ಕೆ.ಪಿ.ಮದನ್
ಮೂಲಸೌಕರ್ಯದ ಕೊರತೆ; ಆವರಣದಲ್ಲಿ ದುರ್ವಾಸನೆ
ಗ್ರಂಥಾಲಯದಲ್ಲಿ ಅಧ್ಯಯನಕ್ಕೆ ವಿದ್ಯಾರ್ಥಿಗಳಿಗೆ ಭಯ
ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವ ಓದುಗರ ಸಂಖ್ಯೆ
ಮೈಸೂರು: ಹಸಿರು ಪಾಚಿ ಕಟ್ಟಿದ ಗೋಡೆಗಳು… ಗಾರೆ ಉದುರಿ ಬಿದ್ದಿರುವ ಚಾವಣಿ… ಮಳೆ ಬಂದರೆ ಕಟ್ಟಡದ ಒಳಭಾಗಕ್ಕೆ ಸಲೀಸಾಗಿ ಚಾವಣಿಯಿಂದ ಇಳಿದು ಬರುವ ನೀರು… ಸೂಕ್ತ ರಕ್ಷಣೆ ಇಲ್ಲದೆ ಹಾಳಾಗುತ್ತಿರುವ ಪುಸ್ತಕಗಳು…ಇದು ಯಾರೋ ಬಡಪಾಯಿಯ ಮನೆಯಲ್ಲ. ಕವಿ ಅಥವಾ ಸಾಹಿತಿಯ ಕೋಣೆಯೂ ಅಲ್ಲ. ಅಕ್ಷರ ಆಕರಗಳನ್ನು ತನ್ನ ಎದೆಯೊಳಗೆ ಇಟ್ಟುಕೊಂಡಿರುವ ಗ್ರಂಥಾಲಯವೊಂದರ ದುಸ್ಥಿತಿ.
ಇದು ನಗರಕ್ಕೆ ಕೂಗಳತೆ ದೂರದಲ್ಲಿರುವ ಬೋಗಾದಿಯ ಸರ್ಕಾರಿ ಪ್ರೌಢಶಾಲೆ ರಸ್ತೆಯ ಬಲಭಾಗದಲ್ಲಿರುವ ಗ್ರಂಥಾಲಯದ ಚಿಂತಾಜನಕ ಸ್ಥಿತಿ.
ಇಂತಹ ದುರವಸ್ಥೆಯ ಜೊತೆಗೆ ಗ್ರಂಥಾಲಯದ ಆವರಣದಲ್ಲಿಯೇ ಮೂತ್ರದ ದುವಾರ್ಸನೆ ಮೂಗಿಗೆ ಬಡಿಯುತ್ತದೆ.
ಇಂತಹ ಪರಿಸ್ಥಿತಿಯಲ್ಲಿ ಗ್ರಂಥಾಲಯದಲ್ಲಿ ಅಧ್ಯಯನ, ಪತ್ರಿಕೆ ಓದುವುದಕ್ಕೆ ಹೋಗುವ ವಿದ್ಯಾರ್ಥಿಗಳು, ಸಾರ್ವಜನಿಕರು ಪರಿಸ್ಥಿತಿಯನ್ನು ಊಹಿಸುವುದಕ್ಕೂ ಕಷ್ಟವಾಗುತ್ತದೆ. ಬೋಗಾದಿಯು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿ ನಾಲ್ಕು ವರ್ಷಗಳು ಸಮೀಪಿಸುತ್ತ ಬಂದರೂ ಬಹುತೇಕ ಅಭಿವೃದ್ಧಿ ಮರೀಚಿಕೆಯಾಗಿದೆ ಎಂಬುದಕ್ಕೆ ಗ್ರಂಥಾಲಯದ ಈ ದುರ್ಗತಿ ಕನ್ನಡಿ ಹಿಡಿಯುತ್ತದೆ.
ಜ್ಞಾನಾರ್ಜನೆಗಾಗಿ ಗ್ರಂಥಾಲಯಕ್ಕೆ ಸಾರ್ವಜನಿಕರು ಬರುತ್ತಾರೆ. ಆದರೆ, ಇಲ್ಲಿನ ಗ್ರಂಥಾಲಯದ ವಾತಾವರಣದಿಂದ ಅನಾರೋಗ್ಯಕ್ಕೀಡಾಗುವ ಆತಂಕ ಓದುಗರನ್ನು ಕಾಡುತ್ತಿದೆ. ಇದೇ ಕಾರಣದಿಂದ ದಿನೇ ದಿನೇ ಗ್ರಂಥಾಲಯಕ್ಕೆ ಬರುವವರ ಸಂಖ್ಯೆ ಕ್ಷೀಣಿಸುತ್ತಿದೆ.
ಇನ್ನು ಗ್ರಂಥಾಲಯದ ಚಾವಣಿಯ ಗಾರೆ ಕಿತ್ತು ಬಂದಿದ್ದು, ಕಾಂಕ್ರೀಟ್ ಸರಳುಗಳು ಹೊರಕ್ಕೆ ಚಾಚಿಕೊಂಡಿವೆ. ಸುಮಾರು ೧೦ಕ್ಕೂ ಹೆಚ್ಚು ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿರುವ ಕಟ್ಟಡದಲ್ಲಿಯೇ ಗ್ರಂಥಾಲಯನಡೆಸುತ್ತಿರುವುದು ವಿಪರ್ಯಾಸ.
ಕೆಲ ವರ್ಷಗಳಿಂದ ಗ್ರಂಥಾಲಯಕ್ಕೆ ಪುಸ್ತಕಗಳು ಬರುತ್ತಿವೆ. ಆದರೆ, ಕೊಠಡಿಯಲ್ಲಿ ಪುಸ್ತಕ ಇಡುವುದಕ್ಕೆ ಕೇವಲ ಎರಡು ರ‍್ಯಾಕ್‌ಗಳಿದ್ದು, ಇದರಿಂದ ಹೆಚ್ಚು ಪುಸ್ತಕಗಳನ್ನು ಶೇಖರಿಸಲಾಗುತ್ತಿಲ್ಲ. ಸ್ಪರ್ಧಾತ್ಮಕ ಪರೀಕ್ಷೆ ಓದುವ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಅಗತ್ಯವಾದ ಪುಸ್ತಕಗಳು, ಕೈಪಿಡಿಗಳನ್ನು ಒದಗಿಸುತ್ತಿಲ್ಲ ಎಂಬುದು ಸ್ಥಳೀಯರ ದೂರು.
ಮಳೆ ಬಂದರೆ ಕೂರಲಾಗದು: ಮಳೆ ಬಂದರಂತೂ ಗ್ರಂಥಾಲಯದ ಕಟ್ಟಡ ಸಂಪೂರ್ಣವಾಗಿ ಸೋರುತ್ತದೆ. ಹೀಗಾಗಿ ಪುಸ್ತಕಗಳನ್ನು ಕಾಪಾಡುವುದೇ ಗ್ರಂಥಾಲಯ ಪಾಲಕರಿಗೆ ಸವಾಲಾಗಿದೆ.
ಹಿಂದೆ ನೂರಕ್ಕೂ ಹೆಚ್ಚು ಓದುಗರು ಗ್ರಂಥಾಲಯಕ್ಕೆ ಬರುತ್ತಿದ್ದರು. ಶಿಥಿಲಾವಸ್ಥೆ ಮತ್ತು ದುವಾರ್ಸನೆ ಶುರುವಾದ ನಂತರ ಕೇವಲ ಹತ್ತಾರು ಜನರು ಪತ್ರಿಕೆಗಳನ್ನು ಓದುವುದಕ್ಕೆ ಮಾತ್ರ ಗ್ರಂಥಾಲಯಕ್ಕೆ ಆಗಮಿಸುತ್ತಾರೆ. ಕಳೆದ ೧೧ ವರ್ಷಗಳಿಂದಲೂ ಇದೇ ಕಟ್ಟಡದಲ್ಲಿಯೇ ಗ್ರಂಥಾಲಯ ಕಾರ್ಯ ನಿರ್ವಹಿಸುತ್ತಿದೆ.
ಈಗಲಾದರೂ ಸ್ಥಳೀಯ ಜನಪ್ರತಿನಿಽಗಳು, ಸಂಬಂಧಪಟ್ಟ ಅಧಿಕಾರಿಗಳು ಗ್ರಂಥಾಲಯಕ್ಕೆ ಕಾಯಕಲ್ಪ ನೀಡು ವುದಕ್ಕೆ ಮುಂದಾಗಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.
” ಗ್ರಂಥಾಲಯ ಇಲಾಖೆ ಕರ ಪಾವತಿಸಿದ್ದರೂ ಪ್ರಯೋಜನ ಇಲ್ಲ’ ಬೋಗಾದಿ ಗ್ರಂಥಾಲಯ ಕಟ್ಟಡ ಶಿಥಿಲಗೊಂಡಿದ್ದು ಜಿಲ್ಲಾಧಿಕಾರಿಗಳು, ದುರಸ್ತಿಪಡಿಸುವಂತೆ ಸಾರ್ವಜನಿಕ ಗ್ರಂಥಾಲಯದ ಉಪ ನಿರ್ದೇಶಕರಿಗೆ ತಿಳಿಸಿದ್ದಾರೆ. ಬೋಗಾದಿ ಪಟ್ಟಣ ಪಂಚಾಯಿತಿ ವತಿಯಿಂದ ಗ್ರಂಥಾಲಯ ಇಲಾಖೆಗೆ ಪಾವತಿಸಬೇಕಾದ ಗ್ರಂಥಾಲಯ ಕರವನ್ನೂ ಪೂರ್ಣ ಪ್ರಮಾಣದಲ್ಲಿ ಪಾವತಿಸಲಾಗಿದೆ.”
ಬಸವರಾಜು, ಮುಖ್ಯಾಧಿಕಾರಿ, ಬೋಗಾದಿ ಪಟ್ಟಣ ಪಂಚಾಯಿತಿ.
” ನೂತನ ಕಟ್ಟಡ ಅವಶ್ಯ ಗ್ರಂಥಾಲಯ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ನೂತನ ಕಟ್ಟಡದ ಅವಶ್ಯಕತೆ ಇದೆ. ಆದ್ದರಿಂದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ಇದರಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ಓದುವ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ.”
ಹರ್ಷನ್ ಗೌಡ, ವಿದ್ಯಾರ್ಥಿ.
” ಭವಿಷ್ಯದ ಬದುಕಿನ ಬಗ್ಗೆ ಹಲವು ಕನಸುಗಳನ್ನು ಕಾಣುವ ಬಡ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ದಿನಪತ್ರಿಕೆಗಳು, ಮ್ಯಾಗ್‌ಜಿನ್ ಮತ್ತು ಪರೀಕ್ಷೆಗೆ ಅಗತ್ಯವಾದ ಪುಸ್ತಕಗಳನ್ನು ಅಭ್ಯಾಸ ಮಾಡಲು ಗ್ರಂಥಾಲಯಕ್ಕೆ ಬರುತ್ತಾರೆ. ಆದರೆ, ಶೌಚಾಲಯ, ಕುಡಿಯುವ ನೀರು ಮತ್ತಿತರ ಮೂಲ ಸೌಕರ್ಯದ ಕೊರತೆ ಇದ್ದು, ಇವುಗಳನ್ನು ಒದಗಿಸುವುದು ಅತ್ಯಗತ್ಯ ಎಂಬುದು ಸ್ಥಳೀಯರ ಆಗ್ರಹವಾಗಿದೆ.
” ಜಿಲ್ಲಾಧಿಕಾರಿಗಳ ಸೂಚನೆಯಂತೆ ನೂತನ ಕಟ್ಟಡ ನಿರ್ಮಾಣ ಮಾಡಲು ಸಿದ್ಧತೆ ನಡೆಯುತ್ತಿದೆ.ಮಾರ್ಚ್ ನೊಳಗೆ ಕಾಮಗಾರಿ ಪ್ರಾರಂಭವಾಗಲಿದೆ.”
ಬಿ.ಮಂಜುನಾಥ್, ಉಪನಿರ್ದೇಶಕರು, ನಗರ ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯ
ಮೈಸೂರು: ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್…
ಮಹಾದೇಶ್ ಎಂ ಗೌಡ ಹನೂರು: ಅಂತರ ರಾಜ್ಯ ನೆರೆಯ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಮಾಪುರ ರಸ್ತೆಯಲ್ಲಿ ನಿತ್ಯ ಗಜರಾಜ ಎಂಟ್ರಿ…
ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಚಿತಾವಣೆಯಿಂದ ಬಳ್ಳಾರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಹೆಣ ಬಿದ್ದಿದೆ ಎಂದು ಹೇಳಿಕೆ…
ಬೆಂಗಳೂರು: ನಾಯಕತ್ವ ಬದಲಾವಣೆ ಚರ್ಚೆಗೆ ಹೈಕಮಾಂಡ್ ಸ್ಪಷ್ಟನೆ ಕೊಡಬೇಕು ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಒತ್ತಾಯಿಸಿದ್ದಾರೆ. ಜನವರಿ.16ಕ್ಕೆ ಸಿಹಿಸುದ್ದಿ ಬರಲಿದೆ…
ಹಾಸನ: ಪತಿ ಎರಡನೇ ಮದುವೆಯಾಗಿದ್ದನ್ನು ಪ್ರಶ್ನಿಸಿದ್ದಕ್ಕೆ ಮೊದಲ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಆಲೂರು ತಾಲ್ಲೂಕಿನ ಯಡೂರು ಗ್ರಾಮದಲ್ಲಿ…
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಪತ್ನಿ ವಿರುದ್ಧ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಸ್ನೇಹಮಯಿ ಕೃಷ್ಣ…