ಕೆ. ಬಿ. ರಮೇಶನಾಯಕ
ಮೈಸೂರು: ಗ್ರಾಮಾಂತರ ಪ್ರದೇಶಗಳಲ್ಲಿ ದಶಕಗಳ ಹಿಂದೆ ಕುಡಿಯುವ ನೀರಿಗೆ ಜೀವಸೆಲೆಯಾಗಿದ್ದ, ಪ್ರಸ್ತುತ ಒತ್ತುವರಿಯಿಂದ ಕಣ್ಮರೆಯಾಗಿರುವ ನೂರಾರು ಕೆರೆ ಗಳನ್ನು ರಕ್ಷಿಸುವ ಜೊತೆಗೆ ಮೇ ಮಾಸಾಂತ್ಯದೊಳಗೆ ಒತ್ತುವರಿ ತೆರವುಗೊಳಿಸಿ ಮತ್ತೆ ಜೀವ ಜಲ ತುಂಬಲು ಯೋಜನೆಯನ್ನು ರೂಪಿಸಲಾಗಿದೆ. ಮನ್ರೇಗಾ ಯೋಜನೆ ಯಡಿ ಹಳ್ಳಿಗಳ ಅಂಚಿನಲ್ಲಿರುವ ಕೆರೆ, ಕಟ್ಟೆ ಗಳಿಗೆ ನೀರು ಸೇರುವಂತೆ ಮಾಡಲು ಮೈಸೂರು ಜಿಲ್ಲಾ ಪಂಚಾಯಿತಿ ಮುಂದಾಗಿದೆ.
ಸಿಎಸ್‌ಆರ್ ನಿಽ ಯಡಿ ಪ್ರಮುಖ ಕೆರೆ ಗಳನ್ನು ತುಂಬಿಸಲು ಖಾಸಗಿ ಕಂಪೆನಿಗಳು ಒಲವು ತೋರಿವೆ. ಜೊತೆಗೆ ಅಂತ ರ್ಜಲ ಹೆಚ್ಚಳಕ್ಕೆ ಸಹ ಕಾರಿಯಾಗುವಂತಹ ಕೆರೆಗಳಿಗೆ ಮರು ಜೀವ ನೀಡಲು ಮುಂದಾಗಿರುವ ಜಿಪಂ ಮುಂದಿನ ವರ್ಷದಿಂದ ಮನ್ರೇಗಾ ಯೋಜನೆ ಯಡಿ ಕೆರೆಗಳ ಹದ್ದುಬಸ್ತಿನಲ್ಲಿ ಸುತ್ತಲೂ ಏರಿಯನ್ನು ಭದ್ರ ಪಡಿಸುವ ಕಾಮಗಾರಿಗಳನ್ನು ಹೆಚ್ಚು ಕೈಗೆತ್ತಿಕೊಳ್ಳುವಂತೆ ಗ್ರಾಮ ಪಂಚಾಯಿತಿ ಅಽಕಾರಿ ಗಳಿಗೆ ಸಂದೇಶ ರವಾನಿ ಸಲಾಗಿದೆ. ಇದರಿಂದಾಗಿ ಮುಂದಿನ ಆರ್ಥಿಕ ವರ್ಷದಲ್ಲಿ ಮನ್ರೇಗಾ ಯೋಜನೆ ಯಡಿ ಕ್ರಿಯಾಯೋಜನೆಗಳನ್ನು ರೂಪಿಸುವಾಗ ಕೆರೆಗಳ ಪುನಶ್ಚೇತನಕ್ಕೆ ಬೇಕಾಗುವ ರೀತಿಯಲ್ಲಿ ಒತ್ತು ಕೊಡುವುದು ಅನಿವಾರ್ಯವಾಗಿದೆ.
ಗ್ರಾಮೀಣ ಕೆರೆಗಳೇ ಅಧಿಕ: ಜಿಲ್ಲೆಯಲ್ಲಿ ಸಣ್ಣ ನೀರಾ ವರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಜಲ ಸಂಪನ್ಮೂಲ, ಪೌರಾಡಳಿತ ಇತರೆ ಇಲಾಖೆಗಳ ಸುಪಽಯಲ್ಲಿ ೨,೯೯೧ ಕೆರೆಗಳಿದ್ದು, ಇದರಲ್ಲಿ ಸಣ್ಣ ನೀರಾವರಿ ಇಲಾಖೆ- ೧೧೦, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾ ಯತ್ ರಾಜ್ ಇಲಾಖೆ-೨,೮೦೫, ಜಲಸಂಪನ್ಮೂಲ ಇಲಾಖೆ-೨೬, ಪೌರಾಡಳಿತ-೧೪, ಇತರೆ ಇಲಾಖೆಗಳಿಂದ ೩೬ ಕೆರೆಗಳಿದ್ದು, ಅದರಲ್ಲಿ ಹೆಚ್ಚು ಗ್ರಾಮೀಣ ಕೆರೆಗಳೂ ಇವೆ. ಈಗಾಗಲೇ ೨,೫೬೮ ಕೆರೆಗಳನ್ನು ಸರ್ವೇ ಮಾಡ ಲಾಗಿದ್ದು, ೪೨೩ ಕೆರೆಗಳನ್ನು ಅಳತೆ ಮಾಡಬೇಕಾಗಿದೆ. ಜಿಲ್ಲೆಯಲ್ಲಿ ೧,೨೨೯ ಕೆರೆಗಳ ಒತ್ತುವರಿಯನ್ನು ಗುರುತಿಸ ಲಾಗಿದ್ದು, ಈತನಕ ೮೦೫ ಕೆರೆಗಳ ಒತ್ತುವರಿ ತೆರವುಗೊಳಿಸ ಲಾಗಿದೆ. ಮೇ ತಿಂಗಳ ಒಳಗೆ ಉಳಿದಿರುವ ೪೨೪ ಕೆರೆ ಗಳನ್ನೂ ಸರ್ವೇ ಮಾಡಿಸಿ, ಒತ್ತುವರಿಯಾಗಿದ್ದರೆ ತೆರವು ಗೊಳಿಸುವಂತೆ ಸೂಚಿಸಲಾಗಿದೆ.
ಕೆರೆ, ಕಟ್ಟೆಗಳ ಗುರುತು: ಗ್ರಾಮೀಣ ಭಾಗದಲ್ಲಿರುವ ಸರ್ಕಾರಿ ಕೆರೆ, ಕಟ್ಟೆಗಳನ್ನು ಗುರುತಿಸಿ ನಾಮ-ಲಕ ಅಳ ವಡಿಸುವಂತೆ ಹೇಳಲಾಗಿದೆ. ಮನ್ರೇಗಾ ಯೋಜನೆ
ಯಡಿ ಕಟ್ಟೆಗಳನ್ನು ದುರಸ್ತಿಪಡಿಸಿ ಸುತ್ತಲೂ ತಡೆ ಗೋಡೆ ಮಾಡುವುದು, ಪಕ್ಕದಲ್ಲಿ ಜಾನುವಾರುಗಳ ಕುಡಿಯುವ ನೀರಿಗಾಗಿ ತೊಟ್ಟಿಯನ್ನು ನಿರ್ಮಿಸುವುದು. ಕಟ್ಟೆಗಳಿಗೆ ನೀರು ಸೇರುವ ಮಾರ್ಗಗಳು ಇದ್ದರೆ ಅದನ್ನು ಗುರುತಿಸಿ ಚರಂಡಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವಂತೆ ಹೇಳಲಾಗಿದೆ. ಇದರಿಂದಾಗಿ ಮಳೆ ಬಂದಾಗ ನೀರು ಸರಾಗ ವಾಗಿ ಕಟ್ಟೆ ಸೇರುವಂತೆ ಮಾಡಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ಸಿಎಸ್‌ಆರ್ ನೀರು ಬಳಕೆಗೆ ಪ್ಲಾನ್: ತಾಲ್ಲೂಕು ಮಟ್ಟದಲ್ಲಿರುವ ಪ್ರಮುಖ ಕೆರೆಗಳನ್ನು ಅಭಿವೃದ್ಧಿಪಡಿಸಲು ಸಿಎಸ್‌ಆರ್ ನಿಧಿಯನ್ನು ಬಳಸಿಕೊಳ್ಳುವ ಪ್ಲಾನ್ ಮಾಡ ಲಾಗಿದೆ. ನಂಜನಗೂಡು ತಾಲ್ಲೂಕಿನಲ್ಲಿರುವ ಕೈಗಾರಿಕೆ ಗಳಿಗೆ ಕೆರೆಗಳ ಜವಾಬ್ದಾರಿಯನ್ನು ನೀಡಲಿದ್ದು, ಕೆಲ ವರು ಸ್ವಯಂಪ್ರೇರಣೆಯಿಂದ ಅಭಿವೃದ್ಧಿಪಡಿಸಿದ್ದಾರೆ. ರೀಡ್ ಅಂಡ್ ಟೇಲರ್, ಟಿವಿಎಸ್ ಕಂಪೆನಿ ಇನ್ನಿತರ ಕಂಪೆನಿಗಳು ಕೆರೆ ಅಭಿವೃದ್ಧಿಪಡಿಸಿದ್ದರೆ, ಬೆಳವಾಡಿ ಕೈಗಾರಿಕಾ ಬಡಾವಣೆ ಯಲ್ಲಿರುವ ಕಾರ್ಖಾನೆಗಳು ಕೂಡ ತಮ್ಮ ಪಾಲಿನ ನಿಧಿ ಯನ್ನು ನೀಡುತ್ತಿವೆ. ಇದರಿಂದಾಗಿ ಮುಂದಿನ ವರ್ಷ ದಿಂದ ಹೆಚ್ಚು ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತದೆ.
ಕೊಳಚೆ ನೀರು ಕೆರೆಗೆ ಸೇರದಂತೆ ಮಾಡಲು ಕಾರ್ಯಯೋಜನೆ: ಕೊಳಚೆ ನೀರು ಕೆರೆಗಳಿಗೆ ಸೇರದಂತೆ ಯೋಜನೆ ರೂಪಿಸುವಂತೆ ಹೇಳಲಾಗಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ನೀರಿನ ವರ್ಗೀ ಕರಣ ಮಾಡಿದ್ದು, ಎ-ವರ್ಗದಲ್ಲಿ ನದಿ ನೀರನ್ನು ಸಾಂಪ್ರ ದಾಯಿಕವಾಗಿ ಸಂಸ್ಕರಿಸದೆ ಸೋಂಕು ನಿವಾರಿಸಿದ ನಂತರ ಕುಡಿಯುವ ನೀರಿನ ಮೂಲವನ್ನಾಗಿ ಉಪಯೋಗಿ ಸುವುದು. ಬಿ-ವರ್ಗ ದಲ್ಲಿ ನದಿ ನೀರನ್ನು ವ್ಯವಸ್ಥಿತವಾಗಿ ಸ್ನಾನಕ್ಕೆ ಉಪಯೋಗಿ ಸುವ ಮೂಲ, ಸಿ-ವರ್ಗದಲ್ಲಿ ನದಿ ನೀರನ್ನು ಸಾಂಪ್ರ ದಾಯಿಕವಾಗಿ ಸಂಸ್ಕರಿಸಿ ಹಾಗೂ ಸೋಂಕು ನಿವಾರಿಸಿದ ನಂತರ ಕುಡಿಯುವ ನೀರಿನ ಮೂಲವನ್ನಾಗಿ ಉಪಯೋಗಿಸುವುದು. ಡಿ-ವರ್ಗದಲ್ಲಿ ನದಿ ನೀರನ್ನು ಮೀನು ಗಾರಿಕೆ ಹಾಗೂ ವನ್ಯಜೀವಿಗಳ ಬೆಳವಣಿಗೆಗೆ ಮೂಲ ವನ್ನಾಗಿ ಉಪಯೋಗಿಸುವುದು.
ಇ-ವರ್ಗದಲ್ಲಿ ನದಿ ನೀರನ್ನು ನಿಯಂತ್ರಿತ ವಿಲೇವಾರಿ, ಕೈಗಾರಿಕಾ ಶೀತಲೀಕರಣ ಹಾಗೂ ವ್ಯವಸಾಯಕ್ಕೆ ಉಪ ಯೋಗಿಸುವ ನೀರಿನ ಮೂಲವನ್ನಾಗಿ ಉಪಯೋಗಿಸಲು ಹೇಳಲಾಗಿದೆ.
ಮೈಸೂರು ನಗರದ ಪ್ರಮುಖ ಕೆರೆಗಳಾದ ಕುಕ್ಕರಹಳ್ಳಿ, ದಳವಾಯಿ ಕೆರೆ, ಹೆಬ್ಬಾಳು ಕೆರೆ, ಲಿಂಗಾಂಬುಽ ಕೆರೆ, ಕಾರಂಜಿ ಕೆರೆ, ದಡದಹಳ್ಳಿ ಕೆರೆ, ಬೊಮ್ಮನಹಳ್ಳಿ ಕೆರೆ, ವರುಣ ಕರೆಗಳು ಇ, ಡಿ ಮತ್ತು ಸಿ ವರ್ಗದಲ್ಲಿ ಗುರುತಿಸಿ ಕೊಂಡಿದ್ದು, ಬಿ ಮತ್ತು ಎ ವಲಯಕ್ಕೆ ತರುವುದಕ್ಕೆ ಕೊಳಚೆ ನೀರನ್ನು ಸೇರದಂತೆ ತಡೆಯಬೇಕಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಕೋವಿಡ್ ಹಗರಣದ ತನಿಖೆಯ ಅಂತಿಮ ವರದಿಯನ್ನು ನಿವೃತ್ತ ನ್ಯಾಯಮೂರ್ತಿ ಮೈಕೆಲ್…
ಮೈಸೂರು: ಹೊಸ ವರ್ಷದ ಹಿನ್ನೆಲೆಯಲ್ಲಿ ಇಂದು ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ದೇವಿಯ…
ಮೈಸೂರು: 2026ರ ಮೊದಲ ದಿನವಾದ ಇಂದು ನಾಡಿನ ಅಧಿದೇವತೆ ನೆಲೆಸಿರುವ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭಕ್ತಸಾಗರವೇ ಹರಿದುಬರುತ್ತಿದೆ. ಹೊಸ ವರ್ಷದ ಅಂಗವಾಗಿ…
ಮೈಸೂರು: ಹೊಸ ವರ್ಷ ಎಂದು ಮೋಜು ಮಸ್ತಿ ಮಾಡದೇ ರಸ್ತೆ ಬದಿಯ ನಿರಾಶ್ರಿತರಿಗೆ ಹೂದಿಕೆಗಳನ್ನು ನೀಡುವ ಮೂಲಕ ಯುವಕರ ತಂಡ…
ಮೈಸೂರು: ನೂತನ ವರ್ಷವನ್ನು ಮೈಸೂರಿನ ವಿಜಯನಗರದಲ್ಲಿರುವ ಯೋಗ ನರಸಿಂಹಸ್ವಾಮಿ ದೇವಾಲಯದಲ್ಲಿ ಭಕ್ತರಿಗೆ ತಿರುಪತಿ ಮಾದರಿ ಲಡ್ಡು ವಿತರಿಸುವ ಮೂಲಕ ಸ್ವಾಗತಿಸಲಾಯಿತು.…
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು, ದೇಶ ಹಾಗೂ ವಿಶ್ವದ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದ್ದಾರೆ. ಅಷ್ಟೇ ಅಲ್ಲದೇ…