Andolana originals

ಕಂಬಳಕ್ಕೆ ಸಿದ್ಧವಾದ ಮಹದೇವ ನಗರದ ರಸ್ತೆ!

ಎಸ್.ಎಸ್.ಭಟ್

ನಂಜನಗೂಡಿನ ಮಹದೇವ ನಗರದ ರಸ್ತೆ ಅವ್ಯವಸ್ಥೆ; ನಿವಾಸಿಗಳ ಆಕ್ರೋಶ 

ನಂಜನಗೂಡು: ತಾಲ್ಲೂಕಿನ ಕಾಡಂಚಿನ ಹೆಡಿಯಾಲ ಗ್ರಾಮ ಪಂಚಾಯಿತಿಗೆ ಸೇರಿದ ಮಹದೇವ ನಗರದ ರಸ್ತೆ ಕರಾವಳಿ ಭಾಗದ ಕಂಬಳಕ್ಕೆ ಸಿದ್ಧವಾದಂತಿದೆ.

ಹಿಂದೆ ಶಾಸಕರಾಗಿದ್ದ ಎಂ.ಮಹದೇವು ಇಲ್ಲಿ ರಸ್ತೆ, ಚರಂಡಿ ಸಹಿತವಾದ ಹೊಸ ಬಡಾವಣೆ ನಿರ್ಮಿಸಿ ೮೦ಕ್ಕೂ ಹೆಚ್ಚು ಬಡವರಿಗೆ ಸೂರು ಕಲ್ಪಿಸಿದ್ದರಿಂದ ಇದಕ್ಕೆ ಮಹದೇವ ನಗರ ಎಂದೇ ನಾಮಕರಣ ಮಾಡಲಾಗಿದೆ. ಆದರೆ, ಇಂದು ಬಡಾವಣೆಯ ರಸ್ತೆ ಹದಗೆಟ್ಟು ಮಳೆ ಬಂದರೆ ಚರಂಡಿ ಯಾವುದು, ರಸ್ತೆ ಯಾವುದು ಎಂದು ತಿಳಿಯಲಾರದ ಸ್ಥಿತಿ ನಿರ್ಮಾಣವಾಗಿದೆ.

ಬೇಗೂರು-ಸರಗೂರು ಮುಖ್ಯ ರಸ್ತೆಯಿಂದ ಮಹದೇವ ನಗರವನ್ನು ಹಾದು ನಾಗಣಾಪುರ ಕಾಲೋನಿಗೆ ಸಾಗುವ ಈ ರಸ್ತೆಯ ಸ್ಥಿತಿ ಜನಸಂಚಾರ ಮಾಡುವ ಬದಲಾಗಿ ಕರಾವಳಿ ಜಿಲ್ಲೆಗಳಲ್ಲಿ ಕೋಣಗಳನ್ನು ಓಡಿಸುವ ಪಂದ್ಯಕ್ಕೆ ಸಿದ್ಧಗೊಳಿಸಿದಂತಿರುವುದು ವಿಪರ್ಯಾಸ.

ಇದೇ ರಸ್ತೆಯಲ್ಲಿ ಶಾಲೆಗಳಿಗೆ ನಿತ್ಯ ತೆರಳುವ ಮಕ್ಕಳ ಸ್ಥಿತಿಯಂತೂ ಹೇಳಲು ಅಸಾಧ್ಯವಾಗಿದೆ. ಅವರು ರಸ್ತೆಯಲ್ಲಿ ನಡೆದು ಬರುವಾಗ ಕೆಲವೆಡೆ ಮೊಳಕಾಲಿನವರೆಗೂ ಕೆಸರು ಮೆತ್ತಿಕೊಂಡು ಅವರ ಸಮವಸ್ತ್ರಗಳು ನಿತ್ಯ ಕೊಳಕಾಗುತ್ತಿವೆ. ಅದೇ ಬಟ್ಟೆಯಲ್ಲಿ ಶಾಲೆಗೆ ತೆರಳುವ ಬಗೆ ಹೇಗೆ ಎಂದು ಯೋಚಿಸುವಂತಾಗಿದೆ.

ಚರಂಡಿಗಳನ್ನು ಸ್ವಚ್ಛಗೊಳಿಸದೇ ಇರುವುದರಿಂದ ಕೊಳಚೆ ನೀರು ಮುಂದಕ್ಕೆ ಹರಿಯದೆ ಅಲ್ಲಿ ಮಡು ಗಟ್ಟಿ ನಿಂತಿದ್ದು, ರೋಗ ಹರಡುವ ಭೀತಿ ಎದುರಾಗಿದೆ.

ಕೆಲವೆಡೆ ರಸ್ತೆಗೆ ನುಗ್ಗಿದರೆ ಹಲವೆಡೆ ಮನೆಗಳಿಗೂ ನುಗ್ಗುತ್ತಿದ್ದು ನಿವಾಸಿಗಳು ಪರದಾಡುವಂತಾಗಿದೆ. ಚರಂಡಿ ಸ್ಚಚ್ಛಗೊಳಿಸುವುದಿರಲಿ ಚರಂಡಿಯಲ್ಲೇ ಗಿಡಗಂಟಿಗಳು ಆಳೆತ್ತರಕ್ಕೆ ಬೆಳೆದು ನಿಂತಿರುವುದು ಗ್ರಾಪಂ ಕಾರ್ಯವೈಖರಿಗೆ ಸಾಕ್ಷಿಯಾಗಿದೆ. ಪಂಚಾಯಿತಿ ಅಧಿಕಾರಿಗಳು ಈಗಲಾದರೂ ಇತ್ತ ಗಮನ ಹರಿಸಿ ಈ ಬಡಾವಣೆಯಲ್ಲಿನಾಗರಿಕರು ಉಳಿದುಕೊಳ್ಳುವ ವಾತಾವರಣ ನಿರ್ಮಿಸಲಿ ಎಂಬುದೇ ಮಹದೇವ ನಗರದ ನಿವಾಸಿಗಳ ಬಯಕೆಯಾಗಿದೆ.

” ಮಾಜಿ ಸಚಿವ ಎಂ.ಮಹದೇವು ಅವರು ಬಡಾವಣೆ ನಿರ್ಮಿಸಿ ನಮಗೆ ಸೂರು ಕಲ್ಪಿಸಿದ ನಂತರ ಮತ ಕೇಳಲು ಮಾತ್ರ ಬರು ಮುಖಂಡರ‍್ಯಾರೂ ಗೆದ್ದ ನಂತರ ನಮ್ಮ ಬಡಾವಣೆಯತ್ತ ತಿರುಗಿಯೂ ನೋಡುತ್ತಿಲ್ಲ. ನಮ್ಮ ಜೀವನ ನರಕ ಯಾತನೆಯಾಗಿದೆ. ”

-ಗೌರಮ್ಮ, ನಿವಾಸಿ

ಆಂದೋಲನ ಡೆಸ್ಕ್

Recent Posts

ಮಕ್ಕಳ ಪರೀಕ್ಷಾ ಸಿದ್ಧತೆಯಲ್ಲಿ ಪೋಷಕರ ಪಾತ್ರದ ಮಹತ್ವ

ಡಾ.ಪಿ.ಮಂಜುನಾಥ ನಕಾರಾತ್ಮಕ ಭಾವನೆ ಮಕ್ಕಳಲ್ಲಿ ಮೂಡದಂತೆ ಎಚ್ಚರ ಅಗತ್ಯ  ಪರೀಕ್ಷೆಗಳು ಕೆಲವೇ ತಿಂಗಳುಗಳಲ್ಲಿ ಸಾಲು ಸಾಲಾಗಿ ಪ್ರಾರಂಭವಾಗಲಿವೆ. ಪರೀಕ್ಷೆ ಹತ್ತಿರವಾಗುತ್ತಿದ್ದಂತೆ…

1 min ago

ಸಾಧನೆಯ ಹಾದಿಯಲ್ಲಿ ಬೆಳೆದು ಬೆಳಗಿದವರು

೨೦೨೫ ನೇ ಸಾಲಿನಲ್ಲಿ ಹಲವಾರು ಸಾಧಕರು ಹೊರಹೊಮ್ಮಿದ್ದು, ಸಾಹಿತ್ಯ, ಕಲೆ, ವಿಜ್ಞಾನ, ಸಂಶೋಧನೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆ,…

8 mins ago

ಮಳೆ ಕೊರತೆ; ಭರ್ತಿಯಾಗದ ಉಡುತೊರೆ ಜಲಾಶಯ

ಹನೂರು ತಾಲ್ಲೂಕು ವ್ಯಾಪ್ತಿಯ ರೈತರಲ್ಲಿ ಆತಂಕ ಹನೂರು: ತಾಲ್ಲೂಕು ವ್ಯಾಪ್ತಿಯಲ್ಲಿ ಸಮರ್ಪಕ ಮಳೆಯಾಗದ ಹಿನ್ನೆಲೆಯಲ್ಲಿ ಉಡುತೊರೆ ಜಲಾಶಯ ಭರ್ತಿಯಾಗದೆ, ಇರುವ…

16 mins ago

ಸಫಾರಿ ಬಂದ್; ವರ್ಷಾಂತ್ಯದಲ್ಲಿ ರೆಸಾರ್ಟ್‌ಗಳಿಗೆ ನಷ್ಟ

ಮಂಜು ಕೋಟೆ ಹೊಸ ವರ್ಷದ ಸನಿಹದಲ್ಲಿ ತುಂಬಿ ತುಳುಕುತ್ತಿದ್ದ ರೆಸಾರ್ಟ್‌ಗಳು ಖಾಲಿ ಖಾಲಿ ಎಚ್.ಡಿ.ಕೋಟೆ: ರೈತರ ಮೇಲೆ ನಿರಂತರ ಹುಲಿ…

20 mins ago

ಅಂಧ ವಿದ್ಯಾರ್ಥಿಗಳಿಗೆ ಡಿಜಿಟಲ್ ದೊಂದಿ!

ಗಿರೀಶ್ ಹುಣಸೂರು ಮೈಸೂರು: ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಹೆಬ್ಬಾಗಿಲು ತೆರೆಯುವ ಪ್ರಮುಖ ಘಟ್ಟವಾದ ದ್ವಿತೀಯ ಪಿಯುಸಿ ಪರೀಕ್ಷೆ-೧ ೨೦೨೬ರ -ಬ್ರವರಿ…

24 mins ago