ಒಟ್ಟು 10 ಸೆಕ್ಷನ್‌ಗಳಲ್ಲಿ ಎಫ್‌ಐಆರ್ ದಾಖಲು; 13ಪುಟಗಳ ವಿವರಣೆ
ಮೈಸೂರು: ರಾಜ್ಯದಲ್ಲಿ ಭಾರೀ ಸಂಚಲನ ಉಂಟು ಮಾಡಿದ್ದ ಮುಡಾ ನಿವೇಶನ ಹಗರಣ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ಆರೋಪ-ಪ್ರತ್ಯಾರೋಪಗಳು, ರಾಜಕೀಯ ಅಸ್ತ್ರಗಳ ಹೆಮ್ಮರವಾಗಿ ಬೆಳೆದು ಅಂತಿಮವಾಗಿ ಶುಕ್ರವಾರ ಮಧ್ಯಾಹ್ನ ಮೈಸೂರು ಲೋಕಾಯುಕ್ತ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಇದರಿಂದಾಗಿ ಸಿದ್ದರಾಮಯ್ಯ ಅವರ ಕೊರಳಿಗೆ ಸುತ್ತಿಕೊಂಡಿರುವ ಮುಡಾ ನಿವೇಶನ ಪ್ರಕ ರಣದ ಉರುಳು ಮತ್ತಷ್ಟು ಬಿಗಿಯಾಗಿದೆ. ಸಿದ್ದರಾಮಯ್ಯ ಅವರನ್ನು ಎ೧, ಅವರ ಪತ್ನಿ ಪರ್ವತಿ ಅವರನ್ನು ಎ೨, ಭಾವಮೈದುನ ಮಲ್ಲಿಕರ‍್ಜುನಸ್ವಾಮಿ ಅವರನ್ನು ಎ೩ ಹಾಗೂ ಜಮೀನು ಮಾಲೀಕ ದೇವರಾಜು ಅವರನ್ನು ಎ೪ ಆರೋಪಿಗಳನ್ನಾಗಿ ಪ್ರಕರಣ ದಾಖಲಿಸಲಾಗಿದೆ.
ಈ ಮೂಲಕ ಸಿದ್ದರಾಮಯ್ಯ ಹಾಗೂ ಅವರ ಕುಟುಂಬಸ್ಥರನ್ನು ಮುಡಾ ಹಗರಣವು ಸಂಕಷ್ಟದಲ್ಲಿ ಸಿಲುಕಿಸಿದೆ. ಸಿದ್ದರಾಮಯ್ಯ ಅವರ ವಿರುದ್ಧ ಐಪಿಸಿ ಸೆಕ್ಷನ್ ೧೨೦ಬಿ, ೧೬೬, ೪೦೩, ೪೦೬, ೪೨೦, ೪೨೬, ೪೬೫, ೪೬೮, ೩೪೦, ೩೫೧ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಭ್ರಷ್ಟಾಚಾರ ತಡೆ ಕಾಯ್ದೆ ೧೯೮೮ರ ಅಡಿಯಲ್ಲೂ ಎಫ್‌ಐಆರ್ ದಾಖಲಿಸಲಾಗಿದೆ. ಜನಪ್ರತಿನಿ? ಗಳ ವಿಶೇಷ ನ್ಯಾಯಾಲಯ ಆದೇಶ ನೀಡಿದ ೨ ದಿನಗಳ ನಂತರ ಮೈಸೂರು ಲೋಕಾಯುಕ್ತ ಎಸ್‌ಪಿ ಟಿ. ಜೆ. ಉದೇಶ್ ಎಫ್‌ಐಆರ್ ದಾಖಲಿಸಿದ್ದಾರೆ
ವಿಪರ್ಯಾಸವೆಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ತವರು ಜಿಲ್ಲೆಯಲ್ಲಿಯೇ ತ್ರೈ ಮಾಸಿಕ ಪ್ರಗತಿ ಪರಿ ಶೀಲನಾ ಸಭೆ ನಡೆಸುತ್ತಿರುವಾಗಲೇ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸುವ ಮೂಲಕ ಅವರಿಗೆ ಶಾಕ್ ನೀಡಿದ್ದಾರೆ. ಬಿ. ಎಸ್. ಯಡಿಯೂರಪ್ಪ ಅವರ ವಿರುದ್ಧ ಲೋಕಾಯುಕ್ತ ದಲ್ಲಿ ಪ್ರಕರಣ ದಾಖಲಾದ ಬಳಿಕ ಮುಖ್ಯಮಂತ್ರಿಯೊಬ್ಬರ ವಿರುದ್ಧ ದಾಖಲಾದ ೨ನೇ ಪ್ರಕರಣ ಇದಾಗಿದೆ. ಲೋಕಾಯುಕ್ತಕ್ಕೆ ಪರ್ಯಾಯವಾಗಿ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ರಚನೆ ಮಾಡಿದ್ದ ಸಿದ್ದರಾಮಯ್ಯ ವಿರುದ್ಧವೇ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿರುವುದು ವಿಶೇಷ.
೧೩ ಪುಟಗಳ ವಿವರಣೆ: ಲೋಕಾಯುಕ್ತ ಎಸ್‌ಪಿ ದಾಖಲಿಸಿರುವ ಎಫ್‌ಐಆರ್‌ನ ಜೊತೆಯಲ್ಲಿ ೧೩ ಪುಟಗಳ ವಿವರಣೆಯನ್ನು ನೀಡಲಾಗಿದೆ. ಸಿದ್ದರಾಮಯ್ಯ ಅವರ ಕುಟುಂಬ ಹಾಗೂ ಆಸ್ತಿ ಮಾಲೀಕ ಎಂದು ಹೇಳುವ ದೇವರಾಜು ಅವರ ವಿರುದ್ಧ ದಾಖಲಿಸಿರುವ ಸೆಕ್ಷನ್‌ಗಳ ವಿವರವನ್ನು ೧೩ ಪುಟಗಳಲ್ಲಿ ನೀಡಲಾಗಿದೆ. ದೇವರಾಜು ಎಂಬ ವ್ಯಕ್ತಿಗೆ ದೇವನೂರು ಸಮೀಪದ ಕೆಸರೆ ಗ್ರಾಮದ ಬಳಿ ಇರುವ ಜಮೀನು ಯಾರಿಂದ ಬಂತು, ಅದು ಊರ್ಜಿತವೇ, ಅದಕ್ಕೆ ಹಕ್ಕುದಾರರು ಯಾರು, ಸಿದ್ದರಾಮಯ್ಯ ಅವರ ಭಾವಮೈದುನ ಖರೀದಿಸಿದ್ದು ಕಾನೂನು ಪ್ರಕಾರವೇ ನಡೆದಿದೆಯೇ ಎಂಬ ಬಗ್ಗೆ ವಿವರಣೆಯನ್ನು ದಾಖಲು ಮಾಡಲಾಗಿದೆ. ದೇವನೂರು ೩ನೇ ಹಂತದ ಬಡಾವಣೆಗೆ ಸಂಬಂಽಸಿದಂತೆ ಭೂಸ್ವಾಽನ ಪ್ರಕ್ರಿಯೆ, ಪರಿಹಾರ ಧನ ನೀಡಿರುವುದು, ಪರಿಹಾರದ ಹಣವನ್ನು ನ್ಯಾಯಾಲಯದಲ್ಲಿ ಠೇವಣಿ ಇಡಲಾಗಿದ್ದುದು ಮುಂತಾದ ಅಂಶಗಳನ್ನು ದಾಖಲೆಗಳಲ್ಲಿ ನಮೂದು ಮಾಡಲಾಗಿದೆ.
ಮುಡಾದ ಪದನಿಮಿತ್ತ ಸದಸ್ಯರಾಗಿದ್ದ ಯತೀಂದ್ರ ಅವರು ವರುಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರಿಂದ ಮುಡಾದಿಂದ ಹಲವು ಚರ್ಚೆ, ನಿರ್ಣಯ ಹಾಗೂ ನಿರ್ಣಯಗಳ ಮೇಲೆ ಪ್ರಭಾವ ಬೀರಿ ತಮ್ಮ ಅಗತ್ಯಕ್ಕೆ ತಕ್ಕಂತೆ ಭೂಮಿಯನ್ನು ಅಕ್ರಮವಾಗಿ ಕಬಳಿಸಿದ್ದಾರೆ. ವರುಣ ಕ್ಷೇತ್ರದ ಶಾಸಕರಾಗಿದ್ದಾಗ ಅಧಿಕಾರ ದುರುಪಯೋಗಪಡಿಸಿಕೊಂಡು ಮುಡಾದ ನಿರ್ಧಾರಗಳ ಮೇಲೆ ಕಾನೂನು ಬಾಹಿರವಾಗಿ ಪ್ರಭಾವ ಬೀರಿರುವುದು ಗಮನಾರ್ಹ ಎಂದು ವಿವರಣೆಯಲ್ಲಿ ತಿಳಿಸಲಾಗಿದೆ.
ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿಗಳು ಮುಡಾ ಅಧಿಕಾರಿಗಳಿಗೆ ನಿವೇಶನ ಹಂಚಿಕೆಗೆ ಕಡಿವಾಣ ಹಾಕಲು ಹಲವಾರು ಆದೇಶಗಳನ್ನು ಹೊರಡಿಸಿದ್ದರೂ ಮತ್ತು ಮುಡಾ ಅಧಿಕಾರಿಗಳ ವಿರುದ್ಧ ತಾಂತ್ರಿಕ ಸಮಿತಿಯು ನೀಡಿದ ಪ್ರತಿಕೂಲ ವರದಿಯ ಹೊರತಾಗಿಯೂ ಆಯುಕ್ತರು ನಿವೇಶನ ಹಂಚಿಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಬಗ್ಗೆ ಉಲ್ಲೇಖಿಸಲಾಗಿದೆ. ಮುಡಾ ಆಯುಕ್ತರು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ಮೇಲ್ಕಂಡ ಆದೇಶಗಳಿಗೆ ಕಿಮ್ಮತ್ತು ನೀಡದೆ ದರ್ಪ ತೋರಿದ್ದಾರೆ ಎಂಬುದನ್ನು ಹೇಳಲಾಗಿದೆ.
ಪೊಲೀಸ್ ಬಂದೋಬಸ್ತ್: ಇದೇ ವೇಳೆ ಮೈಸೂರು ಲೋಕಾಯುಕ್ತ ಕಚೇರಿ ಮುಂಭಾಗ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ೨ ಸಿಎಆರ್ ತುಕಡಿ ಪೊಲೀಸರು ಸ್ಥಳದಲ್ಲಿದ್ದು ಸೂಕ್ತ ಭದ್ರತೆ ವಹಿಸಿದ್ದರು.
ನೋ ರಿಯಾಕ್ಷನ್: ಇದೇ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಎಸ್‌ಪಿ ಅವರು ಮಾಧ್ಯಮಗಳೊಂದಿಗೆ ಮಾತನಾಡಲು ನಿರಾಕರಿಸಿದರು. ನ್ಯಾಯಾಲಯದ ಆದೇಶದ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ ಎಂದಷ್ಟೇ ತಿಳಿಸಿದರು. ಸಂಜೆ ೫. ೨೫ಕ್ಕೆ ಆಗಮಿಸಿದ ಕೃಷ್ಣ: ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯ ಪಾಲರಿಗೆ ದೂರು ನೀಡಿದ್ದ ಸ್ನೇಹಮಯಿ ಕೃಷ್ಣ ಅವರು ಸಂಜೆ ೫. ೨೫ಕ್ಕೆ ಸರಿಯಾಗಿ ಲೋಕಾಯುಕ್ತ ಕಚೇರಿಗೆ ಆಗಮಿಸಿದರು. ನಂತರ ಅವರು ಎಫ್ ಐಆರ್ ಪ್ರತಿಯನ್ನು ಪಡೆದು ಮಾಧ್ಯಮಗಳೊಂದಿಗೆ ಹಂಚಿಕೊಂಡರು.
ಏನು ದೂರು? : ಮೈಸೂರು ನಗರದ ಕೆಸರೆ ಗ್ರಾಮದ ಸರ್ವೆ ನಂ. ೪೬೨, ೪೬೪ ರಲ್ಲಿ ೩ ಎಕರೆ ೧೪ ಗುಂಟೆ ಜಮೀನನ್ನು ಮುಡಾ ವಶಕ್ಕೆ ಪಡೆದಿದ್ದರೂ
ಡಿನೋಟಿಫೈ ಮಾಡಿ ಅಕ್ರಮವಾಗಿ ೧೪ ನಿವೇಶನಗಳನ್ನು ಪಡೆದಿದ್ದಾರೆ ಎಂದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಪಿ. ಸಿ. ಆರ್ ಸಲ್ಲಿಸಿ ನ್ಯಾಯಾಲಯಕ್ಕೆ ಹೋಗಿದ್ದರು. ನ್ಯಾಯಾಲಯದ ಆದೇಶದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ತಾರ್ಕಿಕ ಅಂತ್ಯಕ್ಕೆ ಹೋಗುವವರೆಗೂ ಬಿಡುವುದಿಲ್ಲ: ಕೃಷ್ಣ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲಾಗಿದೆ. ಒಬ್ಬ ಸಾಮಾನ್ಯ ವ್ಯಕ್ತಿ ಮುಖ್ಯಮಂತ್ರಿಯೊಬ್ಬರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗುವಂತೆ ಮಾಡಿರುವುದು ಇದೇ ಮೊದಲು ಎಂದು ಭಾವಿಸಿದ್ದೇನೆ. ಈ ಅಕ್ರಮ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವವರೆಗೂ ನಾನು ಬಿಡುವುದಿಲ್ಲ. ಮೈಸೂರು ಮುಡಾದಲ್ಲಿ ಸಿದ್ದರಾಮಯ್ಯ ಅಕ್ರಮವಾಗಿ ತಮ್ಮ ಪ್ರಭಾವ ಬಳಸಿ ೧೪ ನಿವೇಶನಗಳನ್ನು ಪಡೆದಿದ್ದಾರೆ. ಇದನ್ನು ಕಾನೂನಾತ್ಮಕವಾಗಿ ಹೋರಾಟ ಮಾಡಿ ಹಿಂಪಡೆದು ಸಾಮಾನ್ಯ ಜನರಿಗೆ ಸಿಗುವಂತೆ ಮಾಡುತ್ತೇನೆ. ನ್ಯಾಯಾಲಯದ ಆದೇಶದಂತೆ ಮೈಸೂರು ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆದರೆ ರಾಜ್ಯ ಸರ್ಕಾರದ ಅಡಿಯಲ್ಲಿ ತನಿಖೆಯಾಗುತ್ತಿರುವುದರಿಂದ ನ್ಯಾಯ ಸಿಗುವುದು ಕಷ್ಟ. ಹಾಗಾಗಿ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ನಾನು ಒತ್ತಾಯ ಮಾಡಿದ್ದೇನೆ. ಈ ಸಂಬಂಧ ಉಚ್ಚ ನ್ಯಾಯಾಲಯಕ್ಕೂ ಅರ್ಜಿ ಸಲ್ಲಿಸಿದ್ದೇನೆ. ಮುಂದಿನ ವಾರ ವಿಚಾರಣೆಗೆ ಬರಲಿದೆ. ಮುಂದಿನ ಪ್ರಕ್ರಿಯೆ ಏನು? ನೋಟಿಸ್ ನೀಡುವ ಮೊದಲೇ ಸಿದ್ದರಾಮಯ್ಯ ಹಾಗೂ ಇತರರು ಯಾವುದಾದರೂ ನ್ಯಾಯಾಲಯದಿಂದ ವಿಚಾರಣೆಗೆ ತಡೆಯಾಜ್ಞೆ ತಂದರೆ ಕಾನೂನಿನ ಕುಣಿಕೆಯಿಂದ ಪಾರಾಗುತ್ತಾರೆ. ನ್ಯಾಯಾಲಯ ತಡೆಯಾಜ್ಞೆ ನೀಡದಿದ್ದರೆ ವಿಽಯಿಲ್ಲದೆ, ವಿಚಾರಣೆಗೆ ಹಾಜರಾಗಲೇಬೇಕು.
ಮುಂದಿರುವ ಆಯ್ಕೆಗಳು: ಜನಪ್ರತಿನಿಽಗಳ ವಿಶೇಷ ಕೋರ್ಟ್ ತನಿಖೆಗೆ ಆದೇಶ ನೀಡಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲು ಸಿದ್ದರಾಮಯ್ಯ ಸಿದ್ಧತೆ ನಡೆಸಿದ್ದಾರೆ. ಜನಪ್ರತಿನಿಽಗಳ ವಿಶೇಷ ಕೋರ್ಟ್ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡುವಂತೆಯೂ ಮನವಿ ಮಾಡಲಿದ್ದಾರೆ. ಹೈಕೋರ್ಟ್ ತಡೆಯಾಜ್ಞೆ ನೀಡಿದರೆ ಸಿದ್ದರಾಮಯ್ಯ ತನಿಖೆಯಿಂದ ಪರಾಗಲಿದ್ದಾರೆ. ಇನ್ನು ತನಿಖೆಗೆ ರಾಜ್ಯಪಾಲರು ನೀಡಿದ್ದ ಅನುಮತಿ ಎತ್ತಿ ಹಿಡಿದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಲು ಸಿಎಂ ಸಿದ್ಧತೆ ನಡೆಸಿದ್ದಾರೆ. ರಾಜ್ಯಪಾಲರ ಆದೇಶಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ತಡೆಯಾಜ್ಞೆ ನೀಡಿದರೂ ಸಿದ್ದರಾಮಯ್ಯಗೆ ಮತ್ತಷ್ಟು ನೈತಿಕ ಬಲ ಬರಲಿದೆ.
ಒಂದು ವೇಳೆ ಹೈಕೋರ್ಟ್‌ನಲ್ಲಿ ರಿಲೀಫ್ ಸಿಗದಿದ್ದರೆ ತಕ್ಷಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಲೂ ಸಿಎಂ ಪರ ವಕೀಲರು ಸಿದ್ಧತೆ ನಡೆಸಿದ್ದಾರೆ. ಮುಂದಿನ ಹೋರಾಟಕ್ಕೆ ಸಜ್ಜಾಗಿರುವ ಸಿಎಂಗೆ ಆನೆ ಬಲವೂ ಸಿಕ್ಕಿದೆ. ಸಚಿವರು ಶಾಸಕರು ನಾವು ಸಿಎಂ ಜೊತೆಗಿದ್ದೇವೆ ಎಂದು ಧೈರ್ಯ ತುಂಬಿದ್ದಾರೆ. ಕಲಬುರಗಿ ಮತ್ತು ಬಳ್ಳಾರಿಯಲ್ಲಿ ಶೋಷಿತ ವರ್ಗಗಳ ಸಮುದಾಯ ಸಿದ್ದರಾಮಯ್ಯ ಪರ ಪ್ರತಿಭಟನೆ ನಡೆಸಿವೆ. ಯಾವುದೇ ಕಾರಣಕ್ಕೂ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬಾರದು ಎಂದು ಸಿಎಂ ಬೆನ್ನಿಗೆ ನಿಂತಿವೆ. ಹುಬ್ಬಳ್ಳಿಯಲ್ಲಿ ಸಭೆ ನಡೆಸಿರುವ ಅಹಿಂದ ಮುಖಂಡರು, ಸಿಎಂ ರಾಜೀನಾಮೆ ಕೊಡಬಾರದು. ನಾವು ಸಿಎಂ ಬೆನ್ನಿಗೆ ನಿಲ್ಲುತ್ತೇವೆ ಎಂದು ಅ. ೩ರಿಂದ ಬೃಹತ್ ಹೋರಾಟ ನಡೆಸಲು ನಿರ್ಧರಿಸಿದ್ದಾರೆ.
ದಾ.ರಾ. ಮಹೇಶ್ ವೀರನಹೊಸಹಳ್ಳಿ: ತಾಲ್ಲೂಕಿನ ಬನ್ನಿಕುಪ್ಪೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಅವರೆಕಾಯಿ ಮಾರಾಟದಿಂದಾಗಿ ಟ್ರಾಫಿಕ್ ಜಾಮ್ ಆಗುತ್ತಿದ್ದು, ವಾಹನಗಳ ಸಂಚಾರಕ್ಕೆ…
ಮಂಡ್ಯ: ಇಂದಿನಿಂದ ( ಡಿಸೆಂಬರ್ 20 ) ಮೂರು ದಿನಗಳ ಕಾಲ ನಡೆಯಲಿರುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ…
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ…
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…