ಮೈಸೂರು ಜಿಲ್ಲೆಯಲ್ಲಿ ಒಟ್ಟು 4,270 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆದಿರುವ ರೈತರು
ದೂರ ನಂಜುಂಡಸ್ವಾಮಿ
ದೂರ: ಹಣ್ಣುಗಳ ರಾಜ ಮಾವಿನ ಹಣ್ಣು ಎಂದರೆ ಜನರ ಬಾಯಲ್ಲಿ ನೀರೂರುತ್ತದೆ. ರೈತರಿಗೆ ಉತ್ತಮವಾದ ಆದಾಯವನ್ನು ತಂದುಕೊಡುವ ಮಾವು ಪ್ರತಿ ಬಾರಿಗಿಂತ ಈ ಬಾರಿ ಹೆಚ್ಚಿನ ಲಾಭ ತರುವ ನಿರೀಕ್ಷೆಯನ್ನು ರೈತರಲ್ಲಿ ಮೂಡಿಸಿದೆ.
ಮೈಸೂರು ಜಿಲ್ಲೆಯಲ್ಲಿ ಒಟ್ಟು ೪,೨೭೦ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಮೈಸೂರು ತಾಲ್ಲೂಕಿನಲ್ಲಿ ೧,೬೪೦ ಹೆಕ್ಟೇರ್, ಎಚ್. ಡಿ. ಕೋಟೆಯಲ್ಲಿ ೬೨೭, ಹುಣಸೂರಿನಲ್ಲಿ ೧,೨೬೪, ಕೆ. ಆರ್. ನಗರದಲ್ಲಿ ೮೮, ನಂಜನಗೂಡಿ ನಲ್ಲಿ ೩೬೨, ಪಿ. ಪಟ್ಟಣದಲ್ಲಿ ೫೩, ತಿ. ನರಸೀಪುರ ದಲ್ಲಿ ೨೧೭, ಸರಗೂರಿನಲ್ಲಿ ೨೧ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ.
ಮೈಸೂರು ತಾಲ್ಲೂಕಿನ ಜಯಪುರ ಹಾಗೂ ಇಲವಾಲ ಹೋಬಳಿಯಲ್ಲಿ ಅತಿ ಹೆಚ್ಚು ಹಾಗೂ ಕಸಬಾ ಮತ್ತು ವರುಣ ಹೋಬಳಿಯಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಮಾವು ಬೆಳೆಯನ್ನು ಬೆಳೆಯಲಾಗಿದೆ.
ಈ ಬಾರಿ ಹೂ ಬಿಡುವುದು ತಡವಾದರೂ ಕೂಡ ಐದಾರು ವರ್ಷಗಳಿಗೆ ಹೋಲಿಸಿದರೆ ಅತಿ ಹೆಚ್ಚು ಹೂ ಬಿಟ್ಟಿರುವುದರಿಂದ ಮಾವು ತಜ್ಞರ ಪ್ರಕಾರ ಶೇ. ೭೫-೮೦ರಷ್ಟು ಇಳುವರಿ ನಿರೀಕ್ಷೆಯಲ್ಲಿ ರೈತರು ಇದ್ದಾರೆ.
ಹತ್ತಾರು ವರ್ಷಗಳ ಹಿಂದೆ ಮಾವು ಒಂದೇ ಬಾರಿ ಹೂ ಬಿಟ್ಟು ಕಾಯಾಗುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಹವಾಮಾನದ ಕೊರತೆಯಿಂದ ಡಿಸೆಂಬರ್‌ನಿಂದ ಫೆಬ್ರವರಿತನಕವೂ ಹೂ ಬಿಡುತ್ತಿದೆ. ಅಲ್ಲದೆ
ಹಿಂದೆ ರೋಗವನ್ನು ತಡೆಗಟ್ಟಲು ಒಂದರಿಂದ ಎರಡು ಬಾರಿ ಮಾತ್ರ ರಾಸಾಯನಿಕ ಸಿಂಪಡಣೆ ಮಾಡುತ್ತಿದ್ದರು. ಆದರೆ ಈ ಬಾರಿ ಬೂದಿರೋಗ, ಜೋನು ಅಲ್ಲಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರು ವುದರಿಂದ ಈಗಾಗಲೇ ರೈತರು ಹಾಗೂ ಮಾವು ಬೆಳೆ ಪಡೆದ ಗುತ್ತಿಗೆದಾರರು ನಾಲ್ಕರಿಂದ ಐದು ಬಾರಿ ರಾಸಾಯನಿಕ ಸಿಂಪಡಣೆ ಮಾಡಿ ಮಾವು ಬೆಳೆಯನ್ನು ರಕ್ಷಿಸಿಕೊಳ್ಳುತ್ತಿದ್ದಾರೆ.
ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಎಲ್ಲಾ ಕಡೆಗಳಲ್ಲಿ ಅತಿ ಹೆಚ್ಚು ಹೂ ಬಿಟ್ಟಿರುವುದರಿಂದ ಉತ್ತಮ ಇಳುವರಿ ನಿರೀಕ್ಷೆಯಲ್ಲಿ ರೈತರು ಹಾಗೂ ಗುತ್ತಿಗೆದಾರರು ಇದ್ದಾರೆ. ಈ ಬಾರಿ ಉತ್ತಮವಾಗಿ ಮಳೆಯಾದರೂ ಕೂಡ ಇತರೆ ಬೆಳೆಗಳು ಸರಿಯಾದ ಪ್ರಮಾಣದಲ್ಲಿ ಲಾಭದಾಯಕ ವಾಗಲಿಲ್ಲ. ಆದರೆ ತೋಟಗಾರಿಕೆ ಬೆಳೆಯಾದ ಮಾವು ಉತ್ತಮ ಆದಾಯ ತರಬಹುದೆಂಬ ನಿರೀಕ್ಷೆಯಲ್ಲಿ ರೈತರು ಇದ್ದಾರೆ.
ಕಳೆದ ವರ್ಷ ಹೆಚ್ಚು ಬೆಲೆ ಇದ್ದರೂ ಉತ್ತಮ ಇಳುವರಿ ಇಲ್ಲದೆ ರೈತರು ಹಾಗೂ ಗುತ್ತಿಗೆದಾರರು ನಷ್ಟ ಅನುಭವಿಸಿದ್ದರು. ಈ ಬಾರಿ ಉತ್ತಮ ಇಳುವರಿ ನಿರೀಕ್ಷೆ ಇದೆ. ಆದರೆ ಬಿಟ್ಟ ಹೂವು ಕಾಯಾಗುವವರೆಗೂ ರೋಗಗಳಿಂದ ಕಾಪಾಡುವುದು ನಮಗೆ ಸವಾಲಾಗಿದೆ. ಇದರಿಂದ ಕಳೆದ ಬಾರಿಗಿಂತ ಈ ಬಾರಿ ಅತಿ ಹೆಚ್ಚು ಔಷಧಿ ಸಿಂಪಡಣೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. -ಯೋಗೀಶ್, ಮಾವು ಗುತ್ತಿಗೆದಾರರು, ಹುಲ್ಲಹಳ್ಳಿ.
ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…
ನವದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೋದ ಬಾಕಿ ಇರುವ ಎಲ್ಲಾ ಪ್ರಯಾಣಿಕರ ಮರುಪಾವತಿಗಳನ್ನು ವಿಳಂಬವಿಲ್ಲದೇ ಪಾವತಿಸಲು ಆದೇಶಿಸಿದೆ. ರದ್ದಾದ ಅಥವಾ…
ತುಮಕೂರು: ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆ ಚರ್ಚೆ ಬೆನ್ನಲ್ಲೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತು…
ಹಾಸನ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ದೆಹಲಿ ಪೊಲೀಸರು ನೋಟಿಸ್ ಕೊಟ್ಟ ವಿಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು…
ಹಾಸನ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಕರ್ನಾಟಕದ ಇತಿಹಾಸದಲ್ಲಿಯೇ ಕಾಂಗ್ರೆಸ್…
ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…