Andolana originals

ಇಎಂಆರ್‌ಸಿಯಲ್ಲಿ ಲೆಗಸಿ ಲಾಂಚ್ ಮ್ಯೂಸಿಯಂ

ಕೆ.ಪಿ.ಮದನ್

ಮಾನಸಗಂಗೋತ್ರಿಯಲ್ಲಿ ವಿದ್ಯಾರ್ಥಿಗಳ ಲೆಗಸಿ ಲಾಂಚ್ ಮ್ಯೂಸಿಯಂ

ತಂತ್ರಜ್ಞಾನ ಬೆಳೆದು ಬಂದ ಹಾದಿಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ

ದೇಶದ ಇಎಂಆರ್‌ಸಿಗಳ ಪೈಕಿ ಇದೇ ಪ್ರಥಮ

ಮೈಸೂರು: ಮಾನಸಗಂಗೋತ್ರಿಯಲ್ಲಿರುವ ಇಎಂಆರ್‌ಸಿ (ಶೈಕ್ಷಣಿಕ ಬಹುಮಾಧ್ಯಮ ಸಂಶೋಧನಾ ಕೇಂದ್ರ)ಗೆ ೩೦ ವರ್ಷಗಳ ಸ್ಥಾಪನಾ ದಿನದ ಸಂಭ್ರಮ! ಈ ಸಂತಸವನ್ನು ಸದಾ ಹಸಿರಾಗಿಸುವ ಉದ್ದೇಶದಿಂದ ‘ಲೆಗಸಿ ಲಾಂಚ್’ ಎಂಬ ಮ್ಯೂಸಿಯಂ ಅನ್ನು ತೆರೆಯಲಾಗಿದೆ.

ಈ ಮ್ಯೂಸಿಯಂ ದೇಶದಲ್ಲೇ ಮೊದಲನೆಯದು ಎನ್ನಲಾಗಿದೆ. ತಂತ್ರಜ್ಞಾನ ಲೋಕದ ವಿಸ್ಮಯಗಳಾದ ಕ್ಯಾಮೆರಾಗಳ, ಎಲೆಕ್ಟ್ರಾನಿಕ್ಸ್‌ಗಳ ಇತಿಹಾಸದ ಕುರುಹುಗಳು, ಕಂಪೆನಿಗಳ ಹೆಸರುಗಳನ್ನು ಸಂಗ್ರಹಿಸಿಡುವುದು ಈ ‘ಲೆಗಸಿ ಲಾಂಚ್’ ಮ್ಯೂಸಿಯಂನ ಮೂಲ ಉದ್ದೇಶವಾಗಿದೆ. ಇದರಿಂದ ವಿದ್ಯಾರ್ಥಿಗಳು, ಸಂಶೋಧಕರಿಗೆ ಅನುಕೂಲ ವಾಗಲಿದೆ ಎಂಬುದು ನಿರ್ದೇಶಕರ ವಿಶ್ವಾಸದ ಮಾತು.

ಇಎಂಆರ್‌ಸಿ ಸಂಸ್ಥೆಯು ಸಿಇಸಿ ಮತ್ತು ಯುಜಿಸಿ ನೇತೃತ್ವದಲ್ಲಿ ದೇಶದ ಒಟ್ಟು ೨೧ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸು ತ್ತಿದೆ. ಶೈಕ್ಷಣಿಕ ಕ್ಷೇತ್ರದ ಆಡಿಯೋ-ವಿಡಿಯೋ ಕಾರ್ಯಕ್ರಮಗಳನ್ನು ರೂಪಿಸುವುದು ಈ ಸಂಸ್ಥೆಯ ಧ್ಯೇಯ. ಮೈಸೂರು ವಿವಿ ಮಾನಸಗಂಗೋತ್ರಿ ಆವರಣದಲ್ಲಿರುವ ಶೈಕ್ಷಣಿಕ ಬಹುಮಾಧ್ಯಮ ಸಂಶೋಧನಾ ಕೇಂದ್ರ (ಇಎಂಆರ್‌ಸಿ)ವನ್ನು ೧೯೯೫ರಲ್ಲಿ ಅಸ್ತಿತ್ವಗೊಳಿಸಲಾಯಿತು. ಪ್ರಸ್ತುತ ಈ ಕೇಂದ್ರದ ಪ್ರಭಾರ ನಿರ್ದೇಶಕರಾಗಿ ಪ್ರೊ.ಎಂ.ಎಸ್.ಸಪ್ನ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ.

ತಂತ್ರಜ್ಞಾನ ನಡೆದು ಬಂದ ಹಾದಿಯನ್ನು ತಿಳಿಸುವ ಉದ್ದೇಶದಿಂದ ‘ಲೆಗೆಸಿ ಲಾಂಚ್’ ಮ್ಯೂಸಿಯಂ ಅನ್ನು ತೆರೆಯಲಾಗಿದೆ. ಮ್ಯೂಸಿಯಂನಲ್ಲಿ ರೇಡಿಯೊ, ಟೆಲಿವಿಷನ್‌ಗೆ ಸಂಬಂಧಪಟ್ಟ ಸಾಕಷ್ಟು ಉಪಕರಣಗಳಿವೆ. ಇವನ್ನೆಲ್ಲ ಒಟ್ಟುಗೂಡಿಸಿ ಮ್ಯೂಸಿಯಂ ಮಾಡುವುದು ಲೆಗಸಿ ಲಾಂಚ್‌ನ ಮುಖ್ಯ ಉದ್ದೇಶ. ೩೦-೪೦ ವರ್ಷಗಳ ಹಿಂದಿನ ತಂತ್ರಜ್ಞಾನ ಹೇಗಿತ್ತು? ಕ್ಯಾಮೆರಾವನ್ನು ಹೇಗೆ ಬಳಸಿಕೊಳ್ಳಲಾಗುತ್ತಿತ್ತು? ಎಂಬಿತ್ಯಾದಿ ಮಾಹಿತಿಯನ್ನು ತಿಳಿಸುವ ಸಲುವಾಗಿ ಈ ಮ್ಯೂಸಿಯಂ ತೆರೆಯಲಾಗಿದೆ. ಇಲ್ಲಿ ವಿವಿಧ ನಮೂನೆಯ ಕ್ಯಾಮೆರಾಗಳಿಗೆ ಸಂಬಂಽಸಿದ ಮಾಹಿತಿಗಳನ್ನು ವಿದ್ಯಾರ್ಥಿಗಳು ಪಡೆಯಬಹುದಾಗಿದೆ.

ಟಿವಿ ಆರಂಭವಾಗಿದ್ದು ಹೇಗೆ? ಮೊದಲು ಯಾವ ಆಕಾರದಲ್ಲಿತ್ತು? ಕಂಪ್ಯೂಟರ್ ಗಾತ್ರ ಹೇಗಿತ್ತು? ನಂತರದಲ್ಲಿ ಹೇಗೆ ಪರಿವರ್ತನೆಯಾಯಿತು? ಪ್ರಿಂಟರ್‌ಗಳು ನಡೆದು ಬಂದ ಹಾದಿ ಎಂತದು? ಆವಿಷ್ಕಾರಗಳು ಹೇಗೆ? ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಯಾವ ರೀತಿಯಲ್ಲಿ ಬೆಳೆವಣಿಗೆ ಹೊಂದಿದೆ ಎಂಬುದನ್ನು ಮ್ಯೂಸಿಯಂನಲ್ಲಿ ಅರಿಯಬಹುದು. ವಿದ್ಯಾರ್ಥಿಗಳಿಗೆ ಮತ್ತು ಸಂಶೋಧಕರಿಗೆ ಇದರ ಪ್ರಯೋಜನ ಹೆಚ್ಚು ಆಗುತ್ತದೆ. ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶವಿದೆ. ಇಲ್ಲಿ ತಂತ್ರಜ್ಞಾನದ ವಿವಿಧ ಬಗೆಗಳನ್ನು ಕಣ್ಣುಂಬಿಕೊಳ್ಳಬಹುದಾಗಿದೆ. ಯಾವ ಕಂಪೆನಿ? ಯಾವಾಗ ಬಂದಿದ್ದು? ಎಂಬಿತ್ಯಾದಿ ಮಾಹಿತಿಗಳನ್ನು ಇದು ಒಳಗೊಂಡಿದೆ. ಲೈಟಿಂಗ್, ಟೆಲಿಫೋನ್, ರೇಡಿಯೊ, ಶೂಟಿಂಗ್ ಕೇಸ್, ಪ್ರಿಂಟರ್‌ಗಳಿಗೆ ಪ್ರತ್ಯೇಕ ವಿಭಾಗಗಳಿವೆ. ಟ್ರೈಪ್ಯಾಡ್, ಮೋನೋ ಪ್ಯಾಡ್‌ಗಳನ್ನು ವಿದ್ಯಾರ್ಥಿಗಳು ವೀಕ್ಷಿಸಬಹುದು.

ದಾನಿಗಳ ನೆರವು: ಸಾಮಾನ್ಯವಾಗಿ ಹಳೆಯ ತಾಂತ್ರಿಕ ವಸ್ತುಗಳು ಎಲ್ಲರ ಮನೆಯಲ್ಲೂ ಇರುತ್ತವೆ. ಇದೇ ಆಲೋಚನೆಯಲ್ಲಿ ಕೇಂದ್ರದ ನಿರ್ದೇಶಕರಾದ ಪ್ರೊ.ಸಪ್ನ ಅವರು ಮ್ಯೂಸಿಯಂ ಮಾಡುತ್ತಿರುವ ಬಗ್ಗೆ ತಮ್ಮ ಫೇಸ್‌ಬುಕ್ ನಲ್ಲಿ ಮಾಹಿತಿಯ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದರು.

ಇದಕ್ಕೆ ಸ್ಪಂದಿಸಿದ ಅನೇಕ ಹಿರಿಯ ವಿದ್ಯಾರ್ಥಿಗಳು, ದಾನಿಗಳು ತಮ್ಮ ಬಳಿ ಇದ್ದ ಸಾಕಷ್ಟು ಎಲೆಕ್ಟ್ರಾನಿಕ್ಸ್ ಸಾಮಗ್ರಿಗಳನ್ನು ಮ್ಯೂಸಿಯಂಗೆ ಉಚಿತವಾಗಿ ನೀಡಿದ್ದಾರೆ. ಅವುಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದ್ದು, ವಸ್ತು-ಉಪಕರಣ ನೀಡಿದವರ ಹೆಸರನ್ನೂ ದಾಖಲಿಸಲಾಗಿದೆ. ಸಿಇಸಿ ಡೈರೆಕ್ಟರ್ ಜಗತ್ ಭೂಷಣ್ ನಡ್ಡಾ ಮ್ಯೂಸಿಯಂ ನೋಡಿ, ದೇಶದಲ್ಲಿರುವ ೨೧ ಇಎಂಎಂಆರ್‌ಸಿ ಸಂಸ್ಥೆಗಳಲ್ಲಿ ಈ ರೀತಿಯ ಮ್ಯೂಸಿಯಂ ಇರಲಿಲ್ಲ. ಈ ನಿಟ್ಟಿನಲ್ಲಿ ಮೈಸೂರು ಸಂಸ್ಥೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಹೈದರಾಬಾದ್, ಮಧ್ಯಪ್ರದೇಶದ ಇಎಂಆರ್‌ಸಿ ಅಧಿಕಾರಿಗಳು ಮೈಸೂರಿನ ಮ್ಯೂಸಿಯಂ ನೋಡಿಕೊಂಡು ಹೋಗಿದ್ದಾರೆ. ಅಲ್ಲಿಯೂ ಮ್ಯೂಸಿಯಂ ತೆರೆಯುವ ಚಿಂತನೆ ನಡೆಸಿದ್ದಾರೆ.

ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಮೂಸ್ಯಿಯಂಗೆ ಉಚಿತ ಪ್ರವೇಶವಿದೆ ಹಾಗೂ ಆಸಕ್ತಿ ಇರುವ ಸಾರ್ವಜನಿಕರು ತಮ್ಮಲ್ಲಿರುವ ಎಲೆಕ್ಟ್ರಾನಿಕ್ಸ್ ವಸ್ತುಗಳಾದ ಕ್ಯಾಮೆರಾ ಮತ್ತು ಇನ್ನಿತರ ವಸ್ತುಗಳನ್ನು ದಾನವಾಗಿ ನೀಡಬಹುದಾಗಿದೆ. ದಾನಿಗಳ ಹೆಸರಿನಲ್ಲಿ ಅವುಗಳನ್ನು ಪ್ರದರ್ಶನಕ್ಕೆ ಇರಿಸಲಾಗುತ್ತದೆ.

” ಕಾಲಕ್ಕೆ ತಕ್ಕಂತೆ ತಂತ್ರಜ್ಞಾನದ ಬೆಳವಣಿಗೆಯಾಗುತ್ತಿದೆ. ಕ್ಯಾಮೆರಾಗಳು ಮತ್ತು ಎಲೆಕ್ಟ್ರಾನಿಕ್ಸ್ ವಸ್ತುಗಳ ಆವಿಷ್ಕಾರ ಕಾಲದಿಂದ ಕಾಲಕ್ಕೆ ಭಿನ್ನವಾಗಿರುತ್ತದೆ. ಇದನ್ನು ಇಂದಿನ ವಿದ್ಯಾರ್ಥಿಗಳು ತಿಳಿದುಕೊಳ್ಳಲಿ ಎಂಬ ಉದ್ದೇಶದಿಂದ ‘ಲೆಗಸಿ ಲಾಂಚ್’ ಮ್ಯೂಸಿಯಂ ತೆರೆಯಲಾಗಿದ್ದು, ವಿವಿಧ ಕಾಲೇಜುಗಳಿಂದ ವಿದ್ಯಾರ್ಥಿಗಳು ಆಗಮಿಸಿ ಇದರ ಉಪಯೋಗ ಪಡೆದುಕೊಂಡು ಹೋಗುತ್ತಿದ್ದಾರೆ.”

-ಪ್ರೊ.ಎಂ.ಎಸ್.ಸಪ್ನ, ಪ್ರಭಾರ ನಿರ್ದೇಶಕರು, ಶೈಕ್ಷಣಿಕ ಬಹುಮಾಧ್ಯಮ ಸಂಶೋಧನಾ ಕೇಂದ್ರ 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಮನೆ ಗೇಟುಗಳ ಮುಂದೆ ಅಪರಿಚಿತರ ‘ಕಾರುಬಾರು’

ಮನೆಗಳ ಗೇಟಿನ ಮುಂದೆಯೇ ಅಪರಿಚಿತರ ಕಾರು ನಿಲ್ಲಿಸುವ ಕೆಟ್ಟ ಪರಂಪರೆಯನ್ನು ಅನೇಕ ಕಡೆ ಕಾಣಬಹುದು. ಸೂರ್ಯಬೇಕರಿ ಬಳಿಯ ಎರಡನೇ ಅಡ್ಡರಸ್ತೆಯಲ್ಲಿ…

2 mins ago

ಓದುಗರ ಪತ್ರ: ರೈಲು ನೀರಿನ ಬಾಟಲಿಗೆ ಒಂದು ರೂ. ಹೆಚ್ಚು ವಸೂಲಿ!

ಭಾರತೀಯ ರೈಲ್ವೆಯನ್ನು ನೆಚ್ಚಿಕೊಂಡಿರುವವರು ಕೊಟ್ಯಂತರ ಮಂದಿ ಇದ್ದಾರೆ. ಈ ಪ್ರಯಾಣಿಕರ ಅನುಕೂಲಕ್ಕಾಗಿ ಹಲವಾರು ರೈಲು ನಿಲ್ದಾಣಗಳಲ್ಲಿ ರೈಲು ನೀರಿನ ಬಾಟಲಿಗಳ…

4 mins ago

ಓದುಗರ ಪತ್ರ: ಹೆಚ್ಚಿನ ಟಿಕೆಟ್ ದರ ನೀಡಲು ಸಿದ್ಧರಾಗಬೇಕಾ?

ಬೆಲೆ ಹೆಚ್ಚಳವೆಂಬುದು ಈಗ ಅನಿರೀಕ್ಷಿತವಲ್ಲವೆಂಬುದು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿದೆ. ಸದ್ಯದಲ್ಲೆ ಇದಕ್ಕೆ ಸೇರ್ಪಡೆಯಾಗುವಂತಿದೆ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್…

6 mins ago

ಬಡಮಕ್ಕಳಿಗೆ ಬೆಚ್ಚಗಿನ ಬದುಕು ನೀಡುವ ಕುಶಾಲ್ ರಾಜ್

ಪಂಜು ಗಂಗೊಳ್ಳಿ ಅವರ ವಾರದ ಅಂಕಣ  ಮಕ್ಕಳ ಶಿಕ್ಷಣಕ್ಕೆ ನೆರವಾಗಲು ‘ಲೋಟಸ್ ಪೆಟಲ್ ಫೌಂಡೇಶನ್’ ಸ್ಥಾಪನೆ  ಜಾರ್ಖಂಡಿನ ರಾಂಚಿಯ ಕುಶಾಲ್ ರಾಜ್…

7 mins ago

ಬಸವನಹುಳು ಸಾಕಣೆಯೂ ಲಾಭದಾಯಕ

ಕೇಶವ್ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯಿಂದ ಅಚ್ಚರಿಯ ಸಂಶೋಧನೆ! ಮೈಸೂರು: ಬಸವನಹುಳುಗಳನ್ನು ಜಮೀನುಗಳಲ್ಲಿ ರೈತರು ನೋಡಿದರೆ, ನಮ್ಮ…

11 mins ago

ಎಸ್‌ಐಆರ್: ಎನ್.ಆರ್.ಕ್ಷೇತ್ರದಲ್ಲೇ ೧ ಲಕ್ಷ ಮತದಾರರು ಔಟ್

ಕೆ.ಬಿ.ರಮೇಶನಾಯಕ ನಮೂನೆ-೬ ಸಲ್ಲಿಸಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಇನ್ನೂ ಇದೆ ಅವಕಾಶ  ಮೈಸೂರು: ಮುಂಬರುವ ವಿಧಾನಸಭೆ, ಲೋಕಸಭಾ ಚುನಾವಣೆಗೂ…

16 mins ago