ಎಸ್.ಎಸ್.ಭಟ್
ಗ್ರಾಮದಲ್ಲಿ ಐದಾರು ಆಡು, ಕುರಿ, ನಾಯಿಗಳನ್ನು ತಿಂದಿರುವ ಚಿರತೆ; ಸೆರೆಹಿಡಿಯಲು ಆಗ್ರಹ
ವರುಣ: ಮೈಸೂರು ತಾಲ್ಲೂಕಿನ ಕೆಂಚನಗೂಡಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರು ಭಯದಿಂದ ಜೀವನ ನಡೆಸುವಂತಾಗಿದೆ.
ಈಗಾಗಲೇ ಗ್ರಾಮದಲ್ಲಿ ಐದಾರು ಆಡು, ಕುರಿ, ನಾಯಿಗಳನ್ನು ತಿಂದಿರುವಚಿರತೆ ಈ ಗ್ರಾಮದ ಕೆರೆ ಬಳಿ ಮೂರು ಮರಿಗಳಿಗೆ ಜನ್ಮ ನೀಡಿದ್ದು, ಕೆರೆಯ ಬಳಿ ಹೋದವರಿಗೆ ಭೀತಿ ಮೂಡಿಸುತ್ತಿದೆ.
ಈ ಗ್ರಾಮದ ಸುತ್ತ ಕೆಎಚ್‌ಬಿ ಸೇರಿದಂತೆ ಅನೇಕ ಖಾಸಗಿ ಬಡಾವಣೆಗಳಿದ್ದು, ಅವುಗಳು ಅಭಿವೃದ್ಧಿಯಾಗದೆ ಕುರುಚಲು ಕಾಡಿನಿಂದ ಆವೃತವಾಗಿ ಕಾಡು ಪ್ರಾಣಿಗಳ ವಾಸದ ಗೂಡಾಗಿವೆ. ಈಗಾಗಲೇ ಚಿರತೆ ಸಾಕುಪ್ರಾಣಿಗಳನ್ನು ಚಿರತೆ ತಿಂದುಹಾಕಿದೆ.
ಚಿರತೆಯನ್ನು ಸೆರೆಹಿಡಿದು ಗ್ರಾಮದಲ್ಲಿನ ಚಿರತೆ ಹಾವಳಿಯ ಆತಂಕ ನಿವಾರಿಸಬೇಕು ಎಂದು ಮೈಸೂರಿನ ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ ಎಂಬುದು ಗ್ರಾಮಸ್ಥರ ಆರೋಪ.
ಚಿರತೆ ಈಗ ಅಲ್ಲೇ ತನ್ನ ಮೂರೂ ಮರಿಗಳೊಂದಿಗೆ ಸುತ್ತಾಡಲಾರಂಬಿಸಿದೆ. ಗುರುವಾರ ಮಧ್ಯಾಹ್ನ ಗ್ರಾಮದ ಜೋಗನಾಯಕ ಅಡು, ಕುರಿಗಳೊಂದಿಗೆ ಕೆರೆಗೆ ನೀರು ಕುಡಿಸಲು ಹೋದಾಗ ಆಡಿನ ಹಿಂಡಿನ ಮೇಲೆ ಚಿರತೆ ಬಂದು ಎರಗಿದೆ.
ಆಗ ಜೋಗನಾಯಕ ಜೋರಾಗಿ ಕಿರುಚಾಡಿದ್ದು, ಅದರಿಂದ ಗಾಬರಿಯಾದ ಚಿರತೆ ಕುರುಚಲು ಕಾಡಿನತ್ತ ತೆರಳಿದೆ. ಹೀಗಾಗಿ ಜೋಗನಾಯಕ ಆಡು ಕುರಿಗಳೊಂದಿಗೆ ಗ್ರಾಮ ಸೇರಿಕೊಂಡಿದ್ದಾರೆ.
ಈ ಘಟನೆಯಿಂದಾಗಿ ಈ ಗ್ರಾಮದ ರಸ್ತೆಗಳಲ್ಲಿ ನಿತ್ಯ ಸಂಚರಿಸುವ ಜನರುಭಯಭೀತರಾಗಿ ಆ ರಸ್ತೆಯನ್ನು ಬಿಟ್ಟು ಬಳಸು ಹಾಕಿ ಭಯದಿಂದಲೇ ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ. ಈವರೆಗೆ ಆಡು, ಕುರಿ, ನಾಯಿಗಳ ಮೇಲೆ ಎರಗಿದ ಚಿರತೆ ಮನುಷ್ಯರ ಮೇಲೆ ಎರಗುವ ಮೊದಲು ಅದನ್ನು ಸೆರೆಹಿಡಿದು ಗ್ರಾಮಸ್ಥರ ಆತಂಕ ವನ್ನು ದೂರ ಮಾಡಬೇಕು ಎಂದು ಕೆಂಚಲಗೂಡಿನ ಜನತೆ ಆಗ್ರಹಿಸಿದ್ದಾರೆ.
ಚಿರತೆ ಹಾವಳಿ ತಡೆಯಬೇಕಾಗಿದ್ದ ಅರಣ್ಯಾಧಿಕಾರಿಗಳು ಗ್ರಾಮ ಪಂಚಾಯಿತಿ ಹಾಗೂ ಖಾಸಗಿ ಬಡಾವಣೆಗಳ ಮಾಲೀಕರು ಚಿರತೆ ಹಾವಳಿ ತಡೆಯಲು ಮುಂದಾಗದೆ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಜಾರಿಕೊಳ್ಳುತ್ತಿದ್ದಾರೆ.
ಚಿರತೆ ಹಾವಳಿ ಇದೇ ರೀತಿ ಮುಂದುವರಿದಲ್ಲಿ ಮೈಸೂರಿನ ಅರಣ್ಯ ಇಲಾಖೆ ಮುಂದೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ರಾಜ್ಯ ರೈತ ಸಂಘದ ಮೈಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಮರಂಕಯ್ಯ ಎಚ್ಚರಿಸಿದ್ದಾರೆ.
” ಚಿರತೆಯು ಕುರಿಗಳ ಹಿಂಡಿನ ಮೇಲೆಎರಗಿದ್ದನ್ನು ಕಂಡ ನಾನು ಜೋರಾಗಿಕಿರುಚಾಡಿದಾಗ ಅದು ಕುರಿಯನ್ನು ಬಿಟ್ಟು ಕುರುಚಲು ಕಾಡಿನತ್ತ ಸಾಗಿತು. ನಾನು ಭಯದಿಂದ ಗ್ರಾಮದತ್ತ ಓಡಿ ಬಂದೆ.”
-ಜೋಗನಾಯಕ, ಕುರಿಗಾಹಿ, ಕೆಂಚಲಗೂಡು
ಹೊಸದಿಲ್ಲಿ : ವೋಟ್ ಚೋರಿ ವಿರುದ್ಧ ಮತ್ತೆ ರಾಷ್ಟ್ರ ಮಟ್ಟದಲ್ಲಿ ಅಬ್ಬರಿಸಿರುವ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಮತ್ತು…
ಬೆಂಗಳೂರು : ಕಾಂಗ್ರೆಸ್‌ನ ಹಿರಿಯ ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ(95) ಅವರು ನಿಧನರಾಗಿದ್ದಾರೆ.…
ತುಮಕೂರು : ವಿರೋಧ ಪಕ್ಷದವರು ಪದೇ ಪದೆ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯನ್ನು ವಿರೋಧಿಸುತ್ತಾರೆ. ಗ್ಯಾರಂಟಿ ಕೊಡದೆ ರಸ್ತೆ,…
ಹೊಸದಿಲ್ಲಿ : ಇಂದು ನನ್ನ ಮಗನಿಗೆ ಎಂಟು ಗಂಟೆಯ ಆಪರೇಷನ್ ಇತ್ತು. ಪತ್ನಿ, ಮಗಳು ಎಲ್ಲರೂ ಫೋನ್ ಮಾಡಿ ಬಹಳ…
ಮೈಸೂರು : ನಿರ್ದಿಷ್ಟ ಬ್ರಾಂಡ್‌ನ ಮೊಟ್ಟೆಗಳಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ 'ಜಿನೋಟಾಕ್ಸಿಕ್ ಅಂಶ' ಪತ್ತೆಯಾಗಿದೆ ಎಂದು ಹೇಳುವ ವೈರಲ್ ವಿಡಿಯೋ ಇದೀಗ…
ಬೆಳಗಾವಿ : ಮರಾಠರು ಮುಸ್ಲಿಂ ವಿರೋಧಿ ಅಂತ ಹಣೆಪಟ್ಟಿ ಕಟ್ಟಿಕೊಂಡಿದ್ದೇವೆ. ನಾವು ಮೊಘಲರ ವಿರುದ್ಧ ಇದ್ದೆವು. ಆದರೆ ಮುಸ್ಲಿಂರ ವಿರೋಧಿಗಳಾಗಿರಲಿಲ್ಲ.…