Andolana originals

ಮಂಡ್ಯ ಜಿಲ್ಲೆಯಲ್ಲಿ ಜಾನುವಾರು ಗಣತಿ ಆರಂಭ

ಮಂಡ್ಯ: ಐದು ವರ್ಷಗಳಿಗೊಮ್ಮೆ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ನಡೆಸುವ ಜಾನುವಾರು ಗಣತಿ ಪ್ರಕ್ರಿಯೆಯು ಜಿಲ್ಲೆಯಲ್ಲಿ ಆರಂಭವಾಗಿದ್ದು, ಫೆಬ್ರವರಿ ಅಂತ್ಯದವರೆಗೆ ನಡೆಯಲಿದೆ.

೨೦೧೯ರಲ್ಲಿ ಜಾನುವಾರುಗಳ ಗಣತಿ ನಡೆದಿತ್ತು. ಇದೀಗ ಮತ್ತೊಮ್ಮೆ ಜಾನುವಾರು ಗಣತಿಗೆ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸಜ್ಜುಗೊಂಡಿದ್ದಾರೆ. ವಿಶೇಷವೆಂದರೆ ಈ ಬಾರಿಯ ಜಾನುವಾರು ಗಣತಿಗೆ ಹೈಟೆಕ್ ಸ್ಪರ್ಶ ದೊರೆತಿದ್ದು, ಅಂಗೈನಲ್ಲೇ ಜಾನುವಾರುಗಳ ಗಣತಿ ನಡೆಯಲಿದೆ.

ದೇಶದಾದ್ಯಂತ ಏಕಕಾಲದಲ್ಲಿ ನಡೆಯುವ ಈ ಗಣತಿಗೆ ಬರೋಬ್ಬರಿ ನೂರು ವರ್ಷ ತುಂಬಿದೆ. ೧೯೧೯ರಲ್ಲಿ ಮೊದಲ ಬಾರಿಗೆ ಜಾನುವಾರುಗಳ ಗಣತಿ ನಡೆದಿತ್ತು. ಅಲ್ಲಿಂದ ಈವರೆಗೆ ೨೦ ಗಣತಿ ಕಾರ‍್ಯಗಳು ನಡೆದಿವೆ. ಇದೀಗ ೨೧ನೇ ಗಣತಿಗೆ ಸಿದ್ಧತೆಗಳು ನಡೆದಿವೆ. ಹಿಂದೆಲ್ಲಾ ಪುಸ್ತಕದಲ್ಲಿ ಮಾಹಿತಿಗಳನ್ನು ನಮೂದಿಸಿಕೊಳ್ಳುವ ಮೂಲಕ ಗಣತಿ ಕಾರ್ಯ ನಡೆಸಲಾಗುತ್ತಿತ್ತು. ಆದರೆ, ಇದೇ ಮೊದಲ ಬಾರಿಗೆ ಸ್ಮಾರ್ಟ್ ಫೋನ್‌ನಲ್ಲಿ ಮೊಬೈಲ್ ಅಪ್ಲಿಕೇಷನ್ ತಂತ್ರಾಂಶ ಬಳಸಿಕೊಂಡು ಗಣತಿ ಮಾಡಲಾಗುತ್ತಿದೆ. ಜಾನುವಾರು ಗಣತಿದಾರರು ಮತ್ತು ಮೇಲ್ವಿ ಚಾರಕರು ಪ್ರತಿ ಮನೆ ಮನೆಗೂ ತೆರಳಿ, ಆ ಮನೆ ಗಳಲ್ಲಿರುವ ಜಾನುವಾರುಗಳ ಸಮೀಕ್ಷೆ ನಡೆಸುವ ಮೂಲಕ ಗಣತಿ ಕಾರ‍್ಯದಲ್ಲಿ ತೊಡಗಿದ್ದಾರೆ.

ಮನೆ ಮಾಲೀಕರಿಂದ ಅವರ ಬಳಿ ಇರುವ ಎತ್ತು, ಹಸು, ಎಮ್ಮೆ, ಕೋಣ, ಕುದುರೆ, ನಾಯಿ, ಹಂದಿ, ಕುರಿ, ಮೇಕೆ, ಕೋಳಿಗಳು, ಎಮು ಮತ್ತು ಆಸ್ಟ್ರಿಚ್ ಹಕ್ಕಿಗಳ ವಿವರಗಳನ್ನು ಪಡೆದು ಅದರ ಅಂಕಿ-ಅಂಶ ಸಹಿತ ಮೊಬೈಲ್ ಅಪ್ಲಿಕೇಷನ್‌ನಲ್ಲಿ ದಾಖಲಿಸಲಿದ್ದಾರೆ. ಗಣತಿದಾರರು ಮನೆ ಮನೆಗೆ ಭೇಟಿ ನೀಡಿದಾಗ ಆ ಮನೆಯಲ್ಲಿ ಯಾವ ತಳಿಯ ಜಾನುವಾರುಗಳಿವೆ? ಅವುಗಳ ವಯಸ್ಸು ಎಷ್ಟು? ಎಷ್ಟು ರೈತರಿದ್ದಾರೆ? ಯಾವ ವರ್ಗದ ರೈತರು? ಎಷ್ಟು ಮಹಿಳೆಯರು ಇದರಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದನ್ನು ದಾಖಲಿಸಬೇಕು. ಆ ಮೂಲಕ ಸರ್ಕಾರ ತನ್ನ ಮುಂದಿನ ಯೋಜನೆಯನ್ನು ಸಿದ್ಧಪಡಿಸುವುದು ಇದರ ಮುಖ್ಯ ಉದ್ದೇಶ. ರೈತರು ಹಾಗೂ ಹೈನುಗಾರಿಕೆ ಕ್ಷೇತ್ರಗಳಿಗೆ ಬೇಕಾದ ನೀತಿ, ಕಾರ್ಯಕ್ರಮ ನಿರೂಪಿಸುವುದಕ್ಕೆ ಗಣತಿಯ ಅಂಶಗಳು ಬಳಕೆಯಾಗುತ್ತವೆ.

ದೇವಸ್ಥಾನದಲ್ಲಿ ಆನೆ, ದನ, ಹಸುಗಳನ್ನು ಸಾಕುತ್ತಿದ್ದರೆ, ಗೋಶಾಲೆಗಳಿದ್ದರೆ ಅದರ ಮಾಹಿತಿ ಪಡೆಯಲಾಗುತ್ತದೆ. ೧೦ಕ್ಕಿಂತ ಹೆಚ್ಚು ಜಾನುವಾರುಗಳಿದ್ದರೆ ಹಾಗೂ ಒಂದು ಸಾವಿರಕ್ಕಿಂತ ಹೆಚ್ಚು ಕೋಳಿ ಸಾಕಿದ್ದರೆ, ೫೦ರ ಮೇಲ್ಪಟ್ಟು ಆಡು ಸಾಕಣೆಯಿದ್ದರೆ ಅವುಗಳನ್ನು ಫಾರಂ ಎಂದು ಪರಿಗಣಿಸಿ ಮಾಹಿತಿ ನಮೂದಿಸಿಕೊಳ್ಳಲು ನಿರ್ಧರಿಸಲಾಗಿದೆ.

ಮೊಬೈಲ್ ಅಪ್ಲಿಕೇಷನ್ ತಂತ್ರಾಂಶ ಬಳಸಿಕೊಂಡು ಗಣತಿ ಆಪ್ ಅಭಿವೃದ್ಧಿ ಜಾನುವಾರುಗಳ ಗಣತಿಗಾಗಿ ಕೇಂದ್ರ ಪಶುಸಂಗೋಪನಾ ಇಲಾಖೆಯಿಂದಲೇ ಮೊಬೈಲ್ ಅಪ್ಲಿಕೇಷನ್ ಆಪ್‌ನ್ನು ಅಭಿವೃದ್ಧಿಪಡಿಸಲಾಗಿದೆ. ಗಣತಿದಾರರು ಮತ್ತು ಮೇಲ್ವಿಚಾರಕರು ತಮ್ಮ ಆಂಡ್ರಾಯ್ಡ್ ಮೊಬೈಲ್‌ನಲ್ಲಿ ಪ್ಲೇಸ್ಟೋರ್ ಮೂಲಕ ಈ ಮೊಬೈಲ್ ಅಪ್ಲಿಕೇಷನ್‌ನ್ನು ಡೌನ್‌ಲೋಡ್ ಮಾಡಿಕೊಂಡು, ಜಾನುವಾರುಗಳ ಗಣತಿ ಕಾರ್ಯದಲ್ಲಿ ತೊಡಗಬಹುದು.

ಇದಕ್ಕಾಗಿ ಮಾಸಿಕ ಇಂಟರ್‌ನೆಟ್ ಶುಲ್ಕವನ್ನು ಇಲಾಖೆಯೇ ಭರಿಸಲಿದೆ. ಆಪ್ ಬಳಸಿಕೊಂಡು ಜಾನುವಾರುಗಳ ಗಣತಿ ಮಾಡುವ ಬಗ್ಗೆ ಈಗಾಗಲೇ ಎಲ್ಲ ಗಣತಿದಾರರು, ಮೇಲ್ವಿಚಾರಕರು ಮತ್ತು ನೋಡಲ್ ಅಧೀಕಾರಿಗಳಿಗೆ ತರಬೇತಿ ನೀಡಲಾಗುತ್ತಿದೆ. ಜಿಲ್ಲಾ ನೋಡಲ್ ಅಧಿಕಾರಿಗಳಿಗೆ ಮೂರು ಹಂತಗಳಲ್ಲಿ ವಿಶೇಷ ತರಬೇತಿ ನೀಡಲಾಗಿದೆ. ಎಲ್ಲೋ ಕುಳಿತು ಕಾಟಾಚಾರಕ್ಕೆ ಗಣತಿ ಮಾಡಲು ಸಾಧ್ಯವಿಲ್ಲ. ಏಕೆಂದರೆ ಗಣತಿದಾರರ ಪ್ರತಿ ಚಲನವಲನ, ಭೇಟಿ ನೀಡಿದ ಸ್ಥಳಗಳ ವಿವರಗಳು ರೆಕಾರ್ಡ್ ಆಗಲಿದೆ.

ಎಲ್ಲವೂ ಆನ್‌ಲೈನ್‌ನಲ್ಲೇ. . . ಈ ಹಿಂದೆ ಜಾನುವಾರು ಗಣತಿ ಮಾಡಬೇಕಾದರೆ ಪುಸ್ತಕದಲ್ಲಿ ೨೦೦ ಕಾಲಂಗಳನ್ನು ಭರ್ತಿ ಮಾಡಬೇಕಾಗಿತ್ತು. ಆದರೆ, ಈ ಬಾರಿ ಚುಟುಕಾಗಿ ಆಪ್ ಮೂಲಕ ಮಾಹಿತಿ ನಮೂದಿಸಬಹುದು.  ನೆಟ್ ವರ್ಕ್ ಇಲ್ಲದಿದ್ದರೂ ಈ ಆಪ್ ನೆಟ್‌ವರ್ಕ್ ಪ್ರದೇಶಕ್ಕೆ ಬರುತ್ತಿದ್ದಂತೆಯೇ ಕೇಂದ್ರ ಸರ್ವರ್ ಜತೆ ಮಾಹಿತಿಯನ್ನು ಹಂಚಿಕೊಳ್ಳುವಂತೆ ಆಪ್ ವಿನ್ಯಾಸ ಮಾಡಲಾಗಿದೆ. ಹೀಗಾಗಿ ಎಲ್ಲ ವಿವರಗಳೂ ಕರಾರುವಾಕ್ಕಾಗಿ ನಮೂದಾಗಲಿವೆ.

ಜಾನುವಾರು ಗಣತಿಗೆ ಅಗತ್ಯ ಸಿದ್ಧತೆಗಳನ್ನು ಮಾಡಿ ಕೊಳ್ಳಲಾಗಿದೆ. ಮಂಡ್ಯ ಜಿಲ್ಲೆಯಿಂದ ಮೂರು ಮಂದಿ ಮಾಸ್ಟರ್ ತರಬೇತುದಾರ ರಿಗೆ ಈಗಾಗಲೇ ಕರ್ನಾಟಕ ಪಶುವೈದ್ಯಕೀಯ ಪರಿಷತ್ತಿನಲ್ಲಿ ರಾಜ್ಯ ಮಟ್ಟದ ತರಬೇತಿ ನೀಡಲಾ ಗಿದೆ. ಜಿಲ್ಲಾ ಮೇಲ್ವಿಚಾರಕರಿಗೂ ತರಬೇತಿ ನೀಡಲಾಗಿದ್ದು, ಗಣತಿದಾರರು ಮನೆ ಮನೆಗೆ ಭೇಟಿ ನೀಡಿರುವ ಬಗ್ಗೆ ಖಚಿತಪಡಿಸಿಕೊಳ್ಳಲು ಪ್ರತಿ ಮನೆಗೂ ಸ್ಟಿಕ್ಕರ್‌ಗಳನ್ನು ಅಂಟಿಸಲಾಗುತ್ತದೆ. – ಡಾ. ಎಸ್. ಸಿ. ಸುರೇಶ್, ಉಪ ನಿರ್ದೇಶಕರು, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ,

 

೧೪೮ ಗಣತಿದಾರರು

ಮಂಡ್ಯ ಜಿಲ್ಲೆಯಲ್ಲಿ ಜಾನುವಾರುಗಳ ಗಣತಿಗಾಗಿ ೧೪೮ ಮಂದಿ ಗಣತಿದಾರರು, ೩೦ ಮಂದಿ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. ಪಶು ಪರೀಕ್ಷಕರು ಗಣತಿದಾರರಾಗಿ, ಅಧಿಕಾರಿಗಳು ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರು ಜಿಲ್ಲಾ ನೋಡಲ್ ಅಧಿಕಾರಿಯಾಗಿ ಉಸ್ತುವಾರಿ ಮಾಡಲಿದ್ದಾರೆ. ಗಣತಿದಾರರು ಮನೆ ಮನೆಗೆ ತೆರಳಿ ಜಾನುವಾರು ಗಣತಿಯಲ್ಲಿ ತೊಡಗಿದರೆ ಮೇಲ್ವಿಚಾರಕರು ಹಾಗೂ ನೋಡಲ್ ಅಧಿಕಾರಿಗಳು ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ. ನಗರ ಭಾಗದಲ್ಲಿ ೬,೦೦೦ ಮನೆಗಳಿಗೊಬ್ಬ ಗಣತಿದಾರ ಇದ್ದರೆ, ಗ್ರಾಮೀಣ ಭಾಗದಲ್ಲಿ ೪,೫೦೦ ಮನೆಗಳಿಗೊಬ್ಬ ಗಣತಿದಾರರು ಇರುತ್ತಾರೆ. ಪ್ರತಿಯೊಬ್ಬರೂ ಮನೆಗಳಿಗೆ ಭೇಟಿ ನೀಡಿ ಗಣತಿ ನಡೆಸುವುದು ಕಡ್ಡಾಯವಾಗಿದೆ.

 

ಆಂದೋಲನ ಡೆಸ್ಕ್

Recent Posts

ಹುಣಸೂರು | ಹಾಡಹಗಲೇ 5 ಕೋಟಿ ಚಿನ್ನಾಭರಣ ದರೋಡೆ! ಬೈಕ್‌ನಲ್ಲಿ ಪರಾರಿ

ಹುಣಸೂರು : ಹುಣಸೂರು ನಗರದಲ್ಲಿ ಹಾಡಹಗಲೇ ದೊಡ್ಡ ದರೋಡೆ ನಡೆದಿದ್ದು, ಸುಮಾರು 4 ರಿಂದ 5 ಕೋಟಿ ರೂಪಾಯಿ ಮೌಲ್ಯದ…

35 mins ago

ವರ್ಷದ ಕೊನೆಯ ಮನ್‌ ಕಿ ಬಾತ್‌ನಲ್ಲಿ 2025ರ ಭಾರತದ ಸಾಧನೆ ಸ್ಮರಿಸಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಪ್ರಧಾನಿ ಮೋದಿ ಅವರು ಇಂದು ತಮ್ಮ 129ನೇ ಮನ್‌ ಕಿ ಬಾತ್‌ ಆವೃತ್ತಿಯನ್ನು ಉದ್ದೇಶಿಸಿ ಮಾತನಾಡಿದರು. 2025ರಲ್ಲಿ ಭಾರತದ…

1 hour ago

ಜಲಾಂತರಗಾಮಿ ನೌಕೆಯಲ್ಲಿ ಪ್ರಯಾಣಿಸಿ ಹೊಸ ದಾಖಲೆ ಬರೆದ ರಾಷ್ಟ್ರಪತಿ ದ್ರೌಪದಿ ಮುರ್ಮು

ಕಾರವಾರ: ದೇಶದ ಪ್ರಥಮ ಪ್ರಜೆಯಾಗಿರುವ ಸೇನಾ ಪಡೆಗಳ ಮಹಾದಂಡ ನಾಯಕಿ ರಾಷ್ಟ್ರಪತಿ ದ್ರೌಪದ ಮುರ್ಮು ಅವರು ಇಂದು ಜಲಾಂತರಗಾಮಿ ನೌಕೆಯಲ್ಲಿ…

2 hours ago

800 ಕಿ.ಮೀ ಪಾದಯಾತ್ರೆ ಮೂಲಕ ಅಯ್ಯಪ್ಪನ ದರ್ಶನ ಪಡೆಯುವುದಕ್ಕೆ ಹೊರಟ ಭಕ್ತರು

ಮೈಸೂರು: ಅಯ್ಯಪ್ಪ ಸ್ವಾಮಿ ದೇವಸ್ಥಾನ ಪಕ್ಕದ ಕೇರಳ ರಾಜ್ಯದಲ್ಲಿ ಇದ್ದರೂ ಅಯ್ಯಪ್ಪನಿಗೆ ಹೆಚ್ಚಿನ ಭಕ್ತರು ಇರುವುದು ನಮ್ಮ ಕರ್ನಾಟಕದಲ್ಲಿಯೇ ಪ್ರತಿ…

2 hours ago

ಚಾಮರಾಜನಗರ| ಇಟ್ಟಿಗೆ ಬೇಯಿಸಲು ಮರಗಳ ಮಾರಣಹೋಮ

ಚಾಮರಾಜನಗರ: ಇಟ್ಟಿಗೆ ಬೇಯಿಸಲು ಮರಗಳ ಮಾರಣಹೋಮ ನಡೆಸಿರುವ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನಲ್ಲಿ ನಡೆದಿದೆ. ಇಲ್ಲಿನ ಹಲವು ಗ್ರಾಮಗಳಲ್ಲಿ…

2 hours ago

ಸಿಎಂ ಸಿದ್ದರಾಮಯ್ಯ ತವರಲ್ಲಿ ದಲಿತ ಸಿಎಂ ಕೂಗು

ಮೈಸೂರು: ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ದಲಿತ ಮುಖ್ಯಮಂತ್ರಿ ಕೂಗು ಜೋರಾಗಿದ್ದು, ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರನ್ನು ಸಿಎಂ ಮಾಡುವಂತೆ…

3 hours ago