Andolana originals

ಮೂಲ ಸೌಕರ್ಯಗಳ ಕೊರತೆ; ವಿದ್ಯಾರ್ಥಿನಿಯರ ಪರದಾಟ

ಸಾಲೋಮನ್

ಮಹಾರಾಣಿ ಕಾಲೇಜು ಕಾಯಕಲ್ಪ:3
ಮೈಸೂರು: ಮೈಸೂರು ಭಾಗದ ಹೆಣ್ಣು ಮಕ್ಕಳ ಅಸ್ಮಿತೆ ಎಂದೇ ಗುರುತಿಸಲ್ಪಡುವ ಮಹಾರಾಣಿ ವಿಜ್ಞಾನ, ಕಲಾ ಕಾಲೇಜು ಶತಮಾನೋತ್ಸವ ಆಚರಿಸಿ ಹಲವು ವರ್ಷಗಳನ್ನು ದಾಟಿ ಬಂದಿವೆ. ಮಹಾರಾಣಿ ಕಾಲೇಜಿನಲ್ಲಿ ಓದುವುದೇ ಒಂದು ಘನತೆ ಎಂಬುದಾಗಿ ಪರಿಗಣಿತವಾಗಿದೆ.

ಹೆಣ್ಣು ಮಕ್ಕಳಲ್ಲಿ ವಿದ್ಯಾಸಕ್ತಿ ಹೆಚ್ಚುತ್ತಾ ಬಂದಿದ್ದು, ಸದರಿ ಕಾಲೇಜುಗಳಲ್ಲಿ ಪ್ರವೇಶಾತಿ ಹೆಚ್ಚಳಗೊಂಡು ವರ್ಷಗಳು ಕಳೆದಂತೆ ಶೈಕ್ಷಣಿಕ ಸವಲತ್ತು ಹಾಗೂ ಮೂಲ ಸೌಕರ್ಯಗಳ ಕೊರತೆ ಕಂಡು ಬರುತ್ತಿತ್ತು. ಈ ಸಮಸ್ಯೆ ನಿವಾರಣೆಗಾಗಿ ಅನೇಕ ವರ್ಷಗಳಿಂದ ವಿದ್ಯಾರ್ಥಿನಿಯರು ಹೋರಾಟ ನಡೆಸುತ್ತಲೇ ಬರುತ್ತಿದ್ದಾರೆ. ಅದರ -ಲವಾಗಿ ನೂತನ ಕಾಲೇಜು ಹಾಗೂ ಹಾಸ್ಟೆಲ್ ಎರಡೂ ಕಟ್ಟಡಗಳ ನಿರ್ಮಾಣಕ್ಕೆ ಸಮಯ ಸನ್ನಿಹಿತವಾಗಿದೆ.

ವರ್ಷದಿಂದ ವರ್ಷಕ್ಕೆ ಮಹಿಳೆಯರಲ್ಲಿ ಓದುವ ಆಸಕ್ತಿ ಹಾಗೂ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಬೇಕೆನ್ನುವ ಅರಿವು ಪೋಷಕರಲ್ಲೂ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೆಣ್ಣು ಮಕ್ಕಳು ಸುಶಿಕ್ಷಿತರಾಗಿ ಎಲ್ಲ ಕ್ಷೇತ್ರಗಳಲ್ಲೂ ತಮ್ಮನ್ನು ತೊಡಗಿಸಿಕೊಂಡು ಪುರುಷರಷ್ಟೇ ಗಟ್ಟಿಯಾಗಿ ನೆಲೆಯಾಗಲು ಈ ಕಾಲೇಜು ಹೆಚ್ಚು ಪ್ರೋತ್ಸಾಹ ದಾಯಕವಾಗಿತ್ತು ಎಂಬುದು ಉತ್ಪ್ರೇಕ್ಷೆಯಲ್ಲ.

ಅವ್ಯವಸ್ಥೆ ತುಂಬಿ ತುಳುಕಿತ್ತು: ಮಹಾರಾಣಿ ವಿಜ್ಞಾನ ಹಾಗೂ ಕಲಾ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಕೊಠಡಿಗಳೂ ಸೇರಿದಂತೆ ಮೂಲ ಸೌಲಭ್ಯಗಳಲ್ಲಿ ಕೊರತೆ ಕಂಡು ಬಂದಿತ್ತು. ಅನೇಕ ವರ್ಷಗಳಿಂದ ವಿದ್ಯಾರ್ಥಿನಿಯರು ಈ ಸಮಸ್ಯೆಯಿಂದ ಪರಿತಪಿಸುತ್ತಿದ್ದರೂ ಯಾರೂ ಗಮನಹರಿಸಿರಲೇ ಇಲ್ಲ. ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಾಗಿ ಕಾಲೇಜು ಕೊಠಡಿಗಳಲ್ಲಿ ಉಸಿರು ಗಟ್ಟಿಸುವ ವಾತಾವರಣ ಸೃಷ್ಟಿ ಆಗಿತ್ತು.

ಜೆಎಲ್‌ಬಿ ರಸ್ತೆಯಲ್ಲಿದ್ದ ಮಹಾರಾಣಿ ಮಹಿಳಾ ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗವನ್ನು ಕೆಲ ವರ್ಷಗಳ ಹಿಂದೆ ಅಂದರೆ ಸಿದ್ದರಾಮಯ್ಯ ಅವರು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಪಡುವಾರಹಳ್ಳಿಯಲ್ಲಿ ನಿರ್ಮಿಸಲಾದ ನೂತನ ಕಾಲೇಜು ಕಟ್ಟಡಕ್ಕೆ ವರ್ಗಾಯಿಸಲಾಯಿತು. ಆದರೂ ಮೂಲ ಸೌಕರ್ಯಗಳು ದೊರೆಯಲೇ ಇಲ್ಲ. ಕುಡಿಯುವ ನೀರಿನ ಕೊರತೆ
ಇದ್ದೇ ಇತ್ತು. ಗ್ರಂಥಾಲಯದಲ್ಲೂ ಒತ್ತಡ ಇತ್ತು. ಇವೆಲ್ಲದರ ಜೊತೆಗೆ ಕಟ್ಟಡ ಶಿಥಿಲಗೊಂಡು ಅಲ್ಲಲ್ಲಿ ಬಿರುಕು ಬಿಟ್ಟಿತ್ತು. ಚಾವಣಿಯು ಸ್ವಲ್ಪ ಸ್ವಲ್ಪವಾಗಿ ಕುಸಿಯುತ್ತಿತ್ತು. ಅದೊಂದು ದಿನ ವಿeನ ಕಾಲೇಜು ಕಟ್ಟಡದ ಒಂದು ಭಾಗ ಕುಸಿದು ದೊಡ್ಡ ಶಾಕ್ ಕೊಟ್ಟಿತು. ಸಂಬಂಧಪಟ್ಟವರು ಎಚ್ಚೆತ್ತುಕೊಂಡು ನೂತನ ಕಟ್ಟಡ ನಿರ್ಮಿಸಲು ೩ ವರ್ಷಗಳು ಬೇಕಾದವು.

ವಿಜ್ಞಾನ ಕಾಲೇಜಿನಲ್ಲಿ ೩,೫೦೦ ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ವಿಭಾಗದಲ್ಲಿ ೨೪ ಕೋರ್ಸ್‌ಗಳು ಇದ್ದು, ೨೫೦ರಿಂದ ೩೦೦ ಮಂದಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.

 

ತರಗತಿಗಳು ಹೊಸ ಕಟ್ಟಡಕ್ಕೆ
ಕಾಲೇಜಿನ ನೂತನ ಕಟ್ಟಡ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ಸೆಮಿಸ್ಟರ್ ಪರೀಕ್ಷೆಗಳು ಆರಂಭವಾಗಲಿವೆ. ಅವು ಮುಗಿಯುವಷ್ಟರಲ್ಲಿ ತರಗತಿಗಳನ್ನು ಪಕ್ಕದ ಇರುವ ನೂತನ ಕಟ್ಟಡಕ್ಕೆ ವರ್ಗಾಯಿಸಲಾಗುವುದು. ಇನ್ನೂ ೩ ಪ್ರಯೋಗಾಲಯಗಳು ಹಳೆಯ ಕಟ್ಟಡದ ಇವೆ. ಸದ್ಯದ ಇಡೀ ಕಾಲೇಜನ್ನು ಸ್ಥಳಾಂತರಿಸುತ್ತೇವೆ. –ಪ್ರೊ. ಅಬ್ದುಲ್ ರಹಿಮಾನ್, ಪ್ರಾಂಶುಪಾಲ, ಮಹಾರಾಣಿ ವಿಜ್ಞಾನ ಕಾಲೇಜು

ಆಂದೋಲನ ಡೆಸ್ಕ್

Recent Posts

ವಿ.ಬಾಡಗದಲ್ಲಿ ಕೌಟುಂಬಿಕ ಹಾಕಿ ಪಂದ್ಯಕ್ಕೆ ಚಾಲನೆ

ಕೊಡಗಿನ ಖ್ಯಾತಿ ಹೆಚ್ಚಿಸುವಲ್ಲಿ ಕ್ರೀಡಾಪಟುಗಳ ಕೊಡುಗೆ ಅಪಾರ: ಸುಜಾ ಕುಶಾಲಪ್ಪ ಪೊನ್ನಂಪೇಟೆ: ಕೊಡಗು ಜಿಲ್ಲೆ ರಾಷ್ಟ್ರಮಟ್ಟದಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿದೆ. ಎಲ್ಲ…

2 hours ago

ಮದ್ಯಪಾನಿಗಳ ತಾಣವಾದ ಶಾಲಾ ಕಟ್ಟಡ

ಮುಚ್ಚಲ್ಪಟ್ಟಿರುವ ಶಾಲೆಯ ಕೊಠಡಿಯಲ್ಲಿ ರಾರಾಜಿಸುತ್ತಿರುವ ಮದ್ಯದ ಬಾಟಲಿಗಳು; ನಾಗರಿಕರ ಆಕ್ರೋಶ ಹನೂರು: ನಿಗದಿತ ಸಂಖ್ಯೆಯ ಮಕ್ಕಳಿಲ್ಲ ಎಂಬ ಕಾರಣಕ್ಕೆ ಮುಚ್ಚಲ್ಪಟ್ಟಿರುವ…

2 hours ago

ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ: ಆಕಾಂಕ್ಷಿಗಳ ಕಸರತ್ತು

ಕೆ.ಬಿ.ರಮೇಶನಾಯಕ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷರ ಹುದ್ದೆಯತ್ತ ಶಾಸಕ ಅನಿಲ್ ಚಿತ್ತ ತಂದೆಗೆ ಅಧ್ಯಕ್ಷ ಹುದ್ದೆ ಕೊಡಿಸಲು ಶಾಸಕ ಡಿ.ರವಿಶಂಕರ್ ಯತ್ನ …

2 hours ago

ಜಾತೀಯತೆ ತೊಲಗಲಿ : ಡಾ.ಯತೀಂದ್ರ ಸಿದ್ದರಾಮಯ್ಯ

ನಂಜನಗೂಡು : ಜಾತೀಯತೆ ಎಂಬುದು ಸಂಪೂರ್ಣವಾಗಿ ತೊಲಗಬೇಕು. ಎಲ್ಲ ಸಮುದಾಯದವರು ನಮ್ಮವರೇ ಎಂದು ತಿಳಿದಾಗ ಮಾತ್ರ ಜಾತೀಯತೆ ದೂರವಾಗಲು ಸಾಧ್ಯ…

12 hours ago

ರಂಗಾಯಣ | ಐದು ದಿನಗಳ ʼನಿರಂತರ ರಂಗ ಉತ್ಸವʼಕ್ಕೆ ತೆರೆ

ಮೈಸೂರು : ನಿರಂತರ ರಂಗ ತಂಡದ ‘ನಿರಂತರ ರಂಗ ಉತ್ಸವ-2025-26’ರ ಐದು ದಿನಗಳ ರಂಗೋತ್ಸವದ ಕೊನೆಯ ದಿನ ‘ಕೊಡಲ್ಲ ಅಂದ್ರೆ…

13 hours ago