ಹನೂರು: ಇವರು ತಾಲ್ಲೂಕಿನ ಇಂಡಿಗನತ್ತ ಗ್ರಾಮದ ಹಿರಿಯ ಜೀವ, ಕಳೆದ ಆರು ತಿಂಗಳಿ ನಿಂದ ಹಾಸಿಗೆ ಹಿಡಿದಿರುವ ಇವರಿಗೆ ಮಲ ಮೂತ್ರಕ್ಕೆ ಹೋಗಲೂ ಆಗುತ್ತಿಲ್ಲ. ಎರಡು ವಾರಗಳ ಹಿಂದಿನವರೆಗೂ ಒಬ್ಬನೇ ಮಗ ತಾಯಿಯ ಸೇವೆ ಮಾಡಿಕೊಂಡಿದ್ದ. ಈಗ ಈಕೆಯನ್ನು ಹಾಸಿಗೆಯಿಂದ ಎಬ್ಬಿಸುವವರಿಲ್ಲ. ಈಗಾಗಿ ಮಲಮೂತ್ರವೂ ಚಾಪೆಯಲ್ಲಿಯೇ ನಡೆಯುತ್ತಿದೆ. ಮಗಳು ರಾಜಮ್ಮರವರಿಗೂ ವಯಸ್ಸಾಗಿರುವುದರಿಂದ ಇವರ ಪರಿಸ್ಥಿತಿಯನ್ನು ಗಮನಿಸುವವರಿಲ್ಲ. ಈ ದಾರುಣ ಸ್ಥಿತಿಗೆ ಕಾರಣವಾಗಿರುವುದು ಲೋಕಸಭಾ ಚುನಾವಣೆ.
ಏ.26ರಂದು ನಡೆದ ಮತದಾನದ ಅವಧಿ ಯಲ್ಲಿ ಇಂಡಿಗನತ್ತ ಗ್ರಾಮದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಊರಿನ 40ಕ್ಕೂ ಹೆಚ್ಚು ಮಂದಿ ಈಗ ಜೈಲಿನಲ್ಲಿದ್ದಾರೆ. ಇನ್ನೂ 200 ಕ್ಕೂ ಹೆಚ್ಚು ಮಂದಿ ತಲೆಮರೆಸಿಕೊಂಡಿದ್ದಾರೆ. ಅವರಲ್ಲಿ ಬಡಪಾಯಿ ಪುಟ್ಟಮ್ಮ ಅವರ ಮಗನೂ ಸೇರಿದ್ದಾರೆ. ಒಂದೆಡೆ ತನ್ನ ಅನಾರೋಗ್ಯ, ಇನ್ನೊಂದೆಡೆ ಮಗನಿಗೆ ಬಂದ ಆಪತ್ತಿನಿಂದ ಅವರು ಕಂಗಾಲಾಗಿದ್ದು, ಕೃಶವಾಗಿರುವ ಹಿರಿಯ ಜೀವವನ್ನು ನೋಡುವಾಗಲೇ ಕರುಳು ಚುರುಕ್ ಎನ್ನುತ್ತದೆ. ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಂಚಿನ ಗ್ರಾಮವಾದ ಇಂಡಿಗನತ್ತ ಗ್ರಾಮದ 65 ವರ್ಷದ ಪುಟ್ಟಮರವರಿಗೆ ಕಳೆದ ಎರಡು ವರ್ಷಗಳ ಹಿಂದೆ ಹಸು ತಿವಿದ ಪರಿಣಾಮ ಮೂಳೆ ಮುರಿದು ಗಾಯಗೊಂಡಿದ್ದರು. ಇವರಿಗೆ ಚಿಕಿತ್ಸೆ ನೀಡಿದ್ದರೂ ಕೆಲವು ದಿನಗಳು ಮಾತ್ರ ಚೆನ್ನಾಗಿಯೇ ಇದ್ದರು. ಆದರೆ ಕಳೆದ 6 ತಿಂಗಳಿನಿಂದ ಹಾಸಿಗೆ ಹಿಡಿದಿದ್ದಾರೆ.
ಕಳೆದ ಏಪ್ರಿಲ್ 26ರಂದು ನಡೆದ ಮತಗಟ್ಟೆ ಧ್ವಂಸ ಪ್ರಕರಣದಲ್ಲಿ ಪುಟ್ಟಮ್ಮನ ಮಗನ ವಿರುದ್ಧ ಪ್ರಕರಣ ದಾಖಲಾಗಿರುವುದರಿಂದ ತಲೆಮರೆಸಿಕೊಂಡಿದ್ದಾರೆ. ಸಹೋದರ ಸ್ಥಳದಲ್ಲಿ ಇಲ್ಲದೇ ಇದ್ದರೂ ಆತನ ಮೇಲೆ ಕೇಸು ದಾಖಲಾಗಿದೆ ಎನ್ನುತ್ತಾರೆ ಅಕ್ಕ ರಾಜಮ್ಮ. ಈಗ ಹಾಸಿಗೆ ಹಿಡಿದಿರುವ ತಾಯಿ ಜೊತೆ ತಮ್ಮನ ನಾಲ್ಕು ಚಿಕ್ಕ ಮಕ್ಕಳನ್ನು ಇವರೇ ನೋಡಿಕೊಳ್ಳಬೇಕಾಗಿದೆ.
ಮತಗಟ್ಟೆ ಧ್ವಂಸ ಪ್ರಕರಣದ ನಂತರ ಗ್ರಾಮಕ್ಕೆ ಜೀಪ್ ಸಂಚಾರ ನಿಲ್ಲಿಸಲಾಗಿದೆ. ಡೋಲಿಯ ಮೂಲಕ ಆಸ್ಪತ್ರೆಗೆ ಒಯ್ಯಬೇಕೆಂದರೇ ಗ್ರಾಮದಲ್ಲಿ ವೃದ್ಧರು, ಮಹಿಳೆಯರು, ಮಕ್ಕಳು ಹೊರತು ಪಡಿಸಿ ಉಳಿದವರು ತಲೆ ಮರೆಸಿಕೊಂಡಿದ್ದಾರೆ. ಹಾಸಿಗೆ ಹಿಡಿದಿರುವ ಪುಟ್ಟಮರವರಿಗೆ ಜಿಲ್ಲಾಡಳಿತದ ವತಿಯಿಂದ ಚಿಕಿತ್ಸೆ ಕೊಡಿಸುವಂತೆ ಅಳಿಯ ಪುಟ್ಟಸ್ವಾಮಿ ಮನವಿ ಮಾಡಿದ್ದಾರೆ.
ಕುಟುಂಬಸ್ಥರ ನೆರವಿನಿಂದ ಮಲೆ ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪುಟ್ಟಮ್ಮರವರನ್ನು ಕರೆತಂದು ಅವರಿಗೆ ಉತ್ತಮ ಚಿಕಿತ್ಸೆ ನೀಡಿ ಗುಣಪಡಿಸಲು ಕ್ರಮ ಕೈಗೊಳ್ಳುತ್ತೇನೆ. -ಡಾ. ಪ್ರಕಾಶ್, ಟಿಎಚ್ ಒ, ಹನೂರು ತಾ.
ಬೆಂಗಳೂರು: ಮಹಾರಾಷ್ಟ್ರದ ಬಾರಾಮತಿ ಬಳಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಡಿಸಿಎಂ ಅಜಿತ್ ಪವಾರ್ ನಿಧನರಾಗಿದ್ದು, ಗಣ್ಯಾತಿಗಣ್ಯರು ಸಂತಾಪ ಸೂಚಿಸಿದ್ದಾರೆ.…
ನವದೆಹಲಿ: ಇಂದು ಬೆಳಿಗ್ಗೆ ಮಹಾರಾಷ್ಟ್ರದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ನಡೆದ ಭೀಕರ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ನಿಧನರಾಗಿದ್ದಾರೆ. ಅಜಿತ್…
ಬಾರಾಮತಿ: ಮಹಾರಾಷ್ಟ್ರದ ಬಾರಾಮತಿಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ಡಿಸಿಎಂ ಅಜಿತ್ ಪವಾರ್ ಸಾವನ್ನಪ್ಪಿದ್ದಾರೆ. ಎನ್‌ಸಿಪಿ ಮುಖ್ಯಸ್ಥ ಮತ್ತು ಮಹಾರಾಷ್ಟ್ರದ ಉಪಮುಖ್ಯಮಂತ್ರಿ…
ಬೆಲೆಯಲ್ಲಿ ನಾವು ತಗ್ಗೋದೇ ಇಲ್ಲ ಅಂತ ಚಿನ್ನ ಬೆಳ್ಳಿ! ಬೆಲೆ ಎಷ್ಟಾದರೂ ನಾವು ಬಗ್ಗೋದೇ ಇಲ್ಲ ಅಂತ ಕೆಲ ಗ್ರಾಹಕರು…
ವಿದೇಶಿ ನೆಲದಲ್ಲಿ ದೇಶವನ್ನು ಟೀಕಿಸುವುದಿಲ್ಲ ಎಂಬ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರ ನಿಲುವು ಸ್ವಾಗತಾರ್ಹವಾಗಿದೆ. ಗಣರಾಜ್ಯೋತ್ಸವದ ಸಂದರ್ಭದಲ್ಲೇ ಅವರು…
ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಬಾಂಗ್ಲಾ ದೇಶಕ್ಕೆ ೧೯೭೨ ರಲ್ಲಿ ಪಾಕಿಸ್ತಾನದಿಂದ ಬೇರ್ಪಡಿಸಿ…