Andolana originals

ಹೊಸ ಹಾಸ್ಟೆಲ್ ನಲ್ಲಿ ಹಳೆ ಸಮಸ್ಯೆ ಮರುಕಳಿಸದಿರಲಿ’

ಅತ್ಯುತ್ತಮ ಸವಲತ್ತುಗಳಿಗಾಗಿ ವಿದ್ಯಾರ್ಥಿನಿಯರ ಆಶಯ
     ಸಾಲೋಮನ್

ಮೈಸೂರು: ಹೆಣ್ಣು ಮಕ್ಕಳ ಜ್ಞಾನಾರ್ಜನೆಗೆ ಬುನಾದಿ ಆಗಿರುವ ನಗರದ ಮಹಾರಾಣಿ ಕಾಲೇಜು ಹಾಗೂ ಮುಂಭಾ ಗದ ವಿದ್ಯಾರ್ಥಿನಿಲಯದ ಕಟ್ಟಡಗಳು ಸಂಪೂರ್ಣವಾಗಿ ಶಿಥಿಲಗೊಂಡಿದ್ದು, ನೂತನ ಕಟ್ಟಡ ಬೇಕು ಎಂಬ ಕೂಗಿಗೆ ರಾಜ್ಯ ಸರ್ಕಾರ ಸ್ಪಂದಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಾದ ಮೈಸೂರಿನಲ್ಲಿ ಹೆಣ್ಣುಮಕ್ಕಳ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದ ಹೆಣ್ಣು ಮಕ್ಕಳ ಶೈಕ್ಷಣಿಕ ಬದುಕನ್ನು ಕಟ್ಟಿಕೊಡುತ್ತಾ, ಅವರಿಗೆ ಉಜ್ವಲ ಭವಿಷ್ಯ ರೂಪಿಸುವ ಮಹಾರಾಣಿ ಕಾಲೇಜು ಹಾಗೂ ಹಾಸ್ಟೆಲ್‌ನ ನೂತನ ಕಟ್ಟಡಗಳ ನಿರ್ಮಾಣ ಕಾಮಗಾರಿಗೆ ಸಿಎಂ ಸಿದ್ದ ರಾಮಯ್ಯರಿಂದ ಚಾಲನೆ ದೊರೆತಿದೆ. ಆದರೆ, ಅದು ಯಾವುದೇ ಅಡೆತಡೆ ಇಲ್ಲದೆ ನಿರಾತಂಕವಾಗಿ ಮುಂದುವರಿಯ ಬೇಕಿದೆ.

ಮಹಾರಾಣಿ ವಿಜ್ಞಾನ ಕಾಲೇಜು ಮತ್ತು ವಿದ್ಯಾರ್ಥಿ ನಿಲಯ ಕಟ್ಟಡಗಳನ್ನು ಕೆಲವೇ ತಿಂಗಳುಗಳಲ್ಲಿ ನೆಲಸಮಗೊಳಿಸಿ, ಅದೇ ಸ್ಥಳದಲ್ಲಿ ನೂತನ ೪ ಅಂತಸ್ತುಗಳ ಕಟ್ಟಡ ನಿರ್ಮಾಣಕ್ಕೆ ಎಲ್ಲ ಸಿದ್ಧತೆಗಳೂ ನಡೆಯುತ್ತಿವೆ.

ಸದ್ಯಕ್ಕೆ ಕಟ್ಟಡ ಮಾತ್ರವಲ್ಲ, ವ್ಯವಸ್ಥೆಯೂ ಹಾಳಾಗಿದೆ: ಮೂಲ ಸೌಕರ್ಯಗಳಾದ ಶುದ್ಧ ಕುಡಿಯುವ ನೀರು, ನೈರ್ಮಲ್ಯ ಹಾಗೂ ಶುಚಿ- ರುಚಿಯಾದ ಊಟದ ವ್ಯವಸ್ಥೆ ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ವಿದ್ಯಾರ್ಥಿನಿಯರು ಆಗಾಗ್ಗೆ ಹಾಸ್ಟೆಲ್ ಮುಂಭಾಗದಲ್ಲಿ ಪ್ರತಿಭಟನೆ ಮಾಡುತ್ತಿದ್ದುದು ಗೊತ್ತಿರುವ ಸಂಗತಿ. ರುಚಿ ಇಲ್ಲದ ಊಟ, ಒಂದೇ ರೀತಿಯ ಬೆಳಗಿನ ಉಪಾಹಾರ, ಮಧ್ಯಾಹ್ನದ ಅಡುಗೆ, ಕೊಠಡಿಗಳಲ್ಲಿ ಸಾಮರ್ಥ್ಯ ಮೀರಿ ತುಂಬಿ ತುಳುಕುವ ವಿದ್ಯಾರ್ಥಿನಿಯರ ಸಂಖ್ಯೆ, ಒಳಚರಂಡಿ ಅವ್ಯವಸ್ಥೆ ಇತ್ಯಾದಿ ವಿಚಾರಗಳಿಗೆ ಬೇಸತ್ತು ವಿದ್ಯಾರ್ಥಿಗಳು ಉಪವಾಸ ಸತ್ಯಾಗ್ರಹ ಮಾಡಿದ್ದೂ ಇದೆ. ಈ ವ್ಯವಸ್ಥೆ ಸರಿ ಹೋಗುವುದಕ್ಕೆ ಸುಸಜ್ಜಿತ ಕಟ್ಟಡ ಬೇಕೆ? ಎನ್ನುವುದು ವಿದ್ಯಾರ್ಥಿನಿಯರ ಪ್ರಶ್ನೆಯಾಗಿದೆ.

ಹಳೇ ಕಟ್ಟಡದಲ್ಲಿದ್ದರೂ ಸ್ವಚ್ಛತೆ, ಶುದ್ಧ ಕುಡಿಯುವ ನೀರು ಹಾಗೂ ಶುಚಿ- ರುಚಿಯಾದ ಊಟ ಸಿಕ್ಕಿದ್ದರೆ ಏಕೆ ಪ್ರತಿಭಟನೆ ಮಾಡುತ್ತಾರೆ? ಈಗ ಕಟ್ಟಡ ನೆಲಸಮ ಮಾಡುವುದು ನಿಶ್ಚಿತವಾಗಿದೆ. ಹೊಸ ಕಟ್ಟಡ ನಿರ್ಮಾಣ ಆಗುತ್ತಿರುವುದು ಸಂತೋಷದ ವಿಷಯವೇ ಸರಿ. ಆದರೆ, ಸದ್ಯಕ್ಕೆ ಇರುವ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಮುಂದಾಗಬೇಕು ಎನ್ನುವುದು ವಿದ್ಯಾರ್ಥಿನಿಯರ ಬೇಡಿಕೆಯಾಗಿದೆ.

ಸುಸಜ್ಜಿತ ಹಾಸ್ಟೆಲ್‌ನಲ್ಲಿ ಏನೇನು ವ್ಯವಸ್ಥೆ?
೧,೪೦೦ ವಿದ್ಯಾರ್ಥಿಗಳಿಗೆ ಅವಕಾಶ
೩೫೪ ಕೊಠಡಿಗಳು
೨ ಅಡುಗೆ ಮನೆ
೨ ಊಟದ ಮನೆ (೫೦೦+೫೦೦ ಮಂದಿ ಕೂರುವ ಸಾಮರ್ಥ್ಯ)
ಎಸ್‌ಟಿಪಿ – ೨೫೦ ಕೆಎಲ್‌ಡಿ
೩ ಲಕ್ಷ ಸಾಮರ್ಥ್ಯದ ನೀರಿನ ತೊಟ್ಟಿ
೩೨೦ ಕೆವಿಎ ಜನರೇಟರ್ ಯುಪಿಎಸ್,ಸಿಸಿ ಟಿವಿ
ಅಗ್ನಿಶಾಮಕ ವ್ಯವಸ್ಥೆ
ಬಿಸಿ ನೀರಿಗೆ ಸೋಲಾರ್ ವ್ಯವಸ್ಥೆ

ಎರಡು ವರ್ಷಗಳಿಂದ ಸಮಸ್ಯೆ
ಇಲ್ಲ ನಮ್ಮ ಹಾಸ್ಟೆಲ್ ಕೊಲಿಜಿಯೇಟ್ ಮಂಡಳಿಗೆ ಒಳಪಟ್ಟಿರುತ್ತದೆ. ವಿದ್ಯಾರ್ಥಿಗಳಿಂದ ಶುಲ್ಕ ಪಡೆದು ಅದರಿಂದ ಎಲ್ಲವನ್ನೂ ನಿರ್ವಹಣೆ ಮಾಡಲಾಗುತ್ತದೆ. ಸರ್ಕಾರ ವಿದ್ಯಾರ್ಥಿಗಳ ಶುಲ್ಕದ ಹೊರೆ ಕಡಿಮೆ ಮಾಡಲು ಹಾಸ್ಟೆಲ್‌ನಲ್ಲಿರುವ ೭ ತಾತ್ಕಾಲಿಕ ಹುದ್ದೆಗಳನ್ನು ಪರ್ಮನೆಂಟ್ ಮಾಡಿ, ಸಂಬಳ ನೀಡಿದರೆ ಒಳ್ಳೆಯದು. ಕಳೆದ ಎರಡು ವರ್ಷಗಳಿಂದ ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ. ಊಟದ ವ್ಯವಸ್ಥೆ ಕೂಡ ಚೆನ್ನಾಗಿದೆ.
-ಸಿ. ಪದ್ಮ, ವಾರ್ಡನ್, ಮಹಾರಾಣಿ ವಿಜ್ಞಾನ ಕಾಲೇಜು ಹಾಸ್ಟೆಲ್

ಸೋರುವ ಕಟ್ಟಡ, ಉದುರುವ ಚಾವಣಿ. . .
ಹಾಸ್ಟೆಲ್ ಕಟ್ಟಡ ಬಹಳ ಶಿಥಿಲವಾಗಿದೆ. ಜೋರು ಮಳೆ ಬಂದರೆ ಮೇಲಿನಿಂದ ನೀರು ಸುರಿಯುತ್ತದೆ. ಕೆಲವು ಕಡೆ ಚಾವಣಿ ಉದುರುತ್ತಿದೆ. ಊಟ, ಕುಡಿಯುವ ನೀರು, ಸ್ವಚ್ಛತೆ ಎಲ್ಲವೂ ಚೆನ್ನಾಗಿ ಇದೆ. ನಮಗೆ ಸೂಕ್ತ ಬಂದೋಬಸ್ತ್ ಇದೆ. ರಜೆ ದಿನಗಳಲ್ಲಿ ಹೊರಗೆ ಹೋಗುವುದಕ್ಕೂ ಬಿಡುವುದಿಲ್ಲ . – ವರ್ಷ, ಅಂತಿಮ ವರ್ಷದ ಎಂ. ಎಸ್ಸಿ.

ಸಮಸ್ಯೆ ಉಲ್ಬಣವಾಗದಿರಲಿ
ಸದ್ಯಕ್ಕೆ ಹಾಸ್ಟಲ್‌ನಲ್ಲಿ ಎಲ್ಲ ಸೌಕರ್ಯಗಳೂ ಇವೆ. ಈಗ ಸೆಕ್ಯೂರಿಟಿ ಕೂಡ ಬಿಗಿಯಾಗಿದೆ. ಕುಡಿಯುವ ನೀರಿಗಾಗಿ ಮತ್ತೊಂದು ಆರ್. ಒ. ಪ್ಲ್ಯಾಂಟ್ ಹಾಕಿಸುವ ಯೋಜನೆ ಇತ್ತು. ಸದ್ಯಕ್ಕೆ ನೀರು ಕಡಿಮೆಯಾದರೆ ಹೊರಗಿನಿಂದ ತರಿಸುತ್ತಾರೆ. ಈಗ ಅನುಕೂಲಗಳಿವೆ. ಆದರೆ ದಿಢೀರನೆ ಸಮಸ್ಯೆಗಳು ಉಲ್ಬಣವಾಗುತ್ತವೆ. ಆ ರೀತಿ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು.
-ಅಮೃತವರ್ಷಿಣಿ, ಅಂತಿಮ ವರ್ಷದ ಎಂ. ಎಸ್ಸಿ.

ಆದಷ್ಟು ಬೇಗ ಬದಲಿ ವ್ಯವಸ್ಥೆ ಆಗಲಿ
ಮಹಾರಾಣಿ ಕಲಾ ಕಾಲೇಜಿನ ಹಾಸ್ಟೆಲ್‌ನಲ್ಲಿ ೧೫೦ ಮಂದಿ ವಿದ್ಯಾರ್ಥಿನಿಯರು ಇದ್ದಾರೆ. ಅತಿ ಹೆಚ್ಚು ಸಮಸ್ಯೆ ಇದ್ದದ್ದು ಕಲಾ ಕಾಲೇಜು ವಿದ್ಯಾರ್ಥಿ ನಿಲಯದಲ್ಲೇ ಇಲ್ಲಿ ೭೦ ಕೊಠಡಿಗಳಿದ್ದವು. ಅದರಲ್ಲಿ ೨೪ ಕೊಠಡಿಗಳನ್ನು ವಾಸಕ್ಕೆ ಯೋಗ್ಯವಲ್ಲ ಎಂದು ಲೋಕೋಪಯೋಗಿ ಇಲಾಖೆಯವರೇ ಮುಚ್ಚಿದ್ದರು. ಉಳಿದ ೪೬ ಕೊಠಡಿಗಳಲ್ಲಿ ವಿದ್ಯಾರ್ಥಿನಿಯರಿದ್ದಾರೆ. ಈಗಲೂ ಕಟ್ಟಡದ ಚಾವಣಿ ಕಿತ್ತು ಬೀಳುತ್ತಿರುತ್ತದೆ. ಆದಷ್ಟು ಬೇಗ ಬದಲಿ ವ್ಯವಸ್ಥೆ ಮಾಡುವುದು ಒಳ್ಳೆಯದು. ಸರಸ್ವತಿಪುರಂನ ದೀನ್ ದಯಾಳ್ ಹಾಸ್ಟೆಲ್‌ನಲ್ಲಿ ಎಲ್ಲ ಮಕ್ಕಳಿಗೂ ಒಂದೆಡೆ ವ್ಯವಸ್ಥೆ ಮಾಡುವ ಬಗ್ಗೆ ಚರ್ಚೆ ಆಗುತ್ತಿತ್ತು. ಯಾವುದೇ ಅಧಿಕೃತ ಆದೇಶ ಬಂದಿಲ್ಲ.
-ಮಂಜುನಾಥ್, ವಾರ್ಡನ್, ಮಹಾರಾಣಿ ಕಲಾ ಕಾಲೇಜು ಹಾಸ್ಟೆಲ್.

 

ಆಂದೋಲನ ಡೆಸ್ಕ್

Recent Posts

ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ನಿಧನಕ್ಕೆ ಮಲ್ಲಿಕಾರ್ಜುನ ಖರ್ಗೆ ಸಂತಾಪ

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ನಿಧನಕ್ಕೆ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಸಂತಾಪ ಸೂಚಿಸಿದ್ದು, ಕಂಬನಿ ಮಿಡಿದಿದ್ದಾರೆ. ಈ…

5 mins ago

ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ನಿಧನಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಸಂತಾಪ

ಬೆಂಗಳೂರು: ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ನಿಧನಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ…

15 mins ago

ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ನಿಧನಕ್ಕೆ ಬಿ.ವೈ.ವಿಜಯೇಂದ್ರ ಸಂತಾಪ

ಬೆಂಗಳೂರು: ತೀವ್ರ ಉಸಿರಾಟದ ಸಮಸ್ಯೆಯಿಂದ ವಿಧಿವಶರಾಗಿರುವ ಮಾಜಿ ಪ್ರಧಾನಿ ಮನ ಮೋಹನ್‌ ಸಿಂಗ್‌ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಂತಾಪ…

30 mins ago

ಮನಮೋಹನ್‌ ಸಿಂಗ್‌ ವಿಧಿವಶ ಹಿನ್ನೆಲೆ: ನಾಳೆ ರಾಜ್ಯಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಬೆಂಗಳೂರು: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ವಿಧಿವಶರಾಗಿರುವ ಹಿನ್ನೆಲೆಯಲ್ಲಿ ನಾಳೆ ರಾಜ್ಯಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮಾಜಿ ಪ್ರಧಾನಿ…

49 mins ago

ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ

ಬೆಂಗಳೂರು: ತೀವ್ರ ಉಸಿರಾಟದ ತೊಂದರೆಯಿಂದ ವಿಧಿವಶರಾಗಿರುವ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಈ…

1 hour ago

ಮನಮೋಹನ್‌ ಸಿಂಗ್‌ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿ ಕಂಬನಿ ಮಿಡಿದಿದ್ದಾರೆ. ಈ…

1 hour ago