ಪ್ರಸಾದ್ ಲಕ್ಕೂರು
ಮೇಯುವ ಜಾನುವಾರು, ಮೇಕೆಗಳ ಮೇಲೆ ದಾಳಿ; ಜಮೀನುಗಳಿಗೆ ಹೋಗಲು ಗ್ರಾಮಸ್ಥರ ಆತಂಕ
ಚಾಮರಾಜನಗರ: ತಾಲ್ಲೂಕಿನ ಉಮ್ಮತ್ತೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ವ್ಯಾಪ್ತಿಯಲ್ಲಿ ಒಂದು ತಿಂಗಳಿನಿಂದ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಉಮ್ಮತ್ತೂರು, ಲಿಂಗಣಾಪುರ, ತೊರವಳ್ಳಿ, ದೇಮಹಳ್ಳಿ, ಕುದೇರು, ದಾಸನೂರು, ಬಾಗಳಿ, ಜನ್ನೂರು, ಹಳ್ಳಿಕೆರೆಹುಂಡಿ ಗ್ರಾಮಗಳ ಜಮೀನುಗಳ ವ್ಯಾಪ್ತಿಯಲ್ಲಿ ಚಿರತೆಗಳ ಉಪಟಳ ಮಿತಿಮೀರಿದೆ. ಇದರಿಂದಾಗಿ ಈ ಗ್ರಾಮಗಳ ಜನರು ತಮ್ಮ ಜಮೀನುಗಳಿಗೆ ಹೋಗಿ ಬರಲು ಹಾಗೂ ಜಾನುವಾರುಗಳನ್ನು ಮೇಯಿಸಲು ಬರಡು ಭೂಮಿಗಳತ್ತ ತೆರಳಲು ಭಯಭೀತರಾಗಿದ್ದಾರೆ. ಉಮ್ಮತ್ತೂರು ಕೃಷ್ಣಮೃಗ ವನ್ಯಧಾಮಕ್ಕೆ ಹೊಂದಿಕೊಂಡಂತೆ ಇರುವ ಬಸವನ ಬೆಟ್ಟ ಹಾಗೂ ಬೆಟ್ಟದ ತಪ್ಪಲಿನಲ್ಲಿರುವ ಆನೆ ಕೆಂಬರೆ (ಹಳ್ಳ)ಯಲ್ಲಿ ೩-೪ ಚಿರತೆಗಳು ವಾಸವಾಗಿವೆ. ಅವುಗಳು ಆಗಾಗ್ಗೆ ಜಮೀನುಗಳು, ಬಂಜರು ಬಿದ್ದಿರುವ ಭೂಮಿಯಲ್ಲಿ ಜಾನುವಾರುಗಳು ಮೇಯುವಾಗ ದಾಳಿ ಮಾಡುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.
ರಾತ್ರಿ ವೇಳೆ ಮತ್ತು ಬೆಳಗಿನ ಜಾವ ಈ ಗ್ರಾಮಗಳ ಜನರು ತಮ್ಮ ಪಂಪ್‌ಸೆಟ್ ನೀರಾವರಿ ಜಮೀನು ಹಾಗೂ ಮಳೆಯಾಶ್ರಿತ ಜಮೀನುಗಳಿಗೆ ಹೋಗಿ ಬರಲು ಭಯಪಡುತ್ತಿದ್ದಾರೆ. ಸಮೀಪವೇ ಇರುವ ಅರಣ್ಯವನ್ನು ಬಿಟ್ಟು ಆಹಾರ ಅರಸಿ ಅಡ್ಡಾಡುವ ಚಿರತೆಗಳು ದಾಳಿ ನಡೆಸಬಹುದೆಂಬ ಆತಂಕದಿಂದಲೇ ಓಡಾಡಬೇಕಿದೆ ಎಂದು ರೈತರಾದ ನಟೇಶ್ ಅಳಲು ತೋಡಿಕೊಂಡಿದ್ದಾರೆ.
ಕೊಟ್ಟಿಗೆಯಲ್ಲಿದ್ದ ಕರು ಹೊತ್ತೊಯ್ದ ಚಿರತೆ…”
ಚಾ.ನಗರ: ಬುಧವಾರ ತಡರಾತ್ರಿ ಚಿರತೆಯೊಂದು ಲಿಂಗಣಾಪುರದ ಹೊರವಲಯದಲ್ಲಿರುವ ನಟೇಶ್ ಎಂಬವರ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಜಾನುವಾರುಗಳ ಪೈಕಿ ಒಂದು ಕರುವನ್ನು ಹೊತ್ತೊಯ್ದು ಪಕ್ಕದ ಪೊದೆಯಲ್ಲಿ ತಿಂದು ಹಾಕಿದೆ. ಮಂಗಳವಾರ ಸಂಜೆ ಇದೇ ಗ್ರಾಮದ ಪುಟ್ಟೇಗೌಡ ಎಂಬವರು ತಮ್ಮ ಜಮೀನಿನ ಬಳಿ ಜಾನುವಾರುಗಳು ಹಾಗೂ ಮೇಕೆಗಳನ್ನು ಮೇಯಿಸುತ್ತಿದ್ದಾಗ ಚಿರತೆಯು ೨ ಮೇಕೆಗಳನ್ನು ಎಳೆದೊಯ್ದು ತಿಂದು ಹಾಕಿದೆ. ಚಿರತೆಯ ಹಾವಳಿಯಿಂದ ನಟೇಶ್ ಮತ್ತು ಪುಟ್ಟೇಗೌಡ ಅವರು ಸಹಸ್ರಾರು ರೂ. ನಷ್ಟ ಅನುಭವಿಸಿದ್ದಾರೆ.
೨೦ ದಿನಗಳಲ್ಲಿ ೩ ಚಿರತೆಗಳು ಸೆರೆ”
ಚಾ.ನಗರ: ಗ್ರಾಮಗಳ ವ್ಯಾಪ್ತಿಯಲ್ಲಿ ಚಿರತೆಗಳ ಹಾವಳಿ ಕುರಿತು ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಲಾಖೆಯ ಸಿಬ್ಬಂದಿ ಕುದೇರು ಮತ್ತು ಉಮ್ಮತ್ತೂರು ಬಳಿಯ ಜಮೀನುಗಳಲ್ಲಿ ಬೋನುಗಳನ್ನು ಇರಿಸಿ ಮೇಕೆಗಳನ್ನು ಕಟ್ಟಿಹಾಕಿದ್ದರು. ೨೦ ದಿನಗಳ ಅಂತರದಲ್ಲಿ ಉಮ್ಮತ್ತೂರು-ದಾಸನೂರು ಮಾರ್ಗದ ಕ್ವಾರಿ ಸಮೀಪದ ಜಮೀನಿನ ಬಳಿ ಇಡಲಾಗಿದ್ದ ಬೋನಿಗೆ ೨ ಚಿರತೆಗಳು ಹಾಗೂ ಕಳೆದ ಶನಿವಾರ ಕುದೇರು-ತೊರವಳ್ಳಿ ರಸ್ತೆ ಬದಿಯ ಕರಿಕಲ್ಲು ಕ್ವಾರಿ ಬಳಿ ಇಟ್ಟಿದ್ದ ಬೋನಿಗೆ ಒಂದು ಚಿರತೆ ಸೆರೆಯಾಗಿದೆ. ಇನ್ನೇನು ಚಿರತೆಗಳ ಕಾಟ ತಪ್ಪಿತು ಎಂದು ಗ್ರಾಮಸ್ಥರು ನಿಟ್ಟುಸಿರು ಬಿಡುತ್ತಿದ್ದಂತೆ ಬುಧವಾರ ರಾತ್ರಿ ಚಿರತೆಯೊಂದು ಕರುವೊಂದನ್ನು ಎಳೆದೊಯ್ದು ತಿಂದಿದೆ.
” ಲಿಂಗಣಾಪುರದ ಹೊರವಲಯದಲ್ಲಿ ರಾತ್ರಿ ಚಿರತೆ ದಾಳಿಗೆ ಕರು ಬಲಿಯಾಗಿರುವುದು ಗಮನಕ್ಕೆ ಬಂದಿದೆ. ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ನಡೆಸಲಾಗಿದೆ. ಕರುವಿನ ಕಳೇಬರದ ಮರಣೋತ್ತರ ಪರೀಕ್ಷೆ ವರದಿ ಬಳಿಕ ಇಲಾಖೆಯಿಂದ ಪರಿಹಾರ ನೀಡಲಾಗುವುದು. ಲಿಂಗಣಾಪುರ ಬಳಿ ಬೋನು ಇಟ್ಟು ಚಿರತೆ ಸೆರೆ ಹಿಡಿಯಲಾಗುವುದು.”
-ಸಂದೀಪ್ ಕಮ್ಮಾರ್, ಪ್ರೊಬೆಷನರಿ ಎಸಿಎಫ್, ಚಾಮರಾಜನಗರ ವಲಯ
ಧನುರ್ಮಾಸ ಆರಂಭವಾದ ಕೂಡಲೇ ಎಲ್ಲೆಡೆ ದೇವಸ್ಥಾನಗಳಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಬೆಳಗಿನ ಜಾವ ಪೂಜೆ ಆರಂಭವಾಗುತ್ತದೆ. ಮಹಿಳೆಯರು ಬೆಳಗಿನ ಚಳಿಯಲ್ಲಿಯೇ ದೇವಾಲಯಗಳಿಗೆ…
ಮೈಸೂರು : ಚಲಿಸುತ್ತಿದ್ದ ವೇಳೆಯೇ ಬೆಂಕಿ ಕಾಣಿಸಿಕೊಂಡ ಪರಿಣಾಮ ಕೇರಳ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಹೊತ್ತಿ ಉರಿದಿರುವ ಘಟನೆ…
ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ನಂಜನಗೂಡು ಪಟ್ಟಣದಿಂದ ಊಟಿ ಮತ್ತು ಸುಲ್ತಾನ್ ಬತ್ತೇರಿಗೆ ಹಾದು ಹೋಗಿರುವ ರಸ್ತೆಗಳಲ್ಲಿ ಮತ್ತು…
ಮೈಸೂರು ನಗರದ ಸಬ್ ಅರ್ಬನ್ ಬಸ್ ನಿಲ್ದಾಣದ ಪ್ರವೇಶ ಹಾಗೂ ನಿರ್ಗಮನ ದ್ವಾರಗಳ ಬಳಿ ಆಟೋಗಳನ್ನು ಅಡ್ಡಾದಿಡ್ಡಿಯಾಗಿ ನಿಲುಗಡೆ ಮಾಡುತ್ತಿದ್ದು,…
ಹೊಸದಿಲ್ಲಿ : ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಶಿಲ್ಪಿ ರಾಮ್ ಸುತಾರ್ ಗುರುವಾರ ( 100) ವಿಧಿವಶರಾಗಿದ್ದಾರೆ. ಮಹಾರಾಷ್ಟ್ರದ ಧುಲೆ…
ಕೇರಳ ಅಂತಾರಾಷ್ಟ್ರೀಯ ಚಿತ್ರೋತ್ಸವದ ೩೦ನೇ ಆವೃತ್ತಿ ಕಳೆದ ಶುಕ್ರವಾರ ಉದ್ಘಾಟನೆಯಾಗಿ ಇಂದು ಕೊನೆಯಾಗುತ್ತಿದೆ. ಭಾರತದಲ್ಲಿ ನಡೆಯುತ್ತಿರುವ ಮಾನ್ಯತೆ ಪಡೆದ ಐದು…