ಸೇವಂತಿಗೆಯಿಂದಲೇ ಬದುಕು ಕಟ್ಟುಕೊಂಡು ಬೆಳೆಗಾರರು, ಮಾರಾಟಗಾರರು, ಮಾಲೆ ಕಟ್ಟುವವರು
ಶ್ರೀಧರ ಆರ್. ಭಟ್ಟ
ನಂಜನಗೂಡು: ಮಳೆಯಾಶ್ರಿತ ಗ್ರಾಮವಾದ ಕವಲಂದೆ ಹೋಬಳಿಯ ಪುಟ್ಟ ಗ್ರಾಮ ಮಲ್ಲ ಹಳ್ಳಿಯ ಉಸಿರೇ ಹೂವಾಗಿದೆ ಎಂದರೆ ತಪ್ಪಾಗಲಾರದು.
ಈ ಗ್ರಾಮದಲ್ಲಿ ಹೂ ಬೆಳೆಯುವವರು, ಹೂ ಮಾರಾಟಗಾರರು ಹಾಗೂ ಹೂಗಳಿಂದ ಸಂಪಾದನೆಗೆ ದಾರಿ ಕಂಡುಕೊಂಡವರು ತುಂಬಿ ತುಳುಕುತ್ತಾರೆ. ಹೀಗಾಗಿ ಈ ಊರನ್ನು ಮಲ್ಲಹಳ್ಳಿ ಅಲಿಯಾಸ್ ಹೂವಿನ ಮಲ್ಲಹಳ್ಳಿ ಎಂದೇ ಕರೆಯುತ್ತಾರೆ.
ಹೂವಿನ ಕೃಷಿ ಕೆಲವರದ್ದಾದರೆ, ಆ ಹೂವನ್ನು ಗ್ರಾಮದಲ್ಲೇ ಖರೀದಿಸಿ ಮಾರುಕಟ್ಟೆಗೆ ಕೊಂಡೊಯ್ದು ಮಾರಾಟ ಮಾಡಿ ಹಣ ಸಂಪಾದನೆ ಮಾಡುವ ಕಾಯಕ ಕೆಲವರದ್ದು. ಆ ಹೂವನ್ನೂ ಮಾಲೆ ಮಾಡಿ ಸಂಪಾದನೆಗೆ ದಾರಿ ಮಾಡಿಕೊಂಡ ವರು ಅನೇಕರು. ಈ ಮೂರು ವರ್ಗದವರಿಂದಲೇ ನಂಜನಗೂಡು ತಾಲ್ಲೂಕಿನ ಮಲ್ಲಹಳ್ಳಿ ಗ್ರಾಮ ಹೂವಿನಂತೆ ನಳನಳಿಸುತ್ತಿದೆ.
ಸುಮಾರು ೪೦೦ ಮನೆಗಳಿರುವ ಈ ಗ್ರಾಮದಲ್ಲಿ ಎಲ್ಲಿ ನೋಡಿದರೂ ಹೂವಿನ ಕೃಷಿ, ಮಾರಾಟ ಹಾಗೂ ಮಾಲೆ ಕಟ್ಟುವ ಕೈಗಾರಿಕೆಗಳೇ ಆವರಿಸಿ ಕೊಂಡು ಒಟ್ಟಾರೆ ಗ್ರಾಮವೇ ಸೇವಂತಿಗೆಯ ಹೂವಿನ ಘಮಲಿನಿಂದ ಆವರಿಸಿಕೊಂಡಿದೆ.
ಮಲ್ಲಹಳ್ಳಿಯ ಸುತ್ತಲಿನ ಭೂಮಿಯಲ್ಲೆಲ್ಲಾ ಹೂವು ಅರಳುತ್ತಲೇ ತನ್ನ ಸುವಾಸನೆಯ ಕಂಪನ್ನು ಬೀರುತ್ತಿದೆ. ತಮ್ಮ ಭೂಮಿಯಲ್ಲಿ ಸೇವಂತಿಗೆ ಬೆಳೆಯನ್ನು ಬಿತ್ತಿ ಬೆಳೆಯವವರು ಹೂವಿನ ಕೃಷಿಕರಾದರೆ, ಅವರ ಮಕ್ಕಳು, ಮೊಮ್ಮಕ್ಕಳೇ ಇದರ ಮಾರಾಟಗಾರರು. ಈ ಹೂವನ್ನು ಮಾಲೆ ಮಾಡಿ ಮನೆಗೆಲಸದೊಂದಿಗೆ ಮಾಸಿಕ ಹತ್ತಾರು ಸಾವಿರ ರೂ. ಸಂಪಾದನೆಗೆ ದಾರಿ ಕಂಡುಕೊಂಡ ನೂರಾರು ಗೃಹಿಣಿಯರೂ ಈ ಊರಿನಲ್ಲಿದ್ದಾರೆ.
ಹೂವಿನ ಕೃಷಿ ಈ ಗ್ರಾಮಕ್ಕೆ ಹೊಸದಲ್ಲ, ಶತ ಶತಮಾನಗಳಿಂದಲೂ ಈ ಗ್ರಾಮ ಹೂವಿನ ಬೆಳೆಗೆ ಹೆಸರುವಾಸಿಯಾಗಿದ್ದರಿಂದಲೇ ಇದನ್ನು ಹೂವಿನ ಮಲ್ಲಹಳ್ಳಿ ಎಂದು ಕರೆಯುವ ಪರಿಪಾಠ ಬೆಳೆದು ಬಂದಿದೆ.
ಆ ಕಾಲದಲ್ಲಿ ತೆರೆದ ಬಾವಿಯಿಂದ ನೀರು ಎತ್ತಿ ಹೂ ಬೆಳೆಸುತ್ತಿದ್ದರೆ ಈಗ ತೆರೆದ ಬಾವಿಯ ಬದಲು ಕೊಳವೆ ಬಾವಿಗಳು ಪಂಪ್‌ಸೆಟ್, ಹನಿ ನೀರಾವರಿ ಮೂಲಕ ನೀರುಣಿಸಲಾಗುತ್ತದೆ.
ವಾರ್ಷಿಕ ಎರಡರಿಂದ ಮೂರು ಬೆಳೆ ಬೆಳದ ಹೂವನ್ನು ನಂಜನಗೂಡು, ಮೈಸೂರು, ಚಾಮರಾಜನಗರ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತಾರೆ. ವಾರ್ಷಿಕ ಪ್ರತಿ ಎಕರೆಗೆ ೨ರಿಂದ ೩ ಲಕ್ಷ ರೂ. ಆದಾಯ ಕೃಷಿಕನಿಗಾದರೆ ಅದರ ಮಾರಾಟದಿಂದ ಲಕ್ಷಾಂತರ ರೂ. ಸಂಪಾದನೆ ಈ ಗ್ರಾಮದ ಯುವಕರದ್ದಾಗಿದೆ.
ಇನ್ನು ಗ್ರಾಮದ ಸಾಕಷ್ಟು ಮಹಿಳೆಯರಿಗೆ ಈ ಗ್ರಾಮದಲ್ಲಿ ಬೆಳೆದ ಹೂವನ್ನು ಮಾಲೆ ಕಟ್ಟುವುದರಿಂದ ಮಾಸಿಕ ಹತ್ತಾರು ಸಾವಿರ ರೂ. ಆದಾಯವಿದೆ. ಶೇ. ೯೦ರಷ್ಟು ಸೇವಂತಿಗೆ ಹೂ ಬೆಳೆಯುವ ಇಲ್ಲಿ ಸೇವಂತಿಗೆ ಹೂ ದರ ಕೆಜಿಗೆ ೧೦೦ ರೂ. ದಾಟಿದರೆ ನಮ್ಮ ಆದಾಯ ಇಮ್ಮಡಿ ಎನ್ನುತ್ತಾರೆ ಗ್ರಾಮದ ರಂಗಸ್ವಾಮಿ ನಾಯಕ.
ಬೆಂಗಳೂರು : ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಹಂತ ಹಂತವಾಗಿ ಸಫಾರಿ ಆರಂಭಿಸಲು ಮತ್ತು ಧಾರಣಾ ಶಕ್ತಿ ಮತ್ತು ಹುಲಿಗಳು ನಾಡಿನತ್ತ…
ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತವರು ಜಿಲ್ಲೆ ಮೈಸೂರಿನಲ್ಲಿ ಎರಡು ದಿನಗಳ ಕಾಲ ಪ್ರವಾಸ ಹಮ್ಮಿಕೊಂಡಿದ್ದಾರೆ. ಜ.5ರಂದು ಬೆಳಿಗ್ಗೆ…
ಮೈಸೂರು : ಅರಮನೆ ನಗರಿ ಮೈಸೂರಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಚಾಮುಂಡಿಬೆಟ್ಟದ ಸಂರಕ್ಷಣೆ ಮತ್ತು ಉಳಿವಿಗಾಗಿ ಜ.4ರಂದು(ಭಾನುವಾರ) ಜಾಗೃತಿ ಆಂದೋಲನವನ್ನು…
ಭೋಪಾಲ್ : ಇಂದೋರ್‌ನ ಭಗೀರಥಪುರದಲ್ಲಿ ಕಲುಷಿತ ಕುಡಿಯುವ ನೀರು ಸೇವನೆಯಿಂದ 11 ಜೀವಗಳು ಬಲಿಯಾಗಿವೆ. ಮತ್ತು 1400ಕ್ಕೂ ಹೆಚ್ಚು ನಿವಾಸಿಗಳ…
ಬೆಂಗಳೂರು : ಬ್ಯಾನರ್ ಕಟ್ಟುವ ವಿಷಯದಲ್ಲಿ ಕಳೆದ ರಾತ್ರಿ ಬಳ್ಳಾರಿ ನಗರದಲ್ಲಿ ನಡೆದ ಘಟನೆಯ ಕುರಿತು ಉಚ್ಚ ನ್ಯಾಯಾಲಯದ ಹಾಲಿ…
ಬೆಂಗಳೂರು : ಬಳ್ಳಾರಿಯಲ್ಲಿ ಗುರುವಾರ ರಾತ್ರಿ ವಾಲ್ಮೀಕಿ ಬ್ಯಾನರ್ ವಿಚಾರದಲ್ಲಿ ನಡೆದ ಎರಡು ಗುಂಪುಗಳ ಘರ್ಷಣೆ ವೇಳೆ ಫೈರಿಂಗ್ ಆಗಿ…