ಬಿ.ಟಿ. ಮೋಹನ್ ಕುಮಾರ್
ಗ್ರಾಮೀಣ, ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ, ಶೈಕ್ಷಣಿಕ ವೆಚ್ಚವೂ ಕಡಿಮೆ
ಕೃಷಿ ವಿಜ್ಞಾನಿಗಳು, ಸರ್ಕಾರ ಹಾಗೂ ಕೃಷಿ ಸಚಿವರ ಒಮ್ಮತದ ಅಭಿಪ್ರಾಯ
ಮಂಡ್ಯ: ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯಕ್ಕಿಂತ ಮಂಡ್ಯ ತಾಲ್ಲೂಕಿನ ವಿ.ಸಿ. ಫಾರಂನ ಕೃಷಿ ವಿವಿಯು ಸಂಶೋಧನೆಗೆ ಹೆಚ್ಚು ಸೂಕ್ತವಾದ ಸ್ಥಳವಾಗಿದೆ ಎನ್ನುವುದು ಕೃಷಿ ವಿಜ್ಞಾನಿಗಳು, ಸರ್ಕಾರ ಹಾಗೂ ಕೃಷಿ ಸಚಿವಎನ್. ಚಲುವರಾಯಸ್ವಾಮಿ ಅವರ ಒಮ್ಮತದ ಅಭಿಪ್ರಾಯವಾಗಿದೆ.
ಮಂಡ್ಯ ತಾಲ್ಲೂಕು ವಿ.ಸಿ.ಫಾರಂ ಆವರಣವು ಐತಿಹಾಸಿಕ ಹಿನ್ನೆಲೆಯುಳ್ಳ ಹಾಗೂ ೧೯೩ರಲ್ಲಿ ಪ್ರಥಮ ಕೃಷಿ (ಕಬ್ಬು/ಸಕ್ಕರೆ) ಸಂಶೋಧನಾ ಕೇಂದ್ರವಾಗಿ ಪ್ರಾರಂಭಗೊಂಡಿದ್ದು, ಪ್ರಸ್ತುತ ಅಖಿಲ ಭಾರತ ಸುಸಂಘಟಿತ ಸಂಶೋಧನೆ ಪ್ರಾಯೋಜನೆಯಡಿ ಭತ್ತ, ಕಬ್ಬು, ಮುಸುಕಿನ ಜೋಳ, ರಾಗಿ, ಮೇವಿನ ಬೆಳೆ ಹಾಗೂ ಕೃಷಿ ಯಂತ್ರೋಪಕರಣಗಳ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಈ ಸಂಶೋಧನೆಗಳ ಫಲಿತಾಂಶದಿಂದ ರೈತರಿಗೆ ಸಹಾಯ ವಾಗುತ್ತಿದೆ.
ಬೆಂಗಳೂರು ಕೃಷಿ ವಿವಿ ವ್ಯಾಪ್ತಿಯ ಎಲ್ಲ ಕೇಂದ್ರಗಳಿಗಿಂತ ಉತ್ತಮವಾಗಿರುವುದರಿಂದ ಹಾಸನದ ಕೃಷಿ ಮಹಾ ವಿದ್ಯಾಲಯವನ್ನು ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾನಿಲಯ ವ್ಯಾಪ್ತಿಗೆ ಸೇರಿಸುವುದರಿಂದ ತುಂಬಾ ಅನುಕೂಲವಾಗುತ್ತದೆ. ಜೊತೆಗೆ ಉತ್ತಮ ಗುಣಮಟ್ಟದ ತೆಂಗಿನ ಸಸಿಗಳು, ವಿವಿಧ ಬೆಳೆಗಳ ಬೀಜೋತ್ಪಾದನೆ, ಸಿರಿಧಾನ್ಯಗಳ ತಾಂತ್ರಿಕ ಮಾಹಿತಿಯ ಲಭ್ಯತೆ ಮತ್ತು ಉತ್ಪಾದನೆಗೆ ಬೇಕಾಗುವ ವೈಜ್ಞಾನಿಕ ತರಬೇತಿಯನ್ನು ಹಾಸನ ಜಿಲ್ಲೆಯ ರೈತರಿಗೆ ತ್ವರಿತವಾಗಿ ನೀಡಲು ಸಾಧ್ಯವಾಗುತ್ತದೆ.
ಹಾಸನ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೃಷಿ ಮಹಾವಿದ್ಯಾಲಯಗಳು, ಕೃಷಿ ಸಂಬಂಽತ ಇತರೆ ಸಂಸ್ಥೆಗಳು, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ವಿ.ಸಿ. ಫಾರಂ ಕೃಷಿ ವಿವಿಗೆ ಸೇರಿಸಿರುವುದರಿಂದ ಬೆಂಗಳೂರು ಕೃಷಿ ವಿವಿಗಿಂತ ಸಂಶೋಧನೆ, ವಿಸ್ತರಣೆ ಮತ್ತು ಆಡಳಿತಾತ್ಮಕ ಚಟುವಟಿಕೆಗಳನ್ನು ಸುಗಮವಾಗಿ ನಡೆಸಲು ಅನುಕೂಲಕರವಾಗಿದೆ. ಹಾಸನದ ಕೃಷಿ ಮಹಾವಿದ್ಯಾಲಯ ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾನಿಲಯಕ್ಕೆ ಕೇವಲ ೧೦೦ ಕಿ.ಮೀ. ಹತ್ತಿರವಿದ್ದು, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ೧೮೩ ಕಿ.ಮೀ. ದೂರದಲ್ಲಿದೆ. ಹೀಗಾಗಿ ಎಲ್ಲ ಕಾರ್ಯ ಚಟುವಟಿಕೆಗಳಿಗೆ ನೆರವಾಗಲಿದೆ.
ಹಾಸನ ಕೃಷಿ ಮಹಾವಿದ್ಯಾಲಯ ಮತ್ತು ಇತರೆ ಕೃಷಿ ಸಂಬಂಧಿತ ಸಂಸ್ಥೆಗಳು ಹಾಗೂ ಮಂಡ್ಯದ ವಿ.ಸಿ. ಫಾರಂ ಇವೆರಡೂ, ಮಣ್ಣು ಮತ್ತು ಮಳೆ ಆಧಾರದ ಮೇಲೆ ವಿಂಗಡಿಸಿರುವ ಕೃಷಿ ಹವಾಮಾನ ವಲಯದಡಿ ಬರುವ ‘ದಕ್ಷಿಣ ಒಣ ವಲಯ’ಕ್ಕೆ ಸೇರಿರುವುದರಿಂದ, ಮಂಡ್ಯದ ವಿ.ಸಿ. ಫಾರಂನಲ್ಲಿ ನಡೆಯುವ ಸಂಶೋಧನೆ ಹಾಗೂ ಫಲಿತಾಂಶಗಳು ಹಾಸನ ಜಿಲೆಯ ರೈತರಿಗೂ ಅನ್ವಯಿಸುತ್ತವೆ.
ಅಲ್ಲದೆ, ಪ್ರಸ್ತುತ ವಾತಾವರಣ-ವೈಪರೀತ್ಯವನ್ನು ಎದುರಿಸಲು ವಿ.ಸಿ. ಫಾರಂನಲ್ಲಿ ಸೂಕ್ತವಾದ ವಿವಿಧ ಬೆಳೆಗಳ ಪ್ರಯೋಗಗಳು ನಡೆಯುತ್ತಿದ್ದು, ಇದರಿಂದ ಹಾಸನ ಜಿಲ್ಲೆಯ ಬೆಳೆಗಳಿಗೆ ತಂತ್ರಜ್ಞಾನಗಳನ್ನು ಒದಗಿಸಲು ಮಂಡ್ಯ ಕೃಷಿ ವಿಜ್ಞಾನಗಳ ವಿವಿ ಹೆಚ್ಚು ಸಹಕಾರಿಯಾಗಿದೆ.
ರೈತರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಮೈಸೂರು ವಿಭಾಗದಡಿ ನೂತನವಾಗಿ ಮಂಡ್ಯ ವಿ.ಸಿ. ಫಾರಂನಲ್ಲಿ ಕೃಷಿ ವಿಜ್ಞಾನಗಳ ವಿವಿಯನ್ನು ಪ್ರಾರಂಭಿಸಲು ಬೇಕಾಗಿರುವ ಜಮೀನು (೬೪೦ ಎಕರೆ) ಮತ್ತು ನೀರಿನ ಲಭ್ಯತೆ, ಮೂಲಸೌಕರ್ಯಗಳ ಬಳಕೆಯಿಂದ ಹಾಸನ ಜಿಲ್ಲೆಯ ರೈತರಿಗೆ ಹೊಸ ಬೆಳೆಗಳತಾಂತ್ರಿಕತೆ, ವೈಜ್ಞಾನಿಕ ತರಬೇತಿ ಮತ್ತು ಮಾಹಿತಿಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನೀಡಬಹುದು. ಸಂಶೋಧನಾ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲ ಮಂಡ್ಯ ಕೃಷಿ ವಿಜ್ಞಾನಗಳ ವಿವಿ ವ್ಯಾಪ್ತಿಯ ಮಹಾವಿದ್ಯಾಲಯಗಳಲ್ಲಿ, ಅಭ್ಯಸಿಸುವ ಬಹುತೇಕ ವಿದ್ಯಾರ್ಥಿಗಳು ರೈತರ ಮಕ್ಕಳು ಹಾಗೂ ಗ್ರಾಮೀಣ ಪ್ರದೇಶದವರೂ ಆಗಿರುವುದರಿಂದ ಅವರ ವಿದ್ಯಾಭ್ಯಾಸಕ್ಕೆ ಮತ್ತು ವಸತಿ ನಿಲಯಕ್ಕೆ ಸಂಬಂಧಪಟ್ಟ ವೆಚ್ಚವನ್ನು ಕಡಿಮೆ ಖರ್ಚಿನಲ್ಲಿ ನಿಭಾಯಿಸಬಹುದಾಗಿದೆ. ಅಲ್ಲದೆ, ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳ ಸಂಶೋಧನೆಗೆ ಪೂರಕವಾದ ನೀರು ಮತ್ತು ಉತ್ತಮ ಗುಣಮಟ್ಟದ ಮಣ್ಣಿನ ಲಭ್ಯತೆ ಜೊತೆಗೆ ಇನ್ನಿತರೆ ಎಲ್ಲ ಸೌಕರ್ಯಗಳು ದೊರೆಯುವುದರಿಂದ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕೆಗೆ ಸಹಕಾರಿಯಾಗಿದೆ.ಈ ಎಲ್ಲ ಕಾರಣಗಳಿಂದ ಹಾಸನ ಜಿಲ್ಲೆ ವ್ಯಾಪ್ತಿಯ ಕೃಷಿ ಮಹಾವಿದ್ಯಾಲಯಗಳು ಮತ್ತು ಕೃಷಿ ಸಂಬಂಧಿತ ಇತರೆ ಸಂಸ್ಥೆಗಳನ್ನು ಮಂಡ್ಯ ಕೃಷಿ ವಿಜ್ಞಾನಗಳ ವಿವಿ ವ್ಯಾಪ್ತಿಗೆ ಸೇರಿಸಿರುವುದು ಸೂಕ್ತವಾಗಿದೆ ಎಂಬ ಚಿಂತನೆ ನಡೆದಿದೆ.
‘ಕೃಷಿ ಬಗ್ಗೆ ಹೆಚ್ಚು ಒಲವು ಬೆಳೆಸಲು ನೆರವು’”
” ಮಂಡ್ಯ ಜಿಲ್ಲೆಯ ಜನತೆ ಹಾಗೂ ರಾಜ್ಯದ ಎಲ್ಲ ಕೃಷಿಕರ ಅಭ್ಯುದಯದ ಗುರಿಯೊಂದಿಗೆ ಈ ಕೃಷಿ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸಲಿದ್ದು, ಕೃಷಿಯಲ್ಲಿ ನಾವೀನ್ಯತೆ ಕಂಡುಕೊಳ್ಳಲು, ವಿಜ್ಞಾನವನ್ನು ಅಳವಡಿಸಿಕೊಂಡು, ಮುಂದಿನ ಪೀಳಿಗೆಗೆ ಕೃಷಿ ಕ್ಷೇತ್ರದ ಬಗ್ಗೆ ಮತ್ತಷ್ಟು ಒಲವು ಬೆಳೆಸಲು ನೆರವಾಗಲಿದೆ. ಸಮಗ್ರ ಕೃಷಿ, ಸಾವಯವ ಕೃಷಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದ್ದು, ಕೃಷಿ ವಿವಿಗಳೊಂದಿಗೆ ರೈತರ ಸಂಪರ್ಕ ಕಲ್ಪಿಸುವ ಜೊತೆ ಸಂಶೋಧನೆಗೆ ಹೆಚ್ಚಿನ ಅವಕಾಶ ಸೃಷ್ಟಿಸಲಾಗುತ್ತಿದೆ.”
ಎನ್.ಚಲುವರಾಯಸ್ವಾಮಿ, ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು
‘ರೇವಣ್ಣ ವಿರೋಧ ಸರಿಯಲ್ಲ’
” ವಿ.ಸಿ. ಫಾರಂನಲ್ಲಿ ಸ್ಥಾಪನೆಯಾಗುತ್ತಿರುವ ಕೃಷಿ ವಿಶ್ವವಿದ್ಯಾನಿಲಯ ವ್ಯಾಪ್ತಿಗೆ ಹಾಸನ ಕೃಷಿ ಮಹಾವಿದ್ಯಾಲಯ ಮತ್ತು ಇತರೆ ಸಂಸ್ಥೆಗಳನ್ನು ಸೇರಿಸಲು ಮಾಜಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಹಾಸನ ಜಿಲ್ಲೆಯ ಶಾಸಕರು ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ. ಕೃಷಿಕಾಲೇಜು ಮಂಡ್ಯ ಕೃಷಿ ವಿ.ವಿ.ಗೆ ಒಳಪಡುವುದರಿಂದ ರೈತರ ಮಕ್ಕಳ ವಿದ್ಯಾಭ್ಯಾಸ ಮತ್ತು ವಸತಿ ವೆಚ್ಚ ಕಡಿಮೆಯಾಗಲಿದೆ. ಅಲ್ಲದೆ, ಸ್ನಾತಕೋತ್ತರ ವಿದ್ಯಾರ್ಥಿಗಳ ಸಂಶೋಧನೆಗೆ ಪೂರಕವಾಗಿದೆ. ಸಮಗ್ರ ಕೃಷಿ ವಿವಿಗೆ ರೈತರು ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬೆಂಬಲ ನೀಡುವುದು ಸೂಕ್ತ.”
ಸುನಂದಾ ಜಯರಾಂ, ರೈತ ನಾಯಕಿ
ಬೆಂಗಳೂರು : ಬೆಂಗಳೂರಿನಲ್ಲಿ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಟ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ…
ಬೆಳಗಾವಿ : ಸರ್ಕಾರದಿಂದ ಪಡೆದ ಸಿಎ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು ಈಗಿರುವ ಮೂರು ವರ್ಷಗಳ ಮಿತಿಯನ್ನು ಐದು ವರ್ಷಗಳಿಗೆ…
ಮೈಸೂರು : ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಹಾಗೂ ಮುಂಬೈನ ಬಾಂಧ್ರಾ ಪೊಲೀಸ್ ಅಧಿಕಾರಿ ಸೋಗಿನಲ್ಲಿ ನಗರದ ವೈದ್ಯರೊಬ್ಬರಿಗೆ…
ಮೈಸೂರು : ಜಾತಿ ನಿಂದನೆ, ಅಸ್ಪೃಶ್ಯತೆ ಆಚರಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರು ದಾಖಲು ಹಾಗೂ ತನಿಖೆ ನಡೆಸುವ ಉದ್ದೇಶದಿಂದ ಆರಂಭಗೊಂಡಿರುವ…
ಮೈಸೂರು : ಕರ್ನಾಟಕ ಪೊಲೀಸ್ ಅಕಾಡೆಮಿ ಮತ್ತು ಸಾವಿತ್ರಿಬಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯ ನಡುವೆ ಒಡಂಬಡಿಕೆಗೆ…
ಬೆಳಗಾವಿ (ಸುವರ್ಣಸೌಧ) : ಇತ್ತೀಚೆಗೆ ನಿಧನರಾದ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…