Andolana originals

ದಶಮಂಟಪ ತೀರ್ಪುಗಾರಿಕೆಯಲ್ಲಿ ಹಲವು ಬದಲಾವಣೆ?

ನವೀನ್ ಡಿಸೋಜ

ಗೊಂದಲಗಳಾಗದಂತೆ ಎಚ್ಚರ ವಹಿಸಲು ಸಮಿತಿ ನಿರ್ಧಾರ

ಅನುಭವದ ಆಧಾರದ ಮೇಲೆ ತೀರ್ಪುಗಾರರ ಆಯ್ಕೆ ಸಾಧ್ಯತೆ 

ಮಡಿಕೇರಿ: ಈ ಬಾರಿಯ ಮಡಿಕೇರಿ ದಸರಾ ಜನೋತ್ಸವದ ದಶಮಂಟಪ ತೀರ್ಪುಗಾರಿಕೆಯಲ್ಲಿ ಹಲವು ಬದಲಾವಣೆಗಳನ್ನು ತರಲು ದಶಮಂಟಪ ಸಮಿತಿ ಮುಂದಾಗಿದ್ದು, ತೀರ್ಪಿನಲ್ಲಿ ಯಾವುದೇ ಗೊಂದಲಗಳಾಗದಂತೆ ಎಚ್ಚರ ವಹಿಸಲು ನಿರ್ಧರಿಸಲಾಗಿದೆ.

ಮಡಿಕೇರಿ ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾದ ದಶ ಮಂಟಪಗಳ ಶೋಭಾಯಾತ್ರೆಯ ತೀರ್ಪುಗಾರಿಕೆ ಬಗ್ಗೆ ಇತ್ತೀಚಿನ ವರ್ಷಗಳಲ್ಲಿ ಕೆಲ ಮಂಟಪ ಸಮಿತಿಗಳಿಂದ ಅಪಸ್ವರ ಕೇಳಿಬರುತ್ತಿದೆ. ಹಲವು ಸಂದರ್ಭಗಳಲ್ಲಿ ತೀರ್ಪಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಮಂಟಪ ಸಮಿತಿಗಳು ವೇದಿಕೆಯಲ್ಲಿಯೇ ಪ್ರತಿಭಟಿಸಿದ ಉದಾಹರಣೆಗಳಿವೆ.

ಇತ್ತೀಚಿನ ವರ್ಷಗಳಲ್ಲಿ ಪ್ರತಿ ವರ್ಷ ಒಂದಲ್ಲಾ ಒಂದು ಸಮಿತಿಗಳು ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಲೇ ಇವೆ. ಹೀಗಾಗಿ ಈ ಬಾರಿ ದಸರಾ ದಶಮಂಟಪ ತೀರ್ಪುಗಾರಿಕೆಯಲ್ಲಿ ಹಲವು ಬದಲಾವಣೆಗಳನ್ನು ತರಲು ಶ್ರೀ ಕೋಟೆ ಮಹಾಗಣಪತಿ ದಸರಾ ದಶಮಂಟಪ ಸಮಿತಿ ಮುಂದಾಗಿದೆ. ಈ ಬಾರಿ ಒಟ್ಟು ನಾಲ್ಕು ಮಂದಿ ತೀರ್ಪುಗಾರರು ಇರಲಿದ್ದು, ಎಲ್ಲರಿಗೂ ಮಂಟಪಗಳಲ್ಲಿನ ಅನುಭವದ ಆಧಾರದ ಮೇಲೆಯೇ ಜವಾಬ್ದಾರಿ ವಹಿಸಲು ತೀರ್ಮಾನಿಸಲಾಗಿದೆ.

ದಸರಾ ಮಂಟಪಗಳ ವಿಚಾರದಲ್ಲಿ ಅನುಭವ ಇಲ್ಲದವರನ್ನು ತೀರ್ಪುಗಾರರನ್ನಾಗಿ ಆಯ್ಕೆ ಮಾಡಲಾಗುತ್ತಿದೆ ಎಂಬ ಅಸಮಾಧಾನ ಈ ಹಿಂದೆ ಕೆಲ ಸಮಿತಿಗಳಿಂದ ವ್ಯಕ್ತವಾಗಿದೆ. ತೀರ್ಪುಗಾರರನ್ನು ನೇಮಕ ಮಾಡುವ ಸಂಪೂರ್ಣ ಜವಾಬ್ದಾರಿ ದಶ ಮಂಟಪ ಸಮಿತಿಯನ್ನು ಮುನ್ನಡೆಸುವವರದ್ದೇ ಆಗಿರುವುದರಿಂದ ಅವರಿಗೆ ಬೇಕಾದಂತೆ ತೀರ್ಪುಗಾರರನ್ನು ಆಯ್ಕೆ ಮಾಡಲಾಗುತ್ತಿದೆ ಎಂಬ ಅಪಸ್ವರ ಕೇಳಿಬರುತ್ತಲೇ ಇದೆ. ಹೀಗಾಗಿ ಈ ಬಾರಿ ಅಂತಹ ಕಳಂಕ ಬಾರದಂತೆ ಜವಾಬ್ದಾರಿ ಹೊತ್ತಿರುವ ಕೋಟೆ ಶ್ರೀ ಮಹಾಗಣಪತಿ ದಸರಾ ಸಮಿತಿ ನೇತೃತ್ವದ ದಶ ಮಂಟಪ ಸಮಿತಿ ಎಚ್ಚರ ವಹಿಸುತ್ತಿದೆ.

ನಾಲ್ಕು ಮಂದಿ ತೀರ್ಪುಗಾರರ ಪೈಕಿ ಇಬ್ಬರು ಮಡಿಕೇರಿ ದಸರಾ ಹಿನ್ನೆಲೆ ಇರುವವರು, ಸಂಪ್ರದಾಯ ತಿಳಿದಿರುವ ಹಿರಿಯರು, ಇಂದಿನ ಅತ್ಯಾಧುನಿಕ ತಂತ್ರಜ್ಞಾನ ಬಳಕೆಯ ಅನುಭವ ಇರುವ ದಸರಾದಲ್ಲಿ ಕೆಲಸ ಮಾಡಿರುವ ಇಬ್ಬರು ಯುವ ತೀರ್ಪುಗಾರರನ್ನು ಆಯ್ಕೆ ಮಾಡಲಾಗುತ್ತಿದೆ. ಇದಕ್ಕಾಗಿ ಎಲ್ಲ ಸಮಿತಿಗಳಿಂದಲೂ ತೀರ್ಪುಗಾರರನ್ನು ಶೀಫಾರಸ್ಸು ಮಾಡಲು ದಶ ಮಂಟಪ ಸಮಿತಿ ಕೇಳಿಕೊಂಡಿದೆ. ಎಲ್ಲಾ ಸಮಿತಿಗಳಿಂದ ಬರುವ ಹೆಸರುಗಳ ಪೈಕಿ ನಾಲ್ವರ ಹೆಸರುಗಳನ್ನು ಅಂತಿಮಗೊಳಿಸಲಾಗುತ್ತದೆ. ಅಲ್ಲದೇ ತೀರ್ಪುಗಾರರಾಗಿ ಆಯ್ಕೆಯಾಗುವ ನಾಲ್ವರ ಹಿನ್ನೆಲೆ, ಅನುಭವದ ವಿವರವನ್ನು ಉತ್ಸವಕ್ಕೂ ಮೊದಲೇ ಸಾರ್ವಜನಿಕವಾಗಿ ಹಂಚಿಕೊಳ್ಳಲಾಗುತ್ತದೆ ಎಂದು ದಶ ಮಂಟಪ ಸಮಿತಿ ಮೂಲಗಳಿಂದ ತಿಳಿದುಬಂದಿದೆ.

ಆಯಾ ದೇವಾಲಯಗಳ ಮಂಟಪ ಸಮಿತಿಗಳು ತಮಗೆ ನೀಡಲಾದ ಸಮಯಕ್ಕೆ ಸರಿಯಾಗಿ ತೀರ್ಪುಗಾರಿಕೆ ಪ್ರದರ್ಶನ ನೀಡಬೇಕೆಂದು ಸೂಚಿಸಲಾಗುತ್ತಿದೆ. ತೀರ್ಪುಗಾರರಿಗೂ ಮೊದಲೇ ದಶ ಮಂಟಪ ಸಮಿತಿಯ ತಂಡವೊಂದು ಪ್ರತಿ ಮಂಟಪದ ಬಳಿ ತೆರಳಿ ಮಂಟಪ ತಯಾರಿಸಿರುವುದು ನಿಯಮ ಬದ್ಧವಾಗಿದೆಯೇ? ಟ್ರಾಕ್ಟರ್ ಚಾಲನಾ ಸ್ಥಿತಿಯಲ್ಲಿದೆಯೇ ಎಂಬುದನ್ನು ಪರಿಶೀಲಿಸಿ ತೀರ್ಪುಗಾರರಿಗೆ ಮಾಹಿತಿ ನೀಡುತ್ತಾರೆ. ತೀರ್ಪುಗಾರರು ಬಂದು ನಿಂತ ಕೂಡಲೇ ಹಿಂದಿನಂತೆ ಟ್ರಾಕ್ಟರ್ ಚಾಲಿಸಿ ತೋರಿಸುವುದು ಮತ್ತಿತರ ಯಾವುದೇ ಕ್ರಮಗಳಿಲ್ಲದೇ ನೇರವಾಗಿ ಕಥಾ ಸಾರಾಂಶವನ್ನು ಪ್ರಸ್ತುತಪಡಿಸಬಹುದಾಗಿದೆ. ಇದರಿಂದ ಸಮಯದ ಉಳಿತಾಯವಾಗಲಿದೆ ಎನ್ನುವುದು ದಸರಾ ದಶಮಂಟಪ ಸಮಿತಿ ಲೆಕ್ಕಾಚಾರವಾಗಿದೆ. ಬೆಳಗಿನ ಜಾವ ೪.೩೦ರ ವೇಳೆಗೆ ಎಲ್ಲಾ ೧೦ ಮಂಟಪಗಳ ಜಡ್ಜ್‌ಮೆಂಟ್ ಶೋ ಮುಗಿಸಲು ಚಿಂತಿಸಲಾಗುತ್ತಿದೆ.

ಸುಗಮ ಪ್ರದರ್ಶನಕ್ಕೆ ಅವಕಾಶ ಕೊಡುವ ನಿಟ್ಟಿನಲ್ಲಿ ಹಲವು ಬದಲಾವಣೆಗಳನ್ನು ತರಲು ದಶಮಂಟಪ ಸಮಿತಿಯ ಸಭೆಯಲ್ಲಿ ಚರ್ಚಿಸಲಾಗಿದೆ. ಅದರಂತೆ ನಗರದ ಟೌನ್ ಹಾಲ್ ಮುಂಭಾಗದಲ್ಲಿ ಯಾವುದೇ ಮಂಟಪದ ಪ್ರದರ್ಶನ ಇರುವುದಿಲ್ಲ. ಕುಂದುರುಮೊಟ್ಟೆ ದೇವಾಲಯದ ಮಂಟಪಕ್ಕೆ ರಾಜ್ ದರ್ಶನ್ ಬಳಿ, ದೇಚೂರು ಮಂಟಪಕ್ಕೆ ಆಂಜನೇಯ ದೇವಾಲಯದ ಬಳಿ ಸ್ಥಳ ನೀಡುವ ಕುರಿತು ಚಿಂತನೆ ನಡೆದಿದೆ. ಇಂತಹ ಹಲವು ಬದಲಾವಣೆಗಳ ಮೂಲಕ ಜನದಟ್ಟಣೆ ನಿರ್ವಹಣೆಗೂ ಸಮಿತಿ ಸಿದ್ಧತೆ ನಡೆಸಿದೆ.

” ಈ ಬಾರಿ ದಸರಾ ದಶಮಂಟಪಗಳ ತೀರ್ಪುಗಾರಿಕೆಯಲ್ಲಿ ಹಲವು ಬದಲಾವಣೆಗಳನ್ನು ತರಲು ತೀರ್ಮಾನಿಸಲಾಗಿದ್ದು, ದಶ ಮಂಟಪ ಸಭೆಯಲ್ಲಿ ಈ ವಿಚಾರವಾಗಿ ಎಲ್ಲಾ ೧೦ ಮಂಟಪ ಸಮಿತಿಗಳೊಂದಿಗೆ ಚರ್ಚಿಸಲಾಗುವುದು. ಒಮ್ಮತದ ತೀರ್ಮಾನ ತೆಗೆದುಕೊಂಡು ಬಳಿಕ ಹೊಸ ನಿಯಮಗಳು ಮತ್ತು ಕ್ರಮಗಳನ್ನು ಪ್ರಕಟಿಸಲಾಗುವುದು.”

-ಬಿ.ಎಂ. ರಾಜೇಶ್, ಗೌರವಾಧ್ಯಕ್ಷ, ದಸರಾ ದಶಮಂಟಪ ಸಮಿತಿ

ಆಂದೋಲನ ಡೆಸ್ಕ್

Recent Posts

ಮಂಡ್ಯ | ಕಬ್ಬಿನ ಗದ್ದೆಯಲ್ಲಿ ಮೂರು ಚಿರತೆ ಮರಿಗಳು ಪತ್ತೆ

ಮಂಡ್ಯ : ತಾಲೂಕಿನ ಸೂನಗಹಳ್ಳಿ-ಬೂತನಹೊಸೂರು ನಡುವಿನ ಹೆಬ್ಬಾಳ ಕಟ್ಟೆ ಬಳಿ ಕಬ್ಬಿನ ಗದ್ದೆಯಲ್ಲಿ ಬುಧವಾರ ಮೂರು ಚಿರತೆ ಮರಿಗಳು ಪತ್ತೆಯಾಗಿವೆ.…

10 hours ago

ಹಾರ್ಮುಜ್ ಜಲಸಂಧಿ ಬಳಿ ಅಮೆರಿಕ ದಾಳಿ : ಇರಾನಿನ ಕ್ಷಿಪಣಿ ತಾಣ ನಾಶ

ಟೆಹ್ರಾನ್ : ಇರಾನ್ ಹಿಡಿತದಲ್ಲಿದ್ದ ಜಗತ್ತಿನ ಪ್ರಮುಖ ಹಾರ್ಮುಜ್ ಜಲಸಂಧಿ ಬಳಿ ಅಮೆರಿಕ ತೀವ್ರ ದಾಳಿ ನಡೆಸಿದೆ. ಜಲಮಾರ್ಗದ ಬಳಿಕ…

11 hours ago

ಮರ್ಯಾದಾ ಹತ್ಯೆ ನಿಷೇಧ ಮಸೂದೆ ಮಂಡನೆ

ಬೆಂಗಳೂರು : ರಾಜ್ಯದಲ್ಲಿ ಮರ್ಯಾದೆಯ ಹೆಸರಿನಲ್ಲಿ ಹತ್ಯೆ, ಹಲ್ಲೆ ಮತ್ತು ಬೆದರಿಕೆ ಹಾಕುವವರಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವ…

12 hours ago

ಮೈಸೂರು ನಗರದಲ್ಲಿ ಮಳೆ ; ತಂಪಾದ ಇಳೆ

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿಲ್ಲಿ ಬುಧವಾರ ಸಂಜೆ ಏಕಾಏಕಿ ಮಳೆ ಸುರಿದು ಬಿರು ಬಿಸಿಲಿನಿಂದ ಬಳಲಿದ್ದ ನಗರವನ್ನು ಸ್ವಲ್ಪ…

13 hours ago

ಯುಗಾದಿ ಸಂಭ್ರಮ : ಮೈಸೂರಲ್ಲಿ ಖರೀದಿ ಜೋರು

ಮೈಸೂರು : ನಾಡಿನಾದ್ಯಂತ ಯುಗಾದಿ ಹಬ್ಬದ ಸಂಭ್ರಮ ಜೋರಾಗಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಹಬ್ಬದ ಕಳೆಗಟ್ಟಿದೆ. ಅರಮನೆಯಲ್ಲಿ ವಿಶೇಷ ಸಾಂಸ್ಕೃತಿಕ…

14 hours ago

ನಾಳೆ ಧುರಂಧರ್-2 ಬಿಡುಗಡೆ : ಎಲ್ಲಾ ದಾಖಲೆ ಮುರಿಯುವ ನಿರೀಕ್ಷೆ

ಮುಂಬೈ : ಆದಿತ್ಯ ಧರ್‌ ನಿರ್ದೇಶನದ, ರಣವೀರ್‌ ನಟನೆಯ ಧುರಂಧರ್-2 ಚಿತ್ರದ ಎರಡನೇ ಭಾಗವು ನಾಳೆ(ಮಾರ್ಚ್.‌19) ಬಿಡುಗಡೆಯಾಗಲಿದೆ. ಕಳೆದ ವರ್ಷ…

15 hours ago