ಸರ್ಕಾರಿ ಶಾಲೆಯಲ್ಲಿ 100ನೇ ಲೈಬ್ರರಿ ಸ್ಥಾಪಿಸಿದ ಕಲಿಸು ಫೌಂಡೇಶನ್
ಮೈಸೂರು: ಗ್ರಂಥಾಲಯಗಳಲ್ಲಿ ಕಂಪ್ಯೂಟರ್‌ಗಳಿರುವುದನ್ನೇ ಡಿಜಿಟಲ್ ಲೈಬ್ರರಿ ಎಂದು ಹೇಳುವುದಿತ್ತು. ಆದರೆ ಕಲಿಸು ಫೌಂಡೇಶನ್ ಸಂಸ್ಥೆ ಮೈಸೂರಿನ ಕುಂಬಾರಕೊಪ್ಪಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಆರಂಭಿಸಿರುವ ಮೊದಲ ಹಾಗೂ ಸಂಸ್ಥೆಯ 100ನೇ ಗ್ರಂಥಾ ಲಯ ಆಡಿಯೋ ಹಾಗೂ ವಿಷು ಯಲ್ ಸೌಲಭ್ಯಗಳನ್ನು ಹೊಂದಿರುವ ಮೊದಲ ಡಿಜಿಟಲ್ ಲೈಬ್ರರಿ ಆಗಿರುವುದು ವಿಶೇಷವಾಗಿದೆ.
ಈ ಸರ್ಕಾರಿ ಶಾಲೆಯ ಲೈಬ್ರರಿಯಲ್ಲಿ 3,500ಕ್ಕೂ ಹೆಚ್ಚು ಪುಸ್ತಕಗಳಿವೆ. ಓದುವ ಹವ್ಯಾಸ, ಜ್ಞಾನಾರ್ಜನೆಗಾಗಿ ಪುಸ್ತಕಗಳು ಹೆಚ್ಚು ಸಹಕಾರಿಯಾಗಿವೆ.
ಇದರ ಜೊತೆಗೆ 60 ಅಂಗುಲದ ಟಿವಿ ಪರದೆ ಮೂಲಕ ವಿದ್ಯಾರ್ಥಿಗಳಿಗೆ ಕಥೆಗಳನ್ನು ಹೇಳಲಾಗುತ್ತದೆ.
ಸದ್ಯಕ್ಕೆ 5ರಿಂದ 8ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ 30 ಕಥೆಗಳನ್ನು ಅಳವಡಿಸಲಾಗಿದೆ. ಇದರಲ್ಲಿ ನೀತಿ ಕಥೆಗಳು, ಮೈಸೂರಿನ ಸಣ್ಣ ಕಥೆಗಳು, ಇತಿಹಾಸದ ಕಥೆಗಳು ಹಾಗೂ ಪಂಚತಂತ್ರ ಕಥೆಗಳು ಇವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಆಡಿಯೋ ವಿಷುಯಲ್ ಕಾಠ್ಯಕ್ರಮಗಳನ್ನು ಅಳವಡಿಸುತ್ತೇವೆ ಎಂದು ಕಲಿಸು ಫೌಂಡೇಶನ್‌ನ ನಿಖಿಲೇಶ್ ಪತ್ರಿಕೆಗೆ ತಿಳಿಸಿದರು. ಈ ಗ್ರಂಥಾಲಯ ಅಂದಾಜು 850 ಚದರ ಅಡಿಗಳಿದ್ದು, 45 ಮಕ್ಕಳು ಕುಳಿತು ಓದಬಹುದಾಗಿದೆ. ಸಧ್ಯಕ್ಕೆ ಸಾಹಿತ್ಯ, ವಿಜ್ಞಾನ, ಇತಿಹಾಸ, ಜೀವಶಾಸ್ತ್ರ, ಗಣಿತ, ಆತ್ಮಚರಿತ್ರೆ ಹಾಗೂ ಪೌರಾಣಿಕ ಕಥೆಗಳಿರುವ ಪುಸ್ತಕಗಳು ಇವೆ. ಈ ಗ್ರಂಥಾ;ಯವನ್ನು 4.5 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.
ರಾಜ್ಯ ಸರ್ಕಾರ ಹೊಸದಾಗಿ ‘ಪುಸ್ತಕ ಓದು’ ಕಾರ್ಯಕ್ರಮ ವನ್ನು ರೂಪಿಸಿದೆ ಆದರೆ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗ್ರಂಥಾಲಯಗಳ ಕೊರತೆ ಇದೆ. ಗ್ರಂಥಾಲಯಗಳಲ್ಲಿ ಮಕ್ಕಳಿಗೆ ಓದಲು ಆಸಕ್ತಿ ಮೂಡಿಸುವ ವಾತಾವರಣ ಇಲ್ಲ. ಮೊದಲು ಅಂತಹ ವಾತಾವರಣ ಸೃಷ್ಟಿಸಬೇಕು. ಈ ಕೆಲಸಕ್ಕೆ ಕಲಿಸು ಫೌಂಡೇಶನ್ ಮುಂದಾಗಿದೆ. ಇದು ನಮ್ಮ ಸಂಸ್ಥೆಯ ಮೊದಲ ಡಿಜಿಟಲ್ ಲೈಬ್ರರಿ ಆಗಿದೆ.
ಎಂ.ಎಂ.ನಿಖಿಲೇಶ್
ಸಂಸ್ಥಾಪಕರು, ಸಿಇಓ, ಕಲಿಸು ಫೌಂಡೇಶನ್
ಮುಂಬೈ : 13 ವರ್ಷಗಳ ಸೋಲಿನ ಓಟಕ್ಕೆ ಬ್ರೇಕ್ ಹಾಕಿದ ಮುಂಬೈ ಇಂಡಿಯನ್ಸ್ ಕೊನೆಗೂ ಐಪಿಎಲ್‌ನ ಮೊದಲ ಪಂದ್ಯವನ್ನು ಭರ್ಜರಿಯಾಗಿ…
ಹೊಸದಿಲ್ಲಿ : ಕಳೆದ ವಾರ ನಡೆದ ಷೇರುಪೇಟೆ ವಹಿವಾಟಿನಲ್ಲಿ ಸೂಚ್ಯಂಗಳು ಇಳಿಕೆ ಕಂಡಿದ್ದರಿಂದ ದೇಶದ ಪ್ರಮುಖ 10 ಕಂಪನಿಗಳ ಪೈಕಿ…
ಮುಂಬೈ : ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಭಾಗಶಃ ಅನುಮತಿ ನೀಡಿದ ನಂತರ ಭಾರತ ಧ್ವಜ ಹೊತ್ತ ಎರಡು ಎಲ್‌ಪಿಜಿ (ದ್ರವೀಕೃತ…
ಮೇಲುಕೋಟೆ : ವೈಷ್ಣವ ಪರಂಪರೆಯ ಅತ್ಯಂತ ಪ್ರಸಿದ್ಧ ಮತ್ತು ವಿಶ್ವವಿಖ್ಯಾತ ವೈರಮುಡಿ ಬ್ರಹ್ಮೋತ್ಸವ ಶನಿವಾರ ರಾತ್ರಿಯಿಡಿ ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿ…
ಗುವಾಹಟಿ : ಅಸ್ಸಾಂ ವಿಧಾನಸಭಾ ಚುನಾವಣೆಗೆ ರಾಜಕೀಯ ಕಾರ್ಯತಂತ್ರ ರೂಪಿಸಿರುವ ಕಾಂಗ್ರೆಸ್ ಪಕ್ಷವೂ ಪಂಚ ಗ್ಯಾರಂಟಿಗಳನ್ನು ಘೋಷಿಸಿದೆ. ಎಐಸಿಸಿ ಅಧ್ಯಕ್ಷ…
ಬೆಂಗಳೂರು : ಎಲ್ಲಾ ವಲಯಗಳಿಗೂ ಯಾವುದೇ ಅಡೆತಡೆ ಇಲ್ಲದೆ ಎಲ್.ಪಿ.ಜಿ ಸರಬರಾಜು ಮಾಡಲಾಗುತ್ತಿದೆ ಅಲ್ಲದೇ ವಿಶೇಷವಾಗಿ ಆಟೋ ಎಲ್.ಪಿ.ಜಿಗೆ ಯಾವುದೇ…