Andolana originals

ಓದುಗರ ಪತ್ರ: ಕೆಪಿಎಸ್‌ಸಿ ರದ್ದತಿಗಿಂತ ‘ಶುದ್ಧೀಕರಣ’ ತುರ್ತು ಅಗತ್ಯ

ಕರ್ನಾಟಕ ಲೋಕಸೇವಾ ಆಯೋಗವನ್ನು ರದ್ದುಗೊಳಿಸುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಸರಿಪಡಿಸುವ ಬದಲಿಗೆ ಸಂಪೂರ್ಣ ಆಯೋಗವನ್ನೇ ರದ್ದುಗೊಳಿಸುವುದು ಸಮಸ್ಯೆಗೆ ಶಾಶ್ವತ ಪರಿಹಾರವಾಗಲಾರದು. ಸಾವಿರಾರು ಬಡ, ಗ್ರಾಮೀಣ ಭಾಗದ ಮತ್ತು ಕಷ್ಟಪಟ್ಟು ಓದುವ ನಿಷ್ಠಾವಂತ ಸ್ಪರ್ಧಾಳುಗಳಿಗೆ ಸರ್ಕಾರಿ ಸೇವೆಯ ಕನಸನ್ನು ನನಸು ಮಾಡಿಕೊಳ್ಳಲು ಕೆಪಿಎಸ್‌ಸಿ ಪ್ರಮುಖ ಸೇತುವೆಯಾಗಿದೆ.

ಭ್ರಷ್ಟಾಚಾರ ಮತ್ತು ಪರೀಕ್ಷಾ ಅಕ್ರಮಗಳು ನಡೆಯುತ್ತಿರುವುದು ಆತಂಕಕಾರಿ ವಿಷಯ. ಆದರೆ ಈ ಅಕ್ರಮಗಳಿಗೆ ಕಾರಣರಾದ ಭ್ರಷ್ಟ ಅಧಿಕಾರಿಗಳು ಮತ್ತು ಮಧ್ಯವರ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೇ ಹೊರತು ಸಂಸ್ಥೆಯನ್ನೇ ಮುಚ್ಚುವುದು ಉಚಿತವಲ್ಲ.

ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಮಾದರಿಯಲ್ಲಿ ಅತ್ಯಂತ ಪಾರದರ್ಶಕ, ತಂತ್ರಜ್ಞಾನಾಧಾರಿತ ಮತ್ತು ಸಮಯಬದ್ಧವಾದ ಪರೀಕ್ಷಾ ವ್ಯವಸ್ಥೆಯನ್ನು ಕೆಪಿಎಸ್‌ಸಿಯಲ್ಲೂ ಜಾರಿಗೆ ತರಬೇಕಿದೆ. ಅರ್ಹ ಹಾಗೂ ಪ್ರಾಮಾಣಿಕ ವ್ಯಕ್ತಿಗಳನ್ನು ಆಯೋಗದ ಅಧ್ಯಕ್ಷರನ್ನಾಗಿ ಮತ್ತು ಸದಸ್ಯರನ್ನಾಗಿ ನೇಮಕ ಮಾಡುವ ಮೂಲಕ ಈ ಸಂಸ್ಥೆಯ ಘನತೆಯನ್ನು ಮರುಸ್ಥಾಪಿಸಬಹುದು. ಆದ್ದರಿಂದ, ಮುಖ್ಯಮಂತ್ರಿಗಳು ಮತ್ತು ಸರ್ಕಾರವು ಕೆಪಿಎಸ್‌ಸಿಯನ್ನು ರದ್ದುಗೊಳಿಸುವ ಆತುರದ ನಿರ್ಧಾರದಿಂದ ಹಿಂದೆ ಸರಿದು, ಆಯೋಗವನ್ನು ಸಂಪೂರ್ಣ ಶುದ್ಧೀಕರಣ ಮಾಡಲು ಆದ್ಯತೆ ನೀಡಬೇಕಿದೆ. ಆ ಮೂಲಕ ರಾಜ್ಯದ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳಿಗೆ ಹೊಸ ಭರವಸೆ ಮತ್ತು ನ್ಯಾಯವನ್ನು ಒದಗಿಸಬೇಕು.

-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಸರ್ಕಾರಿ ಶಾಲಾ, ಕಾಲೇಜುಗಳೆಂದರೆ ತಾತ್ಸಾರವೇಕೆ?

ಇತ್ತೀಚೆಗೆ ಮೈಸೂರಿನ ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ನಡೆದ ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ನಗರದ ಸರ್ಕಾರಿ ಹಾಗೂ…

2 mins ago

ಆರೋಗ್ಯಕರ ನಾಳೆಗಾಗಿ ಆಯುರ್ವೇದ – ಒಂದು ಆರೋಗ್ಯ, ಒಂದು ಭವಿಷ್ಯ

ಡಾ. ಮಾನಸ ಎಸ್.ಡಿ. ವೈಯಕ್ತಿಕ ಆರೋಗ್ಯದ ಜೊತೆಗೆ ಸಾಮೂಹಿಕ ಆರೋಗ್ಯ ಹಾಗೂ ಪರಿಸರದ ಅರೋಗ್ಯವನ್ನೂ ಕಾಪಾಡುವುದು ಅಗತ್ಯ ಆರೋಗ್ಯವೆಂದರೆ ಕೇವಲ…

6 mins ago

ಡಾ.ಎಸ್.ಜೆ. ನಾಗಲೋಟಿಮಠ ಅವರ ಸ್ಛೂರ್ತಿದಾಯಕ ನಡವಳಿಕೆ

ಎಸ್.ಎಲ್.ಚನ್ನಬಸವಣ್ಣ , ಉಪನಿರ್ದೇಶಕರು, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು ಅಧಿಕಾರದ ಶಕ್ತಿಯಿಂದಲ್ಲ, ಆದರ್ಶದ ನಡವಳಿಕೆಯಿಂದ ಮುನ್ನಡೆಸುವುದೇ ನಿಜವಾದ ನಾಯಕತ ಕೆಲವೊಮ್ಮೆ…

12 mins ago

ಯುವನಿಧಿ; ೨,೧೭೯ ಮಂದಿಗೆ ೬.೩೦ ಕೋಟಿ ರೂ. ನೆರವು

ನವೀನ್ ಡಿಸೋಜ ೨,೪೫೯ ನಿರುದ್ಯೋಗಿ ಯುವಕ-ಯುವತಿಯರಿಂದ ನೋಂದಣಿ; ಶೇ.೮೮.೦೬ ಫಲಾನುಭವಿಗಳಿಗೆ ಡಿಬಿಟಿ ಮೂಲಕ ಹಣ ವರ್ಗಾವಣೆ  ಮಡಿಕೇರಿ: ಉದ್ಯೋಗದ ನಿರೀಕ್ಷೆಯಲ್ಲಿರುವ…

17 mins ago

ವೈಟ್ ಟಾಪಿಂಗ್: ಅ.೫ರೊಳಗೆ ಮೂರು ರಸ್ತೆ ಸಂಚಾರಕ್ಕೆ ಮುಕ್ತ

ಕೆ.ಬಿ.ರಮೇಶನಾಯಕ ಮೊದಲ ಹಂತದ ಮೂರು ರಸ್ತೆಗಳಲ್ಲಿ ಎರಡು ಪೂರ್ಣ ರಸ್ತೆ ಜತೆಗೆ ಫುಟ್‌ಪಾತ್, ಚರಂಡಿ ಕಾಮಗಾರಿಯೂ ಪೂರ್ಣ ದಸರಾ ಬಳಿಕ…

23 mins ago