Andolana originals

ಸೋರುತಿಹುದು ಗ್ರಂಥಾಲಯದ ಮಾಳಿಗೆ

ಕೆ.ಪಿ.ಮದನ್

ಮೂಲಸೌಕರ್ಯದ ಕೊರತೆ; ಆವರಣದಲ್ಲಿ ದುರ್ವಾಸನೆ 

ಗ್ರಂಥಾಲಯದಲ್ಲಿ ಅಧ್ಯಯನಕ್ಕೆ ವಿದ್ಯಾರ್ಥಿಗಳಿಗೆ ಭಯ

ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವ ಓದುಗರ ಸಂಖ್ಯೆ 

ಮೈಸೂರು: ಹಸಿರು ಪಾಚಿ ಕಟ್ಟಿದ ಗೋಡೆಗಳು… ಗಾರೆ ಉದುರಿ ಬಿದ್ದಿರುವ ಚಾವಣಿ… ಮಳೆ ಬಂದರೆ ಕಟ್ಟಡದ ಒಳಭಾಗಕ್ಕೆ ಸಲೀಸಾಗಿ ಚಾವಣಿಯಿಂದ ಇಳಿದು ಬರುವ ನೀರು… ಸೂಕ್ತ ರಕ್ಷಣೆ ಇಲ್ಲದೆ ಹಾಳಾಗುತ್ತಿರುವ ಪುಸ್ತಕಗಳು…ಇದು ಯಾರೋ ಬಡಪಾಯಿಯ ಮನೆಯಲ್ಲ. ಕವಿ ಅಥವಾ ಸಾಹಿತಿಯ ಕೋಣೆಯೂ ಅಲ್ಲ. ಅಕ್ಷರ ಆಕರಗಳನ್ನು ತನ್ನ ಎದೆಯೊಳಗೆ ಇಟ್ಟುಕೊಂಡಿರುವ ಗ್ರಂಥಾಲಯವೊಂದರ ದುಸ್ಥಿತಿ.

ಇದು ನಗರಕ್ಕೆ ಕೂಗಳತೆ ದೂರದಲ್ಲಿರುವ ಬೋಗಾದಿಯ ಸರ್ಕಾರಿ ಪ್ರೌಢಶಾಲೆ ರಸ್ತೆಯ ಬಲಭಾಗದಲ್ಲಿರುವ     ಗ್ರಂಥಾಲಯದ ಚಿಂತಾಜನಕ ಸ್ಥಿತಿ.

ಇಂತಹ ದುರವಸ್ಥೆಯ ಜೊತೆಗೆ ಗ್ರಂಥಾಲಯದ ಆವರಣದಲ್ಲಿಯೇ  ಮೂತ್ರದ ದುವಾರ್ಸನೆ ಮೂಗಿಗೆ ಬಡಿಯುತ್ತದೆ.

ಇಂತಹ ಪರಿಸ್ಥಿತಿಯಲ್ಲಿ ಗ್ರಂಥಾಲಯದಲ್ಲಿ ಅಧ್ಯಯನ, ಪತ್ರಿಕೆ ಓದುವುದಕ್ಕೆ ಹೋಗುವ ವಿದ್ಯಾರ್ಥಿಗಳು, ಸಾರ್ವಜನಿಕರು ಪರಿಸ್ಥಿತಿಯನ್ನು ಊಹಿಸುವುದಕ್ಕೂ ಕಷ್ಟವಾಗುತ್ತದೆ. ಬೋಗಾದಿಯು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿ ನಾಲ್ಕು ವರ್ಷಗಳು ಸಮೀಪಿಸುತ್ತ ಬಂದರೂ ಬಹುತೇಕ ಅಭಿವೃದ್ಧಿ ಮರೀಚಿಕೆಯಾಗಿದೆ ಎಂಬುದಕ್ಕೆ ಗ್ರಂಥಾಲಯದ ಈ ದುರ್ಗತಿ ಕನ್ನಡಿ ಹಿಡಿಯುತ್ತದೆ.

ಜ್ಞಾನಾರ್ಜನೆಗಾಗಿ ಗ್ರಂಥಾಲಯಕ್ಕೆ ಸಾರ್ವಜನಿಕರು ಬರುತ್ತಾರೆ. ಆದರೆ, ಇಲ್ಲಿನ ಗ್ರಂಥಾಲಯದ ವಾತಾವರಣದಿಂದ ಅನಾರೋಗ್ಯಕ್ಕೀಡಾಗುವ ಆತಂಕ ಓದುಗರನ್ನು ಕಾಡುತ್ತಿದೆ. ಇದೇ ಕಾರಣದಿಂದ ದಿನೇ ದಿನೇ ಗ್ರಂಥಾಲಯಕ್ಕೆ ಬರುವವರ ಸಂಖ್ಯೆ ಕ್ಷೀಣಿಸುತ್ತಿದೆ.

ಇನ್ನು ಗ್ರಂಥಾಲಯದ ಚಾವಣಿಯ ಗಾರೆ ಕಿತ್ತು ಬಂದಿದ್ದು, ಕಾಂಕ್ರೀಟ್ ಸರಳುಗಳು ಹೊರಕ್ಕೆ ಚಾಚಿಕೊಂಡಿವೆ. ಸುಮಾರು ೧೦ಕ್ಕೂ ಹೆಚ್ಚು ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿರುವ ಕಟ್ಟಡದಲ್ಲಿಯೇ ಗ್ರಂಥಾಲಯನಡೆಸುತ್ತಿರುವುದು ವಿಪರ್ಯಾಸ.

ಕೆಲ ವರ್ಷಗಳಿಂದ ಗ್ರಂಥಾಲಯಕ್ಕೆ ಪುಸ್ತಕಗಳು ಬರುತ್ತಿವೆ. ಆದರೆ, ಕೊಠಡಿಯಲ್ಲಿ ಪುಸ್ತಕ ಇಡುವುದಕ್ಕೆ ಕೇವಲ ಎರಡು ರ‍್ಯಾಕ್‌ಗಳಿದ್ದು, ಇದರಿಂದ ಹೆಚ್ಚು ಪುಸ್ತಕಗಳನ್ನು ಶೇಖರಿಸಲಾಗುತ್ತಿಲ್ಲ. ಸ್ಪರ್ಧಾತ್ಮಕ ಪರೀಕ್ಷೆ ಓದುವ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಅಗತ್ಯವಾದ ಪುಸ್ತಕಗಳು, ಕೈಪಿಡಿಗಳನ್ನು ಒದಗಿಸುತ್ತಿಲ್ಲ ಎಂಬುದು ಸ್ಥಳೀಯರ ದೂರು.

ಮಳೆ ಬಂದರೆ ಕೂರಲಾಗದು: ಮಳೆ ಬಂದರಂತೂ ಗ್ರಂಥಾಲಯದ ಕಟ್ಟಡ ಸಂಪೂರ್ಣವಾಗಿ ಸೋರುತ್ತದೆ. ಹೀಗಾಗಿ ಪುಸ್ತಕಗಳನ್ನು ಕಾಪಾಡುವುದೇ ಗ್ರಂಥಾಲಯ ಪಾಲಕರಿಗೆ ಸವಾಲಾಗಿದೆ.

ಹಿಂದೆ ನೂರಕ್ಕೂ ಹೆಚ್ಚು ಓದುಗರು ಗ್ರಂಥಾಲಯಕ್ಕೆ ಬರುತ್ತಿದ್ದರು. ಶಿಥಿಲಾವಸ್ಥೆ ಮತ್ತು ದುವಾರ್ಸನೆ ಶುರುವಾದ ನಂತರ ಕೇವಲ ಹತ್ತಾರು ಜನರು ಪತ್ರಿಕೆಗಳನ್ನು ಓದುವುದಕ್ಕೆ ಮಾತ್ರ ಗ್ರಂಥಾಲಯಕ್ಕೆ ಆಗಮಿಸುತ್ತಾರೆ. ಕಳೆದ ೧೧ ವರ್ಷಗಳಿಂದಲೂ ಇದೇ ಕಟ್ಟಡದಲ್ಲಿಯೇ ಗ್ರಂಥಾಲಯ ಕಾರ್ಯ ನಿರ್ವಹಿಸುತ್ತಿದೆ.

ಈಗಲಾದರೂ ಸ್ಥಳೀಯ ಜನಪ್ರತಿನಿಽಗಳು, ಸಂಬಂಧಪಟ್ಟ ಅಧಿಕಾರಿಗಳು ಗ್ರಂಥಾಲಯಕ್ಕೆ ಕಾಯಕಲ್ಪ ನೀಡು ವುದಕ್ಕೆ ಮುಂದಾಗಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

” ಗ್ರಂಥಾಲಯ ಇಲಾಖೆ ಕರ ಪಾವತಿಸಿದ್ದರೂ ಪ್ರಯೋಜನ ಇಲ್ಲ’ ಬೋಗಾದಿ ಗ್ರಂಥಾಲಯ ಕಟ್ಟಡ ಶಿಥಿಲಗೊಂಡಿದ್ದು ಜಿಲ್ಲಾಧಿಕಾರಿಗಳು, ದುರಸ್ತಿಪಡಿಸುವಂತೆ ಸಾರ್ವಜನಿಕ ಗ್ರಂಥಾಲಯದ ಉಪ ನಿರ್ದೇಶಕರಿಗೆ ತಿಳಿಸಿದ್ದಾರೆ. ಬೋಗಾದಿ ಪಟ್ಟಣ ಪಂಚಾಯಿತಿ ವತಿಯಿಂದ ಗ್ರಂಥಾಲಯ ಇಲಾಖೆಗೆ ಪಾವತಿಸಬೇಕಾದ ಗ್ರಂಥಾಲಯ ಕರವನ್ನೂ ಪೂರ್ಣ ಪ್ರಮಾಣದಲ್ಲಿ ಪಾವತಿಸಲಾಗಿದೆ.”

ಬಸವರಾಜು, ಮುಖ್ಯಾಧಿಕಾರಿ, ಬೋಗಾದಿ ಪಟ್ಟಣ ಪಂಚಾಯಿತಿ.

” ನೂತನ ಕಟ್ಟಡ ಅವಶ್ಯ ಗ್ರಂಥಾಲಯ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ನೂತನ ಕಟ್ಟಡದ ಅವಶ್ಯಕತೆ ಇದೆ. ಆದ್ದರಿಂದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ಇದರಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ಓದುವ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ.”

ಹರ್ಷನ್ ಗೌಡ, ವಿದ್ಯಾರ್ಥಿ.

” ಭವಿಷ್ಯದ ಬದುಕಿನ ಬಗ್ಗೆ ಹಲವು ಕನಸುಗಳನ್ನು ಕಾಣುವ ಬಡ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ದಿನಪತ್ರಿಕೆಗಳು, ಮ್ಯಾಗ್‌ಜಿನ್ ಮತ್ತು ಪರೀಕ್ಷೆಗೆ ಅಗತ್ಯವಾದ ಪುಸ್ತಕಗಳನ್ನು ಅಭ್ಯಾಸ ಮಾಡಲು ಗ್ರಂಥಾಲಯಕ್ಕೆ ಬರುತ್ತಾರೆ. ಆದರೆ, ಶೌಚಾಲಯ, ಕುಡಿಯುವ ನೀರು ಮತ್ತಿತರ ಮೂಲ ಸೌಕರ್ಯದ ಕೊರತೆ ಇದ್ದು, ಇವುಗಳನ್ನು ಒದಗಿಸುವುದು ಅತ್ಯಗತ್ಯ ಎಂಬುದು ಸ್ಥಳೀಯರ ಆಗ್ರಹವಾಗಿದೆ.

” ಜಿಲ್ಲಾಧಿಕಾರಿಗಳ ಸೂಚನೆಯಂತೆ ನೂತನ ಕಟ್ಟಡ ನಿರ್ಮಾಣ ಮಾಡಲು ಸಿದ್ಧತೆ ನಡೆಯುತ್ತಿದೆ.ಮಾರ್ಚ್ ನೊಳಗೆ ಕಾಮಗಾರಿ ಪ್ರಾರಂಭವಾಗಲಿದೆ.”

ಬಿ.ಮಂಜುನಾಥ್, ಉಪನಿರ್ದೇಶಕರು, ನಗರ ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯ

ಆಂದೋಲನ ಡೆಸ್ಕ್

Recent Posts

ಯೋಗೀಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿಗೆ ತಾತ್ಕಾಲಿಕ ರಿಲೀಫ್!

ಬೆಂಗಳೂರು: ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರಿಗೆ ನೀಡಲಾಗಿದ್ದ ಜೀವಾವಧಿ ಶಿಕ್ಷೆಗೆ ತಡೆ…

2 hours ago

ಮೈಸೂರು–ಮಾನಂದವಾಡಿ ಹೆದ್ದಾರಿಯಲ್ಲಿ ಭೀಕರ ಅಪಘಾತ: ಮೂವರು ಸಾವು!

ಮೈಸೂರು: ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಕೋಹಳ ಬಳಿಯ ಮೈಸೂರು–ಮಾನಂದವಾಡಿ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕೆಎಸ್ಆರ್‌ಟಿಸಿ ಬಸ್…

2 hours ago

174 ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್‌ಗೆ ಇಸ್ರೇಲ್‌ನ ಶೌರ್ಯ ಪ್ರಶಸ್ತಿ!

ಜೆರುಸೇಲಂ: ಭೀಕರ ವಿಮಾನ ಅವಘಡವನ್ನು ತಪ್ಪಿಸಿ 174 ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್‌ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರಿಗೆ…

3 hours ago

ರಾಜ್ಯ ಸಚಿವರ ವಿರುದ್ಧ ಸ್ಟಿಂಗ್ ಆಪರೇಷನ್‌ಗೆ ಸಂಚು?: ಶಾಸಕ ಗಣಿಗ ರವಿ ಗಂಭೀರ ಆರೋಪ!

ಮಂಡ್ಯ: ರಾಜ್ಯದ ಸಚಿವರಿಗೆ ಮುಜುಗರ ಉಂಟುಮಾಡಲು ಕೇಂದ್ರ ಸಚಿವರೊಬ್ಬರು ಹಾಗೂ ಕರ್ನಾಟಕದ ಬಿಜೆಪಿ ನಾಯಕರೊಬ್ಬರು ಸ್ಟಿಂಗ್ ಆಪರೇಷನ್‌ಗೆ ಸಂಚು ರೂಪಿಸಿದ್ದಾರೆ…

3 hours ago

ಸಿದ್ದಾಪುರ ಮೈಸೂರು ಮುಖ್ಯ ರಸ್ತೆಯಲ್ಲಿ ಹುಲಿ ಪ್ರತ್ಯಕ್ಷ

ಸಿದ್ದಾಪುರ: ಸಿದ್ದಾಪುರ ಮೈಸೂರು ಮುಖ್ಯ ರಸ್ತೆಯ ಘಟ್ಟತಳ ಹೇರೂರು ಎಸ್ಟೇಟ್ ಬಳಿ ಗುರುವಾರ ರಾತ್ರಿ ಹುಲಿ ಕಾಣಿಸಿಕೊಂಡಿದ್ದು ಬಳಿಕ ಸಮೀಪದ…

3 hours ago

ಓದುಗರ ಪತ್ರ: ಬಂತು ಎಟಿಎಂನಲ್ಲಿ ‘ತೇಪೆ’ ಹಾಕಿದ ನೋಟು!

ಒಂದು ಕಾಲದಲ್ಲಿ (ಒಂದಾನೊಂದು ಕಾಲದಲ್ಲಿ ಎಂಬ ಮಾತಿನಂತೆ) ಎಟಿಎಂ ಯಂತ್ರಗಳಿಂದ ಹಣ ಡ್ರಾ ಮಾಡಿದಾಗ ಸಾಮಾನ್ಯವಾಗಿ ಹೊಸ ಗರಿಗರಿನೋಟುಗಳು ಬರುತ್ತಿದ್ದವು.…

4 hours ago