವಾರದ ಅಂಕಣ  ಮಕ್ಕಳು ದೊಡ್ಡ ಹುದ್ದೆಗಳಿಗೆ ಹೋದರೂ ತನ್ನ ಕಾಯಕ ಮುಂದುವರಿಸಿರುವ ‘ಮಹಾತಾಯಿ’ ತೆಲಂಗಾಣದ ಸಂಗಾರೆಡ್ಡಿಯ ರಾಕೇಶ್…

4 hours ago

ಮಂಜಿನ ನಗರಿಯಲ್ಲಿ ರಸ್ತೆಗಳ ದುಸ್ಥಿತಿ

ಪುನೀತ್ ಮಡಿಕೇರಿ ಮಡಿಕೇರಿ ದಸರಾ ಸಮೀಪಿಸುತ್ತಿದ್ದರೂ ಗುಂಡಿಗಳಿಗೆ ಸಿಗದ ಮುಕ್ತಿ ಮಡಿಕೇರಿ ದಸರಾ ಜನೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಆದರೆ, ದಸರಾ…

4 hours ago

ಅ.೧, ೨ರಂದು ಶ್ರೀ ಗುರುಮಲ್ಲೇಶ್ವರ ದಾಸೋಹ ಭವನ ಉದ್ಘಾಟನೆ

ಮಹೇಂದ್ರ ಹಸಗೂಲಿ ದೇಪಾಪುರದಲ್ಲಿ ಗುಡಿಸಲಿನಲ್ಲಿ ಆರಂಭವಾದ ಅನ್ನ ದಾಸೋಹಕ್ಕೆ ಈಗ ದಾಸೋಹ ಭವನದ ರೂಪ ಗುಂಡ್ಲುಪೇಟೆ: ಸಣ್ಣ ಗುಡಿಸಲಿನಲ್ಲಿ ಆರಂಭಗೊಂಡ…

4 hours ago