Andolana originals

ಗ್ರಂಥಾಲಯ ಸ್ಥಾಪನೆ; ಶತಕ ಸಾಧನೆ

ಸರ್ಕಾರಿ ಶಾಲೆಯಲ್ಲಿ 100ನೇ ಲೈಬ್ರರಿ ಸ್ಥಾಪಿಸಿದ ಕಲಿಸು ಫೌಂಡೇಶನ್

ಮೈಸೂರು: ಗ್ರಂಥಾಲಯಗಳಲ್ಲಿ ಕಂಪ್ಯೂಟರ್‌ಗಳಿರುವುದನ್ನೇ ಡಿಜಿಟಲ್ ಲೈಬ್ರರಿ ಎಂದು ಹೇಳುವುದಿತ್ತು. ಆದರೆ ಕಲಿಸು ಫೌಂಡೇಶನ್ ಸಂಸ್ಥೆ ಮೈಸೂರಿನ ಕುಂಬಾರಕೊಪ್ಪಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಆರಂಭಿಸಿರುವ ಮೊದಲ ಹಾಗೂ ಸಂಸ್ಥೆಯ 100ನೇ ಗ್ರಂಥಾ ಲಯ ಆಡಿಯೋ ಹಾಗೂ ವಿಷು ಯಲ್ ಸೌಲಭ್ಯಗಳನ್ನು ಹೊಂದಿರುವ ಮೊದಲ ಡಿಜಿಟಲ್ ಲೈಬ್ರರಿ ಆಗಿರುವುದು ವಿಶೇಷವಾಗಿದೆ.

ಈ ಸರ್ಕಾರಿ ಶಾಲೆಯ ಲೈಬ್ರರಿಯಲ್ಲಿ 3,500ಕ್ಕೂ ಹೆಚ್ಚು ಪುಸ್ತಕಗಳಿವೆ. ಓದುವ ಹವ್ಯಾಸ, ಜ್ಞಾನಾರ್ಜನೆಗಾಗಿ ಪುಸ್ತಕಗಳು ಹೆಚ್ಚು ಸಹಕಾರಿಯಾಗಿವೆ.

‌ಇದರ ಜೊತೆಗೆ 60 ಅಂಗುಲದ ಟಿವಿ ಪರದೆ ಮೂಲಕ ವಿದ್ಯಾರ್ಥಿಗಳಿಗೆ ಕಥೆಗಳನ್ನು ಹೇಳಲಾಗುತ್ತದೆ.

ಸದ್ಯಕ್ಕೆ 5ರಿಂದ 8ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ 30 ಕಥೆಗಳನ್ನು ಅಳವಡಿಸಲಾಗಿದೆ. ಇದರಲ್ಲಿ ನೀತಿ ಕಥೆಗಳು, ಮೈಸೂರಿನ ಸಣ್ಣ ಕಥೆಗಳು, ಇತಿಹಾಸದ ಕಥೆಗಳು ಹಾಗೂ ಪಂಚತಂತ್ರ ಕಥೆಗಳು ಇವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಆಡಿಯೋ ವಿಷುಯಲ್ ಕಾಠ್ಯಕ್ರಮಗಳನ್ನು ಅಳವಡಿಸುತ್ತೇವೆ ಎಂದು ಕಲಿಸು ಫೌಂಡೇಶನ್‌ನ ನಿಖಿಲೇಶ್ ಪತ್ರಿಕೆಗೆ ತಿಳಿಸಿದರು. ಈ ಗ್ರಂಥಾಲಯ ಅಂದಾಜು 850 ಚದರ ಅಡಿಗಳಿದ್ದು, 45 ಮಕ್ಕಳು ಕುಳಿತು ಓದಬಹುದಾಗಿದೆ. ಸಧ್ಯಕ್ಕೆ ಸಾಹಿತ್ಯ, ವಿಜ್ಞಾನ, ಇತಿಹಾಸ, ಜೀವಶಾಸ್ತ್ರ, ಗಣಿತ, ಆತ್ಮಚರಿತ್ರೆ ಹಾಗೂ ಪೌರಾಣಿಕ ಕಥೆಗಳಿರುವ ಪುಸ್ತಕಗಳು ಇವೆ. ಈ ಗ್ರಂಥಾ;ಯವನ್ನು 4.5 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.

ರಾಜ್ಯ ಸರ್ಕಾರ ಹೊಸದಾಗಿ ‘ಪುಸ್ತಕ ಓದು’ ಕಾರ್ಯಕ್ರಮ ವನ್ನು ರೂಪಿಸಿದೆ ಆದರೆ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗ್ರಂಥಾಲಯಗಳ ಕೊರತೆ ಇದೆ. ಗ್ರಂಥಾಲಯಗಳಲ್ಲಿ ಮಕ್ಕಳಿಗೆ ಓದಲು ಆಸಕ್ತಿ ಮೂಡಿಸುವ ವಾತಾವರಣ ಇಲ್ಲ. ಮೊದಲು ಅಂತಹ ವಾತಾವರಣ ಸೃಷ್ಟಿಸಬೇಕು. ಈ ಕೆಲಸಕ್ಕೆ ಕಲಿಸು ಫೌಂಡೇಶನ್ ಮುಂದಾಗಿದೆ. ಇದು ನಮ್ಮ ಸಂಸ್ಥೆಯ ಮೊದಲ ಡಿಜಿಟಲ್ ಲೈಬ್ರರಿ ಆಗಿದೆ.

ಎಂ.ಎಂ.ನಿಖಿಲೇಶ್
ಸಂಸ್ಥಾಪಕರು, ಸಿಇಓ, ಕಲಿಸು ಫೌಂಡೇಶನ್

ಆಂದೋಲನ ಡೆಸ್ಕ್

Recent Posts

ಮಂಡ್ಯದಲ್ಲಿ ಚಾಕುವಿನಿಂದ ಇರಿದು ವ್ಯಕ್ತಿಯ ಕೊಲೆ

ಮಂಡ್ಯ: ನಗರದ ಗಾಂಧಿನಗರದಲ್ಲಿ ವ್ಯಕ್ತಿಯೊಬ್ಬರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ. ಗಾಂಧಿನಗರ ನಿವಾಸಿ 47 ವರ್ಷದ ಪುರುಷೋತ್ತಮ್…

13 mins ago

ಓದುಗರ ಪತ್ರ: ಪೌರಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಸ್ವಾಗತಾರ್ಹ

ಮೈಸೂರು ನಗರದಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವ ಸ್ವಚ್ಛತೆಯ ಜೀವನಾಡಿಗಳಾಗಿರುವ ಪೌರಕಾರ್ಮಿಕರಿಗೆ, ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಮಣಿಪಾಲ್ ಆಸ್ಪತ್ರೆಯಲ್ಲಿ ಆಯೋಜಿಸಿದ್ದ…

6 hours ago

ಓದುಗರ ಪತ್ರ: ನಿಜವಾದ ಭಾವೈಕ್ಯತೆಯ ಸಂಗಮ

ಮಂಡ್ಯ ಜಿಯ ಮದ್ದೂರಿನಲ್ಲಿ ಭಾನುವಾರ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಗೌರಿ -ಗಣೇಶ ಮೂರ್ತಿಗಳನ್ನು ಹೊತ್ತ ಟ್ರ್ಯಾಕ್ಟರ್…

6 hours ago

ಓದುಗರ ಪತ್ರ: ನಾಡಿಗೆ ಮಾದರಿ!

ನಾಡಿಗೆ ಮಾದರಿ! ವಿವಿಧ ಧರ್ಮ ಸಮುದಾಯಗಳ ಮನಸುಗಳ ಅಕ್ಕರೆಯಲಿ ಬೆಸೆವ ಸ್ನೇಹ ಸೌಹಾರ್ದ ಸಾಮರಸ್ಯದ ಪ್ರತೀಕ, ಹಬ್ಬ ಉತ್ಸವಗಳು! ನಾಡಿಗೆ…

6 hours ago

ಓದುಗರ ಪತ್ರ: ಪ್ರೀತಿಯ ಅಣ್ಣ ಪ್ರತಾಪ್ ಸಿಂಹ…

ನಾವಿಬ್ಬರು ಪ್ರೊ. ಬಿ. ಪಿ. ಮಹೇಶ್ ಚಂದ್ರ ಗುರುಗಳ ಶಿಷ್ಯರು. ನಮ್ಮಿಬ್ಬರಿಗೂ ಪ್ರೊ. ಗುರು ಇಷ್ಟ. ನೀನು ಮಂಗಳೂರು ವಿವಿ,…

6 hours ago

ದಸರಾ ಬರುತ್ತಿದೆ, ಮೈಸೂರು ಸಿದ್ಧವಾಗುತ್ತಿದೆಯೇ?

ಶ್ರೇಯಸ್ ದೇವನೂರು ಅಭಿವೃದ್ಧಿಯ ಹೆಸರಿನಲ್ಲಿ ಅರ್ಧ ಕಾಮಗಾರಿ, ಸಂಚಾರದ ಹೆಸರಿನಲ್ಲಿ ಹೆಚ್ಚುತ್ತಿರುವ ಸಂಕಷ್ಟ  ಮೈಸೂರು ದಸರಾ ಎಂದರೆ ಕೇವಲ ಹತ್ತು…

6 hours ago